Tata Safari: ಹೊಚ್ಚ ಹೊಸ ಟಾಟಾ ಸಫಾರಿ ಮೈಲೇಜ್ ಬಹಿರಂಗ!

ದೇಶದ ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ (Tata Motors) ಜನಪ್ರಿಯತೆ ಗಳಿಸಿದೆ. ಮತ್ತಷ್ಟು ಹೊಸ ಗ್ರಾಹಕರನ್ನು ಸೆಳೆಯಲು ನವೀಕರಿಸಿದ (facelifts) ಹ್ಯಾರಿಯರ್ (Harrier) ಮತ್ತು ಸಫಾರಿ (Safari) ಎಸ್‌ಯುವಿಗಳನ್ನು ಅನಾವರಣಗೊಳಿಸಿ, ಬುಕ್ಕಿಂಗ್ ಕೂಡ ಆರಂಭಿಸಿದೆ. ಆಸಕ್ತರು, ರೂ.25,000 ಮುಂಗಡ ಹಣ ಪಾವತಿಸಿ ಆರ್ಡರ್ ಮಾಡಬಹುದು.

ಕೆಲವೇ ದಿನಗಳಲ್ಲಿ ಇವೆರೆಡು ಎಸ್‌ಯುವಿಗಳ ಬೆಲೆ ಘೋಷಣೆಯಾಗಲಿದ್ದು, ದಸರಾ ಹಬ್ಬದ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದೀಗ, ಫೇಸ್‌ಲಿಫ್ಟ್‌ ಸಫಾರಿ ಮೈಲೇಜ್ ಬಗ್ಗೆ ವಿವರಗಳು ಬಹಿರಂಗವಾಗಿದ್ದು, ಹಿಂದಿನ ಮಾದರಿಗೆ ಕೊಂಚ ಉತ್ತಮವಾಗಿಯೇ ಇಂಧನ ದಕ್ಷತೆಯನ್ನು ಹೊಂದಿದೆ. ಅದಕ್ಕೂ ಮೊದಲು ಈ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತು ಮಾತನಾಡೋಣ.

Tata Safari: ಹೊಚ್ಚ ಹೊಸ ಟಾಟಾ ಸಫಾರಿ ಮೈಲೇಜ್ ಬಹಿರಂಗ!

ಈ ಟಾಟಾ ಸಫಾರಿ ಎಸ್‌ಯುವಿ, ಹಿಂದಿನ ಮಾದರಿಯಂತೆ 2.0-ಲೀಟರ್, 4-ಸಿಲಿಂಡರ್, ಕ್ರಿಯೋಟೆಕ್ ಡೀಸೆಲ್ ಎಂಜಿನ್‌ ಹೊಂದಿರಲಿದ್ದು, 168 bhp ಗರಿಷ್ಠ ಪವರ್ ಮತ್ತು 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿರಲಿದೆ. ಜೊತೆಗೆ 6 ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಗ್ರಾಹಕರಿಗೆ ದೊರೆಯಲಿದ್ದು, ಫ್ರಂಟ್ ವೀಲ್ ಗೆ ಪವರ್ ವರ್ಗಾಯಿಸಲಿದೆ.

ಮೈಲೇಜ್ ವಿಷಯವಾಗಿ ಹೇಳುವುದಾದರೆ, ನವೀಕರಣ ರೂಪದಲ್ಲಿ ಬರುತ್ತಿರುವ ಸಫಾರಿಯ ಮ್ಯಾನುವಲ್ (MT) ರೂಪಾಂತರ 16.30 kmpl ಹಾಗೂ ಆಟೋಮೆಟಿಕ್ (AT) ರೂಪಾಂತರ 14.50 kmpl ಮೈಲೇಜ್ ನೀಡಲಿದೆ. ಹಿಂದಿನ ಮಾದರಿಗೆ ಹೋಲಿಸಿದರೆ, ಇದು ಕೊಂಚ ಅಧಿಕವಾಗಿದೆ. ಹಳೆಯ ಸಫಾರಿ, ರೂಪಾಂತರಕ್ಕೆ ಅನುಗುಣವಾಗಿ 16.14 kmpl ರಿಂದ 14.08kmpl ಇಂಧನ ದಕ್ಷತೆ ಹೊಂದಿತ್ತು.

ನೂತನ ಟಾಟಾ ಸಫಾರಿ, 7 ಆಕರ್ಷಕ ಬಣ್ಣಗಳು ಹಾಗೂ 10 ವಿವಿಧ ರೂಪಾಂತರಗಳ ಆಯ್ಕೆಯಲ್ಲಿ ಖರೀದಿದಾರರಿಗೆ ಸಿಗುವ ಸಾಧ್ಯತೆಯಿದೆ. ಕಂಪನಿಯು ಈವರೆಗೂ ಈ ಕಾರಿನ ಬೆಲೆಯನ್ನು ಬಹಿರಂಗಪಡಿಸಿಲ್ಲ. ಆದರೂ, ರೂ.16.00 ಲಕ್ಷದಿಂದ ರೂ.25.00 ಲಕ್ಷ ದರಕ್ಕೆ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಕೆಲವೇ ದಿನಗಳಲ್ಲಿ ಇದಕ್ಕೆ ಅಧಿಕೃತವಾಗಿ ಉತ್ತರ ಸಿಗಲಿದೆ.

ನವೀಕರಿಸಿದ ಟಾಟಾ ಸಫಾರಿ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದಿರಲಿದ್ದು, ಈಗಿನ ಯುವ ಗ್ರಾಹಕರನ್ನು ತನ್ನತ್ತ ಆಕರ್ಷಿಸಲಿದೆ. ಪ್ರಮುಖವಾಗಿ, ಸ್ಪ್ಲಿಟ್ ಹೆಡ್‌ಲೈಟ್ ಸೆಟಪ್‌, ಹೊಸದಾದ ಗ್ರಿಲ್, ಬಾನೆಟ್‌ನಲ್ಲಿ ವಿಸ್ತರಿಸಿಕೊಂಡಿರುವ ಎಲ್‌ಇಡಿ ಡಿಆರ್‌ಎಲ್‌, ಮರುವಿನ್ಯಾಸಗೊಳಿಸಲಾದ ಅಲಾಯ್ ವೀಲ್ಸ್ ಒಳಗೊಂಡಿದೆ. ಜೊತೆಗೆ ಹಿಂಭಾಗವೂ ಕನೆಕ್ಟ್ದ್ ಲೈಟ್ ಬಾರ್ ಅನ್ನು ಪಡೆದಿದೆ.

ಈ ಕಾರು, ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ನಿರೀಕ್ಷೆಯಿದ್ದು, 12.3 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್, ಆಕರ್ಷಕ ಟಾಟಾ ಲೋಗೋ ಒಳಗೊಂಡ 2 - ಸ್ಪೋಕ್ ಸ್ಟೀರಿಂಗ್ ವೀಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಚಾರ್ಜರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಪಡೆದಿರಲಿದೆ.

ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿರಲಿದ್ದು, 6 ಏರ್ ಬಾಗ್ಸ್, ಲೆವೆಲ್ - 2 ADAS (ಸುಧಾರಿತ ಚಾಲಕ ಸಹಾಯಕ ವ್ಯವಸ್ಥೆ) ತಂತ್ರಜ್ಞಾನ ಪಡೆದಿರುವ ಸಾಧ್ಯತೆಯಿದೆ. ಇದರೊಟ್ಟಿಗೆ ಇಕೋ, ಸಿಟಿ ಹಾಗೂ ಸ್ಪೋರ್ಟ್ ಎಂಬ ಡ್ರೈವಿಂಗ್ ಮೋಡ್ ಒಳಗೊಂಡಿರಲಿದೆ. ಇನ್ನು, ಹಬ್ಬದ ವೇಳೆಗೆ ಈ ಕಾರು ಬಿಡುಗಡೆಯಾಗುವ ನೀರಿಕ್ಷೆಯಿದ್ದು, ಗ್ರಾಹಕರು ಕುತೂಹಲದಿಂದ ಕಾಯುತ್ತಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, October 11, 2023, 12:34 [IST]
English summary
New tata safari facelift suv mileage increased details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+