Auto expo 2023: ಆಕರ್ಷಕ ಬೆಲೆಯಲ್ಲಿ ಎಂಜಿ ಹೆಕ್ಟರ್ ಫೇಸ್‌ಲಿಫ್ಟ್, ಹೆಕ್ಟರ್ ಪ್ಲಸ್ ಬಿಡುಗಡೆ

ಬ್ರಿಟಿಷ್ ವಾಹನ ತಯಾರಕ ಕಂಪನಿ ಎಂಜಿ ಮೋಟಾರ್ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಎಂಜಿ ಹೆಕ್ಟರ್ ಫೇಸ್‌ಲಿಫ್ಟ್, ಹೆಕ್ಟರ್ ಪ್ಲಸ್ ಎಸ್‌ಯುವಿಗಳನ್ನು ಬಿಡುಗಡೆ ಮಾಡಿದೆ. ಹೊಸ ಹೆಕ್ಟರ್ ಕಾರಿನ ಬೆಲೆ 14.73 ಲಕ್ಷ ರೂ.ನಿಂದ ಆರಂಭವಾಗಲಿದ್ದು, 3-ರೋ ಹೆಕ್ಟರ್ ಪ್ಲಸ್ ಬೆಲೆ 20.80 ಲಕ್ಷ ರೂ.(ಎಕ್ಸ್ ಶೋ ರೂಂ) ಇದೆ.

ಎರಡು ಎಸ್‌ಯುವಿಗಳು ಸಂಪೂರ್ಣವಾಗಿ ಅಪ್ಡೇಟ್ ಮಾಡಿದ ಒಳಾಂಗಣ ಹಾಗೂ ಮುಂಭಾಗ, ಹಿಂಭಾಗ ಸಾಕಷ್ಟು ಬದಲಾವಣೆಗಳನ್ನು ಹೊಂದಿವೆ. 5-ಸೀಟ್ ಹೆಕ್ಟರ್ 6 ಟ್ರಿಮ್‌ಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಅವುಗಳೆಂದರೇ, ಸ್ಟೈಲ್, ಶೈನ್, ಸ್ಮಾರ್ಟ್, ಸ್ಮಾರ್ಟ್ ಪ್ರೊ, ಶಾರ್ಪ್ ಪ್ರೊ ಹಾಗೂ ಸ್ಯಾವಿ ಪ್ರೊ. 6/7 ಸೀಟ್ ಹೆಕ್ಟರ್ ಪ್ಲಸ್ ಕಾರು, ಸ್ಮಾರ್ಟ್, ಸ್ಮಾರ್ಟ್ ಪ್ರೊ, ಶಾರ್ಪ್ ಪ್ರೊ, ಸ್ಯಾವಿ ಪ್ರೊ ಟ್ರಿಮ್‌ಗಳಲ್ಲಿ ದೊರೆಯಲಿದೆ. ಇದು ಖರೀದಿದಾರರಿಗೆ ಖಂಡಿತ ಇಷ್ಟವಾಗಲಿದ್ದು, ಈ ಎಸ್‌ಯುವಿ ಖರೀದಿಯತ್ತ ಮನಸ್ಸು ಮಾಡಬಹುದು.

ಎಂಜಿ ಹೆಕ್ಟರ್ ಫೇಸ್‌ಲಿಫ್ಟ್, ಹೆಕ್ಟರ್ ಪ್ಲಸ್ ಬಿಡುಗಡೆ

ಎಂಜಿ ಹೆಕ್ಟರ್ ಎಸ್‌ಯುವಿಗಳ ವಿನ್ಯಾಸ ಮತ್ತು ವೈಶಿಷ್ಟ್ಯಗಳು:
ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಿರುವ ಎಂಜಿ ಹೆಕ್ಟರ್ ಎಸ್‌ಯುವಿಗಳು, ಹೊಸ ಆರ್ಗೈಲ್-ಇನ್ಸ್ಪೈರ್ಡ್ ಗ್ರಿಲ್ ಸೇರಿದಂತೆ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿವೆ. ಗ್ರಿಲ್ ಕೊಂಚ ದೊಡ್ಡಗಿದ್ದು, ಎಲ್ಇಡಿ ಡಿಆರ್ಎಲ್ ನೊಂದಿಗೆ ಸಂಪರ್ಕಿಸುತ್ತದೆ. ಹೆಡ್‌ಲ್ಯಾಂಪ್‌ಗಳು ಮುಂಭಾಗದ ಬಂಪರ್‌ನಲ್ಲಿ ಕೆಳಗೆ ಇದೆ. ಜೊತೆಗೆ ಹೊಸ 2023 ಹೆಕ್ಟರ್ ಎಸ್‌ಯುವಿ ಆಕರ್ಷಕ ಫಾಗ್ ಲ್ಯಾಂಪ್‌ ಅನ್ನು ಒಳಗೊಂಡಿದ್ದು, 18-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್ ಗಳನ್ನು ಹೊಂದಿದೆ.

ಇದು ಪ್ಲಾಸ್ಟಿಕ್ ಕವರ್ಡ್ ಹಾಗೂ ಸ್ಕ್ವೇರ್-ಆಫ್ ವೀಲರ್ಚ್‌ನೊಳಗೆ ಸುತ್ತುವರಿದಿದೆ. ವಿನ್ಯಾಸದ ವಿಷಯದಲ್ಲಿ ಇತರೆ ದೊಡ್ಡ ಬದಲಾವಣೆ ಎಂದರೆ, ಎಸ್‌ಯುವಿಗಳ ಹಿಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಟೈಲ್‌ಲೈಟ್‌ ಇದೆ. ಒಳಭಾಗದಲ್ಲಿ ಕಾರುಗಳ ಕ್ಯಾಬಿನ್ 5, 6 ಮತ್ತು 7-ಸೀಟರ್ ಕಾನ್ಫಿಗರೇಶನ್‌ ಅನ್ನು ಹೊಂದಿದೆ. ಒಳಭಾಗ ಡ್ಯುಯಲ್-ಟೋನ್ ಥೀಮ್ ಅನ್ನು ಹೊಂದಿದ್ದು, ಇದು ಗ್ರಾಹಕರಿಗೆ ಈ ಎಸ್‌ಯುವಿಗಳ ಒಳಭಾಗದಲ್ಲಿ ಪ್ರೀಮಿಯಂ ನೋಟವನ್ನು ಒದಗಿಸುತ್ತದೆ. ಡ್ಯಾಶ್‌ಬೋರ್ಡ್ ಸಹ ಅತ್ಯುನ್ನತವಾಗಿದ್ದು, ಮರುವಿನ್ಯಾಸಗೊಳಿಸಲಾದ ಏರ್‌ಕಾನ್ ವೆಂಟ್‌ಗಳನ್ನು ಒಳಗೊಂಡಿದೆ.

ಎಂಜಿ ಹೆಕ್ಟರ್ ಫೇಸ್‌ಲಿಫ್ಟ್, ಹೆಕ್ಟರ್ ಪ್ಲಸ್ ಬಿಡುಗಡೆ

14 ಇಂಚುಗಳ ಇನ್ಫೋಟೈನ್‌ಮೆಂಟ್ ಸ್ಕ್ರೀನ್, Apple CarPlay ಮತ್ತು Android Auto ಸೇರಿದಂತೆ 75ಕ್ಕೂ ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಟ್ರಾಫಿಕ್ ಜಾಮ್ ಅಸಿಸ್ಟ್ ಸೇರಿದಂತೆ ಈ ಎಸ್‌ಯುವಿಗಳು ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS), ಎಲೆಕ್ಟ್ರಿಕ್ ಪಾರ್ಕಿಂಗ್ ಬಟನ್, ಲೇನ್-ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ರಿಯರ್ ಕ್ರಾಸ್-ಟ್ರಾಫಿಕ್ ಅಲರ್ಟ್, ಫಾರ್ವರ್ಡ್ ಡಿಕ್ಕಿಶನ್ ವಾರ್ನಿಂಗ್, 7.0-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ಜೊತೆಗೆ iSmart ಇನ್ಫೋಟೈನ್‌ಮೆಂಟ್ ಸಾಫ್ಟ್‌ವೇರ್ ಅನ್ನು ನವೀಕರಿಸಲಾಗಿದೆ.

ಹೊಸ ಎಂಜಿ ಎಸ್‌ಯುವಿಗಳು ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ. 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಎಚ್‌ಡಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (ಟಿಸಿಎಸ್), ಹಿಲ್ ಅಸಿಸ್ಟ್ ಕಂಟ್ರೋಲ್ (ಎಚ್‌ಎಸಿ), ಆಲ್ 4 ವೀಲ್ಸ್ ಡಿಸ್ಕ್ ಬ್ರೇಕ್‌ ಅನ್ನು ಒಳಗೊಂಡಿದೆ. ಇಷ್ಟೇ ಅಲ್ಲದೆ, ಎಲ್ಲಾ ಆಸನಗಳಿಗೆ 3-ಪಾಯಿಂಟ್ ಸೀಟ್ ಬೆಲ್ಟ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ (EPB), ಮತ್ತು ಮುಂಭಾಗ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಪಡೆದುಕೊಂಡಿವೆ.

ಎಂಜಿ ಹೆಕ್ಟರ್ ಫೇಸ್‌ಲಿಫ್ಟ್, ಹೆಕ್ಟರ್ ಪ್ಲಸ್ ಬಿಡುಗಡೆ

ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಎಸ್‌ಯುವಿಗಳ ಎಂಜಿನ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ಹಿಂದಿನ ಮಾದರಿಯಂತೆ 1.5-ಲೀಟರ್ ಪೆಟ್ರೋಲ್ ಎಂಜಿನ್‌ ಹೊಂದಿದ್ದು, ಇದು 143 hp ಗರಿಷ್ಠ ಪವರ್ ಮತ್ತು 250 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಅಟೋಮೆಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಡೀಸೆಲ್ ಎಂಜಿನ್ 170 hp ಪವರ್, 350 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು, ಆರು-ಸ್ವೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ ಖರೀದಿಗೆ ಲಭ್ಯವಿದೆ.

ಎಂಜಿ ಹೆಕ್ಟರ್, ಟಾಟಾ ಹ್ಯಾರಿಯರ್ ಮತ್ತು ಮಹೀಂದ್ರಾ XUV700 ಹಾಗೂ ಇತರೆ ಕಾಂಪ್ಯಾಕ್ಟ್ ಎಸ್‌ಯುವಿಗಳಾದ ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್‌ಗಳಿಗೆ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಯಾಗಲಿದೆ. ಹೆಕ್ಟರ್ ಪ್ಲಸ್ ಟಾಟಾ ಸಫಾರಿ ಮತ್ತು ಹ್ಯುಂಡೈ ಅಲ್ಕಾಜರ್‌ಗೆ ಭಾರೀ ಪೈಪೋಟಿ ನೀಡಲಿದೆ. ಒಟ್ಟಾರೆಯಾಗಿ ಸುರಕ್ಷತೆ ಸೇರಿದಂತೆ ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿರುವ ಈ ಕಾರುಗಳು ಖರೀದಿದಾರರಿಗೆ ಇಷ್ಟವಾಗಬಹುದು.

Most Read Articles

Kannada
English summary
Launch much awaited mg hector facelift hector plus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X