ಭಾರತೀಯ ಕಾರುಗಳಲ್ಲಿ ADAS ವೈಶಿಷ್ಟ್ಯಗಳು ಕಡ್ಡಾಯವಾಗಲಿದೆ? ಆಸಕ್ತಿಕರ ಮಾಹಿತಿ!
ಭಾರತೀಯ ಕಾರು ಖರೀದಿದಾರರು ಈಗ ಸುರಕ್ಷತಾ ಸಾಧನಗಳ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಭಾರತ ಸರ್ಕಾರ ಕೂಡ ಕೆಲವು ವರ್ಷಗಳಿಂದ ವರ್ಧಿತ ಕಾರು ಸುರಕ್ಷತೆಗೆ ಒತ್ತು ನೀಡುತ್ತಿದೆ. ಕಾರು ತಯಾರಕರು ಕೂಡ ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ರೂಪದಲ್ಲಿ ಸಕ್ರಿಯ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದಿದ್ದಾರೆ.
ಅಕ್ಟೋಬರ್ 2024 ರಿಂದ ಜಾರಿಗೆ ಬರಲಿರುವ ಆರು ಏರ್‌ಬ್ಯಾಗ್‌ಗಳ ಕಡ್ಡಾಯ ನಿಯಮದ ನಂತರ, ಭಾರತೀಯ ಕಾರುಗಳಲ್ಲಿ ಕೆಲವು ADAS ವೈಶಿಷ್ಟ್ಯಗಳನ್ನು ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. PTI ನಲ್ಲಿ ಪ್ರಕಟವಾದ ಇತ್ತೀಚಿನ ವರದಿಯ ಪ್ರಕಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಭಾರತದಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಹೊಸ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ.

ADAS ಕಡ್ಡಾಯವಾಗಬೇಕೆ?: MoRTH, 2024 ರ ವೇಳೆಗೆ ದೇಶದಲ್ಲಿ ಅಪಘಾತಗಳ ಸಂಖ್ಯೆಯನ್ನು ಮತ್ತು ಅದರ ಪರಿಣಾಮವಾಗಿ ಸಂಭವಿಸುವ ಸಾವುಗಳನ್ನು ಅರ್ಧದಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಹಿಟ್ ಫ್ರಮ್ ಬ್ಯಾಕ್ ಒಟ್ಟು ಅಪಘಾತಗಳ ಸಾವುಗಳಲ್ಲಿ ಶೇ19.5 ರಷ್ಟು ಅತಿದೊಡ್ಡ ಪಾಲನ್ನು ಹೊಂದಿದೆ. 2022ರ ನಂತರ 'ಹಿಟ್ ಅಂಡ್ ರನ್' ಮತ್ತು 'ಹೆಡ್ ಆನ್ ಕೊಲಿಶನ್' ಅನುಕ್ರಮವಾಗಿ ಶೇ18.1 ಮತ್ತು ಶೇ15.7 ರಷ್ಟಿದೆ.
ಇದಕ್ಕೆ ಸಂಬಂಧಿಸಿದಂತೆ, ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳು ಸೇರಿದಂತೆ ನಾಲ್ಕು ಚಕ್ರಗಳ ನಿರ್ದಿಷ್ಟ ವರ್ಗದಲ್ಲಿ 'ಮೂವಿಂಗ್ ಆಫ್ ಇನ್ಫರ್ಮೇಷನ್ ಸಿಸ್ಟಮ್' (MOIS) ಅನ್ನು ಸ್ಥಾಪಿಸಲು MoRTH ಪ್ರಸ್ತಾಪಿಸಿದೆ. ಶೀಘ್ರದಲ್ಲೇ ಕೆಲವು ನಾಲ್ಕು-ಚಕ್ರ ವಾಹನಗಳು, ಪಾದಚಾರಿಗಳು ಮತ್ತು ಸೈಕ್ಲಿಸ್ಟ್‌ಗಳಿಗೆ ಸಮೀಪದಲ್ಲಿ ಘರ್ಷಣೆಯ ಸಾಧ್ಯತೆಯನ್ನು ಕಡಿಮೆ ಮಾಡಲು ಅಂತರ್ಗತ ಡಿಕ್ಕಿಯ ಎಚ್ಚರಿಕೆ ಸಂಕೇತಗಳನ್ನು ಹೊಂದಿರುತ್ತವೆ.

'ಪಾದಚಾರಿಗಳು ಮತ್ತು ಸೈಕ್ಲಿಸ್ಟ್ ಗಳ ಪತ್ತೆಗಾಗಿ ಚಲಿಸುವ ಮಾಹಿತಿ ವ್ಯವಸ್ಥೆಗೆ ಸಂಬಂಧಿಸಿದಂತೆ ಮೋಟಾರು ವಾಹನಗಳ ಅನುಮೋದನೆ' ಎಂಬ ಶೀರ್ಷಿಕೆಯ ಕರಡು ಪ್ರಸ್ತಾವನೆಯಲ್ಲಿ, MoRTH MOIS ಗಾಗಿ ಆಟೋಮೋಟಿವ್ ಉದ್ಯಮದ ಮಾನದಂಡವನ್ನು ನಿರ್ದಿಷ್ಟಪಡಿಸಿದೆ. ಸಾರ್ವಜನಿಕ ಸಮಾಲೋಚನೆಯ ನಂತರ ಇದನ್ನು ಸೂಚಿಸಲಾಗುತ್ತದೆ ಎಂದು ತಿಳಿದುಬಂದಿದೆ.
MOIS ಎಂದರೇನು?: MOIS ಎಂಬುದು ಪಾದಚಾರಿಗಳು ಮತ್ತು ಸೈಕ್ಲಿಸ್ಟ್‌ಗಳ ಉಪಸ್ಥಿತಿಯನ್ನು ಚಾಲಕನಿಗೆ ಪತ್ತೆಹಚ್ಚಲು ಮತ್ತು ತಿಳಿಸಲು ಮಾಡಲಾದ ಒಂದು ವ್ಯವಸ್ಥೆಯಾಗಿದೆ. ಅಗತ್ಯವಿದ್ದಲ್ಲಿ, ತಯಾರಕರ ಕಾರ್ಯತಂತ್ರದ ಆಧಾರದ ಮೇಲೆ, ಸಂಭಾವ್ಯ ಘರ್ಷಣೆಯ ಬಗ್ಗೆ ಚಾಲಕನಿಗೆ ಎಚ್ಚರಿಕೆ ನೀಡುತ್ತದೆ. ಈ ಮೂಲಕ ಸಂಭಾವ್ಯ ಅಪಘಾತಗಳನ್ನು ತಪ್ಪಿಸಬಹುದಾಗಿದೆ.

'ಘರ್ಷಣೆ ಎಚ್ಚರಿಕೆ ಸಂಕೇತ' ಎಂದರೆ ವಾಹನದ ಮುಂಭಾಗಕ್ಕೆ ಸಮೀಪದಲ್ಲಿ VRU ನೊಂದಿಗೆ ಸಂಭಾವ್ಯ ಮುಂಭಾಗದ ಘರ್ಷಣೆಯನ್ನು MOIS ಪತ್ತೆ ಮಾಡಿ ಚಾಲಕನಿಗೆ ಎಚ್ಚರಿಕೆ ನೀಡಲು ಸಂಕೇತವನ್ನು ನೀಡುತ್ತದೆ. ಪ್ರಸ್ತುತ ಬೆರಳೆಣಿಕೆಯಷ್ಟು ಪ್ರೀಮಿಯಂ ಕಾರುಗಳಲ್ಲಿ ಮಾತ್ರವೇ ಇದ್ದರೂ ADAS ಪ್ರತಿದಿನ ಭಾರತೀಯ ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ.
ಈ ಕರಡು ಪ್ರಸ್ತಾವನೆಯ ನಂತರ ಹೆಚ್ಚಿನ ತಯಾರಕರು ADAS ವೈಶಿಷ್ಟ್ಯಗಳನ್ನು ಸಮೂಹ ಮಾರುಕಟ್ಟೆ ವಾಹನಗಳಲ್ಲಿ, ವಿಶೇಷವಾಗಿ ಸಣ್ಣ ಕಾರು ವಿಭಾಗದಲ್ಲಿ ನೀಡುವ ನಿರೀಕ್ಷೆಯಿದೆ. ಇತ್ತೀಚೆಗೆ, ಹ್ಯುಂಡೈ ವೆನ್ಯೂ ಭಾಗಶಃ ADAS ಸೂಟ್‌ನೊಂದಿಗೆ ಬಂದ ಭಾರತದಲ್ಲಿ ಮೊದಲ ಸಬ್ 4 ಮೀಟರ್ ಕಾರ್ ಆಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








