Safest Cars India: ಗ್ಲೋಬಲ್ NCAP ಪಟ್ಟಿ.. ಭಾರತದ ಅತ್ಯಂತ ಸುರಕ್ಷಿತ ಕಾರುಗಳಿವು

ಗ್ಲೋಬಲ್‌ ಎನ್‌ಸಿಎಪಿ ಸಂಸ್ಥೆಯು ಕಾರುಗಳಿಗೆ ಕ್ರ್ಯಾಶ್ ಒಳಗೊಂಡಂತೆ ವಿವಿಧ ಸುರಕ್ಷಿತ ಪರೀಕ್ಷೆ ನಡೆಸಿ, ರೇಟಿಂಗ್ ನೀಡುತ್ತದೆ. ಭಾರತದ ಟಾಟಾ ಹಾಗೂ ಮಹೀಂದ್ರಾ ಕಂಪನಿಯ ಹೆಚ್ಚಿನ ಕಾರುಗಳು ಈ ಪಟ್ಟಿಯಲ್ಲಿ ಸ್ಥಾನ ಗಳಿಸಿ, 5 ಸ್ಟಾರ್ ರೇಟಿಂಗ್ ಪಡೆದಿವೆ. ಇತ್ತೀಚಿಗೆ ಸ್ಕೋಡಾ, ಪೋಕ್ಸ್‌ವ್ಯಾಗನ್ ಸೆಡಾನ್ ಗಳು ಸೇಫ್ಟಿ ಕಾರುಗಳಾಗಿವೆ ಹೊರಹೊಮ್ಮಿವೆ.

ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಅತ್ಯಂತ ಜನಪ್ರಿಯ ಎಸ್‌ಯುವಿಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೊ ಎನ್ ಒಂದಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮ ಕಾರೆಂದು ಹೆಸರುವಾಸಿಯಾಗಿದೆ. ವಯಸ್ಕರ ರಕ್ಷಣೆಯಲ್ಲಿ 34ಕ್ಕೆ 29.25 ಅಂಕಗಳನ್ನು ಗಳಿಸಿ, ಗ್ಲೋಬಲ್‌ ಎನ್‌ಸಿಎಪಿಯಿಂದ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದ್ದು, ಮಕ್ಕಳ ರಕ್ಷಣೆಯಲ್ಲಿ 49ಕ್ಕೆ 28.93 ಅಂಕಗಳ ಮೂಲಕ 3 ಸ್ಟಾರ್ ರೇಟಿಂಗ್ ಗಳಿಸಿದೆ. ಸ್ಕಾರ್ಪಿಯೊ ಎನ್ ರೂ.12.74 ಲಕ್ಷದಿಂದ 24.05 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ.

Safest Cars India: ಗ್ಲೋಬಲ್ NCAP ಪಟ್ಟಿ.. ಭಾರತದ ಅತ್ಯುತ್ತಮ ಸುರಕ್ಷಿತ ಕಾರುಗಳಿವು

ಇತ್ತೀಚಿಗೆ ಗ್ಲೋಬಲ್‌ ಎನ್‌ಸಿಎಪಿಯಿಂದ ಸ್ಕೋಡಾ ಸ್ಲಾವಿಯಾ ಮತ್ತು ಪೋಕ್ಸ್‌ವ್ಯಾಗನ್ ವರ್ಟಸ್ ಮಿಡ್-ಸೈಜ್ ಸೆಡಾನ್ ಗಳು 5 ಸ್ಟಾರ್ ರೇಟಿಂಗ್ ಪಡೆದಿದ್ದು, ದೇಶದ ಬೆಸ್ಟ್ ಸೇಫ್ಟಿ ಕಾರುಗಳ ಪಟ್ಟಿಯಲ್ಲಿ ಸ್ಥಾನಪಡೆದಿವೆ. ಇವೆರಡು ಸೆಡಾನ್ ಗಳು ವಯಸ್ಕರ ರಕ್ಷಣೆ ವಿಭಾಗದಲ್ಲಿ 34ಕ್ಕೆ 29.71 ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 42 ಅಂಕಗಳನ್ನು ಪಡೆಯುವ ಮೂಲಕ 5 ಸ್ಟಾರ್ ರೇಟಿಂಗ್ ಗಳಿಸಿವೆ.

ಸ್ಲಾವಿಯಾ ಹಾಗೂ ವರ್ಟಸ್ ಕಾರುಗಳು ಮಾತ್ರವಲ್ಲದೆ, ಸ್ಕೋಡಾ ಕುಶಾಕ್ ಹಾಗೂ ಪೋಕ್ಸ್‌ವ್ಯಾಗನ್ ಟೈಗನ್ ಕಾರುಗಳು ಕೂಡ ಗ್ಲೋಬಲ್‌ ಎನ್‌ಸಿಎಪಿಯಿಂದ 5 ಸ್ಟಾರ್ ರೇಟಿಂಗ್ ಪಡೆದಿವೆ. ವಯಸ್ಕರ ರಕ್ಷಣೆಯಲ್ಲಿ 34ಕ್ಕೆ 29.64 ಅಂಕ ಹಾಗೂ ಮಕ್ಕಳ ಸುರಕ್ಷತೆ ವಿಭಾಗದಲ್ಲಿ 49ಕ್ಕೆ 42 ಅಂಕಗಳನ್ನು ಗಳಿಸಿವೆ. ಸ್ಕೋಡಾ ಕುಶಾಕ್ ರೂ.11.59 - 19.69 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದರೆ, ಪೋಕ್ಸ್‌ವ್ಯಾಗನ್ ಟೈಗನ್ ರೂ.11.62 - 19.06 ಲಕ್ಷ ದರವನ್ನು ಪಡೆದಿದೆ.

ಟಾಟಾದ ಬಹುನೀರಿಕ್ಷಿತ 'ಪಂಚ್' ರೂ.10ದೊಳಗೆ ಸಿಗುವ ಉತ್ತಮ ಸುರಕ್ಷಿತ ಕಾರಾಗಿದೆ. ಗ್ಲೋಬಲ್‌ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ವಯಸ್ಕರ ರಕ್ಷಣೆಯಲ್ಲಿ 17ಕ್ಕೆ 16.45 ಅಂಕ ಪಡೆದು 5 ಸ್ಟಾರ್ ರೇಟಿಂಗ್ ತನ್ನದಾಗಿಸಿಕೊಂಡಿದೆ. ಮಕ್ಕಳ ರಕ್ಷಣೆಯಲ್ಲಿ 49ಕ್ಕೆ 40.89 ಸ್ಕೂರ್ ಮಾಡುವ ಮೂಲಕ 4 ಸ್ಟಾರ್ ರೇಟಿಂಗ್ ಗಳಿಸಿದೆ. ಟಾಟಾ ಪಂಚ್ ಕಾರು, 18 - 20 kmpl ಮೈಲೇಜ್ ನೀಡಲಿದ್ದು, 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಟಾಟಾ ಆಲ್ಟ್ರೋಜ್, ಹ್ಯಾಚ್‌ಬ್ಯಾಕ್ ಆಗಿದ್ದರೂ ಗ್ಲೋಬಲ್‌ ಎನ್‌ಸಿಎಪಿ ಅತ್ಯುತ್ತಮ ಸುರಕ್ಷಿತ ಕಾರೆಂದು ಗುರುತಿಸಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ 17ಕ್ಕೆ 16.13 ಅಂಕಗಳನ್ನು ಗಳಿಸುವ ಮೂಲಕ 5 ಸ್ಟಾರ್ ರೇಟಿಂಗ್ ಪಡೆದಿದೆ. ಅಲ್ಲದೆ, ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 29 ಅಂಕಗಳನ್ನು ಗಳಿಸುವ ಮೂಲಕ 3 ಸ್ಟಾರ್ ರೇಟಿಂಗ್ ತನ್ನಾಗಿಸಿಕೊಂಡಿದೆ. ಈ ಕಾರು, ರೂ.6.45 ಲಕ್ಷದಿಂದ ರೂ.10.40 ಲಕ್ಷ ಬೆಲೆಯನ್ನು ಹೊಂದಿದೆ.

ಮೊದಲ ಮೆಡ್ ಇನ್ ಕಾರಾಗಿರುವ 'ಟಾಟಾ ನೆಕ್ಸಾನ್‌' 2018ರಲ್ಲಿಯೇ ಗ್ಲೋಬಲ್‌ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ವಯಸ್ಕರ ರಕ್ಷಣೆಯಲ್ಲಿ 17ಕ್ಕೆ 16.06 ಅಂಕಗಳನ್ನು ಪಡೆದುಕೊಳ್ಳುವ 5 ಸ್ಟಾರ್ ರೇಟಿಂಗ್ ಗಳಿಸಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ 25ಕ್ಕೆ 17 ಅಂಕ ಗಳಿಸುವ ಮೂಲಕ 3 ಸ್ಟಾರ್ ಪಡೆದಿದೆ. ಈ ಕಾರು, ಸುರಕ್ಷತೆಯ ದೃಷ್ಟಿಯಿಂದ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ಸ್, ABS(ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಹೊಂದಿದೆ.

ಮಹೀಂದ್ರಾ XUV300, ಗ್ಲೋಬಲ್‌ ಎನ್‌ಸಿಎಪಿ ಪರೀಕ್ಷೆಯ ವಯಸ್ಕ ರಕ್ಷಣೆಯಲ್ಲಿ 17ಕ್ಕೆ 16.42 ಸ್ಕೂರ್ ಮಾಡಿ, 5 ಸ್ಟಾರ್ ರೇಟಿಂಗ್ ಪಡೆದಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 37.44 ಅಂಕ ಗಳಿಸಿ, 3 ಸ್ಟಾರ್ ರೇಟಿಂಗ್ ಗಳಿಸಿದೆ. ಇನ್ನು XUV700 ಕೂಡ ವಯಸ್ಕ ರಕ್ಷಣೆ ವಿಭಾಗದಲ್ಲಿ 5 ಸ್ಟಾರ್, ಮಕ್ಕಳ ರಕ್ಷಣೆಯಲ್ಲಿ 4 ಸ್ಟಾರ್ ರೇಟಿಂಗ್ ಪಡೆದಿದೆ.

Article Published On: Saturday, April 8, 2023, 13:09 [IST]
English summary
Safest cars india rating global ncap details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+