2023 ಏಪ್ರಿಲ್ ಬಳಿಕ ಕಣ್ಮರೆಯಾಗಲಿವೆ ನಮ್ಮೆಲ್ಲರ ಫೇವರೆಟ್ ಟಾಪ್ 5 ಸೆಡಾನ್‌ಗಳು
ಎರಡನೇ ಹಂತದ ಭಾರತ್ ಸ್ಟೇಜ್ VI ಮಾಲಿನ್ಯ ನಿಯಮಗಳು ಏಪ್ರಿಲ್ 1 ರಿಂದ ಭಾರತದಲ್ಲಿ ಜಾರಿಗೆ ಬರಲಿದೆ. ಆರ್‌ಡಿಇ ನಿಯಮಗಳು (ರಿಯಲ್ ಡ್ರೈವಿಂಗ್ ಎಮಿಷನ್) ಬರುವಿಕೆಯೊಂದಿಗೆ, ಅನೇಕ ವಾಹನಗಳು ಭಾರತೀಯ ಮಾರುಕಟ್ಟೆಗೆ ವಿದಾಯ ಹೇಳಲು ಸಿದ್ಧವಾಗಿವೆ. ಹೊಸ ನಿಯಮಗಳು ಜಾರಿಗೆ ಬರುವುದರಿಂದ ಡೀಸೆಲ್ ಕಾರುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ.
ಹಾಗಾಗಿ ಸಣ್ಣ ಸಾಮರ್ಥ್ಯದ ಡೀಸೆಲ್ ಎಂಜಿನ್‌ಗಳು ಹಂತ ಹಂತವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಈ ಹೊಸ ಮಾನದಂಡಗಳಿಂದಾಗಿ ಮೊದಲು ಸ್ಥಗಿತಗೊಳ್ಳಬಹುದಾದ ಕೆಲವು ಮಾದರಿಗಳನ್ನು ಈ ಲೇಖನದಲ್ಲಿ ನೋಡೋಣ. ಇದರ ಜೊತೆಗೆ ಕೆಲವು ಅತ್ಯುತ್ತಮ ಸೆಡಾನ್‌ಗಳನ್ನು ಕೂಡ ಹೈಲೈಟ್ ಮಾಡಿದ್ದು, ಇವನ್ನು ಸ್ಥಗಿತಗೊಳಿಸುವ ಮೊದಲೇ ಖರೀದಿಸಬಹುದಾಗಿದೆ. ಇದರಲ್ಲಿ ನೀವು ಕಾಂಪ್ಯಾಕ್ಟ್ ಡೀಸೆಲ್ ಸೆಡಾನ್ ಅಥವಾ ಮಧ್ಯಮ ಗಾತ್ರದ ಸೆಡಾನ್ ಖರೀದಿಸಲು ಬಯಸಿದ್ದರೇ, ಈ ಕೆಳಗಿನವುಗಳನ್ನು ಒಮ್ಮೆ ಪರಿಶೀಲಿಸಬಹುದು.

ಹೋಂಡಾ ಸಿಟಿ ಪೆಟ್ರೋಲ್
ಜಪಾನಿನ ವಾಹನ ತಯಾರಕ ಹೋಂಡಾ ಏಪ್ರಿಲ್‌ನಿಂದ ಸಿಟಿ ಸೆಡಾನ್‌ನ ನಾಲ್ಕನೇ ತಲೆಮಾರಿನ ಮಾದರಿಯ ಪೆಟ್ರೋಲ್ ರೂಪಾಂತರಗಳನ್ನು ಸ್ಥಗಿತಗೊಳಿಸಲು ಯೋಜಿಸಿದೆ. ಇದನ್ನು ಎಸ್‌ವಿ ಮತ್ತು ವಿ ಎಂಬ ಎರಡು ರೂಪಾಂತರಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ. 1.5-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಇದು ಲಭ್ಯವಿದೆ. ಕಾರು ಸುಮಾರು 17.4 kmpl ಮೈಲೇಜ್ ನೀಡುತ್ತದೆ ಎಂದು ಬ್ರ್ಯಾಂಡ್ ಹೇಳಿಕೊಂಡಿದೆ. ಇದರ ಬೆಲಯು ರೂ. 9.49 ಲಕ್ಷ ಮತ್ತು ರೂ. 9.99 ಲಕ್ಷ ಎಕ್ಸ್ ಶೋ ರೂಂ. ಇದೆ.
ಹೋಂಡಾ ಸಿಟಿ ಡೀಸೆಲ್
ಐದನೇ ತಲೆಮಾರಿನ ಹೋಂಡಾ ಸಿಟಿಯ ಡೀಸೆಲ್ ಎಂಜಿನ್ ಆವೃತ್ತಿಗಳು ಕೂಡ ಭಾರತಕ್ಕೆ ವಿದಾಯ ಹೇಳುತ್ತಿವೆ. ಕಾರಿನ ಪೆಟ್ರೋಲ್ ಮಾದರಿಗಳು ಏಪ್ರಿಲ್ ನಂತರ ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ, ಆದರೆ ಜಪಾನಿನ ಬ್ರ್ಯಾಂಡ್ 1.5-ಲೀಟರ್ i-DTEC ಡೀಸೆಲ್ ಎಂಜಿನ್ ಅನ್ನು ನಿಲ್ಲಿಸಲಿದೆ. 24.1 ಕಿ.ಮೀ ಮೈಲೇಜ್ ಮಾದರಿಯನ್ನು ಹಿಂತೆಗೆದುಕೊಳ್ಳುವುದರಿಂದ ಗ್ರಾಹಕರಿಗೆ ದೊಡ್ಡ ಹೊಡೆತವಾಗಲಿದೆ. ಕಾರು V, VX ಮತ್ತು ZX ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಈಗ ಮಾಡೆಲ್ ಖರೀದಿಸಬೇಕಾದರೆ ಎಕ್ಸ್ ಶೋ ರೂಂ ಬೆಲೆಯಾಗಿ 13.73 ಲಕ್ಷದಿಂದ 15.52 ಲಕ್ಷ ರೂಪಾಯಿ ಕೊಟ್ಟರೆ ಸಾಕು.
ಹುಂಡೈ ವೆರ್ನಾ
SUV ಮಾದರಿಗಳನ್ನು ಪರಿಚಯಿಸುವ ಮೊದಲು ವೆರ್ನಾ ಹ್ಯುಂಡೈನ ಲೈನ್-ಅಪ್‌ನಿಂದ ಹೆಚ್ಚು ಮಾರಾಟವಾದ ಮಾದರಿಗಳಲ್ಲಿ ಒಂದಾಗಿದೆ. ಈ ಪ್ರೀಮಿಯಂ ಸಿ-ಸೆಗ್ಮೆಂಟ್ ಸೆಡಾನ್‌ನ ಪ್ರಮುಖ ಹೈಲೈಟ್ ಅದರ ಶಕ್ತಿಶಾಲಿ ಡೀಸೆಲ್ ಎಂಜಿನ್‌ಗಳು. ಡೀಸೆಲ್ ಎಂಜಿನ್‌ನೊಂದಿಗೆ ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ ಬರುವ ಏಕೈಕ ಸೆಡಾನ್ ಮಾದರಿಯಾಗಿದೆ. S+, SX, SX(AT), SX(O) ಮತ್ತು SX(O)AT ಎಂಬ ಐದು ವೆರ್ನಾ ಡೀಸೆಲ್ ರೂಪಾಂತರಗಳು ಮಾರಾಟದಲ್ಲಿವೆ.
ಏಪ್ರಿಲ್ ವೇಳೆಗೆ ಇವೆಲ್ಲವೂ ಹಿಂಪಡೆಯಲಿರುವುದು ಡೀಸೆಲ್ ಕಾರು ಪ್ರಿಯರಿಗೆ ದೊಡ್ಡ ಹಿನ್ನಡೆಯಾಗಲಿದೆ. ಭಾರತದಲ್ಲಿ ಹ್ಯುಂಡೈ ವೆರ್ನಾ ಡೀಸೆಲ್ ರೂಪಾಂತರಗಳ ಪ್ರಸ್ತುತ ಎಕ್ಸ್ ಶೋ ರೂಂ ಬೆಲೆ 11.28 ಲಕ್ಷದಿಂದ 15.73 ಲಕ್ಷದವರೆಗೆ ಇದೆ. ಹೋಂಡಾದಂತೆಯೇ, ಹುಂಡೈ ಕೂಡ ಹೊಸ ತಲೆಮಾರಿನ ವೆರ್ನಾವನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ. ಆದರೆ ದಕ್ಷಿಣ ಕೊರಿಯಾದ ವಾಹನ ತಯಾರಕರು ಇದು ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆಯೇ ಎಂಬುದನ್ನು ಇನ್ನೂ ಖಚಿತಪಡಿಸಿಲ್ಲ.
ಸ್ಕೋಡಾ ಆಕ್ಟೇವಿಯಾ
ಸ್ಕೋಡಾ ಆಕ್ಟೇವಿಯಾವನ್ನು ಒಂದು ಕಾಲದಲ್ಲಿ ಸೆಡಾನ್‌ಗಳ ರಾಜ ಎಂದು ಕರೆಯಲಾಗುತ್ತಿತ್ತು. ಈ ಸೆಡಾನ್ ಏಪ್ರಿಲ್‌ನಲ್ಲಿ ಹೊರಡಲಿದೆ. ಇದು ಉತ್ತಮ ಮಾದರಿಯಾಗಿದ್ದು, ಮುಂಭಾಗ ಮತ್ತು ಹಿಂಭಾಗದಲ್ಲಿ ಆರಾಮದಾಯಕ ಸವಾರಿಯನ್ನು ಒದಗಿಸುತ್ತದೆ. ಆಕ್ಟೇವಿಯಾ 2.0-ಲೀಟರ್ TSI ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸುತ್ತದೆ. ಸ್ಟೈಲ್ ಮತ್ತು ಎಲ್ & ಕೆ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ, ಹೊಸ ಆಕ್ಟೇವಿಯಾ ಭಾರತದಲ್ಲಿ ರೂ. 31.70 ಲಕ್ಷದಿಂದ ರೂ. 35.41 ಲಕ್ಷದ ನಡುವೆ ಇದೆ.
ಸ್ಕೋಡಾ ಸೂಪರ್ಬ್
ಸೂಪರ್ಬ್ ಭಾರತೀಯ ಮಾರುಕಟ್ಟೆಯಲ್ಲಿ ಬಹಳ ಹಿಂದಿನಿಂದಲೂ ಇದೆ. ಈ ಪ್ರೀಮಿಯಂ ಸೆಡಾನ್ ಸ್ಪೋರ್ಟ್‌ಲೈನ್ L&K ಎಂಬ ಎರಡು ರೂಪಾಂತರಗಳನ್ನು ಹೊಂದಿದೆ. ರೂ. 39.52 ಲಕ್ಷದಿಂದ 44 ಲಕ್ಷ ರೂಪಾಯಿಗಳ ಬೆಲೆಯ ಈ ಸ್ಕೋಡಾ ಕಾರು 2.0-ಲೀಟರ್ TSI ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಐಷಾರಾಮಿ ವೈಶಿಷ್ಟ್ಯಗಳು ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯೊಂದಿಗೆ ಪ್ಯಾಕ್ ಮಾಡಲಾಗಿದ್ದು, ಮಾದರಿಯನ್ನು ನಿಲ್ಲಿಸುವ ಮೊದಲು ನೀವು ಒಂದನ್ನು ಖರೀದಿಸಿದರೆ, ಯಾವುದೇ ತೊಂದರೆಗಳಿಲ್ಲದೆ ನೀವು ಅದನ್ನು ಕೆಲ ವರ್ಷಗಳವರೆಗೆ ಸಾಗಿಸಬಹುದು.


Click it and Unblock the Notifications