October suv sales: ಭಾರತದಲ್ಲಿ ಈ ಎಸ್‌ಯುವಿಗಳದ್ದೇ ಜೋರು... ಮಾರುತಿಯನ್ನು ಹಿಂದಿಕ್ಕಿದ ಟಾಟಾ
October suv sales: ನಮಗೆಲ್ಲರಿಗೂ ತಿಳಿದಿರುವಂತೆ ಎಸ್‌ಯುವಿಗಳು ಭಾರತದಲ್ಲಿ ಹೆಚ್ಚು ಮಾರಾಟವಾಗುವ ವಾಹನಗಳಾಗಿವೆ. ಈ ಕಾರಣಕ್ಕಾಗಿಯೇ ದೇಶದ ಪ್ರತಿಯೊಂದು ಕಾರು ಕಂಪನಿ ಕೂಡ ಎಸ್‌ಯುವಿಗಳನ್ನು ಹೊಂದಿವೆ. ಕಳೆದ ತಿಂಗಳು ಮಾರಾಟವಾದ ಎಸ್‌ಯುಗಳಲ್ಲಿ ಯಾವ ಕಾರುಗಳು ಅಗ್ರಸ್ಥಾನದಲ್ಲಿವೆ ಎಂಬುದನ್ನು ತಿಳಿದುಕೊಳ್ಳಲು ಎಲ್ಲಾ ಟಾಪ್ ಎಸ್‌ಯುವಿಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.
ಟಾಟಾ ನೆಕ್ಸನ್: ಟಾಟಾ ಮೋಟಾರ್ಸ್‌ನ ಹೊಸ tata nexon ಫೇಸ್‌ಲಿಫ್ಟ್ ಅಕ್ಟೋಬರ್ 2023 ರಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಕಂಪನಿಯು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಾರಾಟವಾದ 13,767 ಯುನಿಟ್‌ಗಳಿಗೆ ಹೋಲಿಸಿದರೆ ಈ ಬಾರಿ 16,887 ಯೂನಿಟ್‌ಗಳನ್ನು ಮಾರಾಟ ಮಾಡಿದೆ. ಈ ಮೂಲಕ ಶೇಕಡಾ 23 ರಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ.

ಮಾರುತಿ ಸುಜುಕಿ ಬ್ರೆಝಾ: ಅಕ್ಟೋಬರ್ ತಿಂಗಳಿನಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿ maruti brezza. ಕಂಪನಿಯು ಒಟ್ಟು 16,050 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇದು ಒಟ್ಟು 9,941 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ಮೂಲಕ ಬ್ರೆಝಾ ಶೇ61 ರಷ್ಟು ವಾರ್ಷಿಕ ಬೆಳವಣಿಗೆಯನ್ನು ಕಂಡಿದೆ.
ಮಹೀಂದ್ರಾ ಸ್ಕಾರ್ಪಿಯೋ: ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು Mahindra Scorpio ಪಡೆದುಕೊಂಡಿದೆ. ಕಂಪನಿಯು ಸ್ಕಾರ್ಪಿಯೋ ಕ್ಲಾಸಿಕ್ ಮತ್ತು ಸ್ಕಾರ್ಪಿಯೋ-ಎನ್‌ನ ಸಂಯೋಜಿತ ಮಾರಾಟದ ಅಂಕಿಅಂಶಗಳನ್ನು ಹಂಚಿಕೊಂಡಿದೆ. ಕಳೆದ ತಿಂಗಳು, ಒಟ್ಟಾರೆಯಾಗಿ, ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಮತ್ತು ಸ್ಕಾರ್ಪಿಯೊ-ಎನ್ ಎರಡರ ಒಟ್ಟು 13,578 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ವಾರ್ಷಿಕವಾಗಿ ಶೇ 83 ರಷ್ಟು ಬೆಳವಣಿಗೆ ಕಂಡಿದೆ.

ಸ್ಕಾರ್ಪಿಯೊದ ಹೆಚ್ಚಿದ ಮಾರಾಟಕ್ಕೆ ಪ್ರಾಥಮಿಕ ಕಾರಣವೆಂದರೆ ಕಂಪನಿಯು ಈಗ ಹೊಸದಾಗಿ ಬಿಡುಗಡೆಯಾದ ಸ್ಕಾರ್ಪಿಯೊ-ಎನ್‌ನ ಹೆಚ್ಚಿನ ಘಟಕಗಳನ್ನು ಡೆಲಿವರಿ ನೀಡಲು ಪ್ರಾರಂಭಿಸಿದೆ. ಕಂಪನಿಯು ಪ್ರಸ್ತುತ ಈ ಮಾದರಿಗೆ 2.86 ಲಕ್ಷಕ್ಕೂ ಹೆಚ್ಚು ಡೆಲಿವರಿಗಳನ್ನು ಬಾಕಿ ಉಳಿಸಿಕೊಂಡಿದೆ. ಇದರ ಹೊರತಾಗಿ, ಸ್ಕಾರ್ಪಿಯೋ ಯಶಸ್ಸಿನ ಹಿಂದಿನ ಇತರ ಕಾರಣಗಳು ಅದರ ಜನಪ್ರಿಯತೆಯಾಗಿದೆ.
ಹ್ಯುಂಡೈ ಕ್ರೆಟಾ: ಮಧ್ಯಮ ಗಾತ್ರದ SUV ಗಳ ಮಾರಾಟಕ್ಕೆ ಬಂದಾಗ, ಯಾವುದೇ ವಾಹನವು hyundai creta ವನ್ನು ಅಗ್ರ ಸ್ಥಾನದಿಂದ ಕೆಳಗಿಳಿಸಲು ಸಾಧ್ಯವಾಗಿಲ್ಲ. ಕಳೆದ ತಿಂಗಳು ಈ ಕಾಂಪ್ಯಾಕ್ಟ್ SUV ಯ ಒಟ್ಟು 13,077 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ತಿಂಗಳಲ್ಲಿ 11,880 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಒಟ್ಟಾರೆ ವಾರ್ಷಿಕ ಬೆಳವಣಿಗೆಯು ಶೇ10 ರಷ್ಟಿದೆ.

ಕಿಯಾ ಸೆಲ್ಟೋಸ್: ಈ ಪಟ್ಟಿಯಲ್ಲಿರುವ ಕೊನೆಯ SUV Kia Seltos ಆಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಮಾರಾಟದ ಅಂಕಿಅಂಶಗಳು 12,362 ಯುನಿಟ್‌ಗಳಿಗೆ ಜಿಗಿದಿವೆ. 2022 ರ ಅಕ್ಟೋಬರ್‌ನಲ್ಲಿ ಕಂಪನಿಯು ಸುಮಾರು 9,777 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ವಾರ್ಷಿಕ ಮಾರಾಟ ಬೆಳವಣಿಗೆಯು ಶೇ26ಕ್ಕೆ ಏರಿದೆ.
ಕಿಯಾ ಮೋಟಾರ್ಸ್ ಕೆಲವೇ ತಿಂಗಳುಗಳ ಹಿಂದೆ ಈ ಕಾಂಪ್ಯಾಕ್ಟ್ SUV ಯ ಹೊಸ ಫೇಸ್‌ಲಿಫ್ಟೆಡ್ ಆನ್ನು ಬಿಡುಗಡೆ ಮಾಡಿ ತನ್ನ ವಿಭಾಗದಲ್ಲಿ ಉತ್ತಮ ಕಾಂಪ್ಯಾಕ್ಟ್ SUV ಗಳಲ್ಲಿ ಒಂದಾಗಿ ಜನಪ್ರಿಯತೆ ಪಡೆದಿದೆ. ಹೊಸ ಫೇಸ್‌ಲಿಫ್ಟ್‌ನೊಂದಿಗೆ, ಹೊಸ ಪನೋರಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ಹೊಸ ಮ್ಯೂಸಿಕ್ ಸಿಸ್ಟಮ್ ಮತ್ತು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಗೇಜ್ ಕ್ಲಸ್ಟರ್ ಮತ್ತು ಹಲವಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








