ಬೈಕ್‌ಗಳಿಗೆ ಸವಾಲೆಸೆಯುವ ಮೈಲೇಜ್: 10 ಲಕ್ಷದೊಳಗಿನ ಜನಪ್ರಿಯ ಕಂಪನಿಯ CNG ಕಾರುಗಳು

ದೇಶದಲ್ಲಿ ಪೆಟ್ರೋಲ್ ಚಾಲಿತ ಕಾರುಗಳಿಗೆ ಹೋಲಿಸಿದರೆ, ಸಿಎನ್‌ಜಿ (CNG) ಕಾರುಗಳು ಹೆಚ್ಚಿನ ಇಂಧನ ದಕ್ಷತೆಯನ್ನು ಹೊಂದಿವೆ. ಇದರಿಂದ ಬಹುತೇಕರು, ತಮ್ಮ ಆಯ್ಕೆಯಾಗಿ ಪರಿಗಣಿಸುತ್ತಿದ್ದಾರೆ. ಅದರಲ್ಲೂ ಕಡಿಮೆ ಬೆಲೆಗೆ ಗರಿಷ್ಠ ಮೈಲೇಜ್ ನೀಡುವ ಕಾರನ್ನು ನೀವು ಹುಡುಕುತ್ತಿದ್ದರೆ, 10 ಲಕ್ಷದೊಳಗೆ ಸಿಗುವ ಜನಪ್ರಿಯ ಕಂಪನಿಯ ಸಿಎನ್‌ಜಿ ಕಾರುಗಳು ಇಲ್ಲಿವೆ.

ಮೊದಲಿಗೆ ಮಾರುತಿ ಸುಜುಕಿ (Maruti Suzuki)ಯ ಪ್ರಮುಖ ಎಸ್‌ಯುವಿಗಳಲ್ಲಿ ಒಂದಾಗಿರುವ ಫ್ರಾಂಕ್ಸ್ (Fronx) ಬಗ್ಗೆ ತಿಳಿಯೋಣ. ಕಂಪನಿಯು ಈ ಎಸ್‌ಯುವಿಯನ್ನು ಕಳೆದ ಏಪ್ರಿಲ್ ತಿಂಗಳಲ್ಲಿ ರೂ.7.46 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಗೆ ಬಿಡುಗಡೆಗೊಳಿಸಿತ್ತು. ಇತೀಚೆಗೆ, ಸಿಎನ್‌ಜಿ ಚಾಲಿತ ಆವೃತ್ತಿಯನ್ನು ಲಾಂಚ್ ಮಾಡಿತು. ಇದರ ಸಿಗ್ಮಾ ಹಾಗೂ ಡೆಲ್ಟಾ ಸಿಎನ್‌ಜಿ ರೂಪಾಂತರಗಳು ಕ್ರಮವಾಗಿ ರೂ.8.42 ಲಕ್ಷದಿಂದ ರೂ.9.28 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿವೆ.

ಬೈಕ್‌ಗಳಿಗೆ ಸವಾಲೆಸೆಯುವ ಮೈಲೇಜ್: 10 ಲಕ್ಷದೊಳಗಿನ ಜನಪ್ರಿಯ ಕಂಪನಿಯ CNG ಕಾರುಗಳು

ಸಿಎನ್‌ಜಿ ಚಾಲಿತ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 1.2 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 75 hp ಗರಿಷ್ಠ ಪವರ್ ಹಾಗೂ 98.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದ್ದು, 28.51 km/kg (ARAI) ಮೈಲೇಜ್ ನೀಡುತ್ತದೆ.

ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India) ಕೆಲವೇ ದಿನಗಳ ಹಿಂದೆ, ಭಾರತದ ಮಾರುಕಟ್ಟೆಯಲ್ಲಿ ಎಕ್ಸ್‌ಟರ್ (Exter) ಮೈಕ್ರೋ ಎಸ್‌ಯುವಿಯನ್ನು ರೂ.5.99 ಲಕ್ಷ (ಎಕ್ಸ್ ಶೋರೂಂ) ಪ್ರಾರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿತು. ಇದರ, ಎಸ್ ಮತ್ತು ಎಸ್‌ಎಕ್ಸ್ ರೂಪಾಂತರಗಳು ಸಿಎನ್‌ಜಿ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದ್ದು, ರೂ.8.24 ಲಕ್ಷದಿಂದ ರೂ.8.97 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿವೆ.

ಹ್ಯುಂಡೈ ಎಕ್ಸ್‌ಟರ್ ಮೈಕ್ರೋ ಎಸ್‌ಯುವಿ (ಸಿಎನ್‌ಜಿ) ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದರ 1.2 ಲೀಟರ್ bi-fuel ಪೆಟ್ರೋಲ್ ಎಂಜಿನ್, 67 hp ಗರಿಷ್ಠ ಪವರ್ ಹಾಗೂ 95 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ. ಈ ಕಾರಿನ ಸಿಎನ್‌ಜಿ ವೆರಿಯೆಂಟ್ಸ್ 27.1 km/kg (ARAI) ಮೈಲೇಜ್ ನೀಡುತ್ತವೆ.

ಮಾರುತಿ ಸುಜುಕಿ (Maruti Suzuki) ಬ್ರೆಝಾ (Brezza) ಸಿಎನ್‌ಜಿ ಆವೃತ್ತಿಯನ್ನು ಮಾರ್ಚ್ ತಿಂಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಕಾರು, ರೂ.9.24 ಲಕ್ಷದಿಂದ ರೂ.12.15 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 1.5 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (ಸಿಎನ್‌ಜಿ), 85.5 hp ಗರಿಷ್ಠ ಪವರ್ ಹಾಗೂ 121 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ದೊರೆಯುವ ಈ ಕಾರು, 25.51 km/kg (ARAI) ಮೈಲೇಜ್ ನೀಡುತ್ತದೆ. ವೈಶಿಷ್ಟ್ಯದ ವಿಚಾರವಾಗಿ ಹೇಳುವುದಾದರೆ, ಮಾರುತಿ ಸುಜುಕಿ ಬ್ರೆಝಾ, ಟಚ್ ಸ್ಕ್ರೀನ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಒಟ್ಟಾರೆ, ಮಾರುತಿ ಸುಜುಕಿ ಫ್ರಾಂಕ್ಸ್, ಬ್ರೆಝಾ ಹಾಗೂ ಹ್ಯುಂಡೈ ಎಕ್ಸ್‌ಟರ್ ದೇಶದಲ್ಲಿ ಅತ್ಯಂತ ಕಡಿಮೆ ಬೆಲೆಗೆ ದೊರೆಯುವ ಸಿಎನ್‌ಜಿ ಚಾಲಿತ ಕಾರುಗಳಾಗಿವೆ. ಇವುಗಳು ಸಹ ಯಾವ ಬೈಕ್ ಗೂ ಕಮ್ಮಿ ಇಲ್ಲದಂತೆ ಮೈಲೇಜ್ ನೀಡುತ್ತವೆ. ಜೊತೆಗೆ ಅತ್ಯಾಧುನಿಕ ವೈಶಿಷ್ಟ್ಯದಿಂದ ಖರೀದಿಗೆ ದೊರೆಯುವುದರಿಂದ ನಿಮಗೆ ಯಾವುದು ಬೆಸ್ಟ್ ಅನ್ನಿಸುತ್ತದೆಯೋ ಅದನ್ನು ಆಯ್ಕೆ ಮಾಡಿಕೊಳ್ಳಿರಿ.

Article Published On: Wednesday, July 19, 2023, 17:10 [IST]
English summary
New cng suvs india rs 10 lakh details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+