ಬಹು ನಿರೀಕ್ಷಿತ ಎಂಜಿ 4 ಇವಿ ಟೀಸರ್ ಬಿಡುಗಡೆ: ಆಟೋ ಎಕ್ಸ್‌ಪೋದಲ್ಲಿ ಅನಾವರಣ

ಭಾರತದ ಕಾರು ಖರೀದಿದಾರರಿಗೆ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಲು ಆಟೋ ಎಕ್ಸ್‌ಪೋಗೂ ಮೊದಲೇ ಎಂಜಿ ಮೋಟಾರ್ ಇಂಡಿಯಾ ನೂತನ 'ಎಂಜಿ 4 ಇವಿ' ಹ್ಯಾಚ್‌ಬ್ಯಾಕ್‌ನ ಟೀಸರ್ ಅನ್ನು ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬಿಡುಗಡೆ ಮಾಡಿದೆ. ಇದರಿಂದ ಗ್ರಾಹಕರಿಗೆ ಈ ಕಾರಿನ ಮೇಲೆ ಸಾಕಷ್ಟು ನೀರಿಕ್ಷೆಗಳು ಹೆಚ್ಚಾಗಿದೆ.

ಚೀನಾ ಒಡೆತನದ ಬ್ರಿಟಿಷ್ ವಾಹನ ತಯಾರಕ ಕಂಪನಿ ಎಂಜಿ, ಮುಂಬರುವ ಆಟೋ ಎಕ್ಸ್‌ಪೋದಲ್ಲಿ ಎಂಜಿ 4 ಇವಿಯನ್ನು ಇತರೆ ಅಂತರರಾಷ್ಟ್ರೀಯ ಮಾದರಿಗಳೊಂದಿಗೆ ಅನಾವರಣಗೊಳಿಸಿದೆ. ಈ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಕಂಪನಿಯ ನೂತನ ಮಾಡ್ಯುಲರ್ ಸ್ಕೇಲೆಬಲ್ ಪ್ಲಾಟ್‌ಫಾರ್ಮ್ (MSP) ಅನ್ನು ಆಧರಿಸಿದೆ. ಇದನ್ನು ವಿಶೇಷವಾಗಿ ಎಲೆಕ್ಟ್ರಿಕ್ ವಾಹನ ತಯಾರಿಕೆಗೆ ಅನುಗುಣವಾಗಿ ರೆಡಿ ಮಾಡಲಾಗಿದೆ. ಈ ಹೊಸ ಇವಿಯ ಪ್ಲಾಟ್‌ಫಾರ್ಮ್ ಎಂಜಿಯ ಮಾತೃ ಕಂಪನಿ SAICಗೆ ಸೇರಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಬಹು ನಿರೀಕ್ಷಿತ ಎಂಜಿ 4 ಇವಿ ಟೀಸರ್ ಬಿಡುಗಡೆ: ಆಟೋ ಎಕ್ಸ್‌ಪೋದಲ್ಲಿ ಅನಾವರಣ

ಎಂಜಿ 4 ಇವಿಯ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ರೇರ್ ವೀಲ್ ಗಳನ್ನು ಡ್ರೈವಿಂಗ್ ಮಾಡುವ ಏಕೈಕ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಗ್ರಾಹಕರಿಗೆ ಖರೀದಿಗೆ ಸಿಗಲಿದೆ. ಈ ಎಲೆಕ್ಟ್ರಿಕ್ ಮೋಟರ್‌, ಎರಡು ಬ್ಯಾಟರಿ ಪ್ಯಾಕ್‌ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೇ ಸಾಮಾನ್ಯ ಗಾತ್ರದ 51kWh ಬ್ಯಾಟರಿ ಪ್ಯಾಕ್ ಮತ್ತು ದೊಡ್ಡ ಗಾತ್ರದ 64kWh ಬ್ಯಾಟರಿ ಪ್ಯಾಕ್. ಇವು ಅತ್ಯುನ್ನತವಾದ ಕಾರ್ಯಕ್ಷಮತೆಯನ್ನು ಹೊಂದಿದೆ ಎಂದು ಹೇಳಬಹುದು.

ಈ ಕಾರಿನ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಸಾಮಾನ್ಯ ಗಾತ್ರದ 51kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುವ ಎಂಜಿ 4 ಇವಿ 168bhp ಪವರ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್‌ ಹೊಂದಿದೆ. ಆದರೆ, ದೊಡ್ಡ ಗಾತ್ರದ 64kWh ಬ್ಯಾಟರಿ ಪ್ಯಾಕ್‌ನೊಂದಿಗೆ ಖರೀದಿಗೆ ಸಿಗುವ ಕಾರು, 201bhp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯವಿರುವ ಎಲೆಕ್ಟ್ರಿಕ್ ಮೋಟಾರ್ ಅನ್ನು ಪಡೆದುಕೊಂಡಿದೆ. ಆದರೆ, ಎರಡು ಎಲೆಕ್ಟ್ರಿಕ್ ಮೋಟಾರ್‌ಗಳು 250Nm ಪೀಕ್ ಟಾರ್ಕ್ ಉತ್ಪಾದಿಸುತ್ತವೆ.

ಇತ್ತೀಚೆಗೆ ಎಂಜಿ 4 ಇವಿ ಯುರೋ NCAP ಕ್ರ್ಯಾಶ್ ಸುರಕ್ಷತಾ ಪರೀಕ್ಷೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ವಯಸ್ಕರ ರಕ್ಷಣೆ ವಿಭಾಗದ ಪರೀಕ್ಷೆಯಲ್ಲಿ 38 ಅಂಕಗಳಿಗೆ 31.6 ಅಂಕ ಪಡೆದು, 83% ಗಳಿಸಿದೆ. ಮಕ್ಕಳ ರಕ್ಷಣೆ ವಿಭಾಗದ ಪರೀಕ್ಷೆಯಲ್ಲಿ 49 ಅಂಕಗಳಿಗೆ 39.5 ಅಂಕ ಪಡೆದುಕೊಂಡಿದೆ. ಜೊತೆಗೆ ಕಾರಿನಲ್ಲಿರುವ ಸುರಕ್ಷತಾ ವ್ಯವಸ್ಥೆಗಳಿಗಾಗಿ 16 ಅಂಕಗಳಿಗೆ 12.6 ಅಂಕ ಪಡೆದಿದ್ದು, 78% ಗಳಿಸಿದೆ. ಈ ಮೂಲಕ ಉತ್ತಮ ಸುರಕ್ಷತಾ ವೈಶಿಷ್ಟ್ಯಗಳಿರುವ ಕಾರಾಗಿ ಹೊರಹೊಮ್ಮಿದೆ.

ಹೊಸ ಎಲೆಕ್ಟ್ರಿಕ್ ಕಾರನ್ನು ಎಂಜಿ 4 ಇವಿ ಸುಮಾರು ರೂ.10 ಲಕ್ಷದ ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಬಹುದು. ಇದು ದೇಶದಲ್ಲಿ ಮಾರಾಟವಾಗುವ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರಾಗಲಿದೆ. ಇದು 7-ಇಂಚಿನ ಡಿಜಿಟಲ್ ಡ್ರೈ ವರ್‌ನ ಡಿಸ್ಪ್ಲೇ ಜೊತೆಗೆ ಮೌಂಟೆಡ್ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಂಟರ್ ಕನ್ಸೋಲ್ ರೋಟರಿ ಡಯಲ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್‌, ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ಹೇಳಬಹುದು.

ಆಟೋ ಎಕ್ಸ್‌ಪೋದಲ್ಲಿ ಎಂಜಿ 4 ಇವಿ ಅನಾವರಣವನ್ನು ಮಾತ್ರವಲ್ಲದೆ ಕಂಪನಿಯು, ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಫೇಸ್‌ಲಿಫ್ಟ್‌ ಕಾರುಗಳ ಬೆಲೆ ಬಗ್ಗೆ ತನ್ನ ಗ್ರಾಹಕರಿಗೆ ಮಾಹಿತಿ ನೀಡಬಹುದು. ಎರಡು ಎಸ್‌ಯುವಿಗಳು ಮಿಡ್‌ಲೈಫ್ ಮೇಕ್‌ಓವರ್‌ನೊಂದಿಗೆ ಬರಲಿದ್ದು, ಪರಿಷ್ಕೃತ ಡ್ಯಾಶ್‌ಬೋರ್ಡ್, ದೊಡ್ಡದಾದ 14-ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ಹೆಚ್ಚಿನ ವೈಶಿಷ್ಠ್ಯಗಳನ್ನು ಒಳಗೊಂಡಿರಲಿದೆ. ಎಂಜಿ ತನ್ನ ADAS ತಂತ್ರಜ್ಞಾನವನ್ನು ಈ ಕಾರುಗಳಲ್ಲಿ ಉಪಯೋಗ ಮಾಡಿದೆ ಎಂದು ಹೇಳಬಹುದು. ಆದರೆ, ಪವರ್‌ಟ್ರೇನ್ ಲೈನ್-ಅಪ್‌ನಲ್ಲಿ ಯಾವುದೇ ಬದಲಾವಣೆ ಆಗಿಲ್ಲವಂತೆ.

ಎಂಜಿ 4 ಇವಿ ಕಾರು ಖರೀದಿಸುವ ಬಗ್ಗೆ ಆಲೋಚನೆಗಳು:
ಹೊಸ ಎಂಜಿ 4 ಇವಿ ರೇರ್-ವೀಲ್ ಡ್ರೈವ್ ಹ್ಯಾಚ್‌ಬ್ಯಾಕ್ ಆಗಿದೆ. ಇದು ಬಹುತೇಕ ಭಾರತೀಯ ಖರೀದಿದಾರರಿಗೆ ಇಷ್ಟವಾಗಬಗುದು. ದೇಶದ ಮಾರುಕಟ್ಟೆಯಲ್ಲಿ ಈ ಕಾರು ಯಶಸ್ವಿಯಾಗಿ ಮಾರಾಟ ಎಲ್ಲ ರೀತಿಯ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಹೇಳಬಹುದು. ಇದು ಭಾರತದಲ್ಲಿ ಸದ್ಯ ಕಡಿಮೆ ಬೆಲೆಗೆ ಖರೀದಿಗೆ ದೊರೆಯುವ ಟಾಟಾದ ಟಿಯಾಗೊ ಇವಿಗೆ ಭಾರೀ ಪೈಪೋಟಿ ನೀಡಲಿದೆ.

Most Read Articles

Kannada
English summary
Much awaited mg4 ev teaser launch unveiled at auto expo
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X