MG Comet EV vs Tata Nano: ನ್ಯಾನೋ ಗತ್ತು ಕಾಮೆಟ್‌ಗೆ ಇದೆಯೇ ಒಮ್ಮೆ ನೋಡೇ ಬಿಡೋಣ...

ಭಾರತದಲ್ಲಿ ಕಳೆದ ಹಲವು ದಿನಗಳಿಂದ ಸಖತ್ ಸದ್ದು ಮಾಡುತ್ತಿದ್ದ MG ಮೋಟಾರ್‌ ಅವರ ಪುಟ್ಟ ಎಲೆಕ್ಟ್ರಿಕ್ ಕಾರ್ ಗುರುವಾರ (ನಿನ್ನೆ) ಅನಾವರಣಗೊಂಡಿದೆ. ಇದು ಬಿಡುಗಡೆಯಾದರೆ ದೇಶದ ಅತ್ಯಂತ ಸಣ್ಣ ಎಲೆಕ್ಟ್ರಿಕ್ ಕಾರ್ ಎಂಬ ಖ್ಯಾತಿ ಪಡೆಯಲಿದೆ. ಹಾಗಾದ್ರೆ ಟಾಟಾ ನ್ಯಾನೋಗಿಂತ ಯಾವೆಲ್ಲಾ ವಿಷಯಗಳಲ್ಲಿ ಭಿನ್ನವಾಗಿದೆ ಎಂಬುದನ್ನು ಇಲ್ಲಿ ನೋಡೋಣ.

ನಮಗೆಲ್ಲರಿಗು ತಿಳಿದಂತೆ ಸಾಮಾನ್ಯರು ಕೂಡ ಕಾರನ್ನು ಹತ್ತಬೇಕು ಎಂಬ ದೊಡ್ಡ ಆಶಯದೊಂದಿಗೆ ರತನ್ ಟಾಟಾ ಅವರು ನ್ಯಾನೋವನ್ನು ಪರಿಚಯಿಸಿದ್ದರು. ಇದು ಅವರ ಕನಸಿನ ಕಾರು ಕೂಡ ಹೌದು. ಒಂದು ಕಾಲದಲ್ಲಿ ದೇಶದ ಅತ್ಯಂತ ಪುಟ್ಟ ಹಾಗೂ ಕೈಗೆಟುಕುವ ಬೆಲೆಯ ಕಾರಾಗಿತ್ತು. ಎಂಜಿ ಕಾಮೆಟ್ ಹಾಗೂ ಟಾಟಾ ನ್ಯಾನೋ ನಡುವಿನ ವ್ಯತ್ಯಾಸ ತಿಳಿಯುವುದಕ್ಕೂ ಮುನ್ನ ಇವೆರಡು ವಿಭಿನ್ನ ವಿಭಾಗದ ಕಾರುಗಳು ಎಂಬುದು ನೆನಪಿರಲಿ. ನ್ಯಾನೋ ಇಂಧನ ಚಾಲಿತವಾದರೆ, ಕಾಮೆಟ್ ಎಲೆಕ್ಟ್ರಿಕ್ ಮಾದರಿ ಎಂಬುದನ್ನು ಗಮನಿಸಬೇಕು.

MG Comet EV vs Tata Nano: Lets see the Power of both cars in all aspects

ಸದ್ಯ ಸೋರಿಕೆಯಾದ ಎಂಜಿ ಕಾಮೆಟ್‌ನ ಉದ್ದಳತೆಗಳ ಕುರಿತು ನೋಡಿದರೆ, ಆಶ್ಚರ್ಯಕರವಾಗಿ ಟಾಟಾ ನ್ಯಾನೋ ಎಲ್ಲಾ ಅಂಶಗಳಲ್ಲಿಯೂ MG ಕಾಮೆಟ್ EV ಗಿಂತ ದೊಡ್ಡದಾಗಿದೆ. MG ಕಾಮೆಟ್ EV ಉದ್ದ 2,974mm, ಅಗಲ 1,505mm ಮತ್ತು ಎತ್ತರ 1,631mm ಹಾಗೂ ವೀಲ್‌ಬೇಸ್ 2,010mm ಇದೆ. ಟಾಟಾ ನ್ಯಾನೋಗೆ ಬರುವುದಾದರೆ, 3,164 ಎಂಎಂ ಉದ್ದ, 1,750 ಎಂಎಂ ಅಗಲ ಮತ್ತು 1,652 ಎಂಎಂ ಎತ್ತರವಿದ್ದು 2,230 ಎಂಎಂ ವೀಲ್‌ಬೇಸ್ ಹೊಂದಿದೆ.

ಆದರೆ ಬೆಲೆಯ ವಿಷಯದಲ್ಲಿ ನೋಡಿಕೊಂಡರೆ ಎಂಜಿ ಕಾಮೆಟ್ ದುಬಾರಿಯಾಗಿರಲಿದೆ. ಟಾಟಾ ನ್ಯಾನೋ ಸದ್ಯ ಮಾರಾಟದಲ್ಲಿ ಇಲ್ಲವಲ್ಲ ಎಂಬ ಅನಿಮಾನ ನಿಮಗಿರಬಹುದು. ಆದರೂ ಇದು ರತನ್ ಟಾಟಾ ಅವರ ಕನಸಿನ ಕಾರು ಹಾಗೂ ಕೈಗೆಟಕುವ ಬೆಲೆಗೆ ನೀಡುವುದು ಅವರ ಮುಖ್ಯ ಉದ್ದೇಶವಾದ್ದರಿಂದ ಈಗಲೂ ನ್ಯಾನೋ ಮಾರಾಟದಲ್ಲಿ ಇದ್ದಿದ್ದೇ ಆದರೆ, ಅದರ ಬೆಲೆ 4 ರಿಂದ 5 ಲಕ್ಷದೊಳಗೆ ಇರುತ್ತಿತ್ತು. ಆದರೆ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಆವೃತ್ತಿಯಾದ್ದರಿಂದ ಇದರ ಬೆಲೆಯು ಅಂದಾಜು 9 ಲಕ್ಷದ ಮೇಲೆಯೇ ಇರುತ್ತದೆ.

MG Comet EV vs Tata Nano: Lets see the Power of both cars in all aspects

ಎಲೆಕ್ಟ್ರಿಕ್ ನ್ಯಾನೋ vs ಎಂಜಿ ಕಾಮೆಟ್ ಇವಿ:
ಹೌದು ನೀವು ಓದಿದ್ದು ನಿಜ Tiago JTP ಮತ್ತು Tigor JTP ನಿರ್ಮಿಸಿದ ಕೊಯಮತ್ತೂರು ಮೂಲದ ಜಯಮ್ ಆಟೋಮೋಟಿವ್, ಫ್ಲೀಟ್ ಖರೀದಿದಾರರಿಗಾಗಿ ಟಾಟಾ ನ್ಯಾನೋದ ಎಲೆಕ್ಟ್ರಿಕ್ ಆವೃತ್ತಿಯನ್ನು ನಿರ್ಮಿಸಿದೆ. ಕಾರಿನ ಹೆಸರನ್ನು ಬದಲಾಯಿಸಲಾಗಿದ್ದು ಜಯಮ್ ನಿಯೋ ಎಂದು ಕರೆಯಲಾಗುತ್ತಿದೆ. ಇದರ ಪವರ್ ಹಾಗೂ ಬ್ಯಾಟರಿಯನ್ನು ನೊಡುವುದಾದರೆ, ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು 17.7 kWh ಬ್ಯಾಟರಿ ಜೊತೆಗೆ ಬರುತ್ತದೆ.

ಇದು GBT ಪೋರ್ಟ್ ಮತ್ತು 15 AMP ಚಾರ್ಜರ್ ಸಾಮಾನ್ಯ ಪೋರ್ಟ್ ಅನ್ನು ಹೊಂದಿದೆ. ಈ ಕಾರು ಸುಮಾರು 80-85 kmph ಟಾಪ್ ಸ್ಪೀಡ್ ಹೊಂದಿದ್ದು, 15 Kw ಮೋಟಾರ್ ಸುಮಾರು 23 bhp ಮತ್ತು 45 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಾರು 200 ಕಿ.ಮೀ ಪ್ರಮಾಣೀಕೃತ ರೇಂಜ್ ಹಿಂದಿರುಗಿಸುತ್ತದೆ ಎಂದು ಹೇಳಲಾಗಿದೆ. ಆದರೆ, ಸಂಪೂರ್ಣ ಚಾರ್ಜ್ ಮಾಡಿದಾಗ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಸುಮಾರು 164 ಕಿ.ಮೀ ರೇಂಜ್ ತೋರಿಸುತ್ತದೆ. ಇದರ ಬೆಲೆಯು ರೂ. 5 ಲಕ್ಷವಿದೆ.

MG Comet EV vs Tata Nano: Lets see the Power of both cars in all aspects

ಇನ್ನು MG ಕಾಮೆಟ್ ಅನ್ನು ನೋಡುವುದಾದರೆ, 42PS ಪವರ್ ಹಾಗೂ 110Nm ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಇದು 17.3kWh ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ಬರುತ್ತದೆ. 3.3kW ಚಾರ್ಜರ್ ಬಳಸಿ 7 ಗಂಟೆಗಳಲ್ಲಿ ಶೇ100 ಮತ್ತು 5 ಗಂಟೆಗಳಲ್ಲಿ ಶೇ80 ಚಾರ್ಜ್ ಮಾಡಬಹುದು. ಹಾಗೆಯೇ ಕಾಮೆಟ್ EV ಶ್ರೇಣಿಯು ಒಂದು ಸಂಪೂರ್ಣ ಚಾರ್ಜ್‌ನಲ್ಲಿ 230km ರೇಂಜ್ ನೀಡುವುದಾಗಿ ವರದಿಯಾಗಿದೆ. ಇದನ್ನು ಪರಿಗಣಿಸಿ ಟಾಟಾ ನ್ಯಾನೋವನ್ನು ನೋಡಿದರೆ ಎಂಜಿ ಅಧಿಕವಾಗಿದೆ.

MG ಕಾಮೆಟ್ EV ಅನ್ನು SAIC-GM-Wuling's ಗ್ಲೋಬಲ್ ಸ್ಮಾಲ್ ಎಲೆಕ್ಟ್ರಿಕ್ ವೆಹಿಕಲ್ (GSEV) ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಪ್ರಮುಖ ವೈಶಿಷ್ಟ್ಯಗಳಲ್ಲಿ 10.25-ಇಂಚಿನ ಸಂಪೂರ್ಣ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, Apple iPod-ಪ್ರೇರಿತ ಟ್ವಿನ್-ಸ್ಪೋಕ್ ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿದೆ. ಭಾರತದಲ್ಲಿ ಏಪ್ರಿಲ್ 26 ರಂದು ಬಿಡುಗಡೆಯಾಗಲಿದೆ. ಬೆಲೆಯು ರೂ. 10 ಲಕ್ಷದಿಂದ ರೂ. 15 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇರಬಹುದೆಂದು ನಿರೀಕ್ಷಿಸಲಾಗಿದೆ.

More from DriveSpark

Article Published On: Friday, April 21, 2023, 18:10 [IST]
English summary
Mg comet ev vs tata nano dimensions power details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+