ಕೈಗೆಟುಕುವ ಬೆಲೆಯ ಟಾಟಾ ಪಂಚ್ ಸಿಎನ್‌ಜಿ ಕಾರಿನ ವಿಶೇಷತೆಗಳು
ಜನಪ್ರಿಯ ಮತ್ತು ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಬಹುಬೇಡಿಕೆಯ ಪಂಚ್ ಕಾರಿನ ಸಿಎನ್‌ಜಿ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟಾಟಾ ಪಂಚ್ ಸಿಎನ್‌ಜಿ (Tata Punch CNG) ಕಾರಿನ ಪ್ರಾರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.10 ಲಕ್ಷವಾಗಿದೆ.
ಬೆಲೆ ಮತ್ತು ರೂಪಾಂತರಗಳು: ಟಾಟಾ ಕಂಪನಿಯು ಸಿಎನ್‌ಜಿ ಕಾರುಗಳಲ್ಲಿ, ಟಿಯಾಗೋ, ಟಿಗೋರ್ ಮತ್ತು ಆಲ್ಟ್ರೋಕ್ ನಂತರ ಪಂಚ್ ನಾಲ್ಕನೇ ಮಾದರಿಯಾಗಿದೆ. ಈ ಟಾಟಾ ಪಂಚ್ ಸಿಎನ್‌ಜಿ ಕಾರುಪ್ಯೂರ್, ಅಡ್ವೆಂಚರ್, ಅಡ್ವೆಂಚರ್ ರಿದಮ್, ಅಕಾಂಪ್ಲಿಶ್ಡ್, ಮತ್ತು ಅಕಾಂಪ್ಲಿಶ್ಡ್ ಡ್ಯಾಝಲ್ ಎಸ್ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದೆ. ಈ ಟಾಟಾ ಪಂಚ್ ಸಿಎನ್‌ಜಿ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.10 ಲಕ್ಷದಿಂದ ರೂ.9.68 ಲಕ್ಷವಾಗಿದೆ.

ಎಂಜಿನ್: ಟಾಟಾ ಪಂಚ್ ಸಿಎನ್‌ಜಿಯು ಟಾಟಾದ ಡ್ಯುಯಲ್-ಸಿಲಿಂಡರ್ ಸೆಟಪ್ ಅನ್ನು ಬಳಸಿಕೊಂಡು 1.2 ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಸಾಮಾನ್ಯ್ತ ಎಂಜಿನ್ 86 bhp ಪವರ್ ಮತ್ತು 113 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಸಿಎನ್‌ಜಿ ಯುನಿಟ್ 73.4 bhp ಮತ್ತು 103 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಗೇರ್ ಬಾಕ್ಸ್: ಸ್ಟ್ಯಾಂಡರ್ಡ್ ಪೆಟ್ರೋಲ್ ಮಾದರಿಗಿಂತ ಭಿನ್ನವಾಗಿ, ಹೊಸದಾಗಿ ಬಿಡುಗಡೆಯಾದ ಟಾಟಾ ಪಂಚ್ ಸಿಎನ್‌ಜಿ ಮಾದರಿಯಲ್ಲಿ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ (AMT) ನೊಂದಿಗೆ ಬರುವುದಿಲ್ಲ.ಟಾಟಾ ಪಂಚ್ ಸಿಎನ್‌ಜಿ ಕಾರಿನಲ್ಲಿ ಪ್ರತ್ಯೇಕವಾಗಿ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. ಸಿಎನ್‌ಜಿ ಕೇವಲ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಮಾತ್ರ ಲಭ್ಯ.
ಫೀಚರ್ಸ್: ಟಾಪ್-ಸ್ಪೆಕ್ ಟ್ರಿಮ್‌ನಲ್ಲಿ, ಪಂಚ್ ಸಿಎನ್‌ಜಿ 7.0-ಇಂಚಿನ ಟಚ್‌ಸ್ಕ್ರೀನ್ ಮತ್ತು ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇಯನ್ನು ಹೊಂದಿದ್ದು, ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಕನೆಕ್ಟಿವಿಟಿಯನ್ನು ಹೊಂದಿದೆ. ಈ ಹೊಸ ಕಾರಿನಲ್ಲಿ 16-ಇಂಚಿನ ಅಲಾಯ್ ವ್ಹೀಲ್ ಗಳು, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಮತ್ತು ಮುಂತಾದ ಫೀಚರ್ಸ್ ಗಳನ್ನು ಹೊಂದಿವೆ. ಇ
ನ್ನು ಈ ಕಾರಿನಲ್ಲಿ ಆಟೋಮ್ಯಾಟಿಕ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎತ್ತರ-ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ಸನ್‌ರೂಫ್ ಸಹ ಹೊಂದಿದೆ. ಇದತಲ್ಲಿ ಸನ್‌ರೂಫ್ ಸಿಎನ್‌ಜಿ ಮಾದರಿಯಲ್ಲಿ ಮಾತ್ರ ಲಭ್ಯ. ಪೆಟ್ರೋಲ್ ಮಾದರಿಯಲ್ಲಿ ಇಲ್ಲ. ಉಳಿದಂತ ಫೀಚರ್ಸ್ ಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಸನ್‌ರೂಫ್ ಅನ್ನು ಇಷ್ಟ ಪಡುವರಿಗೆ ಈ ಟಾಟಾ ಪಂಚ್ ಸಿಎನ್‌ಜಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಟಾಟಾ ಪಂಚ್ ಸಿಎನ್‌ಜಿ ಟ್ವಿನ್ ಸಿಎನ್‌ಜಿ ಸಿಲಿಂಡರ್‌ಗಳಿಂದ ಚಾಲಿತವಾಗಿದೆ. ಪ್ರತಿಯೊಂದೂ 30-ಲೀಟರ್ ಸಾಮರ್ಥ್ಯದೊಂದಿಗೆ, ಬೂಟ್ ಫ್ಲೋರ್‌ನ ಅಡಿಯಲ್ಲಿ ಅಂದವಾಗಿ ಇರಿಸಲಾಗುತ್ತದೆ, ಬೂಟ್ ಸ್ಪೇಸ್‌ನಲ್ಲಿ ಕನಿಷ್ಠ ಪರಿಣಾಮವನ್ನು ಖಾತ್ರಿಗೊಳಿಸುತ್ತದೆ. ಈ ಸಿಎನ್‌ಜಿ ಕಾರಿನ ಟೈಲ್‌ಗೇಟ್‌ನಲ್ಲಿರುವ 'i-CNG' ಬ್ಯಾಡ್ಜ್ ಮಾತ್ರ ಗಮನಾರ್ಹ ವ್ಯತ್ಯಾಸವಾಗಿದೆ. ಒಳಗೆ, ಒಳಾಂಗಣ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳಿಲ್ಲ.
ಸುರಕ್ಷತೆ: ಈ ಜನಪ್ರಿಯ ಟಾಟಾ ಪಂಚ್ ಎಸ್‌ಯುವಿ ಅತ್ಯುತ್ತಮವಾಗಿದ್ದು, ಗ್ಲೋಬಲ್ NCAPಯಿಂದ ಒಳ್ಳೆಯ ರೇಟಿಂಗ್ ಪಡೆಯಲು ಯಶಸ್ವಿಯಾಗಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ ಒಟ್ಟು 17ಕ್ಕೆ 16.45 ಅಂಕಗಳನ್ನು ಪಡೆಯುವ ಮೂಲಕ 5 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಆದರೆ, ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 40.89 ಅಂಕಗಳನ್ನು ಗಳಿಸುವ ಮೂಲಕ ಗ್ಲೋಬಲ್ NCAPಯಿಂದ 4 ಸ್ಟಾರ್ ರೇಟಿಂಗ್ ಗಳಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.


Click it and Unblock the Notifications