ಬಜೆಟ್‌ ಬೆಲೆಗೆ ಸಿಗುತ್ತಿದೆ ಕೇವಲ ಮೂರು ಆಟೋಮ್ಯಾಟಿಕ್‌ ಡೀಸೆಲ್‌ ಕಾರುಗಳು: ನಿಮ್ಮ ಮತ ಯಾರಿಗೆ?

ಭಾರತದಲ್ಲಿ ವಾಹನಗಳಿಂದಾಗುವ ಮಾಲಿನ್ಯದ ಕುರಿತಾಗಿ ಸರ್ಕಾರ ಕಟ್ಟು ನಿಟ್ಟಾದ ಕ್ರಮಗಳನ್ನು ಕೈಗೊಲ್ಳಲು ಆರಂಭಿಸಿದಾಗಿನಿಂದ ಭಾರತದ ಮಾರುಕಟ್ಟೆಯಲ್ಲಿ ಇದ್ದ ಹಲವಾರು ಕಾರುಗಳು ಕಣ್ಮರೆಯಾಗುತ್ತಾ ಬಂದಿದೆ. ಇದಕ್ಕೆ ಪ್ರಮುಖ ಕಾರಣ ಏನು ಎಂದು ನೋಡುವುದಾದರೆ ಸರ್ಕಾರ ನಿಗದಿಗೊಳಿಸಿದ ಮಾನದಂಡಗಳನ್ನು ಪಾಲಿಸಲು ವಿಫಲವಾಗಿದ್ದು ಎಂದೇ ಹೇಳಬಹುದು.

ಇನ್ನು ಸಣ್ಣ ಸೆಗ್ಮೆಂಟ್‌ನಿಂದ ಡೀಸೆಲ್‌ ಕಾರುಗಳು ಮಾಯವಾಗುತ್ತಾ ಬರುವುದಕ್ಕೂ ಮೇಲೆ ತಿಳಿಸಿದ ಕಾರಣವೇ ಪ್ರಮುಖವಾದುದು. ಈ ಹಿಂದೆ ಸಣ್ಣ ಸೆಗ್ಮೆಂಟ್‌ನಲ್ಲಿ ಹಲವಾರು ಆಟೋಮ್ಯಾಟಿಕ್ ಡೀಸೆಲ್‌ ಕಾರುಗಳು ಲಭ್ಯವಾಗುತ್ತಿದ್ದ ಕಾಲವೊಂದಿತ್ತು. ಆದರೆ ಇದೀಗ ಸಣ್ಣ ಸೆಗ್ಮೆಂಟ್‌ಗಳನ್ನು ನೋಡುವುದಾದರೆ ಕೆಲವೇ ಕೆಲವು ಕಾರುಗಳು ಮಾತ್ರ ಲಭ್ಯವಿದೆ. ಅವು ಯಾವುದೆಂದು ಇಂದಿನ ಈ ಲೇಖನದಲ್ಲಿ ನೋಡಲಿದ್ದೇವೆ.

Automatic Diesel Cars

ನೀವು ಸಣ್ಣ ಸೆಗ್ಮೆಂಟ್‌ನಲ್ಲಿ ಆಟೋಮ್ಯಾಟಿಕ್ ಡೀಸೆಲ್‌ ಕಾರನ್ನು ಹುಡುಕುತ್ತಿದ್ದರೆ ಭಾರತದಲ್ಲಿ ಮೂರು ಕಂಪನಿಗಳು ರೂ. 15 ಲಕ್ಷದ ಒಳಗೆ ಡೀಸೆಲ್‌ ಕಾರುಗಳನ್ನು ನೀಡುತ್ತಿದೆ. ಆ ಮೂರು ಕಂಪನಿಗಳು ಯಾವುದೆಂದರೆ ಮಹೀಂದ್ರಾ, ಟಾಟಾ ಮತ್ತು ಕಿಯಾ. ಹೌದು, ಸದ್ಯಕ್ಕೆ ಮಾರುಕಟ್ಟೆಯಲ್ಲಿ ಮಹೀಂದ್ರಾ ಎಕ್ಸ್‌ಯುವಿ 300, ಕಿಯಾ ಸೋನೆಟ್‌ ಮತ್ತು ಟಾಟಾ ನೆಕ್ಸಾನ್‌ ರೂ. 15 ಲಕ್ಷದ ಆಸುಪಾಸಿನಲ್ಲಿ ಲಭ್ಯವಿದೆ.

ಮಹೀಂದ್ರಾ ಎಕ್ಸ್‌ಯುವಿ 300: ಕಡಿಮೆ ಬೆಲೆಗೆ ಅತಿ ಹೆಚ್ಚಿನ ಪವರ್‌ ಅನ್ನು ಕೊಡುವ ಆಟೋಮ್ಯಾಟಿಕ್ ಡೀಸೆಲ್‌ ಎಂಜಿನ್ ಹೊಂದಿರುವ ಕಾರೆಂದರೆ ಅದು ಮಹೀಂದ್ರಾ ಎಕ್ಸ್‌ಯುವಿ 300. ನಮ್ಮ ಈ ಲಿಸ್ಟ್‌ನ ಹೀರೋ ಎಂದರೂ ತಪ್ಪಾಗಲಾರದು. ಮಹೀಂದ್ರಾ ಎಕ್ಸ್‌ಯುವಿ 300, 1.5ಲೀ ಡೀಸೆಲ್‌ ಎಂಜಿನ್‌ನಲ್ಲೂ ಲಭ್ಯವಿದ್ದು ಇದರ ಸಹಾಯದಿಂದ ಈ ಕಾರು ಸುಮಾರು 117PS ಪವರ್‌ ಮತ್ತು ಸುಮಾರು 300NM ಟಾರ್ಕ್‌ ಅನ್ನು ಸಹ ಉತ್ಪಾದಿಸುತ್ತದೆ. ಇದರ ಬೆಲೆ 12.31-14.76 ಲಕ್ಷಗಳು (ಎಕ್ಸ್‌ ಶೋ ರೂಮ್‌).

Automatic Diesel Cars

ಕಿಯಾ ಸೊನೆಟ್‌‌: ಪ್ರಸಿದ್ದ ಕೊರಿಯನ್‌ ಕಾರು ನಿರ್ಮಾಣ ಕಂಪನಿಯಾದ ಕಿಯಾ ತನ್ನ ಸೊನೆಟ್‌ ಅನ್ನು ಸಹ ಆಟೋಮ್ಯಾಟಿಕ್ ಡೀಸೆಲ್ ಇಂಜಿನ್ ಆಯ್ಕೆಯಲ್ಲಿ ಮಾರುಕಟ್ಟೆಗೆ ತಂದಿದ್ದು, 15 ಲಕ್ಷದ ಒಳಗೆ ಡೀಸೆಲ್‌ ಕಾರು ಕೊಳ್ಳುವವರಿಗೆ ಒಂದು ಒಳ್ಳೆಯ ಆಯ್ಕೆಯಾಗಿದೆ. ಕಿಯಾ ಸೊನೆಟ್‌ ಕಾರಿನಲ್ಲಿ 1.5ಲೀಟರ್ ಡೀಸೆಲ್‌ ಎಂಜಿನ್‌ ಲಭ್ಯವಿದ್ದು ಸುಮಾರು 116 PS ಮತ್ತು 250NM ಟಾರ್ಕನ್ನು ಸೊನೆಟ್‌ ಉತ್ಪಾದಿಸುತ್ತದೆ. ಈ ಕಾರಿನ ಬೆಲೆ 13.05 - 14.89 ಲಕ್ಷ (ಎಕ್ಸ್‌ ಶೋ ರೂಮ್).

ಟಾಟಾ ನೆಕ್ಸಾನ್: ಟಾಟಾ ಮೋಟಾರ್ಸ್‌ ಇತ್ತೀಚಿನ ವರ್ಷಗಳಲ್ಲಿ ಹೊರ ತಂದ ಅತ್ಯಂತ ಪ್ರಸಿದ್ದ ಕಾರುಗಳಲ್ಲಿ ನೆಕ್ಸಾನ್‌ ಸಹ ಒಂದು. ಈ ಕಾರು ಪೆಟ್ರೋಲ್‌, ಎಲೆಕ್ಟ್ರಿಕ್‌ ಮತ್ತು ಡೀಸೆಲ್‌ ಎಂಜಿನ್‌ ಆಯ್ಕೆಗಳಲ್ಲಿ ಲಭ್ಯವಿದೆ. ಸೆಪ್ಟೆಂಬರ್‌ನಲ್ಲಿ ಟಾಟಾ ನೆಕ್ಸಾನ್‌ ಫೆಸ್‌ಲಿಫ್ಟ್‌ ಮಾದರಿಯಲ್ಲೂ ಹೊರಬಂದಿತ್ತು. ಇನ್ನು ನೆಕ್ಸಾನ್‌ ಎಂಜಿನ್‌ ಬಗ್ಗೆ ನೊಡುವುದಾದರೆ ಇದು 1.5 ಲೀಟರ್‌ ಡೀಸೆಲ್‌ ಎಂಜಿನ್‌ ಆಯ್ಕೆಯಲ್ಲೂ ಲಭ್ಯವಿದೆ.

Automatic Diesel Cars

ಈ ಪವರ್‌ಫುಲ್‌ ಎಂಜಿನ್‌ ಸಹಾಯದಿಂದ ಕಾರು ಸುಮಾರು 115 PS ಪವರ್‌ ಮತ್ತು 260 NM ಟಾರ್ಕನ್ನು ಸಹ ಉತ್ಪಾದಿಸುತ್ತದೆ. ಡೀಸೆಲ್ ಎಂಜಿನ್‌ 6 - ಸ್ಪೀಡ್‌ ಎಎಮ್‌ಟಿ ಗೇರ್‌ ಬಾಕ್ಸ್‌ ಆಯ್ಕೆಯಲ್ಲಿ ಸಿಗುತ್ತದೆ. ಇದರಿಂದ ವಾಹನ ಚಾಲಕರ ಚಲಾವಣೆಯ ಅನುಭವ ಮತ್ತಷ್ಟು ಆರಾಮದಾಯಕವಾಗಿರುತ್ತದೆ. ಇದರ ಬೆಲೆ 14.30 - 15.50 ಲಕ್ಷ (ಎಕ್ಸ್‌ ಶೋ ರೂಮ್).

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

More from DriveSpark

Article Published On: Friday, November 17, 2023, 13:01 [IST]
English summary
Only three automatic diesel cars are available under 15 lakhs in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+