MG Comet vs Tata Tiago EV: ಟಾಟಾಗೆ ಸೆಡ್ಡು ಹೊಡೆಯಲಿದ್ಯಾ ಎಂಜಿ... ದೇಶದ ಅಗ್ಗದ ಇವಿ ಕಾರ್ ಯಾವುದು?
ದೇಶದಲ್ಲಿ ಸಖತ್ ಸದ್ದು ಮಾಡಿದ್ದ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು ಕೊನೆಗೂ ಬಿಡುಗಡೆಯಾಗಿದೆ. ಬೆಲೆಯ ವಿಚಾರದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ಈ ಪುಟ್ಟ ಇವಿ ನಿರೀಕ್ಷೆಯಂತೆಯೇ 7.98 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಬಿಡುಗಡೆಯಾಗಿದೆ. ಈ ಹಿಂದೆ ಅಗ್ಗದ ಇವಿ ಕಾರು ಎನ್ನಿಸಿಕೊಂಡಿದ್ದ ಟಾಟಾ ಟಿಯಾಗೊವನ್ನು ಎಂಜಿ ಕಾಮೆಟ್‌ಗೆ ಹೋಲಿಸಿ ನೋಡೋಣ.
ಮೊದಲು ಎಂಜಿ ಇವಿ ಕಾರುಗಳ ಬಗ್ಗೆ ತಿಳಿದುಕೊಳ್ಳೋಣ. ಎಂಜಿ ಮೋಟಾರ್ ಅವರು ಮೊದಲು ಭಾರತದಲ್ಲಿ ZS ಇವಿ ಕಾರನ್ನು ಪರಿಚಯಿಸಿದ್ದರು. ಇದು ಪ್ರೀಮಿಯಂ ವಿಭಾಗದ ಎಲೆಕ್ಟ್ರಿಕ್ ಎಸ್‌ಯುವಿಯಾಗಿದ್ದರೇ, ಕಾಮೆಟ್ ಎಂಜಿ ಅವರ ಎರಡನೇ ಕೊಡುಗೆಯಾಗಿದ್ದು, ಭಾರತದ ಮಧ್ಯಮ ವರ್ಗದ ಜನರಿಗಾಗಿ ನಗರದಲ್ಲಿ ಓಡಿಸಲು ಕಾಮೆಟ್ ಎಲೆಕ್ಟ್ರಿಕ್ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು ಎರಡು ಬಾಗಿಲು ನಾಲ್ಕು ಸೀಟ್‌ಗಳೊಂದಿಗೆ ಸಜ್ಜುಗೊಳಿಸಲಾಗಿದ್ದು, ಅತ್ಯಾಧುನಿಕ ಫೀಚರ್ ಗಳನ್ನು ನೀಡಲಾಗಿದೆ.

ಎಂಜಿ ಕಾಮೆಟ್ ಇವಿ ಬಿಡುಗಡೆಗೂ ಮುನ್ನ ಟಾಟಾ ಟಿಯಾಗೊ ಇವಿ ದೇಶದ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರು ಎಂಬ ಖ್ಯಾತಿ ಪಡೆದಿತ್ತು. ಇದೀಗ ಕಾಮೆಟ್ ಆ ಸ್ಥಾನವನ್ನು ಧಕ್ಕಿಸಿಕೊಂಡಿದೆಯಾದರೂ ಟಾಟಾ ಟಿಯೋಗೊಗೆ ಹೋಲಿಸಿಕೊಂಡರೆ ಬ್ಯಾಟರಿ, ಉದ್ದಳತೆ, ವಿನ್ಯಾಸ, ರೇಂಜ್ ಹಲವು ರೀತಿಯಲ್ಲಿ ಭಾರೀ ವ್ಯತ್ಯಾಸಗಳಿವೆ. ಆದರೆ ಇಲ್ಲಿ ಕಡಿಮೆ ಬೆಲೆಯಿರುವ ಇವಿ ಗ್ರಾಹಕರನ್ನು ಸೆಳೆಯುವುದಂತೂ ಖಚಿತ. ಎರಡು ಇವಿಗಳ ಬೆಲೆಗಳು ಉತ್ತಮ ಮಾರಾಟವನ್ನು ನಿರ್ಣಯಿಸಲಿವೆ.
ಟಿಯಾಗೊ ಬೆಲೆಗಳನ್ನು ನೋಡುವುದಾದರೆ, ಟಿಯಾಗೊ EV 8.69 ಲಕ್ಷ (ಎಕ್ಸ್ ಶೋರೂಂ) ಬೆಲೆಯಿಂದ ಆರಂಭವಾಗಿ 11.99 ಲಕ್ಷ (ಎಕ್ಸ್ ಶೋರೂಂ) ವರೆಗೆ ಹೋಗುತ್ತದೆ. ಈ ಟಾಪ್ ಸ್ಪೆಕ್ ಮಾದರಿಯು 7.2 KW ಚಾರ್ಜರ್‌ನೊಂದಿಗೆ ಬರುತ್ತದೆ. ಇನ್ನು ಎಂಜಿ ಕಾಮೆಟ್ ವಿವರವಾದ ಬೆಲೆಗಳನ್ನು ನೋಡುವುದಾದರೆ, ಇದು ಕೇವಲ ಒಂದೇ ವೇರಿಯಂಟ್‌ನಲ್ಲಿ ಖರೀದಿಗೆ ಲಭ್ಯವಿದ್ದು, 7.98 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. ಜೊತೆಗೆ ಗ್ರಾಫಿಕ್ಸ್ ಹಾಗೂ ಇತರೆ ಅಕ್ಸೆಸೊರಿಗಳಿಗೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ.

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು IP67-ರೇಟೆಡ್ 24 kWh ಮತ್ತು 19.2 kWh ಬ್ಯಾಟರಿ ಪ್ಯಾಕ್‌ಗಳನ್ನು ಅಳವಡಿಸಲಾಗಿದೆ. ಮೊದಲನೆಯದು 315 ಕಿ.ಮೀ ರೇಂಜ್ ಅನ್ನು ನೀಡಿದರೆ, ಎರಡನೆಯದು ಸಿಂಗಲ್ ಚಾರ್ಜ್‌ನಲ್ಲಿ 250 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಕಾರಿನಲ್ಲಿ 3.3 kW ಎಸಿ ಚಾರ್ಜ್ ಮತ್ತು 7.2 kW ಎಸಿ ಚಾರ್ಜ್ ಸೌಲಭ್ಯಗಳನ್ನು ಆಯ್ಕೆ ರೂಪದಲ್ಲಿ ನೀಡಲಾಗುತ್ತದೆ. 7.2 kW ಎಸಿ ಚಾರ್ಜ್ ಸೌಲಭ್ಯದ ಮೂಲಕ 3 ಗಂಟೆ 36 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.
ಇನ್ನು ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು 17.3kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು IP67-ರೇಟ್ ಮಾಡಲ್ಪಟ್ಟಿದೆ. ಹಾಗೆಯೇ ARAI- ಪ್ರಮಾಣೀಕೃತ ರೇಂಜ್ 230 ಕಿ.ಮೀ ಆಗಿದೆ. ಈ ಎಂಜಿ ಕಾರಿನಲ್ಲಿ 3.3kW ಆನ್‌ಬೋರ್ಡ್ ಚಾರ್ಜರ್ ಅನ್ನು ಸಹ ನೀಡುತ್ತಿದೆ, ಇದು ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಏಳು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಒಟ್ಟಾರೆ ಎಂಜಿ ಕಾಮೆಟ್ ತನ್ನ ಬೆಲೆಗೆ ತಕ್ಕಂತೆ ಸಣ್ಣ ಬ್ಯಾಟರಿ ಹಾಗೂ ರೇಂಜ್‌ನೊಂದಿಗೆ ಬರುತ್ತದೆ.

ಹೇಗೇ ನೋಡಿಕೊಂಡರು ಎರಡೂ ಕಾರಗಳ ನಡುವೆ 70 ರಿಂದ 80 ಸಾವಿರ ರೂ. ಬೆಲೆಯ ವ್ಯತ್ಯಾಸವಿದೆ. ಆದರೂ ಎಂಜಿ ಕಾಮೆಟ್ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಕಡಿಮೆ ಬೆಲೆ ಹೊಂದಿದೆ. ಟಾಟಾ ಟಿಯಾಗೊ ಗಾತ್ರದಲ್ಲಿ ದೊಡ್ಡದಾಗಿದ್ದು ಒಳಾಂಗಣವು ಎಂಜಿಗಿಂತ ವಿಶಾಲವಾಗಿದೆ. ಹಾಗೆಯೇ ರೇಂಜ್‌ನಲ್ಲೂ ಹೆಚ್ಚಿದೆ. ಈ ಎರಡೂ ಕಾರುಗಳ ಎಲ್ಲಾ ವಿಶೇಷತೆಗಳ ಜೊತೆಗೆ ಬೆಲೆಗಳನ್ನು ನೋಡಿ ನಿಮಗೆ ಯಾವುದು ಉತ್ತಮವೆಸನಿಸಿದೆ ಎಂಬುದನ್ನು ಕಮೆಂಟ್ ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications