New Cars In May: ಜಿದ್ದಾಜಿದ್ದಿಗೆ ಬಿದ್ದತೆ ಇದೇ ತಿಂಗಳು ಟಾಟಾ, ಮಾರುತಿ, ಮಹೀಂದ್ರಾ ಕಾರುಗಳು ಬಿಡುಗಡೆ
ಭಾರತದ ಮಾರುಕಟ್ಟೆಯಲ್ಲಿ ಮೇ ತಿಂಗಳು ದೇಶೀಯ ವಾಹನ ತಯಾರಕ ಕಂಪನಿಗಳೇ ಅಬ್ಬರಿಸಲಿವೆ. ಪ್ರಮುಖವಾಗಿ ಟಾಟಾ, ಮಾರುತಿ ಸುಜುಕಿ ಹಾಗೂ ಮಹೀಂದ್ರಾ ಕಂಪನಿ ಕಾರುಗಳು ಬಿಡುಗಡೆಯಾಗಲಿವೆ. ಈಗಾಗಲೇ ಅವುಗಳ ಬುಕಿಂಗ್ ಕೂಡ ಆರಂಭವಾಗಿದ್ದು, ಬಹುತೇಕ 10 ಲಕ್ಷ ರೂಪಾಯಿ ಆಸುಪಾಸಿನಲ್ಲಿ ಖರೀದಿಗೆ ಸಿಗಬಹುದು.
ಮೊದಲಿಗೆ ಟಾಟಾದ ಬಹುನೀರಿಕ್ಷಿತ ಟಾಟಾದ ಆಲ್ಟ್ರೊಜ್ ಸಿಎನ್‌ಜಿ ಬಗ್ಗೆ ಮಾತನಾಡೋಣ. ಈಗಾಗಲೇ ದೇಶಾದ್ಯಂತ ಡೀಲರ್‌ಶಿಪ್‌ಗಳಲ್ಲಿ ಈ ಕಾರಿನ ಬುಕಿಂಗ್ ಆರಂಭವಾಗಿದ್ದು, 1.2 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ ಹೊಂದಿದ್ದು, ಸಿಎನ್‌ಜಿ ಮೋಡ್ ನಲ್ಲಿ 77 PS ಗರಿಷ್ಠ ಪವರ್ ಹಾಗೂ 97 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ನೂತನ ಆಲ್ಟ್ರೊಜ್ ಸಿಎನ್‌ಜಿ ಸುಮಾರು ರೂ.10.55 ಲಕ್ಷ ಆರಂಭಿಕ ಬೆಲೆಯಲ್ಲಿ ಸಿಗಬಹುದು. ಸಿಎನ್‌ಜಿ ಕಿಟ್ ಪಡೆದಿರುವುದರಿಂದ ಹೆಚ್ಚಿನ ಇಂಧನ ದಕ್ಷತೆ ಪಡೆದಿರಲಿದ್ದು, 18.53 km/kg ಮೈಲೇಜ್ ನೀಡಬಹುದು. ಆಕರ್ಷಕ ವಿನ್ಯಾಸ ಹೊಂದಿರುವ ಈ ಕಾರು, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಈಗಾಗಲೇ, ಭಾರತದ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ನೀರಿಕ್ಷೆ ಹುಟ್ಟುಹಾಕಿರುವ ಮಾರುತಿ ಸುಜುಕಿ ಜಿಮ್ನಿ 5 ಡೋರ್ ಮೇ ತಿಂಗಳಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ. ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ದೆಹಲಿ ಆಟೋ ಎಕ್ಸ್ ಪೋದಲ್ಲಿ ಈ ಆಫ್-ರೋಡ್ ಎಸ್‌ಯುವಿಯನ್ನು ಕಂಪನಿ ಅನಾವರಣ ಮಾಡಿ, ಅಂದಿನಿಂದಲೇ ಬುಕಿಂಗ್ ಆರಂಭಿಸಿತ್ತು. ಗರಿಷ್ಠ ಸಂಖ್ಯೆಯಲ್ಲಿ ಗ್ರಾಹಕರು, ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಈ ಜಿಮ್ನಿ 5 ಡೋರ್ ರೂ.10-12 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಬಹುದು.

ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಜಿಮ್ನಿ 5 ಡೋರ್ ಎಸ್‌ಯುವಿ, ಕೇವಲ 1.5 ಲೀಟರ್ 4 ಸಿಲಿಂಡರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಜೊತೆಗೆ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಪದೆದಿದೆ. ಅವುಗಳೆಂದರೆ, 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್ ಹಾಗೂ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಅನ್ನು ಹೊಂದಿದೆ.
ಟಾಟಾ, ಮಾರುತಿ ಸುಜುಕಿ ಮಾತ್ರವಲ್ಲದೆ, ಮಹೀಂದ್ರಾ ಕೂಡ ಥಾರ್ 3 ಡೋರ್ ನ AX (AC) ಬೇಸ್ ವೇರಿಯೆಂಟ್ ಅನ್ನು ಬಿಡುಗಡೆ ಮಾಡಬಹುದು. ಇದು, ಫ್ರಂಟ್ ಫೇಸಿಂಗ್ ಸೆಕೆಂಡ್ ರೋ ಸೀಟ್ ನೊಂದಿಗೆ ಪೆಟ್ರೋಲ್, ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದ್ದು,ಕೆಲವೊಂದು ವೈಶಿಷ್ಟ್ಯಗಳನ್ನು ಕಳೆದುಕೊಳ್ಳಲಿದೆ. AX (O) ರೂಪಾಂತರಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆ ಎಂದು ವರದಿಯಾಗಿದೆ.

ಮಹೀಂದ್ರಾ 3 ಡೋರ್ ಥಾರ್ ರೂ.10.54 ಲಕ್ಷದಿಂದ ರೂ.16.78 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. RWD/ 4X4 ಆಯ್ಕೆಯಲ್ಲಿ ದೊರೆಯಲಿದ್ದು, 2-ಲೀಟರ್ ಟರ್ಬೊ ಪೆಟ್ರೋಲ್, 2.2-ಲೀಟರ್ ಡೀಸೆಲ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯವನ್ನು ಹೊಂದಿದೆ.
ಒಟ್ಟಾರೆ, ಟಾಟಾ, ಮಾರುತಿ ಸುಜುಕಿ, ಮಹೀಂದ್ರಾ ಕಂಪನಿಗಳು, ವಿವಿಧ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ತಯಾರಿ ನಡೆಸಿದ್ದು, ಒಂದಕ್ಕಿಂತ ಒಂದು ಆಕರ್ಷಕವಾಗಿವೆ. ಅದರಲ್ಲೂ ಜಿಮ್ನಿ 5 ಡೋರ್ ಎಸ್‌ಯುವಿ ದೊಡ್ಡ ಸಂಖ್ಯೆಯಲ್ಲಿ ಬುಕಿಂಗ್ ಪಡೆದುಕೊಂಡಿದೆ. ಆಲ್ಟ್ರೊಜ್ ಸಿಎನ್‌ಜಿ ತನ್ನ ಮೈಲೇಜ್ ನಿಂದಲೇ ಗ್ರಾಹಕರನ್ನು ಸೆಳೆಯುತ್ತಿದ್ದು, ಮಹೀಂದ್ರಾ 3 ಡೋರ್ ಥಾರ್ ಕೂಡ ಕಡಿಮೆ ಬೆಲೆಗೆ ಖರೀದಿಗೆ ಸಿಗುವ ಸಾಧ್ಯತೆಯಿದೆ.


Click it and Unblock the Notifications