408 ಕಿ.ಮೀ ರೇಂಜ್, ಅಗ್ಗದ ಬೆಲೆಯ ಹೊಸ ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳು

ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಹೆಚ್ಚಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹಲವು ಜನಪ್ರಿಯ ಕಾರು ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ಈ ನಡುವೆ ಚೀನಾದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಚೆರಿ ನ್ಯೂ ಎನರ್ಜಿ ತನ್ನ ಹೊಸ ಲಿಟಲ್ ಆಂಟ್ ಎಲೆಕ್ಟ್ರಿಕ್ ಕಾರನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು.

ಹೊಸ ಚೆರಿ ಎಲೆಕ್ಟ್ರಿಕ್ ಕಾರಿನ (Chery Electric Car) ಪ್ರಾರಂಭಿಕ ಬೆಲೆಯು 77,900 ಯುವಾನ್ ಆಗಿದೆ, ಇದು ಭಾರತೀಯ ಕರೆನ್ಸಿಯಲ್ಲಿ ಅಂದಾಜು ರೂ.8.92 ಲಕ್ಷವಾಗಿದೆ. ಚೆರಿ ಎಲೆಕ್ಟ್ರಿಕ್ ಕಾರಿನ ಟಾಪ್-ಸ್ಪೆಕ್ ರೂಪಾಂತರದ ಬೆಲೆಯು 82,900 ಯುವಾನ್ ಆಗಿದ್ದು, ಇದು ಭಾರತೀಯ ಕರೆನ್ಸಿಯಲ್ಲಿ ಅಂದಾಜು ರೂ.9.49 ಲಕ್ಷವಾಗಿದೆ. ಈ ಹೊಸ ಎಲೆಕ್ಟ್ರಿಕ್ ಮಾದರಿಯು ಚೆರಿ ನ್ಯೂ ಲಿಟಲ್ ಆಂಟ್ ಅನ್ನು ಕ್ಲಾಸಿಕ್ ಲಿಟಲ್ ಆಂಟ್‌ನ ನವೀಕರಿಸಿದ ಆವೃತ್ತಿಯಾಗಿದೆ.

Chery Electric Car

ವಿನ್ಯಾಸ: ಹೊಸ ಲಿಟಲ್ ಆಂಟ್ ಎಲೆಕ್ಟ್ರಿಕ್ ಕಾರು ಹೊರಭಾಗಗಳು ಮತ್ತು ಹೆಚ್ಚು ಆಕರ್ಷಕವಾದ ಒಟ್ಟಾರೆ ಪ್ರೊಫೈಲ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರಿನ ಮುಂಭಾಗದ ಫಾಸಿಕ, ಹೊಸ ಹೆಡ್‌ಲ್ಯಾಂಪ್‌ಗಳು ಮತ್ತು DRL ಗಳು ಮತ್ತು ಮುಚ್ಚಿದ ಮುಂಭಾಗದ ಗ್ರಿಲ್ ಅನ್ನು ಕೆಲವು ವಿಭಿನ್ನ ಅಂಶಗಳು ಒಳಗೊಂಡಿವೆ. ಗ್ರಿಲ್‌ನಲ್ಲಿ ಹೊಸ Qq ಲೋಗೋ ಕೂಡ ಇದೆ. ಇದರ ಹಿಂದಿನ ಪ್ರೊಫೈಲ್ ಹೆಚ್ಚಾಗಿ ಕ್ಲಾಸಿಕ್ ಲಿಟಲ್ ಆಂಟ್‌ನಂತೆಯೇ ಇದೆ.

ಬಣ್ಣಗಳ ಆಯ್ಕೆ: ಬಣ್ಣಗಳ ಆಯ್ಕೆಯ ಬಗ್ಗೆ ನಿರ್ದಿಷ್ಟವಾಗಿರುವ ಬಳಕೆದಾರರು ಹೊಸ ಲಿಟಲ್ ಆಂಟ್‌ನೊಂದಿಗೆ ಆಯ್ಕೆ ಮಾಡಲು ಹೆಚ್ಚಿನ ಆಯ್ಕೆಗಳನ್ನು ಹೊಂದಿರುತ್ತಾರೆ. ಒಟ್ಟು ಏಳು ಬಣ್ಣಗಳಲ್ಲಿ ಲಭ್ಯವಿದ್ದು, ಇವು ಡಾರ್ಕ್ ಗ್ರೀನ್, ಲೈಟ್ ಗ್ರೀನ್, ಪೀಚ್, ಅಗವೆ ಬ್ಲೂ, ವೈಟ್ ಮತ್ತು ಗ್ರೇ ಬಣ್ಣಗಳಾಗಿವೆ. ಇದರಲ್ಲಿ ಗ್ರಾಹಕರು ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆಮಾಡಬಹುದು.

Chery Electric Car

ಫೀಚರ್ಸ್: ಹೊಸ ಲಿಟಲ್ ಆಂಟ್ ರಿಫ್ರೆಶ್ ಮಾಡಿದ ಒಳಭಾಗದಲ್ಲಿ, ಡ್ಯಾಶ್‌ಬೋರ್ಡ್ ನಲ್ಲಿ ದೊಡ್ಡ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಆಧುನಿಕ-ಕಾಣುವ ಸ್ಟೀರಿಂಗ್ ವೀಲ್ ಮತ್ತು ಸ್ಲಿಮ್ಮರ್ ಏರ್ ವೆಂಟ್‌ಗಳೊಂದಿಗೆ ವಿಭಿನ್ನವಾಗಿದೆ. ಕನಿಷ್ಠ ವಿನ್ಯಾಸದ ಭಾಷೆಯನ್ನು ಅಳವಡಿಸಲಾಗಿದೆ. ಇನ್ನು ಈ ಕಾರಿನಲ್ಲಿ ಕ್ಯಾಬಿನ್‌ನಲ್ಲಿ ಸ್ಥಳಾವಕಾಶದ ಅರ್ಥವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

ಚೆರಿ ನ್ಯೂ ಲಿಟಲ್ ಆಂಟ್‌ನ ಇತರ ಪ್ರಮುಖ ಮುಖ್ಯಾಂಶಗಳು ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ವೈರ್‌ಲೆಸ್ ಚಾರ್ಜಿಂಗ್, ಲೆದರ್ ಸೀಟ್ ಅಪ್ಹೋಲ್ಸ್ಟರಿ, ಹೀಟೆಡ್ ಸೀಟ್ ಮತ್ತು ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ. ಇದರೊಂದಿಗೆ ಎಲ್‌ಇಡಿ ಲೈಟ್‌ಗಳೊಂದಿಗೆ ದೊಡ್ಡ ಮೇಕ್ಅಪ್ ಮಿರರ್ ಮತ್ತು PM2.5 ಏರ್ ಫಿಲ್ಟರ್ ಅನ್ನು ಹೊಂದಿದೆ.

Chery Electric Car

ಸುರಕ್ಷತಾ ಫೀಚರ್ಸ್: ಈ ಕಾರಿನಲ್ಲಿ ವಾಯ್ಸ್ ಕಂಟ್ರೋಲ್ ಗಳು ಮತ್ತು ಅಪ್ಲಿಕೇಶನ್ ಮೂಲಕ ಕಂಟ್ರೋಲ್ ಮಾಡಬಹುದುದಾದ ರಿಮೋಟ್ ಕಾರ್ಯಗಳಂತಹ ಹಲವಾರು ಸುಧಾರಿತ ತಾಂತ್ರಿಕ ವೈಶಿಷ್ಟ್ಯಗಳು ಲಭ್ಯವಿದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ ಸುರಕ್ಷತೆಗಾಗಿ, ಕಿಟ್ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಹೊಂದಿದೆ. ಇದರೊಂದಿಗೆ ಸುರಕ್ಷತೆಗಾಗಿ, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಲ್ ಪವರ್-ಆಫ್ ಅನ್ನು ಒಳಗೊಂಡಿದೆ.

ಆಯಾಮಗಳು: ಚೆರಿ ನ್ಯೂ ಲಿಟಲ್ ಆಂಟ್ ಮತ್ತು ಕ್ಲಾಸಿಕ್ ಲಿಟಲ್ ಆಂಟ್ ಎರಡೂ ಒಂದೇ ಆಯಾಮಗಳು ಮತ್ತು ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿವೆ. ಇವುಗಳು 3,242 mm ಉದ್ದ, 1,670 mm ಅಗಲ, 1,550 mm ಎತ್ತರ ಮತ್ತು 2,150 mm ವ್ಹೀಲ್ ಬೇಸ್ ಹೊಂದಿವೆ. ಇನ್ನು ಗ್ರೌಂಡ್ ಕ್ಲಿಯರೆನ್ಸ್ 120 ಎಂಎಂ ಆದರೆ ಟರ್ನಿಂಗ್ ರೇಡಿಯಸ್ 4.55 ಮೀಟರ್ ಆಗಿದೆ.

ಪವರ್‌ಟ್ರೇನ್: ಸ್ಟ್ಯಾಂಡರ್ಡ್ ಪವರ್‌ಟ್ರೇನ್ 50 PS ಪವರ್ ಮತ್ತು 95 Nm ಗರಿಷ್ಠ ಟಾರ್ಕ್ ಅನ್ನು ನೀಡುತ್ತದೆ. ವಿಭಿನ್ನ ಸಂಯೋಜನೆಗಳೊಂದಿಗೆ ಮೂರು ಬ್ಯಾಟರಿ ಆಯ್ಕೆಗಳಿವೆ. ಈ ಎಲೆಕ್ಟ್ರಿಕ್ ಕಾರು 25.05 kWh ಲಿಥಿಯಂ ಐರಾನ್ ಫಾಸ್ಫೇಟ್ 251 ಕಿಮೀ ರೇಂಜ್ ಅನ್ನು ನೀಡುತ್ತದೆ. ಇದರೊಂದಿಗೆ 28.86 kWh ಟರ್ನರಿ ಲಿಥಿಯಂ ಬ್ಯಾಟರಿ ಹೊಂದಿದೆ.

ಇದರೊಂದಿಗೆ 29.23 kWh LFP ಬ್ಯಾಟರಿಯು 301 ಕಿಮೀ ರೇಂಜ್ ಅನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಕಾರಿನ ಹೈ-ಸ್ಪೆಕ್ ಪವರ್‌ಟ್ರೇನ್ 76 PS ಮತ್ತು 150 Nm ಅನ್ನು ನೀಡುತ್ತದೆ. ಇದು 40.3 kWh ಟರ್ನರಿ ಲಿಥಿಯಂ ಬ್ಯಾಟರಿಯನ್ನು ಹೊಂದಿದ್ದು, 408 ಕಿ.ಮೀ. ರೇಂಜ್ ಅನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಕಾರು RWD ಮಾದರಿಯಾಗಿದೆ.

More from DriveSpark

Article Published On: Thursday, November 9, 2023, 8:30 [IST]
English summary
New chery little ant top things details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+