ಭಾರತದಲ್ಲಿ ಸೆಡಾನ್ ಕ್ರೇಜ್ ಕಡಿಮೆಯಾಗಲು ಕಾರಣ ಗೊತ್ತಾ? ಎಸ್‌ಯುವಿಗಳ ಅಬ್ಬರಕ್ಕೆ ತತ್ತರ!

ಆಫ್ ರೋಡ್ ಸಾಮರ್ಥ್ಯದೊಂದಿಗೆ ದೈತ್ಯವಾಗಿ ಕಾಣುವಲ್ಲಿ ಹೆಸರುವಾಸಿಯಾದ ಎಸ್‌ಯುವಿಗಳು ಈ ಹಿಂದೆ ಬೆರಳೆಣಿಕೆಯಷ್ಟು ಮಾತ್ರ ಇದ್ದವು. ಆದ್ರೆ ವರ್ಷಗಳು ಕಳೆದಂತೆ ಈ ಎಸ್‌ಯುವಿಗಳು ಭಾರತೀಯ ಆಟೋ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಆಕ್ರಮಿಸಿಬಿಟ್ಟಿವೆ. ಯಾವಮಟ್ಟಿಗೆ ಅಂದ್ರೆ ತುಂಬಾ ಜನಪ್ರಿಯವಾಗಿದ್ದ ಸೆಡಾನ್‌ಗಳನ್ನು ಕೂಡ ಕಂಪನಿಗಳು ನಿಲ್ಲಿಸಿಬಿಟ್ಟಿವೆ.

ಹೆಚ್ಚು ಹೆಚ್ಚು ಖರೀದಿದಾರರು ಸೆಡಾನ್‌ಗಳಿಗಿಂತ ಎಸ್‌ಯುವಿಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಈ ಬದಲಾವಣೆಯಾಗಿದೆ. ಮಾರುಕಟ್ಟೆಯಲ್ಲಿ ಎಸ್‌ಯುವಿಗಳು ಸಂಪೂರ್ಣವಾಗಿ ಪ್ರಾಬಲ್ಯ ಹೊಂದುತ್ತಿರುವುದರಿಂದ ಇಂದು ರಸ್ತೆಗಳಲ್ಲಿ ಕೆಲವೇ ಕೆಲವು ಸೆಡಾನ್‌ಗಳನ್ನು ನೋಡುತ್ತಿದ್ದೇವೆ. ಅಷ್ಟಕ್ಕು ಸೆಡಾನ್‌ಗಳ ಈ ಸ್ಥಿತಿಗೆ ಕಾರಣವಾದ ಪ್ರಮುಖ ಅಂಶಗಳನ್ನು ಇಲ್ಲಿ ನೋಡಣ.

reason-for-the-reduction-in-sedan-craze-in-india

ವ್ಯಾಪಕ ಶ್ರೇಣಿಯ ಆಯ್ಕೆಗಳು: 2010 ರವರೆಗೆ ನಮಗೆ ನಿಜವಾಗಿಯೂ ಅಷ್ಟೇನು ಎಸ್‌ಯುವಿಗಳ ಆಯ್ಕೆ ಇರಲಿಲ್ಲ. ನಾವು ಫಾರ್ಚೂನರ್, ಎಂಡೀವರ್, ಪಜೆರೊ ಮತ್ತು ಸಫಾರಿ ಮತ್ತು ಸ್ಕಾರ್ಪಿಯೊದಂತಹ ಕೆಲವು ದುಬಾರಿ ಎಸ್‌ಯುವಿಗಳನ್ನು ಹೊಂದಿದ್ದೆವು. ಆದರೆ ಈಗ, ಕೇವಲ 8 ಲಕ್ಷ ರೂ.ಗಳಷ್ಟು ಕಡಿಮೆ ಬೆಲೆಯ ಎಸ್‌ಯುವಿಗಳನ್ನು ಖರೀದಿಸುವ ಹಲವು ಆಯ್ಕೆಗಳಿವೆ.

ನಮಗೆ ಖರೀದಿಸಲು ಪಂಚ್ ಮತ್ತು ಎಕ್ಸ್‌ಪೀರಿಯಂತಹ ಮೈಕ್ರೋ ಎಸ್‌ಯುವಿಗಳಿವೆ. ನೆಕ್ಸನ್, ಸಾನೆಟ್ ದಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳು ಕೂಡ ಇವೆ. ಇದಲ್ಲದೆ ಕ್ರೆಟಾ ಮತ್ತು ಸೆಲ್ಟೋಸ್‌ಗಳ ಸಂಪೂರ್ಣ ಮೀಸಲಾದ ವಿಭಾಗ ಕೂಡ ಇದೆ. ಸದ್ಯ ಈ ಬೆಳವಣಿಗೆ ಭಾರತದಲ್ಲಿ ಲಭ್ಯವಿರುವ ಎಸ್‌ಯುವಿಗಳ ಸಂಖ್ಯೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಆದರೆ ಕೆಲವೇ ಸಾಮೂಹಿಕ ಮಾರುಕಟ್ಟೆ ಸೆಡಾನ್‌ಗಳು ಮಾತ್ರ ಲಭ್ಯವಿದೆ.

reason-for-the-reduction-in-sedan-craze-in-india

ಸ್ಥಳವಕಾಶ: ಸಣ್ಣ ಎಸ್‌ಯುವಿ ಆಗಿರಲಿ ಅಥವಾ ದೊಡ್ಡದಾಗಿರಲಿ, ಸೆಡಾನ್‌ಗಳಿಗೆ ಹೋಲಿಸಿದರೆ ಕುಳಿತುಕೊಳ್ಳಲು ಸಾಕಷ್ಟು ಸ್ಥಳಾವಕಾಶವನ್ನು ಹೊಂದಿರುತ್ತವೆ. ಅಲ್ಲದೆ ಚಾಲಕನಿಗೆ ಮುಂದಿನ ರಸ್ತೆಯ ಅತ್ಯುತ್ತಮ ನೋಟವನ್ನು ನೀಡುತ್ತದೆ. ಬಹುಪಾಲು ಎಸ್‌ಯುವಿಗಳಲ್ಲಿ ನಿಮ್ಮ ಮತ್ತು ನಿಮ್ಮ ಮುಂದಿರುವ ಕಾರಿನ ನಡುವಿನ ಅಂತರವನ್ನು ನಿರ್ಣಯಿಸಲು ಅನುವು ಮಾಡಿಕೊಡುವ ಬಾನೆಟ್‌ನ ಅಂಚುಗಳನ್ನು ನೀವು ಸ್ಪಷ್ಟವಾಗಿ ನೋಡಬಹುದು.

ಉತ್ತಮ ಗ್ರೌಂಡ್ ಕ್ಲಿಯರೆನ್ಸ್: ಭಾರತೀಯ ರಸ್ತೆಗಳು ಎಲ್ಲರಿಗೂ ತಿಳಿದೇ ಇದೆ. ಹೊಂಡಗಳು ಎಲ್ಲೆಂದರಲ್ಲಿ ಸ್ಪೀಡ್ ಬ್ರೇಕರ್‌ಗಳನ್ನು ಎದುರಿಸುತ್ತೇವೆ. ಅಂತಹ ರಸ್ತೆಗಳಲ್ಲಿ ಸೆಡಾನ್ ಓಡಿಸುವುದು ತುಂಬಾ ಕಷ್ಟ, ಏಕೆಂದರೆ ಅವುಗಳ ಕಡಿಮೆ ಗ್ರೌಂಡ್ ಕ್ಲಿಯರೆನ್ಸ್ ಇದಕ್ಕೆ ಕಾರಣ. ನೀವು ಮೊದಲು ಸಂಪೂರ್ಣವಾಗಿ ನಿಧಾನಗೊಳಿಸಿ ಬಹಳ ಎಚ್ಚರಿಕೆಯಿಂದ ಓಡಿಸಬೇಕು. ಇಲ್ಲದಿದ್ದರೇ ನಿಮ್ಮ ಕಾರಿನ ಚಾಸಿಸ್ ಹಾನಿಗೊಳ್ಳುತ್ತದೆ.

reason-for-the-reduction-in-sedan-craze-in-india

ಆದರೆ ಎಸ್‌ಯುವಿ ಹಾಗಾಲ್ಲ, ತುಂಬಾ ದೊಡ್ಡ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಬರುತ್ತದೆ. ಹೈ ಗ್ರೌಂಡ್ ಕ್ಲಿಯರೆನ್ಸ್ ಸ್ಪೀಡ್ ಬ್ರೇಕರ್‌ಗಳಲ್ಲಿ ಸಹ ಸಹಾಯ ಮಾಡುತ್ತದೆ. ಏಕೆಂದರೆ ನೀವು ಸೆಡಾನ್‌ನಷ್ಟು ನಿಧಾನಗೊಳಿಸಬೇಕಾಗಿಲ್ಲ, ನಿಮ್ಮ ಕಾರಿನ ಅಂಡರ್‌ಬಾಡಿಗೆ ಹಾನಿಯಾಗಲಿದೆ ಎಂಬ ಭಯವಿಲ್ಲದೇ ಯಾವುದೇ ರೀತಿಯ ಸ್ಪೀಡ್ ಬ್ರೇಕರ್‌ಗಳನ್ನು ದಾಟಬಹುದು.

ಸ್ಥಾನಮಾನ: ಎಸ್‌ಯುವಿಗಳು ಯಾವಾಗಲೂ ಸ್ಥಿತಿ ಸಂಕೇತವಾಗಿದ್ದು, ಅದು ಇಂದಿಗೂ ಮುಂದುವರೆದಿದೆ. ಸಫಾರಿ, ಸ್ಕಾರ್ಪಿಯೊ ಮತ್ತು ಪ್ರಬಲ ಫಾರ್ಚೂನರ್ ರಾಜಕಾರಣಿಗಳ ಮತ್ತು ಉದ್ಯಮಿಗಳ ಆದ್ಯತೆಯ ಎಸ್‌ಯುವಿಗಳಾಗಿವೆ. ಎಸ್‌ಯುವಿಗಳ ಎತ್ತರ, ಅಗಲ ಖಂಡಿತವಾಗಿಯೂ ಎಲ್ಲರ ಗಮನವನ್ನು ಸೆಳೆಯುತ್ತವೆ. ಇಂದಿಗೂ ನಾವು ಎಸ್‌ಯುವಿಗಳನ್ನು ತಮ್ಮ ಲೆವಲ್ ತೋರಿಸಿಕೊಳ್ಳಲು ಖರೀದಿಸುವುದನ್ನು ನಾವು ನೋಡಬಹುದು.

ಮನಸ್ಥಿತಿ: ಈಗ ಜನರು ಸೆಡಾನ್ ಗಿಂತ ಎಸ್‌ಯುವಿಗಳಿಗೆ ಆದ್ಯತೆ ನೀಡಲು ಒಂದು ದೊಡ್ಡ ಕಾರಣವೆಂದರೆ ನಮ್ಮಲ್ಲಿರುವ ಮನಸ್ಥಿತಿ. ಸಾಮಾನ್ಯವಾಗಿ ಎಸ್‌ಯುವಿಯ ಗಾತ್ರ ಮತ್ತು ಕೆಟ್ಟ ರಸ್ತೆಗಳಲ್ಲೂ ಅವುಗಳ ಸಾಮರ್ಥ್ಯಗಳನ್ನು ನೋಡುವುದರಿಂದ ಎಸ್‌ಯುವಿಗಳಿಗೆ ಹೆಚ್ಚಿನ ಸ್ಥಳ ಮತ್ತು ಸೌಕರ್ಯವಿದೆ ಎಂದು ಜನರು ನಂಬುವಂತೆ ಮಾಡಿದೆ. ವಾಸ್ತವವಾಗಿ ಕೆಲವು ಸಂದರ್ಭಗಳಲ್ಲಿ ಸೆಡಾನ್‌ಗಳು ದೂರದ ಪ್ರಯಾಣಕ್ಕೆ ಆರಮದಾಯಕ ಅನುಭವ ನೀಡುತ್ತವೆ.

More from DriveSpark

Article Published On: Wednesday, December 20, 2023, 18:22 [IST]
English summary
Reason for the reduction in sedan craze in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+