MG Comet EV: ನಾಳೆ ಭಾರೀ ಕುತೂಹಲ ಕೆರಳಿಸಿರುವ ಎಂಜಿ ಕಾಮೆಟ್ ಇವಿ ಬಿಡುಗಡೆ.. ಬೆಲೆ ಸೇರಿದಂತೆ ಪ್ರಮುಖಾಂಶಗಳು

ಭಾರತದ ಮಾರುಕಟ್ಟೆಯಲ್ಲಿ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಎಂಜಿ ಮೋಟಾರ್ ಇಂಡಿಯಾ (MG Motor India) ತನ್ನ ಬಹುನೀರಿಕ್ಷಿತ 'ಕಾಮೆಟ್ ಇವಿ'ಯನ್ನು ನಾಳೆ (ಏಪ್ರಿಲ್ 19) ಬಿಡುಗಡೆ ಮಾಡಲಿದೆ. ಈ ಕಾರಿನ ಮೇಲೆ ಗ್ರಾಹಕರು ಈಗಾಗಲೇ ಸಾಕಷ್ಟು ನೀರಿಕ್ಷೆ ಇಟ್ಟುಕೊಂಡಿದ್ದು , ಟಾಪ್ 5 ವಿಚಾರಗಳು ಇಲ್ಲಿವೆ.

'ಕಾಮೆಟ್ ಇವಿ' ಎಂಜಿ ಕಂಪನಿಯಿಂದ ದೇಶದಲ್ಲಿ ಲಾಂಚ್ ಆಗುತ್ತಿರುವ ಎರಡನೇ ಎಲೆಕ್ಟ್ರಿಕ್ ಕಾರಾಗಿದೆ. ಈ ಮೊದಲು 'ZS' ಇವಿಯನ್ನು ಬಿಡುಗಡೆ ಮಾಡಿತ್ತು. ಸದ್ಯ, ನಾಳೆ ಬರಲಿರುವ ಎಂಜಿ ಕಾಮೆಟ್ ಇವಿ ಈಗಾಗಲೇ ಭಾರೀ ಕುತೂಹಲ ಹುಟ್ಟಿ ಹಾಕಿದೆ. ಅದಕ್ಕೂ ಕಾರಣವಿದ್ದು, ಅದೇನೆಂದರೆ ಇದೊಂದು ಪುಟ್ಟ ಕಾರಾಗಿದ್ದು, ಕೇವಲ 2 ಡೋರ್ ಆಯ್ಕೆಯನ್ನು ಹೊಂದಿದೆ. ಜೊತೆಗೆ ತೀರಾ ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯುವ ಸಾಧ್ಯತೆಯಿದೆ.

MG Comet EV: ನಾಳೆ ಭಾರೀ ಕುತೂಹಲ ಕೆರಳಿಸಿರುವ ಎಂಜಿ ಕಾಮೆಟ್ ಇವಿ ಬಿಡುಗಡೆ.. ಬೆಲೆ ಸೇರಿದಂತೆ ಪ್ರಮುಖಾಂಶಗಳು

ಮೊದಲಿಗೆ ಈ ಕಾರಿನ ಸುತ್ತಳತೆ ಒಳಗೊಂಡಂತೆ ಇನ್ನಿತರ ವಿಚಾರಗಳ ಬಗ್ಗೆ ತಿಳಿಯೋಣ. ಇದು ವಿವಿಧ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ವುಲಿಂಗ್ ಇವಿಗೆ ಬಹುತೇಕ ಹೋಲಿಕೆಯಾಗಲಿದೆ. 2 ಡೋರ್ ಹೊಂದಿರುವ ಈ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್, 2,974 ಎಂಎಂ ಉದ್ದ, 1,505 ಎಂಎಂ ಅಗಲ ಮತ್ತು 1,631ಎಂಎಂ ಎತ್ತರವನ್ನು ಹೊಂದಿದೆ. ಜೊತೆಗೆ 2,010 ಎಂಎಂ ಅಳತೆಯ ವೀಲ್ ಬೇಸ್ ಪಡೆದಿದೆ.

ಎಂಜಿ ಕಾಮೆಟ್ ಇವಿ ಯಾವೆಲ್ಲ ವೈಶಿಷ್ಟ್ಯಗಳನ್ನು ಪಡೆದಿದೆ ಎಂಬುದನ್ನು ನೋಡುವುದಾದರೆ, ಇದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಾಗಿ 10.25 ಇಂಚಿನ ಸ್ಕ್ರೀನ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ ಟೂ ಸ್ಪೋಕ್ ಸ್ಟೀರಿಂಗ್ ವೀಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

MG Comet EV: ನಾಳೆ ಭಾರೀ ಕುತೂಹಲ ಕೆರಳಿಸಿರುವ ಎಂಜಿ ಕಾಮೆಟ್ ಇವಿ ಬಿಡುಗಡೆ.. ಬೆಲೆ ಸೇರಿದಂತೆ ಪ್ರಮುಖಾಂಶಗಳು

ಈ ಎಲೆಕ್ಟ್ರಿಕ್ ಕಾರು, 20 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿರಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 250 km ರೇಂಜ್ ನೀಡಬಹುದು. ರೇರ್ ಆಕ್ಸೆಲ್ ನಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಮೋಟಾರ್, 45 bhp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದ್ದು, ಎಸಿ ಚಾರ್ಜರ್ ಆಯ್ಕೆಯಲ್ಲಿ ಕಾಮೆಟ್ ಇವಿ ಸಂಪೂರ್ಣ ಚಾರ್ಜ್ ಆಗಲು 8.5 ಗಂಟೆ ತೆಗೆದುಕೊಳ್ಳಬಹುದು ಎಂದು ವರದಿಯಾಗಿದೆ.

ಬೆಲೆ ವಿಚಾರವಾಗಿ ಮಾತನಾಡುವುದಾದರೆ, ಎಂಜಿ ಕಾಮೆಟ್ ಇವಿ ಭಾರತದ ಮಾರುಕಟ್ಟೆಯಲ್ಲಿ ರೂ.10 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯೊಳಗೆ ಖರೀದಿಗೆ ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದೆ. ಅದಕ್ಕೂ ಒಂದು ಕಾರಣವಿದ್ದು, ಈ ಕಾಮೆಟ್ ಇವಿ ತಯಾರಿಕೆಗೆ ಬಳಕೆ ಮಾಡಿರುವ ಬ್ಯಾಟರಿಯನ್ನು ಸ್ಥಳೀಯವಾಗಿ (ಟಾಟಾ ಆಟೋಕ್ಯಾಂಪ್) ತಯಾರಿಸಲಾಗಿದ್ದು, ಇದರಿಂದಾಗಿ ದರ ಕಡಿಮೆಯಿರಲಿದೆ ಎಂದು ಹೇಳಲಾಗಿದೆ.

ಎಂಜಿ ಕಾಮೆಟ್ ಇವಿಗೆ 2 ಡೋರ್ ವಿಭಾಗದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿ ಇಲ್ಲ ಎಂದು ಹೇಳಬಹುದು. ಆದರೆ, ಬೆಲೆ ವಿಚಾರಕ್ಕೆ ಬಂದರೆ, ಟಾಟಾ ಟಿಯಾಗೊ ಇವಿ ಹಾಗೂ ಕಳೆದ ಕೆಲವು ದಿನಗಳ ಹಿಂದೆ, ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಸಿಟ್ರಸ್ ಇಸಿ3 ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ನೀಡಬಹುದು. ವೈಶಿಷ್ಟ್ಯ ಸೇರಿದಂತೆ ಬೇರೆ ಯಾವ ವಿಚಾರಗಳಲ್ಲಿ ಕಾಮೆಟ್ ಇವಿ, ಇವರೆಡು ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಎಂಜಿ ಕಂಪನಿ ಕಂಪನಿಯೇ ಹೇಳುವಂತೆ ಭಾರತದಂತಹ ಹೆಚ್ಚಿನ ಸಂಚಾರ ದಟ್ಟಣೆಯಿರುವ ದೊಡ್ಡ ನಗರಗಳಲ್ಲಿ ಸುಲಭವಾಗಿ ಓಡಾಡಲು ಸಾಧ್ಯವಾಗುವಂತೆ ಈ ಕಾರನ್ನು ವಿನ್ಯಾಸ ಮಾಡಲಾಗಿದೆಯಂತೆ. ಈಗಾಗಲೇ ಗುಜರಾತ್‌ನ ಹಲೋಲ್‌ನಲ್ಲಿರುವ ತನ್ನ ತಯಾರಿಕ ಘಟಕದಲ್ಲಿ ಕಾಮೆಟ್ ಇವಿ ಉತ್ಪಾದನೆಯನ್ನು ಆರಂಭಿಸಿರುವುದಾಗಿ ಕಂಪನಿ ಘೋಷಿಸಿರುವುದರಿಂದ ಕೆಲವೇ ದಿನಗಳಲ್ಲಿ ಭಾರತದಲ್ಲಿ ವಿತರಣೆ ಶುರುವಾಗಲಿದೆ. ಬಿಡುಗಡೆಯಾದ ಮೇಲೆ ಕಾಮೆಟ್ ಇವಿ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

Article Published On: Tuesday, April 18, 2023, 13:30 [IST]
English summary
Mg comet ev india launch april 19 highlights
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+