ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ

ಭವಿಷ್ಯವು ಎಲೆಕ್ಟ್ರಿಕ್ ವಾಹನಗಳಿಂದ ತುಂಬಿಹೋಗಲಿದೆ ಎಂಬುದು ಮನಗಂಡಿರುವ ಆಟೋ ವಲಯದ ಪ್ರಮುಖ ಕಂಪನಿಗಳು ತಮ್ಮ ಹೊಸ ಉತ್ಪನ್ನಗಳಲ್ಲಿ ಬಹುತೇಕ ಇವಿಗಳನ್ನೇ ತರುತ್ತಿವೆ. ಮಹೀಂದ್ರಾ ಕೂಡ ಭಾರತದಲ್ಲಿ ತನ್ನ ಪ್ರಮುಖ ಕಾರುಗಳ ಉತ್ತಮ ಮಾರಾಟವನ್ನು ಹೊಂದಿದ್ದರೂ ಎಲೆಕ್ಟ್ರಿಕ್ ಕಾರುಗಳತ್ತ ಹೆಚ್ಚು ಗಮನಹರಿಸುತ್ತಿದೆ. ಮುಂದಿನ ದಿನಗಳಲ್ಲಿ ತನ್ನಿಂದ ಹೆಚ್ಚಿನ ಇವಿಗಳು ಬರಲಿವೆ ಎಂದು ಇದೀಗ ಹಿಂಟ್ ನೀಡಿದೆ.

ಕಳೆದ ತಿಂಗಳು XUV400 EV ಅನ್ನು ಬಿಡುಗಡೆ ಮಾಡಿದ ನಂತರ, ಮಹೀಂದ್ರಾ ಈಗ ಮೊದಲ ಬಾರಿಗೆ ಭಾರತದಲ್ಲಿ ತನ್ನ ಭವಿಷ್ಯದ ಎಲೆಕ್ಟ್ರಿಕ್ SUV ಗಳ ಶ್ರೇಣಿಯನ್ನು ಪ್ರದರ್ಶಿಸಲು ಸಿದ್ಧವಾಗುತ್ತಿದೆ. ಯುಕೆಯಲ್ಲಿ MADE HQ (ಮಹೀಂದ್ರಾ ಅಡ್ವಾನ್ಸ್ಡ್ ಡಿಸೈನ್ ಯುರೋಪ್) ಮೊದಲು ಅನಾವರಣಗೊಂಡದ್ದು, BE (ಬಾರ್ನ್ ಎಲೆಕ್ಟ್ರಿಕ್) ಸರಣಿಗಳು ಈಗ ಭಾರತಕ್ಕೆ ಬರಲು ಸಜ್ಜಾಗಿವೆ. ಈ ಕುರಿತು ಮಹೀಂದ್ರಾ ಇಂಡಿಯಾ ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಅಧಿಕೃತ ಟೀಸರ್ ಹಂಚಿಕೊಂಡಿದೆ.

ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ

ಫೆಬ್ರವರಿ 10, 2023 ರಂದು ಹೈದರಾಬಾದ್‌ನಲ್ಲಿ ನಡೆಯುವ ಮಹೀಂದ್ರಾ EV ಫ್ಯಾಶನ್ ಫೆಸ್ಟಿವಲ್‌ನಲ್ಲಿ BE ಶ್ರೇಣಿಯ ಎಲೆಕ್ಟ್ರಿಕ್ SUV ಗಳನ್ನು ಪ್ರದರ್ಶಿಸಲಾಗುತ್ತದೆ. ಮಹೀಂದ್ರಾದ BE ಶ್ರೇಣಿಯು XUV.e ಶ್ರೇಣಿಯ ಎಲೆಕ್ಟ್ರಿಕ್ SUVಗಳಿಗೆ ಹೆಚ್ಚು ವ್ಯತ್ಯಾಸ ಇರುವುದಿಲ್ಲ. ಎರಡೂ INGLO ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುತ್ತವೆ. INGLO ಎಂದರೆ ಹೃದಯದಿಂದ IN-dian ಮತ್ತು ಗುಣಮಟ್ಟದಿಂದ GLO-bal ಎಂದರ್ಥ. ಈ ಪ್ಲಾಟ್‌ಫಾರ್ಮ್ ಫೋಕ್ಸ್‌ವ್ಯಾಗನ್‌ನ MEB ಪ್ಲಾಟ್‌ಫಾರ್ಮ್‌ ಅನ್ನು ಆದರಿಸಿದ್ದು, ಇದನ್ನು ಕೆಲವು ಫೋರ್ಡ್ ವಾಹನಗಳಲ್ಲಿಯೂ ಬಳಸಲಾಗುತ್ತಿದೆ.

MEB ಎಂದರೆ ಮಾಡ್ಯುಲರ್ ಇ-ಆಂಟ್ರೀಬ್ಸ್-ಬೌಕಾಸ್ಟೆನ್ ಎಂದರ್ಥ. ಇದು ಮಾಡ್ಯುಲರ್ ಮತ್ತು ಸ್ಕೇಲೆಬಲ್ EV ಪ್ಲಾಟ್‌ಫಾರ್ಮ್ ಆಗಿದೆ, ಇದನ್ನು ಪರವಾನಗಿ ಅಡಿಯಲ್ಲಿ ಸಂಗ್ರಹಿಸಲು OEM ಗಳಿಗೆ ಹೊರಗುತ್ತಿಗೆ ನೀಡಲಾಗಿದೆ. ಈ ಪ್ಲಾಟ್‌ಫಾರ್ಮ್ ಪ್ರಸ್ತುತ ಆಡಿಯ Q4 ಇ-ಟ್ರಾನ್, Q4 ಸ್ಪೋರ್ಟ್‌ಬ್ಯಾಕ್ ಇ-ಟ್ರಾನ್ ಮತ್ತು Q5 ಇ-ಟ್ರಾನ್‌ನಲ್ಲಿ ಕಂಡುಬರುತ್ತದೆ. ಹಾಗೆಯೇ ಕುಪ್ರಾಸ್ ಬರ್ನ್, ಮುಂಬರುವ ಅರ್ಬನ್ ರೆಬೆಲ್ ಮತ್ತು ತವಸ್ಕಾನ್, ಸ್ಕೋಡಾದ ಎನ್ಯಾಕ್ ಐವಿ ಮತ್ತು ಎನ್ಯಾಕ್ ಕೂಪೆ ಐವಿ ಹಾಗೂ ಯುರೋಪ್‌ಗಾಗಿ ಫೋರ್ಡ್‌ನ ಎರಡು ಮುಂಬರುವ EVಗಳಲ್ಲೂ ಬಳಸಲಾಗಿದೆ.

ಜೊತೆಗ ವೋಕ್ಸ್‌ವ್ಯಾಗನ್‌ನ ID.3, ID.4, ID.5, ID.6, ID. Buzz, ಮತ್ತು ID. Buzz ಕಾರ್ಗೋ ನಲ್ಲೂ ಬಳಸಲಾಗಿದ್ದು, ಇದೀಗ ಮಹೀಂದ್ರಾ XUV.e8 (XUV700 ಎಲೆಕ್ಟ್ರಿಕ್), XUV.e9, BE.05, BE.07, ಮತ್ತು BE.09 ನಲ್ಲೂ ಬಳಸಲಿದೆ. ಸದ್ಯ ಮಹೀಂದ್ರಾ VW ನಿಂದ ಎಲೆಕ್ಟ್ರಿಕ್ ಡ್ರೈವ್‌ಗಳು, ಬ್ಯಾಟರಿ ವ್ಯವಸ್ಥೆಗಳು ಮತ್ತು ಏಕೀಕೃತ ಸೆಲ್‌ಗಳನ್ನು ಸಂಗ್ರಹಿಸುತ್ತಿದೆ. ಎಲೆಕ್ಟ್ರಿಕ್ ಡ್ರೈವ್‌ನ ಭಾಗವು VW ಸ್ವಾಮ್ಯದ APP310 PMDC ಮೋಟಾರ್ ಆಗಿದ್ದು, ಇದು MEB ಪ್ಲಾಟ್‌ಫಾರ್ಮ್ ಅನ್ನು ಸಪೋರ್ಟ್ ಮಾಡುತ್ತದೆ.

BEV ಲೈನ್ಅಪ್
BE ಅನ್ನು ಬಾರ್ನ್ ಎಲೆಕ್ಟ್ರಿಕ್ ಎಂದು ಕರೆಯಲಾಗುತ್ತದೆ. ಇದು ಇತರ ICE-ಆಧಾರಿತ ವಾಹನಗಳೊಂದಿಗೆ ತನ್ನ ಬಾಡಿಯನ್ನು ಹಂಚಿಕೊಳ್ಳುವುದಿಲ್ಲ. ಕಂಪನಿಯು ಈ ವೇದಿಕೆಯು ಜಾಗತಿಕ ಕಾರುಗಳಲ್ಲಿಯೂ ಕಂಡುಬರುತ್ತದೆ ಎಂದು ಹೇಳಿದೆ. ಇದರ ಬ್ಯಾಟರಿಯು 60 kWh ನಿಂದ 80 kWh ಸಾಮರ್ಥ್ಯದ ನಡುವೆ ಇರುತ್ತದೆ. RWD ಸೆಟಪ್ 170 kW (228 bhp) ಮತ್ತು AWD ಸೆಟಪ್ 250 kW (335 bhp) ಅನ್ನು ಹೊಂದಿರುತ್ತದೆ. ಈ ಪ್ಲಾಟ್ಫಾರ್ಮ್ ಅನ್ನು ಪರೀಕ್ಷಿಸಿದ್ದು, ಸುಮಾರು 675 ಕಿ.ಮೀ ಮತ್ತು WLTP ಸೈಕಲ್‌ನಲ್ಲಿ 430 ಕಿ.ಮೀ ರೇಂಜ್ ನೀಡಿರುವುದಾಗಿ ಯುಕೆ ವರದಿಗಳು ತಿಳಿಸಿವೆ.

ಮಾದರಿ ಶ್ರೇಣಿಯ ಬಗ್ಗೆ ಮಾತನಾಡುವುದಾದರೆ, ಮಹೀಂದ್ರಾದ ಎಲೆಕ್ಟ್ರಿಕ್ SUV ಗಳು BE ಮತ್ತು XUV.e ಎಂಬ ಎರಡು ಶ್ರೇಣಿಗಳಲ್ಲಿ ಬರುತ್ತವೆ. BE ತಂಡವು BE.05, BE.07 ಮತ್ತು BE.09 ಅನ್ನು ಒಳಗೊಂಡಿರುತ್ತವೆ. XUV.e ತಂಡವು XUV.e8 ಮತ್ತು XUV.e9 ಅನ್ನು ಒಳಗೊಂಡಿದೆ. ಇದೇ ಮೊದಲ ಬಾರಿಗೆ ಈ ಎಲೆಕ್ಟ್ರಿಕ್ ಎಸ್‌ಯುವಿಗಳು ಭಾರತಕ್ಕೆ ಕಾಲಿಡಲಿವೆ. ಫೆಬ್ರವರಿ 10 ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಮಹೀಂದ್ರಾ ಇವಿ ಫ್ಯಾಶನ್ ಫೆಸ್ಟಿವಲ್‌ನಲ್ಲಿ ಹೊಸ XUV.e8 ಅನ್ನು ಮೊದಲು ಪ್ರಾರಂಭಿಸಲಿದೆ, ಇದು XUV700 ಎಲೆಕ್ಟ್ರಿಕ್ ಆವೃತ್ತಿಯಾಗಿದ್ದು, 2024 ರಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
New mahindra xuv 700 ev teaser released
Story first published: Friday, February 3, 2023, 13:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X