Popular Cars Discontinued: 2023ರಲ್ಲಿ ಕಳೆದಿದ್ದು 3 ತಿಂಗಳು ಮಾತ್ರ.. ಭಾರತದಲ್ಲಿ ವಿದಾಯ ಹೇಳಿದ ಜನಪ್ರಿಯ ಕಾರುಗಳಿವು

ದೇಶಾದ್ಯಂತ ಏಪ್ರಿಲ್ 1ರಿಂದ BS6 ಹಂತ 2 ಎಮಿಷನ್ ಮಾನದಂಡಗಳು ಜಾರಿಯಾಗಿವೆ. ಪ್ರಮುಖ ವಾಹನ ತಯಾರಕ ಕಂಪನಿಗಳು ವೆಚ್ಚ ಕಡಿತ ಹಾಗೂ ಬೇಡಿಕೆ ಕಡಿಮೆಯಾಗುತ್ತಿರುವುದರಿಂದ ತಮ್ಮ ಜನಪ್ರಿಯ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ. ಇಲ್ಲಿ ಭಾರತದ ಮಾರುಕಟ್ಟೆಯಿಂದ ದೂರವಾದ ಟಾಪ್ 5 ಕಾರುಗಳ ಬಗ್ಗೆ ತಿಳಿಯೋಣ.

ಮೊದಲಿಗೆ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ, ಉತ್ಪಾದನೆಯಿಂದ ಕೈಬಿಟ್ಟಿರುವ ಆಲ್ಟೊ 800 ಬಗ್ಗೆ ಮಾತನಾಡೋಣ. ದೇಶದಲ್ಲಿ ಕಾರು ಖರೀದಿಸಬೇಕೆಂಬುವವರ ಕನಸನ್ನು ನನಸುಗೊಳಿಸಲು 2000ದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಆಲ್ಟೊ 800ನ್ನು ಮಾರುತಿ ಸುಜುಕಿ ಬಿಡುಗಡೆ ಮಾಡಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಇದರ ಬೇಡಿಕೆ ಕುಸಿದಿದ್ದು, ಎಮಿಷನ್ ಮಾನದಂಡಗಳ ಅನ್ವಯ ಎಂಜಿನ್ ನವೀಕರಿಸಿಲ್ಲ. ಜೊತೆಗೆ ಉತ್ಪಾದನೆಯನ್ನು ನಿಲ್ಲಸಿದೆ.

Popular Cars Discontinued: 2023ರಲ್ಲಿ ಕಳೆದಿದ್ದು 3 ತಿಂಗಳು ಮಾತ್ರ.. ಭಾರತದಲ್ಲಿ ವಿದಾಯ ಹೇಳಿದವು ಜನಪ್ರಿಯ ಕಾರುಗಳು

ಆದರೂ ಶೋರೂಂಗಳಲ್ಲಿ ಉಳಿದಿರುವ ಆಲ್ಟೊ 800 ಕಾರಿನ ಹಳೆಯ ಸ್ಟಾಕ್ ಗಳನ್ನು ಕೆಲವು ದಿನಗಳವರೆಗೆ ಮಾರಾಟ ಮಾಡಲಾಗುತ್ತದೆ. ಈ ಕಾರು, ರೂ.3.54 ಲಕ್ಷದಿಂದ ರೂ.5.13 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಗ್ರಾಹಕರಿಗೆ ಸಿಗಲಿದೆ. ಇದು 796 ಸಿಸಿ ಎಂಜಿನ್ ಹೊಂದಿದ್ದು, 48 PS ಪವರ್ ಹಾಗೂ 69 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

ಹೋಂಡಾ ಕಂಪನಿಯ ತನ್ನ ಬಹುನೀರಿಕ್ಷಿತ ಜಾಝ್, WR-V ಮತ್ತು 4ನೇ ಜನರೇಷನ್ ಸಿಟಿ ಕಾರುಗಳನ್ನು ದೇಶಾದ್ಯಂತ ಏಪ್ರಿಲ್ 1ರಿಂದ BS6 ಹಂತ 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಿಲ್ಲ. ಅದಕ್ಕೆ ಪ್ರಮುಖ ಕಾರಣ, ಜಾಝ್, WR-V ಮಾರಾಟ ತೀವ್ರ ಪ್ರಮಾಣದಲ್ಲಿ ಇಳಿಯುತ್ತಿದ್ದು, ಕೆಲವು ತಿಂಗಳಿನಿಂದ ಇವರೆಡು ಕಾರುಗಳ ಸೇಲ್ ನೂರರ ಗಡಿ ದಾಟಿರಲಿಲ್ಲ.

ಆದರೆ, 5ನೇ ಜನರೇಷನ್ ಸಿಟಿ ಸೆಡಾನ್ ನೊಂದಿಗೆ ಮಾರಾಟವಾಗುತ್ತಿದ್ದ 4ನೇ ಜನರೇಷನ್ ಸಿಟಿ ಸೇಲ್ಸ್ ಸ್ಥಿರವಾಗಿದ್ದರೂ ನವೀಕರಿಸಿರುವ 5ನೇ ಜನರೇಷನ್ ಸಿಟಿ ಕಾರಿಗೆ ಮಾರುಕಟ್ಟೆಯಲ್ಲಿ ಜಾಗ ಮಾಡಿಕೊಡಲು ಈ ಕಾರನ್ನು ಎಮಿಷನ್ ಮಾನದಂಡಗಳಿಗೆ ಮೇಲ್ದರ್ಜೆಗೇರಿಸದೇ ಉತ್ಪಾದನೆಯಿಂದ ಸ್ಥಗಿತಗೊಳಿಸಲಾಗಿದೆ. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ 5ನೇ ಜನರೇಷನ್ ಹೋಂಡಾ ಸಿಟಿ ರೂ.11.49 ಲಕ್ಷ ಆರಂಭಿಕ ಬೆಲೆಯಲ್ಲಿ ಸಿಗಲಿದೆ.

ಭಾರತದ ಜನಪ್ರಿಯ ವಾಹನ ತಯಾರಕ ಕಂಪನಿ ಮಹೇಂದ್ರಾ, ಬೇಡಿಕೆ ಕುಸಿತಗೊಂಡ ಹಿನ್ನೆಲೆ, ತನ್ನ ಕ್ರಾಸ್ ಓವರ್ ಹ್ಯಾಚ್‌ಬ್ಯಾಕ್ 'ಕೆಯುವಿ 100 NXT' ಅನ್ನು ಸ್ಥಗಿತಗೊಳಿಸಿದೆ. ಇದು 5 ಹಾಗೂ 6 ಆಸನ ವ್ಯವಸ್ಥೆಯಲ್ಲಿ ರೂ.6.06 ಲಕ್ಷದಿಂದ ರೂ.7.72 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುತ್ತಿತ್ತು. ಈ ಮಹೇಂದ್ರಾ ಕೆಯುವಿ 100 NXT, 1.2 ಪೆಟ್ರೋಲ್ ಎಂಜಿನ್ ಹೊಂದಿತ್ತು.

ನಿಸ್ಸಾನ್ ತನ್ನ ಅಧಿಕೃತ ವೆಬ್‌ಸೈಟ್ ನಿಂದ ಕಿಕ್ಸ್‌ ಎಸ್‌ಯುವಿಯನ್ನು ತೆಗೆದುಹಾಕಿಲ್ಲ ಆದರೆ, ಬುಕಿಂಗ್ ಮಾತ್ರ ಸ್ಥಗಿತಗೊಳಿಸಲಾಗಿದೆ. ಈ ಎಸ್‌ಯುವಿಗೆ ಭಾರತದಲ್ಲಿ ಬೇಡಿಕೆಯೇ ಇಲ್ಲವೆಂದು ಹೇಳಬಹುದು. 2022ರ ನವೆಂಬರ್ ತಿಂಗಳಲ್ಲಿ ಕಂಪನಿ ಕೇವಲ 3 ಯುನಿಟ್ ಕಿಕ್ಸ್‌ ಎಸ್‌ಯುವಿಗಳನ್ನು ಮಾರಾಟ ಮಾಡಿತ್ತು. ಆ ಬಳಿಕ, ಒಂದೇ ಒಂದು ಕಾರನ್ನು ಭಾರತದ ಗ್ರಾಹಕರು ಖರೀದಿಸಿಲ್ಲ.

ಸ್ಕೋಡಾದ ಆಕ್ಟೇವಿಯಾ ಕೂಡ ಜನಪ್ರಿಯ ಕಾರು ಮಾದರಿಯಾಗಿದೆ. ಆದರೆ, ಬೇಡಿಕೆ ಕೊರತೆ ಹಾಗೂ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಹೊಸ ಜನರೇಷನ್ ಆಕ್ಟೇವಿಯಾ ಮಾರುಕಟ್ಟೆಗೆ ಬರುತ್ತಿರುವುದರಿಂದ ಹಳೆಯ ಮಾದರಿ ಎಂಜಿನ್ ಅನ್ನು ಕಂಪನಿಯು ಎಮಿಷನ್ ಮಾನದಂಡಗಳ ಅನ್ವಯ ನವೀಕರಿಸಿಲ್ಲ. ಒಟ್ಟಾರೆಯಾಗಿ, ಬಹುತೇಕ ಬೇಡಿಕೆ ಕಳೆದುಕೊಂಡಿರುವುದರಿಂದಲೇ ಈ ಕಾರುಗಳ ಉತ್ಪಾದನೆಯನ್ನು ಕಂಪನಿಗಳು ಸ್ಥಗಿತಗೊಳಿಸಿವೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.

Article Published On: Tuesday, April 11, 2023, 8:40 [IST]
English summary
Popular cars discontinued inidia details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+