ನಟ ಮೋಹನ್ ಲಾಲ್‌ಗೆ 528 ರೇಂಜ್ ನೀಡುವ Kia ಎಲೆಕ್ಟ್ರಿಕ್ ಕಾರು ಗಿಫ್ಟ್: ಎಲ್ಲರೂ ಮೆಚ್ಚುತ್ತಿದ್ದಾರೆ.. ವಿಶೇಷತೆ ಏನು?
ಮಲಯಾಳಂ ಸಿನಿಮಾ ನಟ ಮೋಹನ್ ಲಾಲ್ ದೇಶಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನಿನ್ನೆಯಷ್ಟೇ 63ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಅವರಿಗೆ ದುಬಾರಿ ಬೆಲೆಯ ಕಿಯಾ ಎಲೆಕ್ಟ್ರಿಕ್ ಕಾರನ್ನು ಅವರ ಸ್ನೇಹಿತ ಗಿಫ್ಟ್ ನೀಡಿದ್ದಾರೆ. ಇದೇ ಅವರ ಗ್ಯಾರೇಜ್ ಸೇರುತ್ತಿರುವ ಮೊದಲ ಇವಿಯಾಗಿದೆ.
ನಟ ಮೋಹನ್‌ಲಾಲ್ ಅವರ ಸ್ನೇಹಿತ, ಹೆಡ್ಜ್ ಇಕ್ವಿಟೀಸ್ ಎಂಡಿ ಅಲೆಕ್ಸ್.ಕೆ.ಬಾಬು ಹೊಚ್ಚ ಹೊಸ ಕಿಯಾ EV6 ಎಲೆಕ್ಟ್ರಿಕ್ ಕಾರನ್ನು ಉಡುಗೊರೆ ನೀಡಿದ್ದಾರೆ. ಸದ್ಯ, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈಗಾಗಲೇ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಹೊಂದಿರುವ ಮೋಹನ್‌ಲಾಲ್ ಅವರ ಕಾರ್ ಕಲೆಕ್ಷನ್ ನಲ್ಲಿ ಇದು ನೂತನ ಸೇರ್ಪಡೆಯಾಗಿದೆ.

ಈ ಕಿಯಾ EV6 ಎಲೆಕ್ಟ್ರಿಕ್ ಕಾರಿನ ಬಗ್ಗೆ ಒಂದಷ್ಟು ವಿಚಾರಗಳನ್ನು ಮಾತನಾಡುವುದಾದರೆ, ಇದು ರೂ.60.95 - 65.95 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ 5 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. 77.4 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಿಂಗಲ್ ಮೋಟಾರ್, ರೇರ್ ವೀಲ್ ಡ್ರೈವ್ ತಂತ್ರಜ್ಞಾನ ಹೊಂದಿರುವ ಕಾರು, 229 PS ಗರಿಷ್ಠ ಪವರ್, 350 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಡುಯೆಲ್ ಮೋಟಾರ್, ಆಲ್ ವೀಲ್ ಡ್ರೈವ್ ತಂತ್ರಜ್ಞಾನದಲ್ಲಿ ಚಲಿಸುವ ಕಾರು, 325 PS ಗರಿಷ್ಠ ಪವರ್ ಹಾಗೂ 605 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಸಂಪೂರ್ಣ ಚಾರ್ಜಿನಲ್ಲಿ ಈ ಕಾರು, 528 km (WLTPI) ರೇಂಜ್ ನೀಡುತ್ತದೆ. ಚಾರ್ಜಿಂಗ್ ಬಗ್ಗೆ ಹೇಳುವುದಾದರೆ, 350kW ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಕೇವಲ 18 ನಿಮಿಷಗಳಲ್ಲಿ ಶೇಕಡ 10% ರಿಂದ 80% ಬ್ಯಾಟರಿ ಚಾರ್ಜ್ ಆಗುತ್ತದೆ.

ಕಿಯಾ EV6 ಎಲೆಕ್ಟ್ರಿಕ್ ಕಾರಿನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 14 ಸ್ಪೀಕರ್ ಮೆರಿಡಿಯನ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್ ಹೊಂದಿದೆ. ಸುರಕ್ಷತೆ ದೃಷ್ಟಿಯಿಂದ 8 ಏರ್ ಬಾಗ್ಸ್, ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ಪಡೆದಿದೆ.
ಇನ್ನು, ಕಳೆದ ತಿಂಗಳು ನಟ ಮೋಹನ್ ಲಾಲ್ ದುಬಾರಿ ಬೆಲೆಯ ಐಷಾರಾಮಿ ರೇಂಜ್ ರೋವರ್ ಎಸ್‌ಯುವಿಯನ್ನು ಖರೀದಿಸಿದ್ದರು. ಇದಕ್ಕಾಗಿ ಬರೋಬ್ಬರಿ 4 ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಈ ಕಾರು, ಬೆಲೆಗೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ರೇಂಜ್ ರೋವರ್ ಮಾತ್ರವಲ್ಲದೆ, ಅವರ ಬಳಿ ಟೊಯೊಟಾ ವೆಲ್ಫೈರ್, ಮರ್ಸಿಡಿಸ್ ಬೆನ್ಜ್ GL350, ಲಂಬೋರ್ಘಿನಿ ಉರುಸ್ ಸೇರಿದಂತೆ ಭಾರೀ ಬೆಲೆಯ ಕಾರುಗಳ ಸಂಗ್ರಹವೇ ಇದೆ.
ನಟ ಮೋಹನ್ ಲಾಲ್ ಅವರಿಗೆ ಈಗ ಕಿಯಾ EV6 ಎಲೆಕ್ಟ್ರಿಕ್ ಕಾರು ಉಡುಗೊರೆಯಾಗಿ ಬಂದಿದ್ದು, ಅದಕ್ಕೂ ಮೊದಲೇ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಕೂಡ ಈ ಕಾರನ್ನು ಖರೀದಿಸಿದ್ದರು. ಕಾಲಕ್ಕೆ ತಕ್ಕಂತೆ ಜನರ ಅಭಿರುಚಿಯು ಬದಲಾಗುತ್ತಿದೆ. ಅದಕ್ಕೆ ಸಿನಿಮಾ ನಟ - ನಟಿಯರು ಹೊರತಾಗಿಲ್ಲ. ಅವರು ಸಹ ಎಲೆಕ್ಟ್ರಿಕ್ ಕಾರುಗಳನ್ನು ಕೊಂಡುಕೊಳ್ಳವತ್ತ ಮುಖ ಮಾಡುತ್ತಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications