ಸೆಕೆಂಡ್‌ಹ್ಯಾಂಡ್ ಮಾರುಕಟ್ಟೆಯಲ್ಲಿ ಈ ಕಾರುಗಳ ಮುಂದೆ ಎಲ್ಲವೂ ಡಮ್ಮಿ... ಹ್ಯಾಚ್‌ಬ್ಯಾಕ್‌ಗಳ ಅಬ್ಬರ
ಭಾರತೀಯ ಆಟೋ ಉದ್ಯಮವು 2023 ರಲ್ಲಿ ಉತ್ಕರ್ಷದಲ್ಲಿದ್ದರೆ, ಇತ್ತ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆ ಕೂಡ ಮಾರಾಟದ ವಿಷಯದಲ್ಲಿ ಅದ್ಭುತವಾಗಿ ಈ ವರ್ಷ ಮುನ್ನುಗ್ಗುತ್ತಿದೆ. ತ್ರೈಮಾಸಿಕ ವರದಿಯ ಪ್ರಕಾರ, ಮೊದಲ ಬಾರಿಗೆ ಕಾರು ಖರೀದಿಸುವವರಲ್ಲಿ ಶೇ63 ರಷ್ಟು ಜನರು ಈಗ ಬಳಸಿದ ಕಾರು ವಿಭಾಗಕ್ಕೆ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ.
ಯಾವ ಕಾರುಗಳಿಗೆ ಬೇಡಿಕೆ: Q3 (ಮೂರನೇ ತ್ರೈಮಾಸಿಕ) 2023 ರಲ್ಲಿ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಹ್ಯುಂಡೈ ಗ್ರ್ಯಾಂಡ್ i10 (Hyundai Grand i10), ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಮತ್ತು ರೆನಾಲ್ಟ್ ಕ್ವಿಡ್ (Renault Kwid) ಹ್ಯಾಚ್‌ಬ್ಯಾಕ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮಾದರಿಗಳಾಗಿವೆ. ಇವುಗಳಲ್ಲಿ, ಸಿಲ್ವರ್ ಮತ್ತು ಗ್ರೇ ಬಣ್ಣಗಳು ಗ್ರಾಹಕರಲ್ಲಿ ಭಾರೀ ಬೇಡಿಕೆಯ ಆಯ್ಕೆಗಳಾಗಿವೆ.

ಒಟ್ಟಾರೆಯಾಗಿ, ಬಳಸಿದ ಕಾರು ವಿಭಾಗದಲ್ಲಿ ಗ್ರಾಹಕರು ಮಾರುತಿ ಸುಜುಕಿ, ಹ್ಯುಂಡೈ ಮತ್ತು ಹೋಂಡಾವನ್ನು ಮೊದಲ ಮೂರು ಬ್ರಾಂಡ್‌ಗಳಾಗಿ ಆದ್ಯತೆ ನೀಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆಟೋಮ್ಯಾಟಿಕ್ ಕಾರುಗಳ ಬೇಡಿಕೆಯೂ ಹೆಚ್ಚಾಗಿದೆ. ಬಳಸಿದ ಕಾರಿನ ಆನ್‌ಲೈನ್ ಖರೀದಿಯ ಜನಪ್ರಿಯತೆಯು ದೊಡ್ಡ ಏರಿಕೆಯನ್ನು ಕಂಡಿದೆ. ಶೇ70 ರಷ್ಟು ಬುಕ್ಕಿಂಗ್‌ಗಳು ಆನ್‌ಲೈನ್‌ನಲ್ಲಿ ನಡೆಯುತ್ತಿವೆ.
ಶೇ32 ರಷ್ಟು ಗ್ರಾಹಕರು ಹೋಮ್ ಡೆಲಿವರಿ ಆಯ್ಕೆ ಮಾಡಿಕೊಂಡಿದ್ದಾರೆ. ಎಂಡ್-ಟು-ಎಂಡ್ ಡಿಜಿಟಲ್ ವಹಿವಾಟುಗಳು ಸಹ ಶೇ21 ರಷ್ಟು ಹೆಚ್ಚಾಗಿವೆ. ವಿವಿಧ ವಿಭಾಗಗಳಲ್ಲಿ, ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ಹ್ಯಾಚ್‌ಬ್ಯಾಕ್‌ಗಳು ಬಳಸಿದ ಕಾರು ಖರೀದಿದಾರರಲ್ಲಿ ಹೆಚ್ಚಿನ ಬೇಡಿಕೆಯಲ್ಲಿವೆ.

Q2 (ಎರಡನೇ ತ್ರೈಮಾಸಿಕ) 2023 ಕ್ಕೆ ಹೋಲಿಸಿಕೊಂಡರೆ Q3 ನಲ್ಲಿ ಶೇ6 ರಷ್ಟು ಹೆಚ್ಚಾಗಿದೆ. ಇಲ್ಲಿ ಶೇ 57 ರಷ್ಟು ಗ್ರಾಹಕರು ಮೊದಲ ಬಾರಿಯ ಕಾರು ಖರೀದಿದಾರರಾಗಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೆ, ಸರ್ಕಾರದ ನೀತಿಗಳಲ್ಲಿನ ಬದಲಾವಣೆಯು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಡೀಸೆಲ್ ಕಾರುಗಳ ಬೇಡಿಕೆಯ ಮೇಲೂ ಪರಿಣಾಮ ಬೀರಿದೆ.
ಬಳಸಿದ ಕಾರು ಖರೀದಿದಾರರಲ್ಲಿ ಶೇ80 ರಷ್ಟು ಜನರು ಪೆಟ್ರೋಲ್ ಕಾರುಗಳಿಗೆ ಹೋಗುತ್ತಿದ್ದಾರೆ. ಬಳಸಿದ ಕಾರು ಮಾರುಕಟ್ಟೆ ಪ್ರಮುಖರಾದ ಸ್ಪಿನ್ನಿ ಸಂಗ್ರಹಿಸಿದ ಮಾಹಿತಿಯು ಪೂರ್ವ-ಮಾಲೀಕತ್ವದ ಕಾರು ಖರೀದಿದಾರರ ಸರಾಸರಿ ವಯಸ್ಸು 32 ಮತ್ತು ಮಹಿಳಾ ಕಾರು ಖರೀದಿದಾರರು ಈಗ ಶೇ32 ರಷ್ಟು ಬೇಡಿಕೆಗೆ ಕೊಡುಗೆ ನೀಡಿದ್ದಾರೆ ಎಂದು ವರದಿಯಾಗಿದೆ.

ಜೀಪ್, BMW ಮತ್ತು Mercedes-Benz ನಂತಹ ಐಷಾರಾಮಿ ಬ್ರಾಂಡ್‌ಗಳಲ್ಲಿ ಬೇಡಿಕೆಯು ಹೆಚ್ಚಾಗಿ BMW X1 SUV ಮತ್ತು ಮರ್ಸಿಡಿಸ್-ಬೆನ್ಜ್ C-ಕ್ಲಾಸ್ ಸೆಡಾನ್ ಉನ್ನತ ಸ್ಥಾನಗಳನ್ನು ಗಳಿಸುವುದರೊಂದಿಗೆ ಸ್ಥಿರವಾದ ಬೆಳವಣಿಗೆಯನ್ನು ಕಂಡಿವೆ. ಆದಾಗ್ಯೂ, ಡೀಸೆಲ್ ಕಾರುಗಳ ಮೇಲಿನ 10 ವರ್ಷಗಳ ನಿಷೇಧದ ಕಾರಣ ಡೀಸೆಲ್ ಸೆಕೆಂಡ್ ಹ್ಯಾಂಡ್ ವಾಹನಗಳಿಗೆ ಬೇಡಿಕೆ ಕಡಿಮೆಯಾಗಿದೆ.
ಶೇ80 ರಷ್ಟು ಬಳಸಿದ ಕಾರು ಖರೀದಿದಾರರು ಪೆಟ್ರೋಲ್ ಕಾರುಗಳೊಂದಿಗೆ ಹೋಗುತ್ತಿದ್ದಾರೆ. ಹಬ್ಬದ ಸೀಸನ್ ಪ್ರಕಾರ, ಸ್ಪಿನ್ನಿ ವರದಿಯು 9 ದಿನಗಳ ನವರಾತ್ರಿ ಉತ್ಸವದಲ್ಲಿಯೇ 2,300 ಕಾರುಗಳನ್ನು ಮಾರಾಟ ಮಾಡಿದೆ. ನೀಮಗೂ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುವ ಯೋಚನೆಯಿದ್ದರೆ ನಿಮ್ಮ ಆಯ್ಕೆ ಯಾವುದು ಎಂಬುದನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications