MG: ಜನರಿಗೆ ಇಷ್ಟವಾಯ್ತು ಪುಟ್ಟ ಎಂಜಿ ಕಾಮೆಟ್ ಸೇರಿ ಇತರೆ ಕಾರುಗಳು, ಉತ್ತಮ ಲಾಭದತ್ತ ಕಂಪನಿ
ಬ್ರಿಟಿಷ್ ವಾಹನ ತಯಾರಕ ಕಂಪನಿ ಎಂಜಿ ಮೋಟಾರ್ (MG Motor), ತನ್ನ ವಿವಿಧ ಮಾದರಿಗಳ ಮೂಲಕ ದೇಶಾದ್ಯಂತ ಭಾರೀ ಜನಪ್ರಿಯತೆಗಳಿಸಿದೆ. ಅದರ ಕಾರುಗಳು ಆಕರ್ಷಕ ವೈಶಿಷ್ಟ್ಯ ಹಾಗೂ ವಿನ್ಯಾಸ ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸುತ್ತಿದ್ದಾರೆ. ಸದ್ಯ, ಅಕ್ಟೋಬರ್ (2023) ಮಾರಾಟ ವರದಿ ಪ್ರಕಟಗೊಂಡಿದೆ.
ಎಂಜಿ ಮೋಟಾರ್ ಇಂಡಿಯಾ (MG Motor India) ದೇಶೀಯ ಮಾರುಕಟ್ಟೆಯಲ್ಲಿ ಈ ಅಕ್ಟೋಬರ್ ತಿಂಗಳು 5,108 ಯುನಿಟ್ ಕಾರುಗಳ ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಶೇಕಡ 17% ಪ್ರಗತಿ ಸಾಧಿಸಿದೆ. ಇದರಲ್ಲಿ ಶೇಕಡ 25% ಎಲೆಕ್ಟ್ರಿಕ್ ಕಾರುಗಳನ್ನು ಸೇಲ್ ಮಾಡಲಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.

ದಸರಾ ಹಬ್ಬ ಹಾಗೂ ಖರೀದಿದಾರರಿಗೆ ವಿವಿಧ ಆಫರ್ ನೀಡಿದ ಕಾರಣ ಈ ಮಟ್ಟದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಯಿತು ಎಂದು ಎಂಜಿ ಕಂಪನಿ ಹೇಳಿಕೊಂಡಿದೆ. ಅಲ್ಲದೆ, ಈ ನವೆಂಬರ್ 1ರಿಂದ ಜಾರಿಗೆ ಬರುವಂತೆ ಹೆಕ್ಟರ್ (Hector) ಮತ್ತು ಹೆಕ್ಟರ್ ಪ್ಲಸ್ ( Hector Plus) ಬೆಲೆಗಳು ಹೆಚ್ಚಳವಾಗಿದ್ದು, ಸುಮಾರು 40,000 ರೂಪಾಯಿ ಗ್ರಾಹಕರಿಗೆ ಹೊರೆಯಾಗಿದೆ.
ಭಾರತದ ಮಾರುಕಟ್ಟೆಯಲ್ಲಿ ಕೆಲವು ತಿಂಗಳ ಹಿಂದೆ, ಎಂಜಿ ಕಾಮೆಟ್ ಇವಿ ರೂ.7.98 ಲಕ್ಷ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಇದು, ಪೇಸ್, ಪ್ಲೇ ಮತ್ತು ಪ್ಲಶ್ ಎಂಬ ಮೂರು ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಇದರಲ್ಲಿ 17.3 KWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 230 km ರೇಂಜ್ ಕೊಡುತ್ತದೆ.

ಈ ಕಾರಿನಲ್ಲಿ ಉಪಯೋಗಿಸಿರುವ ಸಿಂಗಲ್ PMS ಮೋಟಾರ್ 41.4 hp ಗರಿಷ್ಠ ಪವರ್ ಹಾಗೂ 110 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಆಪಲ್ ಗ್ರೀನ್ ವಿತ್ ಸ್ಟಾರಿ ಬ್ಲ್ಯಾಕ್, ಕ್ಯಾಂಡಿ ವೈಟ್ ಹಾಗೂ ಸ್ಟಾರಿ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ದೊರೆಯುವ ಎಂಜಿ ಕಾಮೆಟ್ ಇವಿ, ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಾಗಿ ಡುಯೆಲ್ 10.25-ಇಂಚಿನ ಸ್ಕ್ರೀನ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಎಂಜಿ ಕಂಪನಿಯ ಮತ್ತೊಂದು ಪ್ರೀಮಿಯಂ ಎಲೆಕ್ಟ್ರಿಕ್ ಕಾರು, 'ಝಡ್ಎಸ್ ಇವಿ' ರೂ.22.88 ಲಕ್ಷದಿಂದ ರೂ.26 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. 50.3 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್ 177 PS ಗರಿಷ್ಠ ಪವರ್, 280 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು, ಫುಲ್ ಚಾರ್ಜ್ ನಲ್ಲಿ 461 km ರೇಂಜ್ ನೀಡುತ್ತದೆ.

ಈ ಕಾರು, 10.1 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸನ್‌ರೂಫ್, ಕನೆಕ್ಟ್ದ್ ಕಾರ್ ಟೆಕ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಂ) ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ, ಹಿಲ್ ಡಿಸೆಂಟ್ ಕಂಟ್ರೋಲ್ ಒಳಗೊಂಡಿದೆ.
ಎಂಜಿ ಹೆಕ್ಟರ್ ರೂ.14.73 ಲಕ್ಷದಿಂದ ರೂ.21.73 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. 15.58 kmpl ಮೈಲೇಜ್ ನೀಡುತ್ತದೆ. ಮತ್ತೊಂದು, ಎಂಜಿ ಹೆಕ್ಟರ್ ಪ್ಲಸ್ ರೂ.17.50 ಲಕ್ಷದಿಂದ ರೂ.22.43 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯಲಿದ್ದು, 14-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications