MG Comet EV ಖರೀದಿಸಬೇಕೇ.. ಇಲ್ಲಿದೆ ಪ್ರಮುಖ ಮಾಹಿತಿ

ಎಂಜಿ ಕಂಪನಿ ಭಾರತ ಮಾರುಕಟ್ಟೆಯಲ್ಲಿ 2 ಡೋರ್ ಕಾಮೆಟ್ ಇವಿಯನ್ನು ಅಗ್ಗದ ಬೆಲೆಯಲ್ಲಿ ಬಿಡುಗಡೆಗೊಳಿಸಿದ್ದು, ಇದೀಗ ವಿವಿಧ ರೂಪಾಂತರಗಳ ಬೆಲೆಯನ್ನು ಘೋಷಿಸಿದೆ. ನೀವು ಈ ಕಾರನ್ನು ಕೊಂಡುಕೊಳ್ಳಲು ಯೋಜಿಸಿದ್ದರೆ ಆನ್-ರೋಡ್ ಬೆಲೆ, ಡೌನ್ ಪೇಮೆಂಟ್, ಸಾಲದ ಅವಧಿ ಹಾಗೂ ಇಎಂಐ ಕುರಿತು ಮಾಹಿತಿ ಇಲ್ಲಿದೆ.

ಎಂಜಿ ಕಾಮೆಟ್ ಇವಿಯನ್ನು ಆಸಕ್ತ ಗ್ರಾಹಕರು, ಮೇ.12ರಿಂದ ಬುಕಿಂಗ್ ಮಾಡಬಹುದಾಗಿದ್ದು, ಮೇ.22ರಿಂದ ವಿತರಣೆಗಳು ಆರಂಭವಾಗಲಿದೆ. ಮೊದಲಿಗೆ ಎಂಟ್ರಿ ಪೇಸ್ ವೇರಿಯೆಂಟ್ ಬಗ್ಗೆ ಮಾತನಾಡೋಣ. ಇದು, ರೂ.7.98 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಡೆಲಿವರಿ ಶುರುವಾಗದಿರುವುದರಿಂದ ಆನ್-ರೋಡ್ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ ಅಂದಾಜಿನ ಪ್ರಕಾರ, ರೂ.8.32 ಲಕ್ಷ ಬೆಲೆಯಲ್ಲಿ ಸಿಗಬಹುದು. ಗ್ರಾಹಕರು, ರೂ.80,000 ಡೌನ್ ಪೇಮೆಂಟ್ ಮಾಡಬೇಕಾಗಿದೆ.

MG Comet EV ಖರೀದಿಸಬೇಕೇ.. ಇಲ್ಲಿದೆ ಪ್ರಮುಖ ಮಾಹಿತಿ

ಐದು ವರ್ಷದ ಅವಧಿಗೆ ಶೇಕಡ 10% ದರದಲ್ಲಿ ಮಾಸಿಕ ರೂ.15,976 ಇಎಂಐ ಪಾವತಿಸಬೇಕು. ಪ್ಲೇ ವೇರಿಯೆಂಟ್ ರೂ.9.28 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದ್ದು, ಸುಮಾರು ರೂ.9.66 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಬಹುದು. ಇದನ್ನು ಕೊಂಡುಕೊಳ್ಳಲು ರೂ.97,000 ಡೌನ್ ಪೇಮೆಂಟ್ ಕಟ್ಟಬೇಕು. 5 ವರ್ಷದ ಅವಧಿಗೆ ಶೇಕಡ 10% ದರದಲ್ಲಿ ತಿಂಗಳಿಗೆ ರೂ.18,471 ಇಎಂಐ ನಿಮ್ಮ ಖಾತೆಯಿಂದ ಕಡಿತವಾಗುತ್ತದೆ.

'ಪ್ಲಶ್' ಎಂಜಿ ಕಾಮೆಟ್ ಇವಿಯ ಟಾಪ್ ಎಂಡ್ ರೂಪಾಂತರವಾಗಿದ್ದು, ರೂ. 9.98 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದ್ದು, ರೂ.10.39 ಲಕ್ಷ ಆನ್-ರೋಡ್ ದರದಲ್ಲಿ ಗ್ರಾಹಕರಿಗೆ ಸಿಗಬಹುದು. ಖರೀದಿದಾರರು, ರೂ.1.04 ಲಕ್ಷ ಡೌನ್ ಪಾವತಿಸಿ, ಈ ಕಾರನ್ನು ಖರೀದಿಸಿದರೆ, ಐದು ವರ್ಷದ ಅವಧಿಗೆ ಶೇಕಡ 10% ದರದಲ್ಲಿ ಮಾಸಿಕ ರೂ.19,860 ಇಎಂಐ ಕಟ್ಟಬೇಕು.

ಎಂಜಿ ಕಾಮೆಟ್ ಇವಿ ರೂಪಾಂತರಗಳಿಗೆ ಅನುಗುಣವಾಗಿ ಕೊಂಚ ಬೇರೆ-ಬೇರೆ ವೈಶಿಷ್ಟ್ಯಗಳನ್ನು ಪಡೆದಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್‌ ಹಾಗೂ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಾಗಿ ಡುಯೆಲ್ 10.25-ಇಂಚಿನ ಸ್ಕ್ರೀನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಎಲ್ಲ ರೂಪಾಂತರಗಳಲ್ಲಿಯೂ ಇದೆ. ಡುಯಲ್ ಫ್ರಂಟ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಕ್ಯಾಮೆರಾ ಹಾಗೂ ಸೆನ್ಸಾರ್ಸ್ ಒಳಗೊಂಡಂತೆ ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಕಾರು, 17.3 KWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಫುಲ್ ಚಾರ್ಜಿನಲ್ಲಿ 230 km ರೇಂಜ್ ನೀಡಲಿದೆ. ಇದರ ಸಿಂಗಲ್ PMS ಮೋಟಾರ್ 41.4 hp ಗರಿಷ್ಠ ಪವರ್ ಹಾಗೂ 10 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 3.3 kW ಚಾರ್ಜರ್ ಆಯ್ಕೆಯಲ್ಲಿ ಸಂಪೂರ್ಣ ಬ್ಯಾಟರಿ 7 ಗಂಟೆಯಲ್ಲಿ ಚಾರ್ಜ್ ಆಗುತ್ತದೆ.

ಎಂಜಿ ಕಂಪನಿ, ಕಾಮೆಟ್ ಇವಿಯನ್ನು ನಗರ ಪ್ರದೇಶದ ಟ್ರಾಫಿಕ್ ಜಾಮ್ ಇರುವ ರಸ್ತೆಗಳಲ್ಲಿ ಸುಲಭವಾಗಿ ಸಂಚರಿಸಲು ಸಾಧ್ಯವಂತೆ ವಿನ್ಯಾಸ ಮಾಡಿದೆ. ಜೊತೆಗೆ ಪುಟ್ಟ ಕಾರಾಗಿರುವುದರಿಂದ ಕಡಿಮೆ ಸ್ಥಳದಲ್ಲಿಯೇ ಪಾರ್ಕಿಂಗ್ ಮಾಡಬಹುದು. ಇದು ಈ ಕಾರಿನ ಧನಾತ್ಮಕ ಅಂಶವಾಗಿದೆ. ಜೊತೆಗೆ ನಿರ್ವಹಣಾ ವೆಚ್ಚವು ಕಡಿಮೆ ಇದ್ದು, ಕಂಪನಿಯೇ ಹೇಳುವಂತೆ ಕಾಮೆಟ್ ಇವಿಯನ್ನು 1000 ಕಿಲೋಮೀಟರ್ ಓಡಿಸಲು ರೂ.519 ಖರ್ಚಾಗುತ್ತದೆ.

ಇನ್ನು, ಎಂಜಿ ಕಾಮೆಟ್ ಇವಿ 2 ಡೋರ್ ಆಯ್ಕೆಯನ್ನು ಹೊಂದಿದ್ದು, ಈ ವಿಭಾಗದಲ್ಲಿ ಅದಕ್ಕೆ ಯಾವುದೇ ನೇರ ಪ್ರತಿಸ್ಪರ್ಧಿ ಇಲ್ಲ. ಆದರೆ, ಟಾಟಾ ಟಿಯಾಗೊ ಇವಿ ಹಾಗೂ ಸಿಟ್ರಸ್ ಇಸಿ3 ಕಾರುಗಳು ಪ್ರಬಲ ಪೈಪೋಟಿಯಾಗಿವೆ. ಮೇ.12ರಿಂದ ಬುಕಿಂಗ್ ಆರಂಭವಾಗಲಿದ್ದು, ಕಾಮೆಟ್ ಇವಿಗೆ ಭಾರತದ ಗ್ರಾಹಕರಿಂದ ಯಾವ ರೀತಿಯಲ್ಲಿ ಪ್ರತಿಕ್ರಿಯೆ ದೊರೆಯಲಿದೆ ಎಂಬುದು ತಿಳಿಯಲಿದೆ.

More from DriveSpark

Article Published On: Monday, May 8, 2023, 18:29 [IST]
English summary
Mg comet ev loan emi down payment details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+