ಬೆಂಗಳೂರಿನಲ್ಲಿ ರೋಡ್ ಟೆಸ್ಟ್​ ನಡೆಸಿದ ಹೊಸ ಸಿಟ್ರನ್ C3 ಕಾರು

ಫ್ರೆಂಚ್ ವಾಹನ ತಯಾರಕ ಕಂಪನಿಯಾದ ಸಿಟ್ರನ್ C3 ಕಾರಿನ ನವೀಕರಿಸಿದ ಆವೃತ್ತಿಯನ್ನು ಬೆಂಗಳೂರಿನಲ್ಲಿ ಸ್ಫಾಟ್ ಟೆಸ್ಟ್ ಅನ್ನು ನಡೆಸಿದೆ. ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಮರೆಮಾಚಿದ ಹೊಸ ಸಿಟ್ರನ್ C3 ಕಾರು ಯಾವುದೇ ಕಾಸ್ಮೆಟಿಕ್ ನವೀಕರಣಗಳನ್ನು ತೋರುತ್ತಿಲ್ಲವಾದರೂ, ಸಣ್ಣ ಬದಲಾವಣೆಗಳನ್ನು ಪಡೆದುಕೊಂಡಿರಬಹುದು ಎಂದು ನಿರೀಕ್ಷಿಸುತ್ತೇವೆ.

ಸದ್ಯಕ್ಕೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲದಿದ್ದರೂ, ಸಿಟ್ರನ್ C3 ಹ್ಯಾಚ್‌ಬ್ಯಾಕ್‌ನ ಆಟೋಮ್ಯಾಟಿಕ್ ಆವೃತ್ತಿಯಾಗಿರಬಹುದು. ಆದರೆ ಪರಿಗಣಿಸಬಹುದಾದ ಮತ್ತೊಂದು ಆಯ್ಕೆಯೆಂದರೆ, ಇದು ಹೊಸ RDE ಮಾಲಿನ್ಯ ಮಾನದಂಡಗಳೊಂದಿಗೆ C3 ಕಂಪ್ಲೈಂಟ್‌ನ ನವೀಕರಿಸಿದ ಆವೃತ್ತಿಯಾಗಿರಬಹುದು. ಬಹುಶಃ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಸಿಟ್ರನ್ C3 ಕಾರು ಹಿಂದೆ ಪಟ್ಟಿ ಮಾಡಲಾದ ಎರಡೂ ಆಯ್ಕೆಗಳ ಸಂಯೋಜನೆಯಾಗಿರಬಹುದು. ಭಾರತದಲ್ಲಿನ ಪ್ರತಿಯೊಂದು ಕಾರು ತಯಾರಕರು ಶೀಘ್ರದಲ್ಲೇ ತನ್ನ ಕಾರುಗಳು BS-VI ಮಾನದಂಡಗಳ ಎರಡನೇ ಹಂತದ ಭಾಗವಾಗಿ ಬರುವ RDE ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಬೇಕಾಗಿದೆ.

ಬೆಂಗಳೂರಿನಲ್ಲಿ ರೋಡ್ ಟೆಸ್ಟ್​ ನಡೆಸಿದ ಹೊಸ ಸಿಟ್ರನ್ C3 ಕಾರು

ಈ ಹೊಸ ಸಿಟ್ರನ್ C3 ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಬಿಡುಗಡೆ ಮಾಡಲಾಯಿತು ಮತ್ತು ಅಂದಿನಿಂದ, ಸಿಟ್ರನ್ ಹ್ಯಾಚ್‌ಬ್ಯಾಕ್ ಅನ್ನು 1.2-ಲೀಟರ್ ಇನ್‌ಲೈನ್ ಮೂರು-ಸಿಲಿಂಡರ್ ಎಂಜಿನ್‌ನೊಂದಿಗೆ ಮಾರಾಟ ಮಾಡುತ್ತಿದೆ. ಇದು ನ್ಯಾಚುರಲ್ ಅಸ್ಪೈರೆಡ್ ಮತ್ತು ಟರ್ಬೋಚಾರ್ಜ್ಡ್ ರೂಪದಲ್ಲಿ ಮಾರಾಟವಾಗುತ್ತಿದೆ. ಈ 1.2-ಲೀಟರ್ ನ್ಯಾಚುರಲ್ ಅಸ್ಪೈರೆಡ್ 1.2-ಲೀಟರ್ ಆವೃತ್ತಿಯು 80 ಬಿಹೆಚ್‍ಪಿ ಪವರ್ ಮತ್ತು 115 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ನ್ಯಾಚುರಲ್ ಅಸ್ಪೈರೆಡ್ C3 ಕಾರನ್ನು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ನೀಡಲಾಗುತ್ತದೆ ಮತ್ತು 19.8 ಕಿ.ಮೀ ಮೈಲೇ ಅನ್ನು ಒದಗಿಸುತ್ತದೆ. ಇನ್ನು 1.2-ಲೀಟರ್ ಎಂಜಿನ್‌ನ ಟರ್ಬೋಚಾರ್ಜ್ಡ್ ಆವೃತ್ತಿಯು 109 ಬಿಹೆಚ್‍ಪಿ ಪವರ್ ಮತ್ತು 190 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 29 ಬಿಹೆಚ್‍ಪಿ ಪವರ್ ಮತ್ತು 75 ಎನ್ಎಂ ಟಾರ್ಕ್ ಅನ್ನು ಹೆಚ್ಚು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಕಾರು 19.4 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಇದು ಸಿಟ್ರನ್ C3 ಟರ್ಬೋಚಾರ್ಜ್ಡ್ ಆವೃತ್ತಿಯಾಗಿದ್ದು, ಫ್ರೆಂಚ್ ಕಾರು ತಯಾರಕರು ಇದಕ್ಕೆ 6-ಸ್ಪೀಡ್ ಟಾರ್ಕ್ ಕರ್ನ್ ವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ನೀಡಬಹುದು. ಇನ್ನು ಸಿಟ್ರನ್ C3 ಆಟೋಮ್ಯಾಟಿಕ್ ಆವೃತ್ತಿಯಿಂದ ಪವರ್ ಮತ್ತು ಟಾರ್ಕ್ ಅನ್ನು ಭಿನ್ನವಾಗಿರುವುದನ್ನು ನಾವು ನಿರೀಕ್ಷಿಸದಿದ್ದರೂ, ಮುಂದಿನ ದಿನಗಳಲ್ಲಿ ಹ್ಯಾಚ್‌ಬ್ಯಾಕ್‌ನ ಆಟೋಮ್ಯಾಟಿಕ್ ಆವೃತ್ತಿಯು ಹೆಚ್ಚಿನ ಮೈಲೇಜ್ ಗಳೊಂದಿಗೆ ಬರಬಹುದು ಎಂದು ನಿರೀಕ್ಷಿಸುತ್ತೇವೆ. ಈ ಕಾರಿನಲ್ಲಿ 10.25-ಇಂಚಿನ ಟಚ್ ಸ್ಕ್ರೀನ್ ಇನ್ಪೊಟೈನ್‍‌ಮೆಂಟ್ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್ ಮತು ಕ್ವಿಕ್ ಚಾರ್ಜಿಂಗ್ ಯುಎಸ್‌ಬಿ ಸಾಕೆಟ್ ಅನ್ನು ಹೊಂದಿದೆ.

ಇದರೊಂದಿಗೆ ಸ್ಟ್ರೀರಿಂಗ್ ಮೌಟೆಂಡ್ ಕಂಟ್ರೋಲ್, ಕನೆಕ್ಟ್ ಕಾರ್ ಟೆಕ್ನಾಲಜಿ, ಕ್ರೂಸ್ ಕಂಟ್ರೊಲ್, 315 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಸೌಲಭ್ಯವಿದೆ.ಸಿ3 ಮಾದರಿಯ ಮತ್ತೊಂದು ವಿಶೇಷವೆಂದರೆ ಕಂಪನಿಯು ಬಜೆಟ್ ಕಾರಿನಲ್ಲೂ ವೈರ್‌ಲೆಸ್ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸೌಲಭ್ಯವನ್ನು ನೀಡುತ್ತಿದ್ದು, ಎಲ್ಇಡಿ ಡಿಆರ್‌ಎಲ್‌, ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕ, ಫೋಲ್ಡ್-ಫ್ಲಾಟ್ ಹಿಂದಿನ ಸೀಟ್, ಒನ್-ಟಚ್ ಡೌನ್ ವಿಂಡೋಸ್ ಮತ್ತು ಡಿಜಿಟಲ್ ಇನ್ ಟ್ರೂಮೆಂಟ್ ಕ್ಲಸ್ಟರ್ ಪಡೆದುಕೊಂಡಿದೆ.

ಈ ನವೀಕರಿಸಿದ ಆಟೋಮ್ಯಾಟಿಕ್ ಆವೃತ್ತಿಯ ಆಗಮನದ ನಿಖರವಾದ ದಿನಾಂಕ ಇನ್ನೂ ಬಹಿರಂಗವಾಗಿಲ್ಲ. ಹೊಸ RDE ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಿದ ಮಾದರಿಯು ಶೀಘ್ರದಲ್ಲೇ ಬರಲಿದೆ ಎಂದು ನಿರೀಕ್ಷಿಸುತ್ತೇವೆ. ಇದಲ್ಲದೆ ಹೊಸ ಕಾರಿನಲ್ಲಿ ಹಲವಾರು ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಹೊಸ ಕಾರು ಅತ್ಯುತ್ತಮ ಕ್ಯಾಬಿನ್ ಸ್ಥಳಾವಕಾಶದೊಂದಿಗೆ ಹಿಂಬದಿಯ ಪ್ರಯಾಣಿಕರಿಗೆ 653 ಎಂಎಂ ಲೆಗ್‌ರೂಂನೊಂದಿಗೆ 2 ಲೀಟರ್ ಸಾಮರ್ಥ್ಯದ ಡೋರ್ ಪ್ಯಾಕೇಟ್, ಸ್ಮಾರ್ಟ್‌ಫೋನ್ ಹೋಲ್ಡರ್ ಮತ್ತು ಸೆಂಟರ್ ಕನ್ಸೊಲ್ ಹೊಂದಿದೆ.

ಹೊಸ ಸಿಟ್ರನ್ ಸಿ3 ಕಾರಿನ ಸ್ಪೋರ್ಟಿ ಲುಕ್ ಹೆಚ್ಚಿಸಲು ಡ್ಯುಯಲ್ ಆಕ್ಸೆಂಟ್ ನೀಡುತ್ತಿರುವುದು ಮತ್ತಷ್ಟು ಆಕರ್ಷಣೆಯಾಗುವಂತೆ ಮಾಡಿದೆ. ಇನ್ನು ಈ ಸಿಟ್ರನ್ ಸಿ3 ಕಾರಿನಲ್ಲಿ ಹಲವಾರು ಹೊಸ ಸುರಕ್ಷತಾ ವೈಶಿಷ್ಟ್ಯತೆಗಳನ್ನು ನೀಡಲಾಗಿದ್ದು, ಚಾಲಕ ಮತ್ತು ಪ್ರಯಾಣಿಕರ ಏರ್‌ಬ್ಯಾಗ್‌ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಹಿಂದಿನ ಡೋರುಗಳಲಿ ಚೈಲ್ಡ್ ಲಾಕ್, ಎಂಜಿನ್ ಇಮೊಬಿಲೈಜರ್ ಮತ್ತು ಸ್ಪೀಡ್-ಸೆನ್ಸಿಟಿವ್ ಡೋರ್ ಲಾಕ್ ಸೌಲಭ್ಯಗಳಿವೆ. ಈ ಹೊಸ ಸಿಟ್ರನ್ ಸಿ3 ಕಾರಿನ ಬಗ್ಗೆ ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ.

More from DriveSpark

Article Published On: Thursday, February 16, 2023, 19:30 [IST]
English summary
New citroen c3 spied testing automatic or updated rde powertrain details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+