ಒಂದೇ ರೂಪ ನಾಮ ಹಲವು: ಮಾರುತಿ ಎರ್ಟಿಗಾದ ರಿಬ್ಯಾಡ್ಜ್ ಟೊಯೊಟಾ Rumion ಅನಾವರಣ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಂಪಿವಿಯನ್ನು ಅನಾವರಣಗೊಳಿಸಿದೆ. ಈ ಹೊಸ ಟೊಯೊಟಾ ಎಂಪಿವಿಗೆ ರೂಮಿಯಾನ್ (Rumion) ಎಂಬ ಹೆಸರನ್ನು ನೀಡಲಾಗಿದೆ. ಇದು ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಎಂಪಿವಿಯ ರಿಬ್ಯಾಡ್ಜ್ ಆವೃತ್ತಿಯಾಗಿದೆ.

ಮಾರುತಿ ಸುಜುಕಿ ಎರ್ಟಿಗಾ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಂಪಿವಿಗಳಲ್ಲಿ ಒಂದಾಗಿದೆ. ಸದ್ಯಕ್ಕೆ ಈ ಹೊಸ ಟೊಯೊಟಾ ರೂಮಿಯಾನ್ (Toyota Rumion) ಎಂಪಿವಿಯ ಬೆಲೆ ಮತ್ತು ಬುಕಿಂಗ್ ಮೊತ್ತವನ್ನು ಘೋಷಿಸಲಾಗಿಲ್ಲ. ಟೊಯೊಟಾ ಆಗಿರುವುದರಿಂದ, ರೂಮಿಯಾನ್ 3 ವರ್ಷಗಳು/1,00,000 ಕಿಮೀ ಸ್ಟ್ಯಾಂಡರ್ಡ್ ವಾರಂಟಿಯೊಂದಿಗೆ ಬರುತ್ತದೆ. ಆಸಕ್ತಿದಾಯಕ ಸಂಗತಿಯೆಂದರೆ ಟೊಯೋಟಾ ಈಗಾಗಲೇ ಕೆಲವು ವಿದೇಶಿ ಮಾರುಕಟ್ಟೆಗಳಲ್ಲಿ ರೂಮಿಯಾನ್ ಅನ್ನು ಮಾರಾಟ ಮಾಡುತ್ತಿದೆ.

Toyota Rumion

ಟೊಯೊಟಾ ರೂಮಿಯಾನ್ ಕಾರಿಗೆ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿದೆ. ಇದು ಇನ್ನೋವಾದಿಂದ ಸ್ಫೂರ್ತಿ ಪಡೆದ ವಿಭಿನ್ನ ಗ್ರಿಲ್ ಅನ್ನು ಪಡೆಯುತ್ತದೆ, ಮುಂಭಾಗದ ಬಂಪರ್ ಕೂಡ ವಿಭಿನ್ನವಾಗಿದೆ ಮತ್ತು ಏರ್ ಡ್ಯಾಮ್‌ಗಾಗಿ ಕ್ರೋಮ್ ಸರೌಂಡ್ ಅನ್ನು ಪಡೆಯುತ್ತದೆ. ಈ ಕಾರಿನ ಬದಿಗಳಲ್ಲಿ, ಎರಡು-ಟೋನ್ ಮಷಿನ್ಡ್ ಫಿನಿಶ್‌ನಲ್ಲಿ ಪೂರ್ಣಗೊಳಿಸಲಾದ ವಿಭಿನ್ನ ಅಲಾಯ್ ವ್ಹೀಲ್ ಗಳನ್ನು ಮಾತ್ರ ಬದಲಾವಣೆಯಾಗಿದೆ.

ಹೊಸ ಟೊಯೊಟಾ ರೂಮಿಯಾನ್ ಕಾರಿನಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಬ ಎರಡೂ ಪವರ್‌ಟ್ರೇನ್‌ಗಳೊಂದಿಗೆ ಲಭ್ಯವಿದೆ. ಟೊಯೊಟಾ ರೂಮಿಯಾನ್ ಕಾರು 1.5-ಲೀಟರ್, ನಾಲ್ಕು-ಸಿಲಿಂಡರ್, ನ್ಯಾಚುರಲ್ ಆಸ್ಪರೆಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,000 rpm ನಲ್ಲಿ 101 bhp ಪವರ್ ಮತ್ತು 4,400 rpm ನಲ್ಲಿ 136.8 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Toyota Rumion

ಇನ್ನು CNG ಯಲ್ಲಿ ಚಾಲನೆಯಲ್ಲಿರುವಾಗ, ಈ ಎಂಜಿನ್ 5,500 rpm ನಲ್ಲಿ 86.63 bhp ಪವರ್ ಮತ್ತು 121.5 Nm ಅನ್ನು ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡೂ ಪವರ್‌ಟ್ರೇನ್‌ಗಳು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಪಡೆಯುತ್ತವೆ. ಪೆಟ್ರೋಲ್ ಎಂಜಿನ್ 6-ಸ್ಪೀಡ್ ಟಾರ್ಕ್ ಕರ್ನಾವಾಟರ್ ಗೇರ್ ಬಾಕ್ಸ್ ಅನ್ನು ಸಹ ಪಡೆಯುತ್ತದೆ. ಇದರ ಪೆಟ್ರೋಲ್ ಆವೃತ್ತಿಯು 20.51 ಕಿ.ಮೀ ಮೈಲೇಜ್ ಅನ್ನು ನೀಡಿದರೆ, CNG ಆವೃತ್ತಿಯು 26.11 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಹೊಸ ಟೊಯೊಟಾ ರೂಮಿಯಾನ್ ಕಾರು S MT/AT, G MT, V MT/AT ಮತ್ತು S MT CNG ಎಂಬ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಈ ಟೊಯೊಟಾ ಕಾರಿನ ಬೆಲೆಯು ಇನ್ನೂ ಘೋಷಣೆಯಾಗಿಲ್ಲ. ಆದರೆ ಮಾರುತಿ ಸುಜುಕಿ ಎರ್ಟಿಗಾಕ್ಕಿಂತ ಸ್ವಲ್ಪ ಹೆಚ್ಚಿರಬಹುದು. ಪ್ರಸ್ತುತ ಮಾರುತಿ ಸುಜುಕಿ ಎರ್ಟಿಗಾ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.8.64 ಲಕ್ಷವಾಗಿದೆ.

Toyota Rumion

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ಕಾರ್ಯತಂತ್ರ ವಿಭಾಗದ ಉಪಾಧ್ಯಕ್ಷರು ಅತುಲ್ ಸೂದ್ ಅವರು ಮಾತನಾಡಿ. ಹೊಸ ಟೊಯೊಟಾ ರೂಮಿಯಾನ್ ಪರಿಚಯವು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ಗೆ ಒಂದು ದೊಡ್ಡ ಉತ್ಸಾಹದ ಕ್ಷಣವಾಗಿದೆ ಮತ್ತು ನಮ್ಮ ನಿರಂತರವಾಗಿ ಬೆಳೆಯುತ್ತಿರುವ ಕುಟುಂಬಕ್ಕೆ ಹೊಸ ಸದಸ್ಯರನ್ನು ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ. ಟೊಯೊಟಾ ರೂಮಿಯಾನ್ ಅಸಾಧಾರಣವಾದ, ಕಾಂಪ್ಯಾಕ್ಟ್ ಎಂಪಿವಿ ಆಗಿದೆ.

ಈ ಎಂಪಿವಿಯ ಸಾಟಿಯಿಲ್ಲದ ಸ್ಥಳ ಮತ್ತು ಸೌಕರ್ಯ, ಅತ್ಯುತ್ತಮ ಇಂಧನ ದಕ್ಷತೆ, ಸೊಗಸಾದ ಮತ್ತು ಪ್ರೀಮಿಯಂ ಬಾಹ್ಯ ವಿನ್ಯಾಸದೊಂದಿಗೆ ಹೊಸ ಮಾನದಂಡಗಳನ್ನು ಹೊಂದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಟೊಯೊಟಾ ರೂಮಿಯಾನ್ ಹಬ್ಬದ ಸೀಸನ್ ಸಮಯಕ್ಕೆ ಬಿಡುಗಡೆಗೊಳ್ಳುವುದರೊಂದಿಗೆ, ಕುಟುಂಬಗಳ ವಿಕಸನಗೊಳ್ಳುತ್ತಿರುವ ಅಗತ್ಯಗಳನ್ನು ಪೂರೈಸುವ ಗುರಿಯನ್ನು ನಾವು ಹೊಂದಿದ್ದೇವೆ, ಅವರಿಗೆ ಸೌಕರ್ಯ ಮತ್ತು ಅನುಕೂಲತೆಯನ್ನು ಒದಗಿಸುತ್ತೇವೆ ಎಂದು ಹೇಳಿದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Thursday, August 10, 2023, 14:04 [IST]
English summary
New toyota rumion mpv revealed in india details
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+