Nissan X-Trail: ಟೊಯೊಟಾ ಫಾರ್ಚೂನರ್‌ಗೆ ಟಫ್ ಫೈಟ್ ನೀಡಲು ಬರುತ್ತಿದೆ 'ನಿಸ್ಸಾನ್ ಎಕ್ಸ್ ಟ್ರಯಲ್'

'ನಿಸ್ಸಾನ್ ಮೋಟಾರ್ ಇಂಡಿಯಾ' ಭಾರತದಲ್ಲಿ ಮಾರಾಟ ಮಾಡುವ ಮ್ಯಾಗ್ನೈಟ್ ಎಸ್‌ಯುವಿ ಭಾರೀ ಜನಪ್ರಿಯತೆಯನ್ನು ಗಳಿಸಿದೆ. ಕಂಪನಿಯು ಶೀಘ್ರದಲ್ಲೇ ಎಕ್ಸ್ ಟ್ರಯಲ್ (X-Trail) ಎಸ್‌ಯುವಿ ಬಿಡುಗಡೆ ಮಾಡಲು ಎಲ್ಲ ರೀತಿಯ ಸಿದ್ಧತೆ ನಡೆಸಿದ್ದು, ಇದರ ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳು ಹೇಗಿವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಳೆದ ವರ್ಷದ ಕೊನೆಯಲ್ಲಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿಸ್ಸಾನ್ ತನ್ನ ಮೂರು ಪ್ರೀಮಿಯಂ ಎಸ್‌ಯುವಿಗಳಾದ ಕಶ್ಕೈ (Qashqai), ಜ್ಯೂಕೆ (Juke) ಹಾಗೂ ಎಕ್ಸ್ ಟ್ರಯಲ್ (X-Trail) ಅನ್ನು ಪ್ರದರ್ಶನ ಮಾಡಿತ್ತು. ಇದರಲ್ಲಿ ನ್ಯೂ ಜನರೇಷನ್ 'ಎಕ್ಸ್ ಟ್ರಯಲ್' ಎಸ್‌ಯುವಿಯನ್ನು ಹೋದ ವರ್ಷವೇ ಅಂತರರಾಷ್ಟ್ರೀಯ ಮಾರುಕಟ್ಟೆಗೆ ನಿಸ್ಸಾನ್ ಪರಿಚಯಿಸಿದೆ. ಇದೀಗ, ಭಾರತದ ಮಾರುಕಟ್ಟೆಗೂ ಬರಲಿದೆ ಎಂದು ವರದಿಯಾಗಿದೆ.

Nissan X-Trail: ಟೊಯೊಟಾ ಫಾರ್ಚೂನರ್‌ಗೆ ಟಫ್ ಫೈಟ್ ನೀಡಲು ಬರುತ್ತಿದೆ ನಿಸ್ಸಾನ್ ಎಕ್ಸ್ ಟ್ರಯಲ್

ಈಗಾಗಲೇ ದೇಶದ ರಸ್ತೆಯಲ್ಲಿ ಈ ಎಸ್‌ಯುವಿಯ ಪರೀಕ್ಷಾರ್ಥ ಸಂಚಾರ ಪ್ರಾರಂಭವಾಗಿದ್ದು, ಸ್ಪೈ ಚಿತ್ರಗಳು ಕೂಡ ಸೋರಿಕೆಯಾಗಿವೆ. ನೂತನ ನಿಸ್ಸಾನ್ ಎಕ್ಸ್ ಟ್ರಯಲ್ ಎಸ್‌ಯುವಿ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾದ ಮೇಲೆ ಟೊಯೊಟಾ ಫಾರ್ಚೂನರ್‌, ಎಂಜಿ ಗ್ಲೋಸ್ಟರ್, ವಿಡಬ್ಲ್ಯೂ ಟಿಗುವಾನ್, ಸ್ಕೋಡಾ Kodiaq ಹಾಗೂ ಜೀಪ್ ಮೆರಿಡಿಯನ್ ಕಾರುಗಳಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಆಟೋಮೊಬೈಲ್ ತಜ್ಞರು ಅಂದಾಜಿಸಿದ್ದಾರೆ.

ಈ ನಿಸ್ಸಾನ್ ಎಕ್ಸ್ ಟ್ರಯಲ್ ಎಸ್‌ಯುವಿ, ಹೊರಭಾಗದಲ್ಲಿ ಆಕರ್ಷಕ ವಿನ್ಯಾಸವನ್ನು ಹೊಂದಿರುವ ಸಾಧ್ಯತೆಯಿದ್ದು, ಪ್ರಮುಖವಾಗಿ ಸ್ಪ್ಲಿಟ್ ಎಲ್ಇಡಿ ಹೆಡ್‌ಲ್ಯಾಂಪ್ಸ್, ಬ್ಲ್ಯಾಕ್ ಗ್ರಿಲ್ ಹಾಗೂ ಮಸ್ಕ್ಯುಲರ್ ಬಾನೆಟ್ ಅನ್ನು ಪಡೆದಿದೆ. ಜೊತೆಗೆ ಒಳಭಾಗದಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, 360 ಡಿಗ್ರಿ ಕ್ಯಾಮೆರಾ ಸಿಸ್ಟಮ್ ವೈಶಿಷ್ಟ್ಯವನ್ನು ಪಡೆದಿರಲಿದ್ದು, ಸುರಕ್ಷತೆಯ ದೃಷ್ಟಿಯಿಂದ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹೊಂದಿರಲಿದೆ.

Nissan X-Trail: ಟೊಯೊಟಾ ಫಾರ್ಚೂನರ್‌ಗೆ ಟಫ್ ಫೈಟ್ ನೀಡಲು ಬರುತ್ತಿದೆ ನಿಸ್ಸಾನ್ ಎಕ್ಸ್ ಟ್ರಯಲ್

ಹೊಚ್ಚ ಹೊಸ ನಿಸ್ಸಾನ್ 'ಎಕ್ಸ್ ಟ್ರಯಲ್' ಎಸ್‌ಯುವಿ 5 ಹಾಗೂ 7 ಆಸನ ವ್ಯವಸ್ಥೆಯಲ್ಲಿ ದೊರೆಯಲಿದ್ದು, ಕೆಲವೇ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಸಿಗಬಹುದು ಎಂದು ಅಂದಾಜಿಸಲಾಗಿದೆ. ಇ-ಪವರ್ ಟೆಕ್ನಾಲಜಿ ಹೊಂದಿರುವ 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಸಾಧ್ಯತೆಯಿದ್ದು, ಇದು ಎಷ್ಟು ಪವರ್ ಹಾಗೂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ನಿಸ್ಸಾನ್ ಕಂಪನಿಯ 'ಎಕ್ಸ್ ಟ್ರಯಲ್' ಎಸ್‌ಯುವಿ, ದೇಶಕ್ಕೇನೂ ಹೊಸದೇನಲ್ಲ. ಈಗಾಗಲೇ ಮೊದಲೆರಡು ಜನರೇಷನ್ ಕಾರುಗಳನ್ನು ಮಾರಾಟ ಮಾಡಿದೆ. ಅದೇಕೋ ಮೂರನೇ ಜನರೇಷನ್ ಕಾರುಗಳನ್ನು ಭಾರತಕ್ಕೆ ತರಲು ಸಾಧ್ಯವಾಗಲಿಲ್ಲ. ಈ ವರ್ಷದ ಹಬ್ಬದ ಸೀಸನ್ ನಲ್ಲಿ ನಾಲ್ಕನೇ ಜನರೇಷನ್ 'ಎಕ್ಸ್ ಟ್ರಯಲ್' ಎಸ್‌ಯುವಿಯನ್ನು ಅದ್ದೂರಿಯಾಗಿ ಲಾಂಚ್ ಮಾಡಲು ಕಂಪನಿ ಯೋಜಿಸುತ್ತಿದ್ದು, ಕೊಂಚ ಹೆಚ್ಚಿನ ಬೆಲೆಯಲ್ಲಿ ಹೊಂದಿರಲಿದೆ. ಸುಮಾರು ರೂ.40 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಬಹುದು.

Nissan X-Trail: ಟೊಯೊಟಾ ಫಾರ್ಚೂನರ್‌ಗೆ ಟಫ್ ಫೈಟ್ ನೀಡಲು ಬರುತ್ತಿದೆ ನಿಸ್ಸಾನ್ ಎಕ್ಸ್ ಟ್ರಯಲ್

ಸದ್ಯ, ಭಾರತದಲ್ಲಿ ನಿಸ್ಸಾನ್ ಕಂಪನಿಯ ಗೇಮ್ ಚೇಂಜರ್ ಎಂದು ಬಿಂಬಿಸಲಾಗಿರುವ ಮ್ಯಾಗ್ನೈಟ್ ಎಸ್‌ಯುವಿ ಬಗ್ಗೆ ಮಾತನಾಡುವುದಾದರೆ, ಇದು ರೂ.10.94 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 18-20 kmpl ಮೈಲೇಜ್ ನೀಡಲಿದೆ. ಇದು ಎರಡು ಆಯ್ಕೆಗಳನ್ನು ಪಡೆದಿದೆ. ಅವುಗಳೆಂದರೆ,1.0-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 1.0-ಲೀಟರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್. ಜೊತೆಗೆ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಒಟ್ಟಾರೆಯಾಗಿ ಮುಂಬರಲಿರುವ ನಿಸ್ಸಾನ್ ಎಕ್ಸ್ ಟ್ರಯಲ್ ಎಸ್‌ಯುವಿಯನ್ನು ಟೊಯೊಟಾ ಫಾರ್ಚೂನರ್‌ ಸೇರಿದಂತೆ ವಿವಿಧ ಎಸ್‌ಯುವಿಗಳಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಿದ್ದು, ಹಬ್ಬದ ಸೀಸನ್ ವೇಳೆಗೆ ಲಾಂಚ್ ಆಗಲಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದ್ದು, ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸಬಹುದು. ಅಲ್ಲದೆ, ಇದರಿಂದ ಕಂಪನಿ ಮಾರಾಟ ಪ್ರಮಾಣವು ಸುಧಾರಿಸಲಿದೆ.

More from DriveSpark

Article Published On: Sunday, March 26, 2023, 8:30 [IST]
English summary
Nissan x trail suv lanch this year in india details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+