Just In
Don't Miss!
- News
Bengaluru Sub Urban Rail: ನೇಮಕವಾಗದ ಕೆ-ರೈಡ್ ಅಧಿಕಾರಿ, ಯೋಜನೆ ವಿಳಂಬ ಆಗಲಿದೆಯೇ?
- Sports
ICC Men's ODI Cricketer Of 2022: ಸತತ 2ನೇ ಬಾರಿ ಐಸಿಸಿ ಪ್ರಶಸ್ತಿ ಗೆದ್ದ ಬಾಬರ್ ಅಜಂ
- Finance
ಅಕ್ಕಿ, ಗೋಧಿ, ಹಿಟ್ಟು ಬೆಲೆ ಏರಿಕೆ: ಎಚ್ಚರಿಕೆಯ ಕರೆಗಂಟೆಯೇ?
- Movies
Kranti Collection: ಮೊದಲ ದಿನ 'ಕ್ರಾಂತಿ' ಗಳಿಕೆ ಎಷ್ಟು? ಟ್ರೇಡ್ ಎಕ್ಸ್ಪರ್ಟ್ಗಳ ಲೆಕ್ಕಾಚಾರವೇನು?
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Lifestyle
ಬೀಟ್ರೂಟ್ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟಾಟಾ ನೆಕ್ಸಾನ್ ಪ್ರತಿಸ್ಪರ್ಧಿಯಾದ ಹೊಸ ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್‍ಯುವಿ ಬಿಡುಗಡೆ
ಜನಪ್ರಿಯ ಮತ್ತು ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಹೊಸ XUV400 ಎಲೆಕ್ಟ್ರಿಕ್ ಎಸ್‍ಯುವಿಯನ್ನು ಕೊನೆಗೂ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್‍ಯುವಿ ಪರಿಚಯಾತ್ಮಕ ಬೆಲೆ ಎಕ್ಸ್ ಶೋರೂಂ ಪ್ರಕಾರ ರೂ,15.99 ಲಕ್ಷವಾಗಿದೆ.
ಈ ಹೊಸ ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಜನವರಿ 26 ರಿಂದ ಪ್ರಾರಂಭವಾಗುತ್ತವೆ, ಇನ್ನು ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್‍ಯುವಿಯ ವಿತರಣೆಯು ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. ಹೊಸ ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್‍ಯುವಿಯು EC ಮತ್ತು EL ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. EC ರೂಪಾಂತರವು ಎರಡು ಚಾರ್ಜರ್‌ಗಳೊಂದಿಗೆ ಬರುತ್ತದೆ, ಇದು 3.3kW ಮತ್ತು 7.2kW. 3.3kW ಚಾರ್ಜಿಂಗ್ ಆಗಿದೆ. ಈ EC ರೂಪಾಂತರದ ಬೆಲೆಯು ರೂ.15.99 ಲಕ್ಷವಾಗಿದೆ. ಇನ್ನು 7.2kW ಚಾರ್ಜರ್‌ನೊಂದಿಗೆ EC ರೂಪಾಂತರದ ಬೆಲೆಯು ರೂ.16.49 ಲಕ್ಷವಾಗಿದೆ.
ಇನ್ನು ಟಾಪ್-ಸ್ಪೆಕ್ EL ರೂಪಾಂತರದ ಬೆಲೆಯು ರೂ.18.99 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್‍ಯುವಿ ಮಾದರಿಯು ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಎಸ್‍ಯುವಿಗೆ ಪೈಪೋಟಿ ನೀಡುತ್ತದೆ. ಚಿಕ್ಕ ಬ್ಯಾಟರಿ ಹೊಂದಿರುವ XUV400 ಬೆಲೆ ರೂ 15.99 ಲಕ್ಷ, ಆದರೆ ದೊಡ್ಡ ಬ್ಯಾಟರಿ ರೂಪಾಂತರದ ಬೆಲೆ ರೂ 18.99 ಲಕ್ಷ. ಎರಡೂ ಮಾದರಿಗಳು ಒಂದೇ ರೀತಿಯ ಬೆಲೆಯನ್ನು ಹೊಂದಿವೆ. ಈ ಮಹೀಂದ್ರಾ XUV400 ಉದ್ದವಾಗಿದೆ ಮತ್ತು Nexon EV ಗಿಂತ ದೊಡ್ಡ ಆಯಾಮಗಳನ್ನು ಹೊಂದಿದೆ.
ಈ ಹೊಸ ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್‍ಯುವಿಯು ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ಲಭ್ಯವಿದೆ. EC ರೂಪಾಂತರದೊಂದಿಗೆ 34.5kWh ಮತ್ತು EL ರೂಪಾಂತರದೊಂದಿಗೆ 39.4kWh ಬ್ಯಾಟರಿ ಪ್ಯಾಕ್. ಬ್ಯಾಟರಿಗಳು ಮುಂಭಾಗದ ಆಕ್ಸಲ್-ಮೌಂಟೆಡ್ ಎಲೆಕ್ಟ್ರಿಕ್ ಮೋಟರ್ ಅನ್ನು 150 ಬಿಹೆಚ್‍ಪಿ ಪವರ್ ಮತ್ತು 310 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಹೊಸ ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್‍ಯುವಿಯು 150 ಕಿ,ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.
ಇನ್ನು ಮೊದಲು ಕೇವಲ 8.3 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಹೊಸ ಮಹೀಂದ್ರಾ XUV400 ಎಲೆಕ್ಟ್ರಿಕ್ ಮೂರು ಡ್ರೈವಿಂಗ್ ಮೋಡ್‌ಗಳನ್ನು ನೀಡುತ್ತದೆ. ಇದು ಫನ್, ಫಾಸ್ಟ್ ಮತ್ತು ಫಿಯರ್‌ಲೆಸ್ ಆಗಿದೆ. ಈ ಡ್ರೈವಿಂಗ್ ಮೋಡ್‌ಗಳು ಸ್ಟೀರಿಂಗ್ ಮತ್ತು ಥ್ರೊಟಲ್ ಪ್ರತಿಕ್ರಿಯೆಯನ್ನು ಸರಿಹೊಂದಿಸುತ್ತವೆ ಮತ್ತು ಪುನರುತ್ಪಾದಕ ಬ್ರೇಕಿಂಗ್ ಮಟ್ಟವನ್ನು ಸಹ ಬದಲಾಯಿಸುತ್ತವೆ. ಇನ್ನು 34.5kWh ಬ್ಯಾಟರಿ ಪ್ಯಾಕ್ 375 ಕಿ.ಮೀ ರೇಂಜ್ ಅನ್ನು ನೀಡುತ್ತದೆ ಎಂದು ಹೇಳಲಾಗಿದೆ.
ಇನ್ನು 39.4kWh ಬ್ಯಾಟರಿ ಸಿಂಗಲ್ ಚಾರ್ಜರ್‌ನಲ್ಲಿ 456 km ರೇಂಜ್ ಅನ್ನು ನೀಡುತ್ತದೆ. 50kWh DC ಫಾಸ್ಟ್ ಚಾರ್ಜರ್ ಅನ್ನು ಬಳಸಿಕೊಂಡು, ಬ್ಯಾಟರಿಯನ್ನು 50 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಶೂನ್ಯದಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು. ಕ್ರಮವಾಗಿ 6 ಗಂಟೆ 30 ನಿಮಿಷಗಳು ಮತ್ತು 13 ಗಂಟೆಗಳಲ್ಲಿ 7.2kW ಅಥವಾ 3.3kW AC ಚಾರ್ಜರ್ ಬಳಸಿ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ.
ಆಯಾಮಗಳ ವಿಷಯದಲ್ಲಿ, ಹೊಸ ಮಹೀಂದ್ರಾ XUV400 ಎಲೆಕ್ಟ್ರಿಕ್ ಎಸ್‍ಯುವಿ 4,200 mm ಉದ್ದ, 1821 mm ಅಗಲ ಮತ್ತು 2600 mm ಎತ್ತರವನ್ನು ಹೊಂದಿದೆ. ಇನ್ನು ಇದರೊಂದಿಗೆ 2600 mm ವ್ಹೀಲ್‌ಬೇಸ್ ಅನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯು 418-ಲೀಟರ್‌ಗಳವರೆಗೆ ವಿಸ್ತರಿಸಬಹುದು. ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ಎರಡನೇ ತಲೆಮಾರಿನ ಥಾರ್‌ನ ರಿಯರ್-ವೀಲ್ ಡ್ರೈವ್ (RWD) ರೂಪಾಂತರವನ್ನು ಇತ್ತೀಚೆಗೆ ಬಿಡುಗಡೆ ಮಾಡಿತು. ಇದರ ಪರಿಚಯಾತ್ಮಕ ಬೆಲೆಗಳು ರೂ. 9.99 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ.
ಈ ಮೇಲಿನ ಪರಿಚಯಾತ್ಮಕ ಬೆಲೆಯು ಮೊದಲ 10,000 ಬುಕಿಂಗ್‌ಗಳಿಗೆ ಅನ್ವಯಿಸುತ್ತದೆ. ಮಹೀಂದ್ರಾ ಥಾರ್ ಎಸ್‍ಯುವಿಯು 4WD ರೂಪಾಂತರಗಳಂತೆ, ಥಾರ್ RWD ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ. ಮಹೀಂದ್ರಾ ಥಾರ್ RWD ಅನ್ನು ಮೂರು ರೂಪಾಂತರ ಹಂತಗಳಲ್ಲಿ ನೀಡಲಾಗುತ್ತದೆ ಮತ್ತು ಗಟ್ಟಿಯಾದ ರೂಫ್ ನೊಂದಿಗೆ ಮಾತ್ರ ನೀಡಲಾಗುತ್ತದೆ. ಥಾರ್ RWD ಅನ್ನು ಡೀಸೆಲ್ (ಮ್ಯಾನ್ಯುವಲ್ ಗೇರ್‌ಬಾಕ್ಸ್ ಮಾತ್ರ) ಮತ್ತು ಪೆಟ್ರೋಲ್ ಎಂಜಿನ್‌ಗಳೊಂದಿಗೆ (ಆಟೋಮ್ಯಾಟಿಕ್ ಗೇರ್ ಬಾಕ್ಸ್) ನೀಡಲಾಗುತ್ತದೆ.