BYD: ನೂತನ ಬಿವೈಡಿ ಸೀ ಲಯನ್ 07 ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ, ಟೆಸ್ಲಾಗೆ ಶುರುವಾಯಿತು ನಡುಕ!
ಚೀನಾದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಬಿವೈಡಿ (BYD) ಜನಪ್ರಿಯತೆಗಳಿಸಿದೆ. ಗುವಾಂಗ್‌ಝೌ ಅಂತರರಾಷ್ಟ್ರೀಯ ಆಟೋ ಶೋನಲ್ಲಿ (Guangzhou International Auto Show - 2023) ಹೊಚ್ಚ ಹೊಸ ಸೀ ಲಯನ್ 07 (Seal Lion 07) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅನಾವರಣಗೊಳಿಸಿದೆ.
ನೂತನ 'ಸೀ ಲಯನ್ 07' ಕಂಪನಿಯ ಓಷನ್ (Ocean) ಸರಣಿ ಕಾರುಗಳ ಭಾಗವಾಗಿದೆ. ಈಗಾಗಲೇ, ಡಾಲ್ಫಿನ್ ಹ್ಯಾಚ್‌ಬ್ಯಾಕ್ ಮತ್ತು ಸೀಲ್ ಎಲೆಕ್ಟ್ರಿಕ್ ಸೆಡಾನ್ ಅನ್ನು ಈ ವಿಭಾಗದಲ್ಲಿ ಮಾರಾಟ ಮಾಡಲಾಗುತ್ತಿದೆ. ಹೊಸ ಬಿವೈಡಿ ಸೀ ಲಯನ್ 07 ಎಲೆಕ್ಟ್ರಿಕ್ ಎಸ್‌ಯುವಿ, ಜಾಗತಿಕ ಮಾರುಕಟ್ಟೆಯಲ್ಲಿ ಟೆಸ್ಲಾ ಮಾಡೆಲ್ ವೈ (Tesla Model Y) ಕಾರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ ಎಂದು ಅಂದಾಜಿಸಲಾಗಿದ್ದು, 2024ರಲ್ಲಿ ಬಿಡುಗಡೆಯಾಗಬಹುದು.

ಈ ಹೊಸ ಸೀ ಲಯನ್ 07 (Sea Lion07) ಎಲೆಕ್ಟ್ರಿಕ್ ಎಸ್‌ಯುವಿ, ಕಂಪನಿಯ ಇ - ಪ್ಲಾಟ್‌ಫಾರ್ಮ್ 3.0 ಅನ್ನು ಆಧರಿಸಿದೆ. ಜೊತೆಗೆ 'ಸಮುದ್ರ ಸಿಂಹ' ಪ್ರಾಣಿಯನ್ನು ಹೋಲಿಕೆಯಾಗಿವ ವಿನ್ಯಾಸವನ್ನು ಹೊಂದಿದೆ. ಅದರಲ್ಲೂ ಹೊರಭಾಗದ ಡಿಸೈನ್ ಬಹುತೇಕ ಸೀಲ್ ಸೆಡಾನ್ ರೀತಿಯಲ್ಲಿಯೇ ಇದ್ದು, ಎಲ್ - ಆಕಾರದ ಆಕರ್ಷಕ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ದೊಡ್ಡದಾದ ಬಾಗಿಲು ಹಾಗೂ ಅಲಾಯ್ ವೀಲ್ಸ್ ಅನ್ನು ಒಳಗೊಂಡಿದೆ.
ಜೊತೆಗೆ ಈ ಕಾರು, ಫ್ಲಶ್ ಡೋರ್ ಹ್ಯಾಂಡಲ್, ಹಿಂಭಾಗದಲ್ಲಿ, ಸೀಕ್ ರೂಫ್ - ಮೌಂಟೆಡ್ ಸ್ಪಾಯ್ಲರ್ ಮತ್ತು ಸ್ಲೀಕ್ ಕನೆಕ್ಟಿಂಗ್ ಎಲ್ಇಡಿ ಟೈಲ್‌ಲ್ಯಾಂಪ್ ಪಡೆದಿದೆ. ಹಿಂಭಾಗದ ವಿನ್ಯಾಸ ಆಟ್ಟೋ 3 ಕಾರಿಗೆ ಹೋಲಿಕೆಯಾಗುತ್ತದೆ. ನೂತನ ಸೀ ಲಯನ್ 07 ಸುತ್ತಳತೆ ಬಗ್ಗೆ ಹೇಳುವುದಾದರೆ, 4,830 ಎಂಎಂ ಉದ್ದ, 1,925 ಎಂಎಂ ಅಗಲ ಮತ್ತು 1,620 ಎಂಎಂ ಎತ್ತರವನ್ನು ಹೊಂದಿದೆ.

ಬಿವೈಡಿ ಕಂಪನಿ ಈ ಕಾರಿನ ಯಾವುದೇ ತಾಂತ್ರಿಕ ಅಂಶಗಳ ಕುರಿತು ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಇದು, ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಸಿಗಲಿದೆ ಎಂದು ಹೇಳಲಾಗಿದೆ. ಚಿಕ್ಕದಾದ ಬ್ಯಾಟರಿ ಹೊಂದಿರುವ ರೂಪಾಂತರ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್, ದೊಡ್ಡದಾದ ಬ್ಯಾಟರಿ ಪಡೆದಿರುವ ರೂಪಾಂತರ ಟ್ವಿನ್ ಮೋಟಾರ್ ಒಳಗೊಂಡಿರುವ ಸಾಧ್ಯತೆಯಿದ್ದು, ವಿದೇಶಿ ಮಾರುಕಟ್ಟೆಯಲ್ಲಿ ರೂ.23.5 ಲಕ್ಷ ಬೆಲೆಗೆ ಖರೀದಿಗೆ ಸಿಗಬಹದು ಎನ್ನಲಾಗಿದೆ.
ಸದ್ಯ, ಬಿವೈಡಿ ಭಾರತದ ಮಾರುಕಟ್ಟೆಯಲ್ಲಿ ಎರಡು ಕಾರುಗಳನ್ನು ಮಾರಾಟ ಮಾಡುತ್ತಿದೆ. ಮೊದಲಿಗೆ ಇ6 (E6) ಕಾರಿನ ಬಗ್ಗೆ ಮಾತನಾಡೋಣ. ಇದು, ರೂ.29.15 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 5 ಆಸನ ಆಯ್ಕೆಯೊಂದಿಗೆ ದೊರೆಯುವ ಈ ಎಲೆಕ್ಟ್ರಿಕ್ ಕಾರು, 71.7kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 520 km ರೇಂಜ್ ನೀಡುತ್ತದೆ.

ಬಿವೈಡಿ ಆಟ್ಟೋ 3 (BYD Atto 3) ಎಲೆಕ್ಟ್ರಿಕ್ ಕಾರು, ರೂ.33.99 ಲಕ್ಷದಿಂದ ರೂ.34.49 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. 60.48 kWh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್ 204 PS ಗರಿಷ್ಠ ಪವರ್ ಹಾಗೂ 310 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಫುಲ್ ಚಾರ್ಜ್ ನಲ್ಲಿ 521 km ರೇಂಜ್ ಕೊಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








