ಮಹೀಂದ್ರಾವನ್ನು ಹಿಂದಿಕ್ಕಿದ ಟಾಟಾ: ಮಾರುತಿಗೆ ಮುಕುಟ, ಟಾಪ್-5 ನಲ್ಲಿ ಕಿಯಾ
ಅಕ್ಟೋಬರ್ ತಿಂಗಳ ಕಾರು ಮಾರಾಟದಲ್ಲಿ ಕಾರು ಕಂಪನಿಗಳು ಉತ್ತಮ ಬೆಳವಣಿಗೆಯನ್ನು ದಾಖಲಿಸಿವೆ. ಏಕೆಂದರೆ ಹೊಸ ಕಾರನ್ನು ಖರೀದಿಸಲು ಈ ಅವಧಿಯನ್ನು ವರ್ಷದ ಅತ್ಯಂತ ಮಂಗಳಕರ ಸಮಯವೆಂದು ಪರಿಗಣಿಸಲಾಗುತ್ತದೆ. ಸಂಭಾವ್ಯ ಗ್ರಾಹಕರಿಗೆ ಕಾರು ಖರೀದಿಯನ್ನು ಇನ್ನಷ್ಟು ಲಾಭದಾಯಕವಾಗಿಸಲು ಕಾರು ತಯಾರಕರು ವಿಶೇಷ ಕೊಡುಗೆಗಳನ್ನು ಸಹ ನೀಡುತ್ತಾರೆ.
ಅಕ್ಟೋಬರ್ ತಿಂಗಳಲ್ಲಿ ಟಾಪ್ 5 ಕಾರು ಕಂಪನಿಗಳು ಸುಮಾರು 3.48 ಲಕ್ಷ ಯೂನಿಟ್ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿವೆ. ನಿರೀಕ್ಷೆಯಂತೆ ಮಾರುತಿ ಸುಜುಕಿ ಅಗ್ರಸ್ಥಾನದಲ್ಲಿದ್ದು, ಹ್ಯುಂಡೈ ಎರಡನೇ ಸ್ಥಾನದಲ್ಲಿದೆ, ಟಾಟಾ ಮೋಟಾರ್ಸ್ ಮೂರನೇ ಸ್ಥಾನದಲ್ಲಿ, ಮಹೀಂದ್ರಾ ನಾಲ್ಕನೇ ಸ್ಥಾನದಲ್ಲಿ ಮತ್ತು ಕಿಯಾ ಐದನೇ ಸ್ಥಾನವನ್ನು ಪಡೆದುಕೊಂಡಿದೆ.

ಮಾರುತಿ ಸುಜುಕಿ: ಅಕ್ಟೋಬರ್ 2023 ರಲ್ಲಿ ಮಾರುತಿ ಸುಜುಕಿ 1,68,047 ಯುನಿಟ್ ಪ್ರಯಾಣಿಕ ವಾಹನಗಳನ್ನು (ರಫ್ತು ಸೇರಿಸಿ) ಮಾರಾಟ ಮಾಡುವ ಮೂಲಕ ಮಾರಾಟ ಪಟ್ಟಿಯಲ್ಲಿ ತನ್ನ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಕಳೆದ ವರ್ಷ ಅಕ್ಟೋಬರ್‌ಗೆ ಹೋಲಿಸಿದರೆ ಇದು ಮಾರಾಟದಲ್ಲಿ ಶೇ 19.74 ರಷ್ಟು ಬೆಳವಣಿಗೆ ಸಾಧಿಸಿದೆ.
ಹ್ಯುಂಡೈ: ಹ್ಯುಂಡೈ ಮಾರಾಟ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ದೇಶೀಯ ಮಾರುಕಟ್ಟೆಯಲ್ಲಿ 55,128 ಯುನಿಟ್ ಪ್ರಯಾಣಿಕ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಅಕ್ಟೋಬರ್‌ಗೆ ಹೋಲಿಸಿದರೆ ಇದು ಮಾರಾಟದಲ್ಲಿ ಶೇಕಡಾ 14.84 ರಷ್ಟು ಬೆಳವಣಿಗೆ ಸಾಧಿಸಿದೆ. ಕಂಪನಿಯು ಅಕ್ಟೋಬರ್ 2022 ರಲ್ಲಿ 48,001 ಯುನಿಟ್ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ.

ಟಾಟಾ ಮೋಟಾರ್ಸ್: ಕಂಪನಿಯು ಇತ್ತೀಚೆಗೆ Nexon, Nexon.ev, ಹ್ಯಾರಿಯರ್ ಮತ್ತು ಸಫಾರಿ ಸೇರಿದಂತೆ ತನ್ನ ಪ್ರಮುಖ ಶ್ರೇಣಿಯ ಉತ್ಪನ್ನಗಳನ್ನು ಫೇಸ್‌ಲಿಫ್ಟ್ ಮಾಡಿದೆ. ಅಕ್ಟೋಬರ್‌ನಲ್ಲಿ 48,337 ಯುನಿಟ್ ಪ್ರಯಾಣಿಕ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಅಕ್ಟೋಬರ್‌ಗೆ ಹೋಲಿಸಿದರೆ ಮಾರಾಟದಲ್ಲಿ ಶೇ 6.90 ರಷ್ಟು ಬೆಳವಣಿಗೆಯಾಗಿದೆ. ಕಳೆದ ವರ್ಷ 45,217 ಯುನಿಟ್ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ.
ಮಹೀಂದ್ರಾ: ಮಹೀಂದ್ರಾ ಭಾರತೀಯ ಮಾರುಕಟ್ಟೆಯಲ್ಲಿ 43,708 ಯುನಿಟ್ ಪ್ರಯಾಣಿಕ ಕಾರುಗಳನ್ನು ಮಾರಾಟ ಮಾಡಿದೆ. ಇದು ಮಾಸಿಕ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ 11,482 ಯುನಿಟ್‌ಗಳ ಹೆಚ್ಚಳವನ್ನು ಸೂಚಿಸುತ್ತದೆ. ಅಕ್ಟೋಬರ್ 2022 ಕ್ಕೆ ಹೋಲಿಸಿದರೆ ಶೇ 35.62 ಬೆಳವಣಿಗೆಯಾಗಿದೆ. ಅಕ್ಟೋಬರ್ 2022 ರಲ್ಲಿ 32,226 ಯೂನಿಟ್ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿತ್ತು.

ಕಿಯಾ: ಸೆಲ್ಟೋಸ್ ಮತ್ತು ಸೋನೆಟ್‌ನಂತಹ ಎಸ್‌ಯುವಿಗಳಿಗೆ ಹೆಚ್ಚಿನ ಬೇಡಿಕೆಯಿಂದ ಕಿಯಾ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ತಿಂಗಳು ಕಿಯಾ ಭಾರತೀಯ ಮಾರುಕಟ್ಟೆಯಲ್ಲಿ 24,351 ಯುನಿಟ್ ಪ್ರಯಾಣಿಕ ಕಾರುಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಇದು ಮಾಸಿಕ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ 1,028 ಯುನಿಟ್‌ಗಳ ಹೆಚ್ಚಳವನ್ನು ಸೂಚಿಸುತ್ತದೆ.
ಅಕ್ಟೋಬರ್ 2022 ಕ್ಕೆ ಭಾರತೀಯ ದೇಶೀಯ ಮಾರುಕಟ್ಟೆಯಲ್ಲಿ ಕಿಯಾ ಕಂಪನಿಯು ಮಾರಾಟ ಮಾಡಿದ ಕಾರುಗಳಿಗೆ ಹೋಲಿಸಿದರೆ ಇದು ಮಾರಾಟದಲ್ಲಿ ಶೇಕಡಾ 4.40 ರಷ್ಟು ಬೆಳವಣಿಗೆಯಾಗಿದೆ. ಕಂಪನಿಯು ಅಕ್ಟೋಬರ್ 2022 ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 23,323 ಯುನಿಟ್ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








