MG Comet EV: ಭಾರತದಲ್ಲಿ ಶುರುವಾಯ್ತು ಉತ್ಪಾದನೆ.. ಈ ಕಾರಿಗೆ ದೊಡ್ಡ ಡಿಮ್ಯಾಂಡ್ ಬರುವುದು ಗ್ಯಾರಂಟಿ..!

ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಶೀಘ್ರದಲ್ಲೇ ಎಂಜಿ ಕಾಮೆಟ್ ಇವಿ (MG Comet EV) ಹೊಸ ಸೇರ್ಪಡೆಯಾಗಲಿದೆ. ಈ ಕಾರು, ಈಗಾಗಲೇ ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿದ್ದು, ಅತ್ಯಂತ ಕಡಿಮೆ ಬೆಲೆ, ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೊಳಿಸಲು ಕಂಪನಿ ಕಡೆಯಿಂದ ಸಿದ್ಧತೆಗಳು ನಡೆದಿವೆ. ಇದೀಗ, ಆ ಬಗ್ಗೆ ದೊಡ್ಡ ಅಪ್ಡೇಟ್ ಸಿಕ್ಕಿದೆ.

ಎಂಜಿ ಮೋಟಾರ್ ಇಂಡಿಯಾ, ಗುಜರಾತ್‌ನ ಹಲೋಲ್‌ನಲ್ಲಿರುವ ತನ್ನ ತಯಾರಿಕ ಘಟಕದಲ್ಲಿ ಬಹುನೀರಿಕ್ಷಿತ ಕಾಮೆಟ್ ಇವಿ ಉತ್ಪಾದನೆಯನ್ನು ಆರಂಭಿಸಿರುವುದಾಗಿ ಘೋಷಿಸಿದ್ದು, ಮೊದಲ ಉತ್ಪಾದನಾ ಯುನಿಟ್ ಫೋಟೋವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಕಾಮೆಟ್ ಇವಿ, 2 ಡೋರ್ ಹೊಂದಿರುವ ಪುಟ್ಟ ಕಾರಗಿದ್ದು, ಸಂಚಾರ ದಟ್ಟಣೆಯಿಂದ ಕೂಡಿರುವ ನಗರ ಪ್ರದೇಶದ ರಸ್ತೆಗಳಲ್ಲಿ ಸುಲಭವಾಗಿ ಓಡಾಡಲು ಸಾಧ್ಯವಾಗುವಂತೆ ವಿನ್ಯಾಸ ಮಾಡಲಾಗಿದೆ.

 MG Comet EV: ಭಾರತದಲ್ಲಿ ಶುರುವಾಯ್ತು ಉತ್ಪಾದನೆ.. ಈ ಕಾರಿಗೆ ದೊಡ್ಡ ಡಿಮ್ಯಾಂಡ್ ಬರುವುದು ಗ್ಯಾರಂಟಿ..!

ಈ ಬಗ್ಗೆ ಮಾತನಾಡಿರುವ ಕಂಪನಿ ಚೀಫ್ ಆಪರೇಷನ್ ಆಫೀಸರ್ (ಸಿಒಒ) ಬಿಜು ಬಾಲೇಂದ್ರನ್ ಅವರು, 'ಭಾರತದ ಗ್ರಾಹಕರಿಗಾಗಿ ಆಕರ್ಷಕ ಪುಟ್ಟ ಎಲೆಕ್ಟ್ರಿಕ್ ಕಾರನ್ನು ತರಲು ಸಂತೋಷವಾಗಿದ್ದು, ನಗರದೊಳಗಿನ ಸಂಚಾರಕ್ಕೆ ಕಾಮೆಟ್ ಇವಿ ಅತ್ಯುತ್ತಮವಾದ ಕಾರಾಗಿದೆ. ಇದರ ಉತ್ಪಾದನೆ ಆರಂಭವಾಗಿದ್ದು, ಭಾರತದ ಭವಿಷ್ಯದ ಹೊಸ ಇವಿಯನ್ನು ಸ್ವಾಗತಿಸುತ್ತಿರುವುದು ನನಗೆ ಹಾಗೂ ನಮ್ಮ ತಂಡಕ್ಕೆ ಖುಷಿ ತಂದಿದೆ' ಎಂದು ಹೇಳಿದ್ದಾರೆ.

ವರದಿಗಳ ಪ್ರಕಾರ, ಎಂಜಿ ಕಾಮೆಟ್ ಇವಿ, 17.3 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿರಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 250 kms ರೇಂಜ್ ನೀಡಲಿದ್ದು, ಆದರೆ, ಕಂಪನಿಯು ಗರಿಷ್ಠ ಟಾಪ್ ಸ್ವೀಡ್ ಅನ್ನು 100 kmph ನಿಗದಿಪಡಿಸುವ ಸಾಧ್ಯತೆಯಿದೆ. ಅಲ್ಲದೆ, ಎರಡು ಡ್ರೈವಿಂಗ್ ಮೋಡ್ ಗಳನ್ನು ಹೊಂದಿರಲಿದೆ. ಅವುಗಳೆಂದರೆ, ನಾರ್ಮಲ್ ಹಾಗೂ ಸ್ಪೋರ್ಟ್.

ಎಂಜಿ ಕಾಮೆಟ್ ಇವಿ, GSEV (ಗ್ಲೋಬಲ್ ಸ್ಮಾಲ್ ಎಲೆಕ್ಟ್ರಿಕ್ ವೆಹಿಕಲ್) ಪ್ಲಾಟ್‌ಫಾರ್ಮ್ ಆಧರಿಸಿದೆ. ಇದು 2,974 ಎಂಎಂ ಉದ್ದ, 1,631 ಎಂಎಂ ಎತ್ತರ ಹಾಗೂ 1,505 ಎಂಎಂ ಅಗಲವಿದ್ದು, ವಿವಿಧ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ವುಲಿಂಗ್ ಏರ್ ಇವಿಗೆ ಹೋಲಿಕೆಯಾಗುತ್ತದೆ. ಈ ಸಣ್ಣ ಕಾರು, ಭರಪೂರ ವೈಶಿಷ್ಟ್ಯಗಳನ್ನು ಪಡೆದಿರಲಿದೆ. ಪ್ರಮುಖವಾಗಿ ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು ಇನ್ಫೋಟೈನ್ಮೆಂಟ್ ಸಿಸ್ಟಮ್ ಗಾಗಿ ಎರಡು 10.25 ಇಂಚಿನ ಡಿಜಿಟಲ್ ಸ್ಕ್ರೀನ್ ಹೊಂದಿರಲಿದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ 2 ಡೋರ್ ಕಾರುಗಳ ವಿಭಾಗದಲ್ಲಿ ಎಂಜಿ ಕಾಮೆಟ್ ಇವಿಗೆ ಯಾವುದೇ ನೇರ ಪ್ರತಿಸ್ಪರ್ಧಿಗಳು ಇಲ್ಲದಿರುವುದರಿಂದ ಅದು ಕಂಪನಿಗೆ ವರವಾಗಲಿದೆ. ಆದರೂ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಕ್ರೇಜ್ ಹುಟ್ಟು ಹಾಕಿರುವ ಟಾಟಾದ ಟಿಯೊಗೊ ಇವಿಯಿಂದ ಭಾರೀ ಫೈಟ್ ಎದುರಿಬೇಕಾಗಿದೆ. ಟಿಯೊಗೊ ಇವಿ ತನ್ನ ಬೆಲೆ ಹಾಗೂ ಅತ್ಯುತ್ತಮ ಕಾರ್ಯಕ್ಷಮತೆಯಿಂದ ಈಗಾಗಲೇ ಮನೆ ಮಾತಾಗಿದೆ.

ಕಾಮೆಟ್ ಇವಿ ಬೆಲೆಯ ಬಗ್ಗೆ ಕಂಪನಿಯು ಎಲ್ಲಿಯೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ, ರೂ.10 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕೆ ಪ್ರಮುಖ ಕಾರಣವು ಇದೆ. ಅದೇನೆಂದರೆ, ಈ ಕಾರಿನ ಉತ್ಪಾದನೆಯಲ್ಲಿ ಬಳಕೆ ಮಾಡುತ್ತಿರುವ ಬ್ಯಾಟರಿ ಪ್ಯಾಕ್ ಅನ್ನು ಟಾಟಾ ಆಟೋಕ್ಯಾಂಪ್ ನಿಂದ ಪಡೆದಿರುವುದರಿಂದ ದರ ಕಡಿಮೆಯಿರುವ ಸಾಧ್ಯತೆಯಿದೆ. ಆ ಬಗ್ಗೆ ಯಾವುದೇ ಖಚಿತತೆ ಇಲ್ಲ.

ಈಗಾಗಲೇ, ಉತ್ಪಾದನೆ ಆರಂಭವಾಗಿರುವ ಎಂಜಿ ಕಾಮೆಟ್ ಇವಿ ಭಾರತದ ಗ್ರಾಹಕರಲ್ಲಿ ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿದ್ದು, ಕಡಿಮೆ ಬೆಲೆಗೆ ಖರೀದಿಗೆ ದೊರೆಯುವ ಸಾಧ್ಯತೆ ಇರುವುದರಿಂದ ಭಾರೀ ಡಿಮ್ಯಾಂಡ್ ಸೃಷ್ಟಿಯಾಗಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ. ಕೆಲವೇ ದಿನಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು, ಆ ಬಳಿಕ, ಯಾವ ರೀತಿಯಲ್ಲಿ ಕಮಲ್ ಮಾಡಲಿದೆ ಎಂಬುದು ಗೊತ್ತಾಗಲಿದೆ.

Article Published On: Friday, April 14, 2023, 8:30 [IST]
English summary
Mg rolls out first comet ev in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+