Citroen C3 Aircross: ಎರಡೂ ಅವತಾರದಲ್ಲಿ ಬರಲಿದೆ: ಜನಪ್ರಿಯ ಕಾರುಗಳಿಗೆ ನಡುಕ ಶುರು

ಫ್ರೆಂಚ್ ಕಾರು ತಯಾರಕ ಕಂಪನಿಯಾದ ಸಿಟ್ರನ್ ತನ್ನ ಸಿ3 ಏರ್‌ಕ್ರಾಸ್ ಎಸ್‍ಯುವಿಯನ್ನು ಭಾರತದಲ್ಲಿ ಅನಾವರಣಗೊಳಿಸಲಾಗಿದೆ. ಈ ಫ್ರೆಂಚ್ ವಾಹನ ತಯಾರಕರಿಂದ ಇದು ನಾಲ್ಕನೇ ಕಾರು ಮಾದರಿಯಾಗಿದೆ. ಹೊಸ ಸಿಟ್ರನ್ ಸಿ3 ಏರ್‌ಕ್ರಾಸ್ (Citroen C3 Aircross) ಮಾದರಿಯು ಈ ವರ್ಷದ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಪ್ರತಿಸ್ಪರ್ಧಿಗಳು: ಹೊಸ ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‍ಯುವಿಯು ಎರಡೂ ಅವತಾರದಲ್ಲಿ ಬರುವುದರಿಂದ ಹಲವು ಜನಪ್ರಿಯ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಸಿಟ್ರನ್ ಸಿ3 ಏರ್‌ಕ್ರಾಸ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಹೈರೈಡರ್‌ನಂತಹ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Citroen C3 Aircross

ವಿನ್ಯಾಸ: ಕುತೂಹಲಕಾರಿಯಾಗಿ, ಹೊಸ ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‍ಯುವಿಯನ್ನು 5 ಮತ್ತು 7-ಸೀಟುಗಳ ಕಾನ್ಫಿಗರೇಶನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಈ ಹೊಸ ಸಿಟ್ರನ್ ಎಸ್‍ಯುವಿ ವಿನ್ಯಾಸವು ಸಿ3 ಹ್ಯಾಚ್‌ಬ್ಯಾಕ್‌ನಿಂದ ಹೆಚ್ಚು ಪ್ರೇರಿತವಾಗಿದೆ. ಈ ಹೊಸ ಹೊಸ ಸಿಟ್ರನ್ ಎಸ್‍ಯುವಿಯ ಮುಂಭಾಗದಲ್ಲಿ, ಇದು ಪಿಯಾನೋ ಬ್ಲ್ಯಾಕ್ ಬಣ್ಣದೊಂದಿಗೆ ಕ್ರೋಮ್ ಗ್ರಿಲ್ ಮತ್ತು ಸ್ಪ್ಲಿಟ್ ಸೆಟಪ್ ಮತ್ತು ವೈ-ಆಕಾರದ DRL ಗಳೊಂದಿಗೆ ಹೆಡ್‌ಲ್ಯಾಂಪ್ ಕ್ಲಸ್ಟರ್‌ಗಳನ್ನು ಹೊಂದಿದೆ.

ಈ ಎಸ್‍ಯುವಿಯ ಅಲಾಯ್ ವ್ಹೀಲ್ ಗಳು ಎಕ್ಸ್-ಆಕಾರದ ವಿನ್ಯಾಸವನ್ನು ಹೊಂದಿವೆ. ಆದರೆ ಸಿ-ಪಿಲ್ಲರ್‌ನ ನಂತರದ ವಿನ್ಯಾಸವು ಅದರ ಹ್ಯಾಚ್ ಸಿಬ್ಲಿಂಗ್‌ಗಿಂತ ಭಿನ್ನವಾಗಿದೆ. ಈ ಎಸ್‍ಯುವಿಯು ಅಲ್ಯೂಮಿನಿಯಂ ಫಿನಿಶ್ ಹೊಂದಿರುವ ಮುಂಭಾಗದ ಬಂಪರ್, ವೃತ್ತಾಕಾರದ ಫಾಗ್ ಲ್ಯಾಂಪ್ ಕ್ಲಸ್ಟರ್‌ಗಳಿಂದ ಸುತ್ತುವರಿದ ಮೀಸಲಾದ ಏರ್ ಇನ್ಟೇಕ್ ವೆಂಟ್ ಅನ್ನು ಒಳಗೊಂಡಿದೆ. ಈ ಎಸ್‍ಯುವಿಯು ರೌಂಡ್ ವೀಲ್ ಅರ್ಚಾರ್ ಮತ್ತು ಡೋರುಗಳ ಕೆಳಗೆ ಬ್ಲ್ಯಾಕ್ ಹೊದಿಕೆಯನ್ನು ನೀವು ಗಮನಿಸಬಹುದು.

Citroen C3 Aircross

ಈ ಹೊಸ ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‍ಯುವಿಯ ಹಿಂಭಾಗದಲ್ಲಿ, ಇದು ಸ್ಕ್ವಾರಿಶ್ ಟೈಲ್‌ಲ್ಯಾಂಪ್‌ಗಳು, ಎತ್ತರದ ಬಂಪರ್ ಮತ್ತು ದೊಡ್ಡದಾದ ಟೈಲ್‌ಗೇಟ್ ಅನ್ನು ಹೊಂದಿದೆ. ಈ ಹೊಸ ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‍ಯುವಿಯಲ್ಲಿ ಸುಮಾರು 4.3 ಮೀಟರ್ ಉದ್ದವನ್ನು ಅಳೆಯುತ್ತದೆ, ಹೀಗಾಗಿ ಇದು ಹ್ಯುಂಡೈ ಕ್ರೆಟಾದಷ್ಟು ಉದ್ದವಾಗಿದೆ. ಈ ಎಸ್‍ಯುವಿಯು 200mm ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ.

ಫೀಚರ್ಸ್: ಈ ಹೊಸ ಸಿಟ್ರನ್ ಎಸ್‍ಯುವಿಯ ಒಳಬಾಗದಲ್ಲಿ, ಟ್ಯಾಕೋಮೀಟರ್‌ನೊಂದಿಗೆ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ನೀಡುತ್ತದೆ. ಈ ಎಸ್‍ಯುವಿಯಲ್ಲಿ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿದೆ. ಇದರೊಂದಿಗೆ ಡ್ಯಾಶ್‌ಬೋರ್ಡ್ ವಿನ್ಯಾಸದೊಂದಿಗೆ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಈ ಎಸ್‍ಯುವಿಯ 7-ಸೀಟರ್ ಆವೃತ್ತಿಯು ಬ್ಲೋವರ್ ಕಂಟ್ರೋಲ್ ನೊಂದಿಗೆ ಎರಡನೇ ಮತ್ತು ಮೂರನೇ ಸಾಲಿನ ಪ್ರಯಾಣಿಕರಿಗೆ ರೂಫ್-ಮೌಂಟೆಡ್ ಎಸಿ ವೆಂಟ್‌ಗಳನ್ನು ಹೊಂದಿರುತ್ತದೆ.

Citroen C3 Aircross

ಮೂರನೇ ಸಾಲಿನ ಪ್ರಯಾಣಿಕರಿಗೆ USB ಚಾರ್ಜಿಂಗ್ ಪೋರ್ಟ್‌ಗಳು ಇರುತ್ತವೆ. ಇದು ಹಗಲು ರಾತ್ರಿ IRVM ಮತ್ತು ಕ್ರೂಸ್ ಕಂಟ್ರೋಲ್ ಗಳನ್ನು ಬರಬಹುದು. ಆದರ 5-ಸೀಟರ್ ಆವೃತಿಯು 444-ಲೀಟರ್‌ಗಳ ಬೂಟ್ ಸಾಮರ್ಥ್ಯದೊಂದಿಗೆ ಬಂದರೆ, 7-ಸೀಟ್ ಗಳ ಆವೃತ್ತಿಯು ಮೂರನೇ ಸಾಲಿನ ಸೀಟ್ ಗಳೊಂದಿಗೆ 511-ಲೀಟರ್‌ಗಳ ಲಗೇಜ್ ಸ್ಪೇಸ್ ಸಿಗುತ್ತದೆ.

ಸುರಕ್ಷತಾ ಫೀಚರ್ಸ್: ಹೊಸ ಸಿಟ್ರನ್ ಎಸ್‍ಯುವಿಯು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೊಗ್ರಾಮ್, ಪಾರ್ಕಿಂಗ್ ಸೆನ್ಸರ್‌ಗಳೊಂದಿಗೆ ರಿಯರ್ ವ್ಯೂ ಕ್ಯಾಮೆರಾ ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಹೊಂದಿದೆ. ಇದರೊಂದಿಗೆ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ವಿತರಣೆ) ಜೊತೆಗೆ ABS (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ನೀಡಬಹುದು.

ಎಂಜಿನ್: ಹೊಸ ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‍ಯುವಿಯಲ್ಲಿ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 110 bhp ಮತ್ತು 190 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ನೊಂದಿಗೆ ಜೋಡಿಸಲಾಗಿದೆ. ಈ ಹೊಸ ಎಸ್‍ಯುವಿಯು CMP ಮಾಡ್ಯುಲರ್ ಪ್ಲಾಟ್‌ಫಾರ್ಮ್‌ಗೆ ಆಧಾರವಾಗಿದೆ.

More from DriveSpark

Article Published On: Friday, April 28, 2023, 12:37 [IST]
English summary
New citroen c3 aircross suv top things to know details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+