ಆಕರ್ಷಕ ಬೆಲೆಯಲ್ಲಿ ಹೊಸ ಮಹೀಂದ್ರಾ ಥಾರ್ RWD ಬಿಡುಗಡೆ

ಮಹೀಂದ್ರಾ ಥಾರ್ ಎಸ್‍ಯುವಿಯು ಬಹಳ ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಆಫ್-ರೋಡರ್ ಮಾದರಿಯಾಗಿದೆ. ಇದೀಗ ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ಎರಡನೇ ತಲೆಮಾರಿನ ಥಾರ್‌ನ ರಿಯರ್-ವೀಲ್ ಡ್ರೈವ್ (RWD) ರೂಪಾಂತರವನ್ನು ಬಿಡುಗಡೆ ಮಾಡಿದೆ, ಇದರ ಪರಿಚಯಾತ್ಮಕ ಬೆಲೆಗಳು ರೂ. 9.99 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ.

ಮೇಲಿನ ಪರಿಚಯಾತ್ಮಕ ಬೆಲೆಯು ಮೊದಲ 10,000 ಬುಕಿಂಗ್‌ಗಳಿಗೆ ಅನ್ವಯಿಸುತ್ತದೆ. ಮಹೀಂದ್ರಾ ಥಾರ್ ಎಸ್‍ಯುವಿಯು 4WD ರೂಪಾಂತರಗಳಂತೆ, ಥಾರ್ RWD ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ. ಮಹೀಂದ್ರಾ ಥಾರ್ RWD ಅನ್ನು ಮೂರು ರೂಪಾಂತರ ಹಂತಗಳಲ್ಲಿ ನೀಡಲಾಗುತ್ತದೆ ಮತ್ತು ಗಟ್ಟಿಯಾದ ರೂಫ್ ನೊಂದಿಗೆ ಮಾತ್ರ ನೀಡಲಾಗುತ್ತದೆ. ಥಾರ್ RWD ಅನ್ನು ಡೀಸೆಲ್ (ಮ್ಯಾನ್ಯುವಲ್ ಗೇರ್‌ಬಾಕ್ಸ್ ಮಾತ್ರ) ಮತ್ತು ಪೆಟ್ರೋಲ್ ಎಂಜಿನ್‌ಗಳೊಂದಿಗೆ (ಆಟೋಮ್ಯಾಟಿಕ್ ಗೇರ್ ಬಾಕ್ಸ್) ನೀಡಲಾಗುತ್ತದೆ.

ಆಕರ್ಷಕ ಬೆಲೆಯಲ್ಲಿ ಹೊಸ ಮಹೀಂದ್ರಾ ಥಾರ್ RWD ಬಿಡುಗಡೆ

ಬೇಸ್ ಥಾರ್ ಆರ್‌ಡಬ್ಲ್ಯೂಡಿ ಎಎಕ್ಸ್ (ಒ) ರೂಪಾಂತರಕ್ಕೆ 9.99 ಲಕ್ಷ ರೂಪಾಯಿಗಳಾಗಿದ್ದು, ಮಹೀಂದ್ರಾ ಥಾರ್ ಆರ್‌ಡಬ್ಲ್ಯೂಡಿ ಎಲ್‌ಎಕ್ಸ್ ರೂಪಾಂತರದ ಬೆಲೆ 10.99 ಲಕ್ಷ ರೂಪಾಯಿಗಳಾಗಿವೆ. ಪೆಟ್ರೋಲ್ ಥಾರ್ ಆರ್‌ಡಬ್ಲ್ಯೂಡಿ ಎಲ್‌ಎಕ್ಸ್ ರೂಪಾಂತರದ ಬೆಲೆ ರೂ 13.49 ಲಕ್ಷಗಳಾಗಿದೆ, ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಹೊಸ ಮಹೀಂದ್ರಾ ಥಾರ್ ಎಸ್‍ಯುವಿಯ ಆರ್‌ಡಬ್ಲ್ಯೂಡಿ ರೂಪಾಂರದ ವಿತರಣೆಯು ಇದೇ ತಿಂಗಳ 14 ರಂದು ಪ್ರಾರಂಭವಾಗುತ್ತದೆ.

ಈ ಹೊಚ್ಚಹೊಸ ಮಹೀಂದ್ರಾ ಥಾರ್ RWD ತನ್ನ 4WD ಒಡಹುಟ್ಟಿದವರಂತೆಯೇ ಅದೇ ಪೆಟ್ರೋಲ್ ಎಂಜಿನ್ ಅನ್ನು 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ ಬರುತ್ತಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಪೆಟ್ರೋಲ್ ಎಂಜಿನ್ ಅನ್ನು 6-ಸೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ನೀಡಲಾಗುತ್ತದೆ. ಈ ಥಾರ್ ಆರ್‌ಡಬ್ಲ್ಯೂಡಿಯ ಡೀಸೆಲ್ ಎಂಜಿನ್ ಮಹೀಂದ್ರಾದಿಂದ ಡಿ117 ಸಿಆರ್‌ಡಿಇ ಎಂದು ಕರೆಯಲಾದ ಹೊಸ ಯುನಿಟ್ ಆಗಿದೆ.

ಈ ಹೊಸ D117 CRDe ಎಂಜಿನ್ 1.5 ಲೀಟರ್ 117 ಬಿಹೆಚ್‍ಪಿ ಪವರ್ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಡೀಸೆಲ್ ಎಂಜಿನ್ ಅನ್ನು ಮ್ಯಾನ್ಯುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ನೀಡಲಾಗುತ್ತದೆ. ಈ ಥಾರ್ RWD ಅನ್ನು ಎರಡು ಹೊಸ ಬಣ್ಣದ ಯೋಜನೆಗಳೊಂದಿಗೆ ನೀಡಲಾಗುತ್ತದೆ. ಇದು ಬ್ಲೇಜಿಂಗ್ ಬ್ರಾಂಜ್ ಮತ್ತು ಎವರೆಸ್ಟ್ ವೈಟ್ ಆಗಿದೆ. ಈ ಥಾರ್ ಅನ್ನು ಹೊಸ ಆಕ್ಸೆಸರಿ ಪ್ಯಾಕ್‌ಗಳೊಂದಿಗೆ ಸಹ ನೀಡಲಾಗುತ್ತದೆ.

ಇವುಗಳು ನಾಲ್ಕು ವಿಭಿನ್ನ ವಿನ್ಯಾಸಗಳಲ್ಲಿ ಬಾಹ್ಯ ಮತ್ತು ಆಂತರಿಕ ಶೈಲಿಯ ಪ್ಯಾಕ್‌ಗಳನ್ನು ಒಳಗೊಂಡಿವೆ. ಬಿಡಿಭಾಗಗಳು ಹೊಸ ಮುಂಭಾಗ ಮತ್ತು ಹಿಂಭಾಗದ ಆರ್ಮ್‌ಸ್ಟ್ರೆಸ್ಟ್‌ಗಳನ್ನು ಒಳಗೊಂಡಿರುತ್ತವೆ. ಜೊತೆಗೆ ಹಿಂಭಾಗದಲ್ಲಿ ಕಪ್ ಹೋಲ್ಡರ್‌ಗಳು ಮತ್ತು USB ಚಾರ್ಜಿಂಗ್ ಪೋರ್ಟ್‌ಗಳನ್ನು ಒಳಗೊಂಡಿರುತ್ತವೆ. ಮಹೀಂದ್ರಾ ಥಾರ್‌ನ 4WD ರೂಪಾಂತರಗಳನ್ನು ಹೊಸ ಬ್ರೇಕ್ ಲಾಕಿಂಗ್ ಡಿಫರೆನ್ಷಿಯಲ್‌ನೊಂದಿಗೆ ನವೀಕರಿಸಿದೆ. ಇದನ್ನು ಬಾಷ್‌ನ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಥಾರ್ 4WD ರೂಪಾಂತರದಲ್ಲಿ LX ಡೀಸೆಲ್ ರೂಪಾಂತರಗಳಿಗೆ ಮೆಕ್ಯಾನಿಕಲ್ ಲಾಕಿಂಗ್ ಡಿಫರೆನ್ಷಿಯಲ್ ಇನ್ನೂ ಒಂದು ಆಯ್ಕೆಯಾಗಿ ಲಭ್ಯವಿರುತ್ತದೆ.

ಹೊಚ್ಚಹೊಸ ಮಹೀಂದ್ರಾ ಥಾರ್ RWD ಬಿಡುಗಡೆಯ ಕುರಿತು ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್‌ನ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವೀಜಯ್ ನಕ್ರಾ ಅವರು ಮಾತನಾಡಿ, ಮಹೀಂದ್ರಾ ಥಾರ್ ಕೇವಲ ಸಾಮರ್ಥ್ಯದ ಎಸ್‌ಯುವಿ ಅಲ್ಲ, ಇದು ಒಂದು ಭಾವನೆಯಾಗಿದೆ. 2020 ರಿಂದ, ಎಲ್ಲಾ ಹೊಸ ಥಾರ್ ಎಸ್‌ಯುವಿಯ ಕಲ್ಪನೆಯನ್ನು ಸೆರೆಹಿಡಿದಿದೆ. 80,000 ಕ್ಕೂ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಪ್ರೇಮಿಗಳು ಪ್ರತಿದಿನ ಅಸಾಧ್ಯವಾದುದನ್ನು ಅನ್ವೇಷಿಸುತ್ತಿದ್ದಾರೆ. ನಮ್ಮ ಕೊಡುಗೆಯನ್ನು ಇನ್ನಷ್ಟು ಉತ್ತಮಗೊಳಿಸಲು, ನಾವು ನಮ್ಮ ಗ್ರಾಹಕರನ್ನು ಆಲಿಸಿದ್ದೇವೆ.

ಪ್ರಮುಖ ವರ್ಧನೆಗಳೊಂದಿಗೆ ಮಹೀಂದ್ರಾ ಥಾರ್‌ನ ಹೊಸ ಶ್ರೇಣಿಯನ್ನು ವಿನ್ಯಾಸಗೊಳಿಸಿದ್ದೇವೆ. ಹೊಸ RWD ರೂಪಾಂತರಗಳನ್ನು ನೀಡುವ ಮೂಲಕ, ನಾವು ಅದನ್ನು ಹೆಚ್ಚು ಆಕರ್ಷಿಸುವಂತೆ ಮಾಡಿದ್ದೇವೆ 'ಥಾರ್ ಲೈಫ್' ಅನ್ನು ಬದುಕಲು ಬಯಸುವವರು, 4WD ರೂಪಾಂತರದಲ್ಲಿ ನಮ್ಮ ಸೇರ್ಪಡೆಗಳನ್ನು ನಿಜವಾದ ಆಫ್-ರೋಡರ್‌ಗಳನ್ನು ಮೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಥಾರ್‌ನ ಹೊಸ ಶ್ರೇಣಿಯು ಅಸಾಧ್ಯವಾದುದನ್ನು ಅನ್ವೇಷಿಸಲು ಮತ್ತು ಹೊಸದನ್ನು ಸೇರಿಸಲು ಮತ್ತಷ್ಟು ರೋಮಾಂಚನವನ್ನು ಉಂಟುಮಾಡುತ್ತದೆ ಎಂದು ನಾವು ನಂಬುತ್ತೇವೆ ಎಂದು ಹೇಳಿದರು.

Most Read Articles

Kannada
English summary
New mahindra thar rwd launched specs features variants details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X