ಜಗತ್ತೇ ಹಿಂತಿರುಗಿ ನೋಡುವಂತಾಗಿದೆ! ಚೀನಾದ ಪ್ರಸಿದ್ಧ ಕಂಪನಿಯೊಂದು ಭಾರತದ ಹಿಡಿತಕ್ಕೆ!

MG ಮೋಟಾರ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಕಾರು ಕಂಪನಿಗಳಲ್ಲಿ ಒಂದಾಗಿದೆ. ಇದು ಶಾಂಘೈ ಮೂಲದ ಸರ್ಕಾರಿ ಸ್ವಾಮ್ಯದ ಚೀನೀ ವಾಹನ ತಯಾರಕರಾದ SAIC ಮೋಟರ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಇದೇ ಕಾರಣಕ್ಕೆ ಭಾರತದಲ್ಲಿ ಎಂಜಿ ಮೋಟಾರ್ ಕಾರ್ಖಾನೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ನಿರ್ಬಂಧಗಳು ಅಡ್ಡಿಯಾಗಿವೆ.

2020 ರಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿ ಸಮಸ್ಯೆಗಳಿಂದಾಗಿ ಭಾರತ ಸರ್ಕಾರವು ಚೀನಾದ ಕಂಪನಿಗಳ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿರುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಇತ್ತ MG ಕಂಪನಿಯು MG ಹೆಕ್ಟರ್, MG ಹೆಕ್ಟರ್ ಪ್ಲಸ್, MG ಆಸ್ಟರ್ ಮತ್ತು MG ಗ್ಲೋಸ್ಟರ್ ಸೇರಿದಂತೆ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಾ ಜನಪ್ರಿಯತೆ ಪಡೆಯುತ್ತಿದೆ.

mg-motor-majority-shares-under-indian-brands

ಜೊತೆಗೆ ಎಲೆಕ್ಟ್ರಿಕ್ ವಲಯದಲ್ಲೂ MG ಮೋಟಾರ್ MG ZS EV ಮತ್ತು MG ಕಾಮೆಟ್ EV ಯಂತಹ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ಗ್ರಾಹಕರಲ್ಲಿ ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಗಳಿಸುತ್ತಿದೆ. ಹೀಗಿರುವಾಗ ಕಂಪನಿಯು ಭಾರತದಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಸ್ಥಳೀಯ ಕಾರ್ಖಾನೆ ನಿರ್ಮಾಣಕ್ಕೆ ಸಜ್ಜಾಗಿದೆ. ಆದ್ರೆ ಇದು ಅಷ್ಟು ಸುಲಭವಲ್ಲ.

ಇದಕ್ಕೆ ಅನುದಾನ ಪಡೆಯುವಲ್ಲಿ ಬಹುದೊಡ್ಡ ಸಮಸ್ಯೆಗಳಿವೆ. ಮೊದಲೇ ಹೇಳಿದಂತೆ ಚೀನಾ ಮೂಲದ SAIC ಗ್ರೂಪ್ MG ಮೋಟಾರ್ ಮಾಲೀಕರಾಗಿದ್ದಾರೆ. ಕೇಂದ್ರ ಸರ್ಕಾರದ ಹಲವಾರು ನಿರ್ಬಂಧಗಳಿಂದಾಗಿ MG ಮೋಟಾರ್ ತನ್ನ ಮಾತೃಸಂಸ್ಥೆಯಿಂದ ಹಣ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕೆ ಭಾರತದಲ್ಲಿ MG ಮೋಟಾರ್ ಸಾಮ್ರಾಜ್ಯ ವಿಸ್ತರಣೆಗೆ ಬ್ರೇಕ್ ಬಿದ್ದಂತಾಗಿದೆ.

mg-motor-majority-shares-under-indian-brands

ಈ ಕಾರ್ಖಾನೆಯನ್ನು ಗುಜರಾತ್‌ನ ಹಲೋಲ್ ಪ್ರದೇಶದಲ್ಲಿ ಸ್ಥಾಪಿಸಲು ಯೋಜಿಸಲಾಗಿತ್ತು. ಸದ್ಯಕ್ಕಷ್ಟೇ ವ್ಯಾಪಾರ ವಿಸ್ತರಣೆಯ ಯೋಜನೆಗಳು ಸ್ಥಗಿತಗೊಂಡದ್ದು, ಇದಕ್ಕೆ ಪರ್ಯಾಯ ಮಾರ್ಗಗಳು ಇವೆ. ಆದರೆ ಹಣದ ಕೊರತೆಯಿಂದ ಈ ಯೋಜನೆ ಸದ್ಯ ನನೆಗುದಿಗೆ ಬಿದ್ದಿದೆ. ಹಾಗೆಂದು MG ಮೋಟಾರ್ ಭಾರತದಲ್ಲಿ ಕಾರ್ಖಾನೆ ನಿರ್ಮಾಣಕ್ಕೆ ಸಾಧ್ಯತೆಗಳೇ ಇಲ್ಲ ಎಂದು ಹೇಳಲಾಗುವುದಿಲ್ಲ.

ವರದಿಗಳ ಪ್ರಕಾರ, MG ಮೋಟಾರ್‌ನ ಶೇ 45-48 ರಷ್ಟು ಪಾಲನ್ನು ಭಾರತೀಯ ಕಂಪನಿಗಳಿಗೆ ಮಾರಾಟ ಮಾಡಲು ನಿರ್ಧರಿಸಿದೆ. ಇದರ ಹಿಂದೆ ದೊಡ್ಡ ವ್ಯಾಪಾರ ತಂತ್ರವಿದೆ. ಭಾರತೀಯ ಕಂಪನಿಗಳನ್ನು ಪಾಲುದಾರರಾಗಿ ತರುವ ಮೂಲಕ, MG ಮೋಟಾರ್ ತನ್ನ ಚೀನೀ ಗುರುತನ್ನು ಸ್ವಲ್ಪ ಕಡಿಮೆ ಮಾಡಿಕೊಂಡರೆ ಭಾರತ ಹೂಡಿಕೆದಾರರಿಂದ ಸಾಕಷ್ಟು ಹಣ ಲಭ್ಯವಾಗುತ್ತದೆ.

mg-motor-majority-shares-under-indian-brands

ಎಂಜಿ ಮೋಟಾರ್‌ಗೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸಲು ಇದು ಒಂದು ಅವಕಾಶವಾಗಿದೆ. ಮೂಲಗಳ ಪ್ರಕಾರ ಭಾರತದ ಜೆಎಸ್‌ಡಬ್ಲ್ಯು ಗ್ರೂಪ್‌ಗೆ ಸೇರಿದ ಉದ್ಯಮಿ ಸಜ್ಜನ್ ಜಿಂದಾಲ್ ಅವರು ಎಂಜಿ ಮೋಟಾರ್ ಕಂಪನಿಯ ಬಹುಪಾಲು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಹೊರಟಿದ್ದಾರೆ ಎಂಬ ಮಾಹಿತಿ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದೆ.

ಹಾಗೆಯೇ ಭಾರತದ ಪ್ರಸಿದ್ಧ ಕಂಪನಿಗಳಲ್ಲಿ ಒಂದಾದ ಮಹೀಂದ್ರಾ ಮತ್ತು ಮಹೀಂದ್ರಾ ಎಂಜಿ ಮೋಟಾರ್ ಕಂಪನಿಯ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಸಹ ಹೇಳಲಾಗುತ್ತಿದೆ. ಹಾಗೆಯೇ ಭಾರತದ ಮತ್ತೊಂದು ಪ್ರಮುಖ ಕಂಪನಿ ಹಿಂದೂಜಾ ಗ್ರೂಪ್ ಕೂಡ ಈ ಸಾಲಿಗೆ ಧುಮುಕಿದೆ ಎನ್ನಲಾಗಿದೆ. ಹಿಂದೂಜಾ ಗ್ರೂಪ್ ಅಶೋಕ್ ಲೇಲ್ಯಾಂಡ್‌ನ ಮಾತೃ ಸಂಸ್ಥೆ ಎಂಬುದನ್ನು ಇಲ್ಲಿ ಗಮನಿಸಬೇಕು.

ಹಾಗೆಯೇ ಎಂಜಿ ಮೋಟಾರ್ ಮೊದಲಿಗೆ ಇಂಗ್ಲೆಂಡ್ ಮೂಲದ್ದಾಗಿತ್ತು, ಈಗ ಇದು ಚೀನೀಯರ ಒಡೆತನದಲ್ಲಿದೆ. ಮುಂದೆ ಭಾರತದ ಹಿಡಿತಕ್ಕೆ ಬಂದರೂ ಆಶ್ಚರ್ಯವಿಲ್ಲ, ವಿವಿಧ ಕಂಪನಿಗಳು ಎಂಜಿ ಷೇರುಗಳನ್ನು ಧಕ್ಕಿಸಿಕೊಳ್ಳಲು ಕಣಕ್ಕೆ ಇಳಿಯುತ್ತಿರುವಾಗ, MG ಮೋಟಾರ್‌ನ ಷೇರುಗಳನ್ನು ಯಾರು ಪಡೆದುಕೊಳ್ಳುತ್ತಾರೆ? ಎಂಬ ನಿರೀಕ್ಷೆ ಹೆಚ್ಚಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯವನ್ನು ಕಮೆಂಟ್‌ನಲ್ಲಿ ತಿಳಿಸಿ.

Article Published On: Thursday, June 22, 2023, 16:54 [IST]
English summary
Mg motor majority shares under indian brands
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+