ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ! ವಾಹನ ಉದ್ಯಮ ಭಾರೀ ಕುಸಿತ: ಅಗ್ಗವಾಗಿ ಸಿಕ್ಕರು ಖರೀದಿಸುವ ಸಾಮರ್ಥ್ಯವಿಲ್ಲ!
ಪಾಕಿಸ್ತಾನ ಆಟೋಮೊಬೈಲ್ ವಲಯವು ಹಿಂದೆಂದೂ ಕಾಣದ ಕುಸಿತವನ್ನು ಕಾಣುತ್ತಿದ್ದು, ಅಲ್ಲಿನ ಕಾರು ಮಾರುಕಟ್ಟೆಗೆ ಉಳಿಗಾಲವಿಲ್ಲ ಎಂಬಂತಾಗಿದೆ. ಇದು ಜನಸಾಮಾನ್ಯರಲ್ಲಿ ಕುಗ್ಗುತ್ತಿರುವ ಕೊಳ್ಳುವ ಸಾಮರ್ಥ್ಯದಿಂದಾಗಿ ಕಾರು ಮಾರಾಟದಲ್ಲಿ ವಾಹನ ತಯಾರಕರಿಗೆ ತೀವ್ರ ನಷ್ಟವನ್ನು ತಂದೊಡ್ಡುತ್ತಿದೆ ಎಂದು ಅಂತರಾಷ್ಟ್ರೀಯ ಮಾದ್ಯಮಗಳಿಂದ ವರದಿಯಾಗಿದೆ.
ಪಾಕಿಸ್ತಾನ ಕಾರು ಮಾರುಕಟ್ಟೆಯಲ್ಲಿ ಪ್ರಸ್ತುತ ಅಟ್ಲಾಸ್ ಹೋಂಡಾ, ಪಾಕ್ ಸುಜುಕಿ, ಟೊಯೋಟಾ, ಹ್ಯುಂಡೈ ಮತ್ತು ಕಿಯಾದಂತಹ ಕಂಪನಿಗಳು ಪ್ರಾಬಲ್ಯ ಹೊಂದಿವೆ. ಆದರೆ ಅಲ್ಲಿ ಅಷ್ಟೇನೂ ಸ್ಥಳೀಯ ಉತ್ಪಾದನೆ ಇಲ್ಲ. ಇನ್ನು ದ್ವಿಚಕ್ರ - ತ್ರಿಚಕ್ರ ವಾಹನ ಮತ್ತು ವಾಣಿಜ್ಯ ವಾಹನಗಳ ಮಾರಾಟವು ತಿಂಗಳಿನಿಂದ ತಿಂಗಳಿಗೆ ಕ್ಷೀಣಿಸುತ್ತಿದೆ. ವಿಶೇಷವಾಗಿ ಮೋಟಾರ್‌ಸೈಕಲ್ ಮಾರಾಟವು ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಶೇಕಡಾ 10 ರಷ್ಟು ಕುಸಿದಿದೆ.

ಕಾರು ಮಾರಾಟದಲ್ಲಿ ಭಾರೀ ಕುಸಿತ: ಪಾಕಿಸ್ತಾನ ಆಟೋಮೋಟಿವ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (PAMA) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಅಕ್ಟೋಬರ್ ತಿಂಗಳಿನಲ್ಲಿ ಕಾರು ಮಾರಾಟವು ತಿಂಗಳಿಗೆ ಶೇ26 ರಷ್ಟು ಕುಸಿದಿದೆ. PAMA ಡೇಟಾ ಪ್ರಕಾರ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ 8,400 ಯುನಿಟ್ ಕಾರುಗಳು ಮಾರಾಟವಾಗಿದ್ದರೆ, ಅಕ್ಟೋಬರ್‌ನಲ್ಲಿ ಕೇವಲ 6,200 ಯುನಿಟ್ ಕಾರುಗಳು ಮಾರಾಟವಾಗಿ ಭಾರೀ ಕುಸಿತವನ್ನು ಕಂಡಿದೆ.
PAMA ಸದಸ್ಯರಲ್ಲದವರ ಮಾರಾಟದ ಅಂಕಿಅಂಶಗಳನ್ನು ಕೂಡ ಗಣನೆಗೆ ತೆಗೆದುಕೊಂಡರೆ, ಸೆಪ್ಟೆಂಬರ್‌ನಲ್ಲಿ 9,500 ಯುನಿಟ್ ವಾಹನಗಳು ಮಾರಾಟವಾಗಿದ್ದರೇ, ಅಕ್ಟೋಬರ್ ತಿಂಗಳಲ್ಲಿ ಒಟ್ಟು 7,000 ಯುನಿಟ್ ಕಾರುಗಳು ಮಾರಾಟವಾಗಿ ತೀವ್ರ ಕುಸಿತವಾಗಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ಇನ್ನು ಕಳೆದ ವರ್ಷ (2022) ಅಕ್ಟೋಬರ್‌ನಲ್ಲಿ ಈ ಒಟ್ಟು ಮಾರಾಟದ ಸಂಖ್ಯೆ 15,000 ಯುನಿಟ್‌ಗಳಷ್ಟಿತ್ತು.

ಪಾಕಿಸ್ತಾನದ ಒಟ್ಟಾರೆ ವಾಹನೋದ್ಯಮವು ಇತ್ತೀಚಿನ ದಿನಗಳಲ್ಲಿ ಅಗಾಧವಾದ ಸಂಕಷ್ಟಗಳನ್ನು ಎದುರಿಸುತ್ತಿದೆ. ಪಾಕಿಸ್ತಾನದ ರೂಪಾಯಿ ಮೌಲ್ಯ ಕುಸಿಯುತ್ತಿರುವ ಕಾರಣ ಬೆಲೆಗಳು ಹೆಚ್ಚಾಗಿ ಬೇಡಿಕೆ ಕಡಿಮೆಯಾಗಿದೆ. ಹೆಚ್ಚಿನ ಮಟ್ಟದ ತೆರಿಗೆಗಳು ಮತ್ತು ದುಬಾರಿ ವಾಹನ ಹಣಕಾಸು ಸಹ ಪ್ರತಿಕೂಲ ವಾತಾವರಣವನ್ನು ಸೃಷ್ಟಿಸುತ್ತಿದೆ, ಇದು ಜನಸಾಮಾನ್ಯರಿಗೆ ಒಂದು ಸಣ್ಣ ವಾಹನವನ್ನು ಸಹ ಖರೀದಿಸಲು ಪರದಾಡುವಂತೆ ಮಾಡಿದೆ.
2023-24 ರ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಪಾಕಿಸ್ತಾನ ಆಟೋಮೋಟಿವ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ದಾಖಲೆಗಳು ಕೇವಲ 27,163 ಯುನಿಟ್ ಕಾರುಗಳ ಮಾರಾಟವನ್ನು ಬಹಿರಂಗಪಡಿಸಿವೆ. ಹಿಂದಿನ ಅವಧಿಯ ಅದೇ ತಿಂಗಳುಗಳಲ್ಲಿನ ಮಾರಾಟವನ್ನು ನೋಡಿಕೊಂಡರೆ 48,573 ಯುನಿಟ್‌ಗಳಿದ್ದು, ಇದು ಶೇ44 ರಷ್ಟು ದೊಡ್ಡ ಕುಸಿತವನ್ನು ದಾಖಲು ಮಾಡಿದೆ.

ದೇಶದಲ್ಲಿ ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳಲ್ಲದೇ ಆಹಾರ ಕೊರತೆ ಕಾಡುತ್ತಿದ್ದರೆ, ಇತ್ತ ಉಗ್ರರನ್ನು ಮೇಯಿಸುತ್ತಿರುವ ಪಾಕಿಸ್ತಾನ ಸರ್ಕಾರ ತನ್ನ ದೇಶದ ಜನರಿಗಿಂತ ವಿಧ್ವಂಸ ಸೃಷ್ಟಿಸುವ ಕೃತ್ಯಗಳಿಗೆ ಹೆಚ್ಚಿನ ಒಲವು ತೋರುತ್ತಿರುವುದು ವಿಪರ್ಯಾಸ. ಪಾಕಿಸ್ತಾನದ ಸಾಮಾನ್ಯ ಪ್ರಜೆ ಒಂದು ಸಣ್ಣ ಮೋಟಾರ್ ಸೈಕಲ್ ಕೊಳ್ಳಲು ಕೂಡ ಪರದಾಡುತ್ತಿದ್ದಾನೆ ಎಂದರೆ ಅಲ್ಲಿನ ಪರಿಸ್ಥಿತಿ ದೇವರೇ ಬಲ್ಲ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








