MG: ಎಂಜಿ ಕಂಪನಿಯಿಂದ ಈ ಎಲೆಕ್ಟ್ರಿಕ್ ಕಾರಿನ ಬೆಲೆ 2.30 ಲಕ್ಷ ರೂಪಾಯಿ ದಿಢೀರ್ ಇಳಿಕೆ

ಎಂಜಿ ಮೋಟಾರ್ ಇಂಡಿಯಾ (MG Motor India) ದೇಶದ ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಇದೀಗ, ಪ್ರಮುಖ ಎಲೆಕ್ಟ್ರಿಕ್ ಎಸ್‌ಯುವಿ ಝಡ್ಎಸ್ ಇವಿ (ZS EV) ಬೆಲೆಯನ್ನು ದಿಢೀರ್ ಇಳಿಸಿ, ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಇಲ್ಲಿದೆ ಮಾಹಿತಿ.

ಎಕ್ಸೈಟ್ (Excite), ಎಕ್ಸ್‌ಕ್ಲೂಸಿವ್ (Exclusive), ಎಕ್ಸ್‌ಕ್ಲೂಸಿವ್ ಪ್ರೊ (Exclusive Pro) ಸೇರಿದಂತೆ ನಾಲ್ಕು ರೂಪಾಂತರದ ಆಯ್ಕೆಯಲ್ಲಿ ಎಂಜಿ ಝಡ್ಎಸ್ ಇವಿ ಖರೀದಿಗೆ ಲಭ್ಯವಿದೆ. ಎಕ್ಸೈಟ್ ರೂಪಾಂತರದ ಬೆಲೆ ರೂ.50,000, ಎಕ್ಸ್‌ಕ್ಲೂಸಿವ್ ಹಾಗೂ ಎಕ್ಸ್‌ಕ್ಲೂಸಿವ್ ಪ್ರೊ ವೇರಿಯೆಂಟ್ ದರ ಕ್ರಮವಾಗಿ ರೂ.2,30,000 ಮತ್ತು 2,00,000 ಕಡಿಮೆಯಾಗಿದೆ. ಬೆಲೆ ಇಳಿಕೆ ನಂತರ, ಈ ಕಾರಿನ ಆರಂಭಿಕ ದರ ರೂ.22.88 ಲಕ್ಷ (ಎಕ್ಸ್ ಶೋರೂಂ) ಆಗಿದೆ.

MG: ಎಂಜಿ ಕಂಪನಿಯಿಂದ ಈ ಎಲೆಕ್ಟ್ರಿಕ್ ಕಾರಿನ ಬೆಲೆ 2.30 ಲಕ್ಷ ರೂಪಾಯಿ ದಿಢೀರ್ ಇಳಿಕೆ

ಎಂಜಿ ಝಡ್ಎಸ್ ಇವಿ (MG ZS EV), 50.3 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಸಿಂಗಲ್ ಮೋಟಾರ್ ಸಹಾಯದಿಂದ ಕಾರ್ಯ ನಿರ್ವಹಿಸಲಿದ್ದು,174 bhp ಗರಿಷ್ಠ ಪವರ್ ಹಾಗೂ 280 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಸಂಪೂರ್ಣ ಚಾರ್ಜ್ ನಲ್ಲಿ 419 ಕಿಲೋಮೀಟರ್ ವರೆಗೆ ಕ್ರಮಿಸಬಲ್ಲದು.

ಈ ಕಾರು, 5 ಆಸನ ಆಯ್ಕೆಯನ್ನು ಹೊಂದಿದೆ. ಚಾರ್ಜಿಂಗ್ ವಿಚಾರವಾಗಿ ಹೇಳುವುದಾದರೆ, 7.4kW ಎಸಿ ಚಾರ್ಜರ್ ಬಳಕೆಯಲ್ಲಿ ಇದರ ಬ್ಯಾಟರಿ, ಫುಲ್ ಚಾರ್ಜ್ ಆಗಲು 8.5 ರಿಂದ 9 ಗಂಟೆ ತೆಗೆದುಕೊಳ್ಳುತ್ತದೆ. 50kW ಡಿಸಿ ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ 0 - 80% ಚಾರ್ಜ್ ಆಗಲು 60 ನಿಮಿಷ ಸಾಕು.

ಎಂಜಿ ಝಡ್ಎಸ್ ಇವಿ, 4 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಅವುಗಳೆಂದರೆ, ಗ್ಲೇಜ್ ರೆಡ್, ಅರೋರಾ ಸಿಲ್ವರ್, ಸ್ಟಾರ್ರಿ ಬ್ಲ್ಯಾಕ್ ಮತ್ತು ಕ್ಯಾಂಡಿ ವೈಟ್. ವೈಶಿಷ್ಟ್ಯದ ವಿಷಯವಾಗಿ ಮಾತನಾಡುವದಾದರೆ, 10.1 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸನ್‌ರೂಫ್, ಕನೆಕ್ಟ್ದ್ ಕಾರ್ ಟೆಕ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಸುರಕ್ಷತೆಯ ದೃಷ್ಟಿಯಿಂದ ಎಂಜಿ ಝಡ್ಎಸ್ ಇವಿ, 6 ಏರ್‌ಬ್ಯಾಗ್‌, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯುಶನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಯಮ್) ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, 360 - ಡಿಗ್ರಿ ಕ್ಯಾಮೆರಾ, ಹಿಲ್ ಡಿಸೆಂಟ್ ಕಂಟ್ರೋಲ್ ಒಳಗೊಂಡಂತೆ ವಿವಿಧ ಸೇಫ್ಟಿ ಫೀಚರ್ ಹೊಂದಿದೆ. ಈ ಕಾರಿಗೆ, ಹುಂಡೈ ಕೋನಾ ಎಲೆಕ್ಟ್ರಿಕ್, ಬಿವೈಡಿ ಅಟ್ಟೊ3 ಕಾರುಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಇನ್ನು, ಎಂಜಿ ಕಂಪನಿ ಅಗ್ಗದ ಬೆಲೆಯಲ್ಲಿ ಮಾರಾಟ ಮಾಡುವ ಕಾಮೆಟ್ ಇವಿ ಬಗ್ಗೆ ಹೇಳುವುದಾದರೆ, ಇದು ರೂ.7.98 - 9.98 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಕಾರಿನ ಬೆಲೆ ಇಳಿಕೆಯಾಗಿಲ್ಲ. ಪೇಸ್ (Pace), ಪ್ಲೇ (Play) ಹಾಗೂ ಪ್ಲಶ್ (Plush) ಎಂಬ ರೂಪಾಂತರದ ಆಯ್ಕೆಯಲ್ಲಿ ಸಿಗುತ್ತದೆ. 17.3 kWh ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದೆ.

ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರ್,42 PS ಪವರ್, 110 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು, ಸಂಪೂರ್ಣ ಚಾರ್ಜಿನಲ್ಲಿ 230 km ರೇಂಜ್ ನೀಡಲಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್‌ ಹಾಗೂ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಾಗಿ ಡುಯೆಲ್ 10.25 - ಇಂಚಿನ ಸ್ಕ್ರೀನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, October 6, 2023, 17:23 [IST]
English summary
Mg zs ev gets a massive price cut details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+