ಭರ್ಜರಿ ರೇಂಜ್, ಆಕರ್ಷಕ ವಿನ್ಯಾಸದ ಹೊಸ ಕಿಯಾ EV5 ವಿಶೇಷತೆಗಳು

ಇತ್ತೀಚಿನ ವರ್ಷಗಳಲ್ಲಿ ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಈ ನಡುವೆ ಕಿಯಾ (Kia) ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಭರ್ಜರಿಯಾಗಿ ಸಜ್ಜಾಗುತ್ತಿದೆ.

ದಕ್ಷಿಣ ಕೊರಿಯಾದ ವಾಹನ ತಯಾರಕರಾದ ಕಿಯಾ ತನ್ನ ಹೊಸ ಕಿಯಾ EV5 ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿದ್ದಾರೆ. ಹೊಸ ಕಿಯಾ EV5 ಎಲೆಕ್ಟ್ರಿಕ್ ಕಾರು ಅದೇ ಇ-ಸಿಎಮ್‌ಪಿ ಆರ್ಕಿಟೆಕ್ಚರ್ ಅನ್ನು ಆಧರಿಸಿದೆ. ಇದು ಕಿಯಾ ಇವಿ6 ಎಲೆಕ್ಟ್ರಿಕ್ ಮಾದರಿಗೂ ಆಧಾರವಾಗಿರುತ್ತದೆ. ಇದು ಕಿಯಾ ಸ್ಪೋರ್ಟೇಜ್‌ಗೆ ಎಲೆಕ್ಟ್ರಿಕ್ ಮಾದರಿಯು ಪರ್ಯಾಯವಾಗಿ ಬರುತ್ತದೆ. ಈ ಎಲೆಕ್ಟ್ರಿಕ್ ಎಸ್‍ಯುವಿ ಇತರ ಮಾರುಕಟ್ಟೆಗಳಿಗೆ ಪರಿಚಯಿಸುವ ಮೊದಲು ಈ ವರ್ಷದ ನಂತರ ಚೀನಾದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

Kia EV5 Electric Suv

ಕಿಯಾ ಭಾರತಕ್ಕೆ EV5 ಅನ್ನು ತರಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಹೊಸ ಕಿಯಾ EV5 ಎಲೆಕ್ಟಕ್ ಕಾರು 2025ರ ನಂತರ ಬಿಡುಗಡೆಯಾಗಬಹುದು. ಈ ಹೊಸ ಕಿಯಾ EV5 ಎಲೆಕ್ಟ್ರಿಕ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಕಿಯಾ EV5 ಮಾದರಿಯು ಅದರ ಹಿರಿಯಣ್ಣ EV9 ನಿಂದ ಹೆಚ್ಚು ಪ್ರಭಾವಿತವಾಗಿದೆ. ಇದು ದೊಡ್ಡ ಪ್ರೀಮಿಯಂ ಎಲೆಕ್ಟ್ರಿಕ್ ವಾಹನವನ್ನು ಚೀನಾದಲ್ಲಿ ಚೆಂಗ್ಡು ಮೋಟಾರ್ ಶೋನಲ್ಲಿ ಪ್ರದರ್ಶಿಸಲಾಗಿದೆ.

ಅಯಾಮಗಳು: ಈ ಹೊಸ ಕಿಯಾ EV5 ಎಲೆಕ್ಟ್ರಿಕ್ ಕಾರು 4,615 mm ಉದ್ದವನ್ನು ಹೊಂದಿದೆ. ಇನ್ನು ಈ ಎಲೆಕ್ಟ್ರಿಕ್ ಕಾರು 2,750 mm ವೀಲ್‌ಬೇಸ್ ಅನ್ನು ಹೊಂದಿದೆ. ಇನ್ನು ಈ ಕಿಯಾ ಎಲೆಕ್ಟ್ರಿಕ್ ಕಾರನ್ನು ಕಿಯಾ ಸ್ಪೋರ್ಟೇಜ್‌ಗೆ ಹೋಲುತ್ತದೆ ಮತ್ತು ಟೆಸ್ಲಾ ಮಾಡೆಲ್ Y ಗಿಂತ 135mm ಚಿಕ್ಕದಾಗಿದೆ.

Kia EV5 Electric Suv

ಫೀಚರ್ಸ್: ಪ್ರೊಡಕ್ಷನ್-ಸ್ಪೆಕ್ Kia EV5 21-ಇಂಚಿನ ಫ್ಯೂಚರಿಸ್ಟಿಕ್ ಚಕ್ರಗಳನ್ನು ಪಡೆಯುತ್ತದೆ. ಆದರೆ ತೀಕ್ಷ್ಣವಾಗಿ ಕಾಣುವ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಪ್ರೊಜೆಕ್ಟರ್ ಯುನಿಟ್ ಗಳೊಂದಿಗೆ ಬದಲಾಯಿಸಲಾಗಿದೆ. ಹೊಸ ಕಿಯಾ EV5 ಎಲೆಕ್ಟ್ರಿಕ್ ಕಾರು ಬಹುತೇಕ EV9 ಫ್ಲ್ಯಾಗ್‌ಶಿಪ್‌ನ ರೀತಿಯಲ್ಲಿ ಕಾಣುತ್ತದೆ. ಈ ಎಲೆಕ್ಟ್ರಿಕ್ ಕಾರಿನ ಮುಂಭಾಗದ ಫಾಸಿಕವು 'ಟೈಗರ್ ಫೇಸ್' ರೀತಿಯಲ್ಲಿ ಹೆಚ್ಚು ಅಗ್ರೇಸಿವ್ ಆಗಿದೆ.

ಮೋಟಾರ್: ಚೀನಾ-ಸ್ಪೆಕ್ ಕಿಯಾ EV5 ಎಲೆಕ್ಟ್ರಿಕ್ ಕಾರು ಸಿಂಗಲ್ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗುತ್ತದೆ. ಈ ಸಿಂಗಲ್ ಎಲೆಕ್ಟ್ರಿಕ್ ಮೋಟರ್ 212 bhp ಪವರ್ ಮತ್ತು 310 Nm ಟಾರ್ಕ್ ಅನ್ನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ಎಸ್‍ಯುವಿ BYD-ಮೂಲದ ಬ್ಲೇಡ್ ಲಿಥಿಯಂ ಐರನ್ ಫಾಸ್ಫೇಟ್ ಬ್ಯಾಟರಿ ಪ್ಯಾಕ್‌ ಅನ್ನು ಒಳಗೊಂಡಿದೆ. ಈ ಬ್ಯಾಟರಿ ಪ್ಯಾಕ್‌ನ ಸಾಮರ್ಥ್ಯ ಮತ್ತು ರೇಂಜ್ ಮಾಹಿತಿಗಳು ಇನ್ನೂ ಬಹಿರಂಗಪಡಿಸಲಾಗಿಲ್ಲ.

Kia EV5 Electric Suv

ಬರೊಬ್ಬರಿ 600 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಕಿಯಾ EV5 ಎಲೆಕ್ಟ್ರಿಕ್ ಕಾರು ಜಾಗತಿಕ ಮಾರುಕಟ್ಟೆ-ಸ್ಪೆಕ್ ಮಾದರಿಗೆ ವಿಭಿನ್ನ ವಿಶೇಷಣಗಳು ಇರುತ್ತವೆ ಎಂದು ಕಿಯಾ ಹೇಳಿದೆ. ಕಿಯಾ ತನ್ನ ಹೊಸ ಕಿಯಾ ರೇ (Kia Ray) ಎಲೆಕ್ಟ್ರಿಕ್ ಕಾರನ್ನು ಅಧಿಕೃತವಾಗಿ ಪರಿಚಯಿಸಿದೆ. ಕಿಯಾ ರೇ ಎಲೆಕ್ಟ್ರಿಕ್ ಕಾರಿಗೆ ದಕ್ಷಿಣ ಕೊರಿಯಾದ ಮಾರುಕಟ್ಟೆಯಲ್ಲಿ ಬೆಲೆಯು 27.35 ಮಿಲಿಯನ್ ವೋನ್ ($20,500) ಆಗಿದ್ದು, ಇದನ್ನು ಭಾರತದ ಕರೆನ್ಸಿಯಲ್ಲಿ ರೂ.17 ಲಕ್ಷವಾಗುತ್ತದೆ.

ಈ ಕಿಯಾ ರೇ ಎಲೆಕ್ಟ್ರಿಕ್ ಕಾರು ಅತ್ಯುತ್ತಮವಾಗಿ ಕಾಣುವ ಎಲೆಕ್ಟ್ರಿಕ್ ಕಾರ್ ಅಲ್ಲವಾದರೂ ಕಾಂಪ್ಯಾಕ್ಟ್ ಅನುಪಾತಗಳು ಮತ್ತು ಆನ್-ಪಾಯಿಂಟ್ ಸ್ಟೈಲಿಂಗ್ ಅನ್ನು ಹೊಂದಿದೆ. ಈ ಹೊಸ ಕಿಯಾ ರೇ ಕಾರು ಆರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ಬದಲಾವಣೆಗಳನ್ನು ಪಡೆಯುತ್ತದೆ ಮತ್ತು ಇಲ್ಲಿ ಮುಖ್ಯಾಂಶಗಳು ನವೀಕರಿಸಿದ ಹೆಡ್ ಲೈಟ್ ವಿನ್ಯಾಸವನ್ನು ಒಳಗೊಂಡಿವೆ. ಈ ಎಲೆಕ್ಟ್ರಿಕ್ ಕಾರು ದಕ್ಷಿಣ ಕೊರಿಯಾದ ಲೈಟ್ ಕಾರ್ ವರ್ಗಕ್ಕೆ ಅರ್ಹತೆ ಪಡೆಯುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

More from DriveSpark

Article Published On: Sunday, October 1, 2023, 9:00 [IST]
English summary
New kia ev5 electric suv top things details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+