Ventilated Seats Cars: ಬಿಸಿಲಿನ ತಾಪದ ಭಯವೇಕೆ? ವೆಂಟಿಲೇಟೆಡ್ ಸೀಟ್ ಕಾರುಗಳು ಕೈಗೆಟಕುವ ದರದಲ್ಲಿರುವಾಗ!
ಬೇಸಿಗೆ ಕಾಲದಲ್ಲಿ ಬಿಸಿಲ ಬೇಗೆಯಿಂದ ಪಾರಾಗಲು ನಾನಾ ರೀತಿಯ ಕಷ್ಟ ಅನುಭವಿಸುತ್ತೇವೆ. ಈಗ ಹೊರಗೆ ಹೋಗುವುದೆಂದರೆ ಬೆಂಕಿಯ ಜ್ವಾಲೆಯ ಮಧ್ಯೆ ನಡೆದಾಡಿದಂತೆ. ಆದರೂ ಅನಿವಾರ್ಯವಾಗಿ ಹೊರ ಹೋಗಲೇ ಬೇಕಾಗುತ್ತದೆ. ಇದರಿಂದ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ವೆಂಟಿಲೇಟೆಡ್ ಸೀಟ್ ಹೊಂದಿರುವ ಕಾರುಗಳ ಉತ್ತಮ ಆಯ್ಕೆಯಾಗಿದೆ. ಇವುಗಳು ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದೆ.
ಮಾರುತಿ ಸುಜುಕಿ XL6 ಆಲ್ಫಾ ಪ್ಲಸ್: ಮಾರುತಿ ಸುಜುಕಿ XL6 ಕಾರಿನ ಆಲ್ಫಾ ಪ್ಲಸ್ ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.13.05 ಲಕ್ಷವಾಗಿದೆ. ಈ ಕಾರಿನಲ್ಲಿ ವೆಂಟಿಲೇಟೆಡ್ ಸೀಟ್‌ಗಳನ್ನು ಹೊಂದಿದೆ. ಮಾರುತಿ ಸುಜುಕಿ ಭಾರತದಲ್ಲಿನ ನೆಕ್ಸಾ ಔಟ್‌ಲೆಟ್‌ಗಳ ಮೂಲಕ ಎಕ್ಸ್‌ಎಲ್ 6 ಅನ್ನು ಪ್ರೀಮಿಯಂ ಎಂಪಿವಿಯಾಗಿ ಮಾರಾಟ ಮಾಡುತ್ತದೆ. ಈ ಫೀಚರ್ ಹೊಂದಿರುವ ಮಾರುತಿ ಸುಜುಕಿಯ ಏಕೈಕ ಕಾರು ಇದಾಗಿದೆ.

ಟಾಟಾ ನೆಕ್ಸಾನ್ XZ+ LUX ಪೆಟ್ರೋಲ್: ಟಾಟಾ ನೆಕ್ಸಾನ್ XZ+ LUX ಪೆಟ್ರೋಲ್ ರೂಪಾಂತರವು ಈ ಪಟ್ಟಿಯಲ್ಲಿ ಅತ್ಯಂತ ಕೈಗೆಟುಕುವ ಕಾರು, ಇದರ ಬೆಲೆಯು ಎಕ್ಸ್ ಶೋ ರೂಂ ಪ್ರಕಾರ ರೂ.11.60 ಲಕ್ಷವಾಗಿದೆ. ಟಾಟಾ ನೆಕ್ಸಾನ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಒಂದಾಗಿದೆ. ನೆಕ್ಸಾನ್ XZ+ LUX ರೂಪಾಂತರವು ಈ ಬೇಸಿಗೆಯಲ್ಲಿ ಶಾಖದಿಂದ ತಪ್ಪಿಸಿಕೊಳ್ಳಲು ಬಯಸುವವರಿಗೆ ಮುಂಭಾಗ ವೆಂಟಿಲೇಟೆಡ್ ಸೀಟುಗಳನ್ನು ಹೊಂದಿದೆ.
ಟಾಟಾ ನೆಕ್ಸಾನ್ (Tata Nexon) ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಪಾರುಪತ್ಯ ಸಾಧಿಸುತ್ತಿದೆ. ಆದರೂ ತನ್ನ ಪ್ರತಿಸ್ಪರ್ಧಿಗಳಿಗೆ ಸೆಡ್ಡು ಹೊಡೆದು ತನ್ನ ಪಾರುಪತ್ಯವನ್ನು ಮುಂದುವರೆಸಲು ನವೀಕರಸುವುದು ಅನಿವಾರ್ಯವಾಗಿದ್ದು, ಇದೇ ಕಾರಣಕ್ಕೆ ನೆಕ್ಸಾನ್ ಹೊಸ ನವೀಕರಣದೊಂದಿಗೆ ಶೀಘ್ರದಲ್ಲೇ ಬರಲಿದೆ.

ಹ್ಯುಂಡೈ ವೆರ್ನಾ SX(O) ಪೆಟ್ರೋಲ್: ಈ ವರ್ಷದ ಆರಂಭದಲ್ಲಿ ಹ್ಯುಂಡೈ ಹೊಸ-ಜನರೇಷನ್ ವೆರ್ನಾವನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಕಾರು ಈಗ ಸಂಪೂರ್ಣವಾಗಿ ಹೊಸ ಬಾಹ್ಯ ಮತ್ತು ಒಳಭಾಗವನ್ನು ಹೊಂದಿದೆ. ಕಾರಿನ ವೈಶಿಷ್ಟ್ಯಗಳ ಪಟ್ಟಿಯನ್ನು ಸಹ ನವೀಕರಿಸಲಾಗಿದೆ. ಈ ಕಾರಿನ SX(O) ವೇರಿಯಂಟ್ ಈಗ ವೆಂಟಿಲೇಟೆಡ್ ಸೀಟ್‌ಗಳನ್ನು ಹೊಂದಿದೆ ಮತ್ತು ಇದರ ಬೆಲೆಯು ಎಕ್ಸ್ ಶೋ ರೂಂ ಪ್ರಕಾರ ರೂ.14.66 ಲಕ್ಷವಾಗಿದೆ,
ಈ ಹೊಸ ಹ್ಯುಂಡೈ ಕಾರಿನ SX (O) ರೂಪಾಂತರದಲ್ಲಿ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ ಮಾದರಿಯಲ್ಲಿ 1.5 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.ಈ ಎಂಜಿನ್ 158bhp ಮತ್ತು 253Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ DCT ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಸ್ಕೋಡಾ ಸ್ಲಾವಿಯಾ ಸ್ಟೈಲ್: ಸ್ಕೋಡಾ ಸ್ಲಾವಿಯಾ ಜನಪ್ರಿಯ ಸೆಡಾನ್ ಆಗಿದ್ದು, ಇದು ಸ್ಟೈಲ್ ಟ್ರಿಮ್‌ನಿಂದ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ನೀಡುತ್ತದೆ, ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.14.80 ಲಕ್ಷವಾಗಿದೆ. ಇನ್ನು ಈ ಕಾರಿನಲ್ಲಿ 1.0 ಲೀಟರ್ TSI ಮತ್ತು 1.5 TSI ಸ್ಲಾವಿಯಾವು ಪ್ರೀಮಿಯಂ ಒಳಾಂಗಣ ಮತ್ತು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ,
ಜೆಕ್ ಕಾರು ತಯಾರಕರು 2.0 ಯೋಜನೆಯ ಅಡಿಯಲ್ಲಿ ಬಿಡುಗಡೆಗೊಳಿಸಿದ ಸ್ಕೋಡಾದ ಎರಡನೇ ಮಾದರಿ ಸ್ಲಾವಿಯಾ ಆಗಿದೆ. ಈ ಹೊಸ ಸ್ಲಾವಿಯಾ ಕಾರು 4,541 ಎಂಎಂ ಉದ್ದ, 1,752 ಅಗಲ ಮತ್ತು 1,487 ಎಂಎಂ ಎತ್ತರ ಮತ್ತು 2,651 ಎಂಎಂ ವ್ಹೀಲ್‌ಬೇಸ್‌ನೊಂದಿಗೆ 560 ಲೀಟರ್ ನಷ್ಟು ಬೂಟ್‌ಸ್ಪೆಸ್ ಹೊಂದಿದೆ. ಈ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ.


Click it and Unblock the Notifications