Toyota: ಕಡಿಮೆ ಖರ್ಚಿನ ಎಥನಾಲ್ ಚಾಲಿತ ಟೊಯೊಟಾ ಇನ್ನೋವಾ ಆ.29ಕ್ಕೆ ಪರಿಚಯ, ಶೀಘ್ರ ಪೆಟ್ರೋಲ್‌ಗೆ ಗುಡ್ ಬೈ?

ಭಾರತದಲ್ಲಿ ಶುದ್ಧ ಪರಿಸರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. ಅದಕ್ಕಾಗಿ ಎಲೆಕ್ಟ್ರಿಕ್ ಹಾಗೂ ಪರ್ಯಾಯ ಇಂಧನದಲ್ಲಿ ಚಲಿಸುವ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿದೆ. ಕೆಲವೇ ದಿನಗಳಲ್ಲಿ ಶೇಕಡ 100% ಎಥೆನಾಲ್ ಚಾಲಿತ ಕಾರುಗಳು ದೇಶದ ರಸ್ತೆಗಳಲ್ಲಿ ಸಂಚರಿಸಲಿವೆ.

ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, 100% ಎಥೆನಾಲ್ ಚಾಲಿತ ಟೊಯೊಟಾದ ಇನ್ನೋವಾ (Toyota Innova) ಕಾರಿನ ಹೊಸ ರೂಪಾಂತರವನ್ನು ಆಗಸ್ಟ್ 29ರಂದು ಪರಿಚಯಿಸಲಾಗುವುದು ಎಂದು ಬುಧವಾರ ಘೋಷಣೆ ಮಾಡಿದ್ದಾರೆ. ಇದು, BS-VI ಹಂತ - 2ರ ಪ್ರಕಾರ, ಮೇಲ್ದರ್ಜೆರಿಸಿರುವ ಎಥೆನಾಲ್ ಚಾಲಿತ (ಎಲೆಕ್ಟ್ರಿಫೈಡ್ ಫ್ಲೆಕ್ಸ್ ಫ್ಯುಯೆಲ್) ಎಂಜಿನ್ ಹೊಂದಿರುವ ವಿಶ್ವದ ಮೊದಲ ಕಾರಾಗಿದೆ.

Toyota: ಕಡಿಮೆ ಖರ್ಚಿನ ಎಥನಾಲ್ ಚಾಲಿತ ಟೊಯೊಟಾ ಇನ್ನೋವಾ ಆ.29ಕ್ಕೆ ಪರಿಚಯ, ಶೀಘ್ರ ಪೆಟ್ರೋಲ್‌ಗೆ ಗುಡ್ ಬೈ?

ದೇಶದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರಿದ್ದು, ಜೊತೆಗೆ ಮಾಲಿನ್ಯಕಾರವೂ ಹೌದು. ಆ ಕಾರಣಕ್ಕೆ ದೇಶದಲ್ಲಿ ಪರ್ಯಾಯ ಇಂಧನ ಚಾಲಿತ ವಾಹನಗಳ ಅಗತ್ಯವಿದೆ ಎಂಬುದು ಹಲವರ ಅಭಿಪ್ರಾಯ. ಎಲೆಕ್ಟ್ರಿಕ್, ಎಥೆನಾಲ್, ಸೋಲಾರ್ ಹಾಗೂ ಹೈಡ್ರೋಜನ್ ಪರ್ಯಾಯ ಇಂಧನಗಳಿಗೆ ಉದಾಹರಣೆಯಾಗಿವೆ. ಇವುಗಳ ಬಳಕೆಯ ವೆಚ್ಚ ಕಡಿಮೆಯಿದ್ದು, ಪರಿಸರಕ್ಕೂ ಹಾನಿ ಮಾಡುವುದಿಲ್ಲ.

ಪ್ರಮುಖವಾಗಿ, ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಟೊಯೊಟಾ ಕಂಪನಿ, ಮುಂದಿನ ಮಂಗಳವಾರ ಅನಾವರಣಗೊಳಿಸುವ ಇನ್ನೋವಾ ಹೊಸ ರೂಪಾಂತರ 100% ಎಥೆನಾಲ್ ಇಂಧನ ಚಾಲಿತವಾಗಿದೆ. ಪೆಟ್ರೋಲ್‌ಗೆ ಹೋಲಿಸಿದರೆ, ಇದಕ್ಕಾಗುವ ಖರ್ಚು ತುಂಬಾ ಕಮ್ಮಿ. ಏಕೆಂದರೆ, ಎಥೆನಾಲ್ ಅನ್ನು ಭತ್ತದ ಹುಲ್ಲು ಸೇರಿದಂತೆ ಇತರೆ ಕೃಷಿ ತ್ಯಾಜ್ಯಗಳನ್ನು ಉಪಯೋಗಿಸಿ ತಯಾರಿಸಲಾಗುತ್ತದೆ.

Toyota: ಕಡಿಮೆ ಖರ್ಚಿನ ಎಥನಾಲ್ ಚಾಲಿತ ಟೊಯೊಟಾ ಇನ್ನೋವಾ ಆ.29ಕ್ಕೆ ಪರಿಚಯ, ಶೀಘ್ರ ಪೆಟ್ರೋಲ್‌ಗೆ ಗುಡ್ ಬೈ?

ಎಥೆನಾಲ್ ಚಾಲಿತ ಟೊಯೊಟಾದ ಇನ್ನೋವಾ ನೂತನ ವೇರಿಯೆಂಟ್, ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಬೆಲೆ ಎಷ್ಟು ಎಂಬುದರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಕಳೆದ ವರ್ಷ, ಸಚಿವ ನಿತಿನ್ ಗಡ್ಕರಿ ಅವರ ಮಾರ್ಗದರ್ಶನದಲ್ಲಿ ಟೊಯೊಟಾ, ಹೈಡ್ರೋಜನ್ ಚಾಲಿತ ಮಿರಾಯ್ ಇವಿಯನ್ನು ಬಿಡುಗಡೆಗೊಳಿಸಿತ್ತು. ಇದು, ರೂ.60 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಟೊಯೊಟಾ ಮಿರಾಯ್ ಇವಿಯಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 182 PS ಗರಿಷ್ಠ ಪವರ್ ಹಾಗೂ 406 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 646 km ರವರೆಗೆ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಈ ಕಾರು, 12.3 - ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್, 8 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 7 ಏರ್ ಬಾಗ್ಸ್ ಅನ್ನು ಒಳಗೊಂಡಿದೆ.

ಭಾರತದ ಮಾರುಕಟ್ಟೆಯಲ್ಲಿ ಟೊಯೊಟಾ, ಇನ್ನೋವಾ ಸರಣಿಯ ಹೈಕ್ರಾಸ್ ಹಾಗೂ ಕ್ರಿಸ್ಟಾ ಎಂಪಿವಿಗಳನ್ನು ಮಾರಾಟ ಮಾಡುತ್ತದೆ. ಮೊದಲಿಗೆ ಇನ್ನೋವಾ ಹೈಕ್ರಾಸ್ ಎಂಪಿವಿ ಕುರಿತು ತಿಳಿಯೋಣ. ಇದು ರೂ.18.82 ಲಕ್ಷದಿಂದ ರೂ.30.26 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. 2.0 ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್, 2.0 ಲೀಟರ್, 4 ಸಿಲಿಂಡರ್ ಹೈಬ್ರಿಡ್ ಎಂಜಿನ್ ಹೊಂದಿದ್ದು, 21 kmpl ಮೈಲೇಜ್ ನೀಡುತ್ತದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ, ಗ್ರಾಹಕರನ್ನು ಆಕರ್ಷಿಸುವ ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಮುಖ್ಯವಾಗಿ, 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಸನ್‌ರೂಫ್, ವೈರ್‌ಲೆಸ್ ಚಾರ್ಜಿಂಗ್ ಅನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ವಿವಿಧ ಸೇಫ್ಟಿ ಫೀಚರ್ಸ್ ಪಡೆದಿದೆ.

ಟೊಯೊಟಾ ಇನ್ನೋವಾ ಕ್ರಿಸ್ಟಾ ರೂ.19.99 ಲಕ್ಷದಿಂದ ರೂ.26.05 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು, 2.4 ಲೀಟರ್ ಡೀಸೆಲ್ ಎಂಜಿನ್ ಹಾಗೂ ವೈಟ್ ಪರ್ಲ್ ಕ್ರಿಸ್ಟಲ್ ಶೈನ್ ಸೇರಿದಂತೆ ಐದು ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

Article Published On: Friday, August 25, 2023, 13:50 [IST]
English summary
Nitin gadkari launch 100 ethanol fueled toyota innova car aug 29
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+