MG Comet: ಬಿಡುಗಡೆಗೂ ಮುನ್ನವೇ ರಸ್ತೆಗಿಳಿದ ಪುಟ್ಟ ಇವಿ ಕಾರ್... ಮನಸೋತ ಸಾರ್ವಜನಿಕರು

ಭಾರತದಲ್ಲಿ ಕಳೆದ ಹಲವು ದಿನಗಳಿಂದ ಎಂಜಿ ಅವರ ಪುಟ್ಟ ಎಲೆಕ್ಟ್ರಿಕ್ ಕಾರಿನ ಮೇಲೆ ಭಾರೀ ನಿರೀಕ್ಷೆಗಳಿವೆ. MG ಮೋಟಾರ್ಸ್ ಕೂಡ ಈ ಕಾರನ್ನು ಇಂದು (ಏಪ್ರಿಲ್ 19) ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಅನಾವರಣಗೊಳಿಸುವುದಾಗಿ ಈ ಹಿಂದೆಯೇ ಘೋಷಿಸಿದೆ. ಆದರೆ ಅದಕ್ಕೂ ಮುನ್ನವೇ ರಸ್ತೆಯಲ್ಲಿ ಯಾವುದೇ ಮರೆಮಾಚುವಿಕೆ ಇಲ್ಲೆದೆ ಕಾಣಿಸಿಕೊಂಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಎಂಜಿ ಮೋಟಾರ್ಸ್ ಅವರ ZS EV ನಂತರ ಕಾಮೆಟ್ ಇವಿ ಕಂಪನಿಯ ಎರಡನೇ ಎಲೆಕ್ಟ್ರಿಕ್ ವಾಹನವಾಗಿದೆ. ಕಂಪನಿಯವರು ಇದರ ಟೀಸರ್‌ಗಳ ಮೂಲಕವೇ ಸಖತ್ ಹೈಪ್ ಕೊಟ್ಟಿದ್ದರು. ಅಂದರೆ ಇದು ಪುಟ್ಟ ಎಲೆಕ್ಟ್ರಿಕ್ ಕಾರ್ ಆದರೂ ಪ್ರೀಮಿಯಂ ಒಳಾಂಗಣವನ್ನು ಪಡೆಯಲಿದೆ ಎಂಬ ಮುನ್ಸೂಚನೆಗಳನ್ನು ಕಂಪನಿಯವರು ನೀಡಿದ್ದರು. ಈಗಾಗಲೇ ಇಂಡೋನೇಷ್ಯಾದಲ್ಲಿ ಮಾರಾಟಕ್ಕೆ ಲಭ್ಯವಿರುವ ವುಲಿಂಗ್ಸ್ ಏರ್ EV ಅನ್ನು MG ಕಾಮೆಟ್ ಆಧರಿಸಿದೆ.

MG Comet: The little electric car spotted on road before its launch

ಅಂದರೆ ಅದೇ ವಾಹನವನ್ನು ಇಲ್ಲಿ ಕಾಮೆಟ್ ಇವಿ ಹೆಸರಿನಲ್ಲಿ ಬಿಡುಗಡೆ ಮಾಡಲಿದ್ದಾರೆ. ಹಾಗಿದ್ದರೂ ಕೂಡ ಕಂಪನಿಯು ತುಂಬಾ ಜಾಗರೂಕರಾಗಿ ಎಂಜಿ ಕಾಮೆಟ್ ಕುರಿತು ಹೆಚ್ಚಿನ ಮಾಹಿತಿ ಹೊರ ಬೀಳದಂತೆ ನೋಡಿಕೊಂಡಿದ್ದರು. ಆದರೆ ಇದೀಗ ತನ್ನ ಅಧಿಕೃತ ಅನಾವರಣಕ್ಕೂ ಮುನ್ನ, ಈ ಮೈಕ್ರೋ ಕಾರ್ ಅನ್ನು ಸಾರ್ವಜನಿಕ ರಸ್ತೆಗಳಲ್ಲಿ ಯಾವುದೇ ಮರೆಮಾಚುವಿಕೆ ಇಲ್ಲದೇ ಪರೀಕ್ಷಿಸಲಾಗಿದೆ. ಹೊಸ MG ಕಾಮೆಟ್ EV ಹಸಿರು ಹಾಗೂ ಬಿಳಿ ಬಣ್ಣಗಳಲ್ಲಿ ರಸ್ತೆಯಲ್ಲಿ ಕಾಣಿಸಿಕೊಂಡಿದೆ.

ಇದರ ಗಾತ್ರದ ಹೊರತಾಗಿಯೂ, ಕಾಮೆಟ್ ಎಲೆಕ್ಟ್ರಿಕ್ ಸ್ಕೇಟ್‌ಬೋರ್ಡ್ ಆರ್ಕಿಟೆಕ್ಚರ್, ಉದ್ದವಾದ 2,010 ಎಂಎಂ ವ್ಹೀಲ್‌ಬೇಸ್ ಮತ್ತು ಬಾಕ್ಸ್ ಆಕಾರವನ್ನು ಹೊಂದಿದ್ದು, ಸಾಕಷ್ಟು ಸ್ಥಳಾವಕಾಶವನ್ನು ನೀಡುತ್ತದೆ ಎನ್ನಲಾಗಿದೆ. ಈ ಕಾಮೆಟ್ ಮೂರು-ಬಾಗಿಲು, ನಾಲ್ಕು ಆಸನಗಳ ಕಾರ್ ಆಗಿದ್ದು, ಕೇವಲ 2.9 ಮೀಟರ್ ಉದ್ದವಿರುತ್ತದೆ. ಬಿಡುಗಡೆ ಬಳಿಕ ಭಾರತದಲ್ಲಿ ಮಾರಾಟವಾಗುವ ಅತಿ ಚಿಕ್ಕ ಕಾರಾಗಲಿದೆ. ಹಾಗೆಯೇ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಇದೇ ಮಾದರಿಯ ಸಣ್ಣ ರೂಪಾಂತರವು ಸಹ ಮಾರಾಟದಲ್ಲಿದೆ.

ಇದರ ಬಾಹ್ಯ ವಿನ್ಯಾಸ ಕುರಿತು ಹೇಳುವುದಾದರೆ ಮುಂಭಾಗದ ಫೆಸಿಯಾ ಡ್ಯುಯಲ್ ಟೋನ್ ಫಿನಿಶ್, ವಿಂಡ್‌ಸ್ಕ್ರೀನ್ ಅಡಿಯಲ್ಲಿ ಸರೌಂಡ್ ಆದ ಪಟ್ಟಿಯನ್ನು ವಿಂಗ್ ಮಿರರ್‌ಗಳಿಗೆ ವಿಸ್ತರಿಸುವ ಎಲ್ಇಡಿ ಲೈಟ್‌ಗಳನ್ನು ಹೊಂದಿದ್ದು, ಒಟ್ಟಾರೆ ಬಾಕ್ಸಿ ಆಕರವನ್ನು ಪಡೆದಿದೆ. ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ ಹೊಸ ಕಾಮೆಟ್ EV ದೊಡ್ಡ ಡ್ಯುಯಲ್ 10.25 ಇಂಚಿನ ಸ್ಕ್ರೀನ್‌ಗಳನ್ನು ಪಡೆದಿದೆ. ಇದು ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡ್ರೈವರ್‌ಸ್ ಡಿಸ್ಪ್ಲೇ ಆಗಿ ಕಾರ್ಯನಿರ್ವಹಿಸುತ್ತದೆ.

ಇತರ ವೈಶಿಷ್ಟ್ಯಗಳನ್ನು ನೋಡುವುದಾದರೆ ಕೀ ರಹಿತ ಪ್ರವೇಶ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಲ್-ಸ್ಟಾರ್ಟ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಹಾಗೂ ಸಂಪರ್ಕಿತ ಕಾರ್ ಟೆಕ್ ವ್ಯವಸ್ಥೆಯನ್ನು ಒಳಗೊಂಡಿದೆ. ಇದರ ಎಲೆಕ್ಟ್ರಿಕ್ ಮೋಟರ್ ಬಗ್ಗೆ ಹೇಳುವುದಾದರೆ ಗರಿಷ್ಠ 41 PS ಪವರ್ ಅನ್ನು ಹೊರಹಾಕುತ್ತದೆ. ಇದರ ಬ್ಯಾಟರಿ ಪ್ಯಾಕ್ 17.3 kWh ಸಾಮರ್ಥ್ಯ ಹೊಂದಿದೆ. ಹಾಗಯೇ ಇದರ ಜೊತೆಗೆ 26.7 kWh ಬ್ಯಾಟರಿ ಪ್ಯಾಕ್‌ನ ದೊಡ್ಡ ಸಾಮರ್ಥ್ಯದ ಬ್ಯಾಟರಿಯನ್ನು ಕೂಡ ನಿರೀಕ್ಷಸಲಾಗಿದೆ.

ಕಾಮೆಟ್ EV ಬ್ಯಾಟರಿ ರೂಪಾಂತರವನ್ನು ಅವಲಂಬಿಸಿ 200 - 300 ಕಿ.ಮೀ ರೇಂಜ್ ನೀಡುತ್ತದೆ. MG ಕಾಮೆಟ್ ಯುವ ಖರೀದಿದಾರರನ್ನು ಗುರಿಯಾಗಿಸಿಕೊಂಡು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದೆ. ಇದೇ ಕಾರಣದಿಂದಲೇ ತಯಾರಕರು ಹಲವು ಮೋಜಿನ ಮತ್ತು ಆಧುನಿಕ ವೈಶಿಷ್ಟ್ಯಗಳನ್ನು ಇದರಲ್ಲಿ ಲೋಡ್ ಮಾಡಿದ್ದಾರೆ. ಕಾಮೆಟ್ EV ಭಾರತೀಯ ಮಾರುಕಟ್ಟೆಯಲ್ಲಿ ಚಿಕ್ಕ ಎಲೆಕ್ಟ್ರಿಕ್ ಕಾರ್ ಮತ್ತು "ಅತ್ಯಂತ ಕೈಗೆಟುಕುವ" ಬೆಲೆಯನ್ನು ಪಡೆಯುವ ನಿರೀಕ್ಷೆಯಿದೆ. ಪ್ರಸ್ತುತ, Tatat Tiago EV ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರ್ ಆಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Wednesday, April 19, 2023, 18:00 [IST]
English summary
Mg comet electric car spotted on road before launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+