ಮುಂದಿನ ತಿಂಗಳಿನಿಂದ ಈ ದೊಡ್ಡ ಕಂಪನಿ ಕಾರುಗಳ ಬೆಲೆ ಭಾರೀ ಏರಿಕೆ

ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ವಾಹನ ತಯಾರಕ ಕಂಪನಿಗಳು ಬೆಲೆ ಏರಿಕೆ ಮಾಡುವುದು ಸರ್ವೇ ಸಾಮಾನ್ಯ. ಇದೀಗ ಬ್ರಿಟಿಷ್ ವಾಹನ ತಯಾರಕ ಕಂಪನಿ ಎಂಜಿ ಮೋಟಾರ್ಸ್ ಮುಂದಿನ ತಿಂಗಳಿಂದ ತನ್ನ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದೆ. ಆ ಬಗ್ಗೆ ಹೆಚ್ಚಿನ ವಿವರ ತಿಳಿಯೋಣ.

ಎಂಜಿ ಮೋಟಾರ್ಸ್ ಇಂಡಿಯಾ ಬಹುತೇಕ ತನ್ನ ಎಲ್ಲ ವಾಹನಗಳ ಬೆಲೆಯನ್ನು ಏರಿಕೆ ಮಾಡಿದೆ ಎಂದು ವರದಿಯಾಗಿದೆ. ನೂತನ ದರಗಳು ಮಾರ್ಚ್ 1, 2023 ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ. ಆದರೆ, ಬೆಲೆ ಏರಿಕೆಗೆ ನಿರ್ದಿಷ್ಟ ಕಾರಣವೇನೆಂಬುದನ್ನು ಕಂಪನಿ ಈವರೆಗೆ ಬಹಿರಂಗಪಡಿಸಲ್ಲ. ಭಾರತದಲ್ಲಿ ಏಪ್ರಿಲ್ 1 ರಿಂದ ಜಾರಿಯಾಗಲಿರುವ ಕಡ್ಡಾಯ RDE ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಕಾರುಗಳ ಎಂಜಿನ್ ಅಭಿವೃದ್ಧಿಪಡಿಸಬೇಕಿರುವ ಕಾರಣ, ಎಂಜಿ ಕಂಪನಿ ಈ ಬೆಲೆ ಏರಿಕೆ ಮಾಡಿದೆ ಎಂದು ಹೇಳಲಾಗಿದೆ.

ಮುಂದಿನ ತಿಂಗಳಿನಿಂದ ಈ ದೊಡ್ಡ ಕಂಪನಿ ಕಾರುಗಳ ಬೆಲೆ ಭಾರೀ ಏರಿಕೆ

ಎಂಜಿ ಮೋಟಾರ್ಸ್, ದೇಶೀಯ ಮಾರುಕಟ್ಟೆಯಲ್ಲಿ ರೂ.10 ಲಕ್ಷ ಆರಂಭಿಕ ಬೆಲೆಯಲ್ಲಿ ತನ್ನ ಎಂಟ್ರಿ ಲೆವೆಲ್ ಕಾರದ 'ಆಸ್ಟರ್' ಎಸ್‌ಯುವಿಯನ್ನು ಮಾರಾಟ ಮಾಡುತ್ತಿದೆ. ಯಾವ ಕಾರಿನ ಮಾದರಿಗೆ ಎಷ್ಟು ಬೆಲೆ ಏರಿಕೆಯಾಗಲಿದೆ ಎಂಬುದನ್ನು ನೋಡುವುದಾದರೆ, ಎಂಜಿ ಗ್ಲೋಸ್ಟರ್ ಕಾರು ಅತಿಹೆಚ್ಚು ದರ ಏರಿಕೆಯನ್ನು ಪಡೆದುಕೊಳ್ಳಲಿದ್ದು, ಬರೋಬ್ಬರಿ ರೂ.60,000 ಹೆಚ್ಚಳವಾಗಲಿದೆ. ಮತ್ತೊಂದು ಕಾರು ಎಂಜಿ ಹೆಕ್ಟರ್ ಪೆಟ್ರೋಲ್ ಆವೃತ್ತಿ ಬೆಲೆ ರೂ.60,000 ಏರಿಕೆಯಾಗಲಿದ್ದು, ಡಿಸೇಲ್ ಆವೃತ್ತಿ ಬೆಲೆ ರೂ.40,000 ಹೆಚ್ಚಳವಾಗಲಿದೆ.

ಎಂಜಿ ಆಸ್ಟರ್ ಹಾಗೂ MG ZS ಎಲೆಕ್ಟ್ರಿಕ್ ಎಸ್‌ಯುವಿ ಬೆಲೆಗಳು ರೂ.30,000 ಏರಿಕೆಯಾಗಲಿದೆ. ಈ ವರ್ಷದಲ್ಲಿ ಕಂಪನಿಯಿಂದ ಇದು ಎರಡನೇ ಭಾರಿ ದರ ಹೆಚ್ಚಳವಾಗಿದೆ. ಜನವರಿಯಲ್ಲಿ ಗರಿಷ್ಠ ರೂ.90,000. ಬೆಲೆಯನ್ನು ಏರಿಕೆ ಮಾಡಿತ್ತು. ಕಳೆದ ತಿಂಗಳು ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗುವ ವಿವಿಧ ಕಾರು ಮಾದರಿ ಬೆಲೆಯನ್ನು ಮಾರುತಿ ಸುಜುಕಿ, ಹುಂಡೈ, ಟೊಯೊಟಾ, ಮಹೀಂದ್ರಾ ಹಾಗೂ ಟಾಟಾ ಮೋಟಾರ್ಸ್ ಕಂಪನಿಗಳು ಏರಿಕೆ ಮಾಡಿದ್ದವು. ಸದ್ಯ ಎಂಜಿ ಕಂಪನಿಯ ಬೆಲೆ ಏರಿಕೆಯನ್ನು ಗಮನಿಸಿದಾಗ ಮುಂಬರುವ ದಿನಗಳಲ್ಲಿ ಮತ್ತೆ ಬೇರೆ ಕಾರುಗಳ ದರವು ಏರಿಕೆಯಾಗಬಹುದು.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್ ಕಾರು, ರೂ.14.73 ಲಕ್ಷದಿಂದ 21.73 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಐದು ರೂಪಾಂತರಗಳಲ್ಲಿ ಸಿಗಲಿದೆ. ಅವುಗಳೆಂದರೆ, ಸ್ಟೈಲ್, ಸ್ಮಾರ್ಟ್, ಸ್ಮಾರ್ಟ್ ಪ್ರೊ, ಶಾರ್ಪ್ ಪ್ರೊ ಹಾಗೂ ಸ್ಯಾವಿ ಪ್ರೊ. ಈ ಕಾರಿನ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್, 143 PS ಪವರ್ ಹಾಗೂ 250 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 2-ಲೀಟರ್ ಡಿಸೇಲ್ ಎಂಜಿನ್, 170 PS ಪವರ್ 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಈ ಎಂಜಿ ಹೆಕ್ಟರ್ ಕಾರು, ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಹೊರ ಹಾಗೂ ಒಳಭಾಗ ನೋಡಲು ಅತ್ಯಾಕರ್ಷಕವಾಗಿದ್ದು, ಇದು 14-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ದೊಡ್ಡದಾದ ಸನ್‌ರೂಫ್ ಅನ್ನು ಪಡೆದುಕೊಂಡಿದೆ. ಸುರಕ್ಷತೆಯ ದೃಷಿಯಿಂದಲ್ಲೂ ಈ ಕಾರು, ಅತ್ಯುತ್ತಮವಾಗಿದೆ. ಆರು ಏರ್‌ಬ್ಯಾಗ್ಸ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯುಷನ್), ABS (ಆಂಟಿ ಬ್ರೇಕಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ )ಯನ್ನು ಹೊಂದಿದ್ದು, ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್, ಮಹೀಂದ್ರಾ XUV700 ಮತ್ತು ಸ್ಕಾರ್ಪಿಯೋ Nಗೆ ಪ್ರತಿಸ್ಪರ್ದಿಯಾಗಿದೆ.

ಭಾರತದಲ್ಲಿ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಂಜಿ ಗ್ಲೋಸ್ಟರ್ ಕಾರು, ಕೊಂಚ ಮಟ್ಟಿಗೆ ಐಷಾರಾಮಿಯಾಗಿದೆ. ಇದು ಬರೋಬ್ಬರಿ ರೂ. 32.60 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಎಂಜಿ ಆಸ್ಟರ್ ಎಸ್‌ಯುವಿ ಮಾತ್ರ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ದೇಶದಲ್ಲಿ ರೂ.10.52 ಲಕ್ಷದಿಂದ ರೂ.18.43 ಲಕ್ಷ ದರಕ್ಕೆ ಮಾರಾಟವಾಗುತ್ತಿದೆ. ಎಂಜಿ ಕಂಪನಿಯ ದುಬಾರಿ ಬೆಲೆಯ ಎಲೆಕ್ಟ್ರಿಕ್ ಎಸ್‌ಯುವಿಯಾಗಿರುವ ಎಂಜಿ ZS ರೂ.22.98 ಲಕ್ಷದಿಂದ ರೂ.27 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಲಿದೆ.

ಮುಂಬರಲಿರುವ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ತನ್ನ ಉತ್ಪಾದನಾ ವೆಚ್ಚವನ್ನ ಸರಿದೂಗಿಸಲು ಈ ವರ್ಷದಲ್ಲಿ ಎರಡನೇ ಬಾರಿಗೆ ಎಂಜಿ ಕಂಪನಿ ದರ ಏರಿಕೆ ಮಾಡಿದೆ ಎಂದು ಹೇಳಲಾಗಿದೆ. ಆದರೆ, ಕಂಪನಿ ಕಡೆಯಿಂದ ಅಧಿಕೃತ ಮಾಹಿತಿ ಸಿಗಬೇಕಾಗಿದೆ. ಈ ವರ್ಷದ ಆರಂಭದಲ್ಲಿಯೇ ಗರಿಷ್ಠ ಬೆಲೆ ಹೆಚ್ಚಳ ಮಾಡಿದ್ದ ಕಂಪನಿ, ಮತ್ತೆ ತನ್ನ ಗ್ರಾಹಕರಿಗೆ ಆಘಾತ ನೀಡಿದೆ. ಅಲ್ಲದೆ, ಮುಂಬರುವ ದಿನಗಳಲ್ಲಿ ನಷ್ಟವನ್ನು ತುಂಬಿಕೊಳ್ಳಲು ವಿವಿಧ ವಾಹನ ತಯಾರಕ ಕಂಪನಿಗಳು ದರ ಹೆಚ್ಚಳ ಮಾಡಬಹುದು.

More from DriveSpark

Article Published On: Saturday, February 18, 2023, 12:50 [IST]
English summary
Mg motor india hike prices from march 2023 details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+