MG: ಕಾಮೆಟ್ ಆಯ್ತು.. ಭಾರತದಲ್ಲಿ ಕ್ರಾಂತಿ ಸೃಷ್ಟಿಸಲು ಬರಲಿದೆ ಪುಟ್ಟ ಎಸ್‌ಯುವಿ

ಎಂಜಿ ಮೋಟಾರ್ಸ್ (Mg Motors) ಭಾರತದಲ್ಲಿ ಕಾಮೆಟ್ ಇವಿಯನ್ನು ಬಿಡುಗಡೆಗೊಳಿಸುವ ಮೂಲಕ ತೀವ್ರ ಸಂಚಲನ ಮೂಡಿಸಿತ್ತು. ಇದು, ಚೀನಾದಲ್ಲಿ ಮಾರಾಟವಾಗುವ ವುಲಿಂಗ್ ಇವಿಯನ್ನು ಆಧರಿಸಿತ್ತು. ಸದ್ಯ, ಎಂಜಿ ಕಂಪನಿಯ ಮಾತೃ ಸಂಸ್ಥೆ ಸೈಕ್ (SAIC) ಹೊಚ್ಚ ಹೊಸ ಪುಟ್ಟ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಎಲ್ಲಾ ರೀತಿಯ ಸಿದ್ಧತೆಯನ್ನು ನಡೆದಿದೆ.

ಕೆಲವು ತಿಂಗಳಿಂದ ಆ ಬಗ್ಗೆ ವಿವಿಧ ಮಾಧ್ಯಮಗಳು ಸುದ್ದಿಯನ್ನು ಪ್ರಕಟಿಸುತ್ತಿದ್ದವು. ಇದೀಗ, ಎಂಜಿ ಮೋಟಾರ್ಸ್‌ ಬ್ಯಾಡ್ಜ್ ಅಡಿಯಲ್ಲಿ ಬಾಜುನ್ ಯೆಪ್ ಎಲೆಕ್ಟ್ರಿಕ್ ಎಸ್‌ಯುವಿ (Baojun Yep electric SUV) ಆಧಾರಿತ ಹೊಸ ಎಸ್‌ಯುವಿಯನ್ನು ಭಾರತದಲ್ಲಿ ಉತ್ಪಾದಿಸಿ, ಸೇಲ್ ಮಾಡಲು ಸೈಕ್ (SAIC) ಕಂಪನಿ, ಅದರ ಡಿಸೈನ್ ಪೇಟೆಂಟ್ ಅನ್ನು ಸಲ್ಲಿಸಿದೆ.

MG: ಕಾಮೆಟ್ ಆಯ್ತು.. ಭಾರತದಲ್ಲಿ ಕ್ರಾಂತಿ ಸೃಷ್ಟಿಸಲು ಬರಲಿದೆ ಪುಟ್ಟ ಎಸ್‌ಯುವಿ

ಈ ಮೂಲಕ ನಗರ ಪ್ರಯಾಣಕ್ಕೆ ಯೋಗ್ಯವಾಗಿರುವ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರನ್ನು ದೇಶದಲ್ಲಿ ಲಾಂಚ್ ಮಾಡಲು ತಯಾರಿ ನಡೆಸುತ್ತಿದೆ. ಭಾರತ ಮಾರುಕಟ್ಟೆಗೆ ಬರಲಿರುವ ಇನ್ನೂ ಹೆಸರಿಡದ ಈ ಎಸ್‌ಯುವಿ ಚೀನಾದಲ್ಲಿ ಕಾಣಸಿಗುವ ಬಾಜುನ್ ಯೆಪ್ ಕಾರಿನ ರೀತಿಯಲ್ಲಿಯೇ ವಿನ್ಯಾಸ ಹೊಂದಿರುತ್ತದೆ ಎಂಬುದು ಡಿಸೈನ್ ಪೇಟೆಂಟ್‌ನಿಂದ ತಿಳಿಯುತ್ತದೆ. ಫ್ರಂಟ್ ಹಾಗೂ ರೇರ್ ಎಂಜಿ ಬ್ಯಾಡ್ಜ್‌ ಬಿಟ್ಟರೆ, ಅಷ್ಟಾಗಿ ಬದಲಾವಣೆಗಳು ಇರುವುದಿಲ್ಲ ಎಂದು ಹೇಳಲಾಗಿದೆ.

ಎಂಜಿ ಕಂಪನಿಯು ಭಾರತದಲ್ಲಿ ಹೊಸ ಬಂಡವಾಳ ಹೂಡಿಕೆಯನ್ನು ಸಂಗ್ರಹಿಸದ ಬಳಿಕ, ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಉತ್ಪಾದನೆಯನ್ನು ಶುರು ಮಾಡಲಿದೆ. ಗುಜರಾತ್‌ ರಾಜ್ಯದ ಹಲೋಲ್‌ನಲ್ಲಿರುವ ಕಂಪನಿಯ ಫ್ಯಾಕ್ಟರಿಯಲ್ಲಿ ತಯಾರಿಕ ಕಾರ್ಯಗಳು ಶುರುವಾಗಲಿದೆ. ವರದಿಗಳ ಪ್ರಕಾರ, ಈ ಕಾರು ಭಾರತದ ಮಾರುಕಟ್ಟೆಯಲ್ಲಿ 2025ರಲ್ಲಿ ಬಿಡುಗಡೆಯಾಗಬಹದು. ದರವು ಕೂಡ ಎಂಜಿ ಕಾಮೆಟ್ ಇವಿ ಅಸುಪಾಸಿನಲ್ಲಿ ಇರಬಹುದು.

MG: ಕಾಮೆಟ್ ಆಯ್ತು.. ಭಾರತದಲ್ಲಿ ಕ್ರಾಂತಿ ಸೃಷ್ಟಿಸಲು ಬರಲಿದೆ ಪುಟ್ಟ ಎಸ್‌ಯುವಿ

ಚೀನಾದಲ್ಲಿ ನೋಡಬಹುದಾದ ಬಾಜುನ್ ಯೆಪ್ ಎಲೆಕ್ಟ್ರಿಕ್ ಎಸ್‌ಯುವಿ, ಮಾರುತಿ ಸುಜುಕಿ ಜಿಮ್ನಿ ಮತ್ತು ಫೋರ್ಡ್ ಬ್ರಾಂಕೊ ಕಾರುಗಳು ಹೊಂದಿರುವಂತೆ ರೆಟ್ರೋ ಸ್ಟೈಲ್ ಡಿಸೈನ್ ಹೊಂದಿದೆ. ಕಾಮೆಟ್ ಇವಿ ರೀತಿಯಲ್ಲೇ ಗ್ಲೋಬಲ್ ಸ್ಮಾಲ್ ಎಲೆಕ್ಟ್ರಿಕ್ ವೆಹಿಕಲ್ ಪ್ಲಾಟ್‌ಫಾರ್ಮ್ (GSEV) ಆಧರಿಸಿದ್ದು, ನಾಲ್ಕು ಆಸನಗಳನ್ನು ಹೊಂದಿರುವ ಯೆಪ್ ಎಸ್‌ಯುವಿ, 3 ಡೋರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಬಾಜುನ್ ಯೆಪ್ ಎಲೆಕ್ಟ್ರಿಕ್ ಎಸ್‌ಯುವಿ, 28.1 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ರೇರ್ ಆಕ್ಸಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟರ್ ಪಡೆದಿದೆ. 68 bhp ಗರಿಷ್ಠ ಪವರ್ ಹಾಗೂ 140 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಸಂಪೂರ್ಣ ಚಾರ್ಜಿನಲ್ಲಿ 303 km ರೇಂಜ್ ನೀಡಲಿದ್ದು, 100 km/h ಟಾಪ್ ಸ್ವೀಡ್ ಪಡೆಯಲಿದೆ.

ಯೆಪ್ ಎಲೆಕ್ಟ್ರಿಕ್ ಎಸ್‌ಯುವಿಯ ಬ್ಯಾಟರಿ ಪ್ಯಾಕ್, ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಶೇಕಡ 30 - 80% ಚಾರ್ಜ್ ಆಗಲು 35 ನಿಮಿಷ ತೆಗೆದುಕೊಳ್ಳುತ್ತದೆ. ಎಸಿ ಚಾರ್ಜರ್ ಬಳಕೆಯಲ್ಲಿ ಶೇಕಡ 20 - 80% ಬ್ಯಾಟರಿ ಚಾರ್ಜ್ ಆಗಲು ಬಯೊಬ್ಬರಿ 8.5 ಗಂಟೆ ಬೇಕಾಗುತ್ತದೆ. 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಎಂಜಿ ಕಾಮೆಟ್ ಇವಿ ರೂ.7.98 ಲಕ್ಷದಿಂದ ರೂ.9.98 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಮುಂಬರಲಿರುವ ಹೊಸ ರೆಟ್ರೋ ಶೈಲಿಯ ಎಸ್‌ಯುವಿ ಕೂಡ ಇದೇ ಬೆಲೆಯ ಆಸುಪಾಸಿನಲ್ಲಿ ಖರೀದಿಗೆ ಸಿಗಬಹುದು. ಕೊಂಚ ಗರಿಷ್ಠ ರೇಂಜ್ ನೊಂದಿಗೆ ಲಭ್ಯವಿರುವ ಜೊತೆಗೆ ಸಣ್ಣದಾಗಿರುವುದರಿಂದ ಅಷ್ಟಾಗಿ ಪಾರ್ಕಿಂಗ್ ಸಮಸ್ಯೆ ಇರುವುದಿಲ್ಲ. ಇದು, ಗ್ರಾಹಕರಿಗೆ ಇಷ್ಟವಾಗಬಹುದು.

More from DriveSpark

Article Published On: Friday, July 21, 2023, 17:32 [IST]
English summary
Mg motors filed design patent baojun yep electric suv india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+