ಭಾರತದ ಅತ್ಯಂತ ಸುರಕ್ಷಿತ ಕಾರುಗಳು: 4 ಅತ್ಯಂತ ಕಳಪೆ ಕಾರುಗಳು: ತಿಳಿದು ನಾಲ್ವರನ್ನು ಎಚ್ಚರಿಸಿ

ಭಾರತದಲ್ಲಿ ವಿಶ್ವದ ಅತ್ಯಂತ ಸುರಕ್ಷಿತ ಕಾರುಗಳು ಲಭ್ಯವಿದೆ, ಹಾಗೆಯೇ ಅತ್ಯಂತ ಕೆಟ್ಟ ಕಾರುಗಳು ಕೂಡ ಸಿಗುತ್ತವೆ. ಇಲ್ಲಿ ಹೇಳುತ್ತಿರುವುದು ಕೇವಲ ಸುರಕ್ಷತೆ ದೃಷ್ಟಿಯಿಂದ ಮಾತ್ರ, ಉಳಿದಂತೆ ಎಂಜಿನ್, ವೈಶಿಷ್ಟ್ಯಗಳ ವಿಷಯದಲ್ಲಿ ಇತರ ಕಾರುಗಳಂತೆ ಈ ಕಾರುಗಳು ಕೂಡ ಉತ್ತಮ ವಿಮರ್ಶೆಯನ್ನು ಪಡೆದಿವೆ. ಆದ್ರೂ ಗುಣಮಟ್ಟ ಅತಿಮುಖ್ಯ ಎಂಬುದನ್ನು ಮರಿಯಬಾರದು.

ಅತ್ಯಂತ ಸುರಕ್ಷಿತ ಕಾರುಗಳು
ಟಾಟಾ ಹ್ಯಾರಿಯರ್ ಮತ್ತು ಸಫಾರಿ: ಹೊಸ ಟಾಟಾ ಹ್ಯಾರಿಯರ್ (Tata harrier) ಮತ್ತು ಸಫಾರಿ (safari) ಮಾದರಿಗಳನ್ನು ಗ್ಲೋಬಲ್ ಎನ್‌ಸಿಎಪಿ ಪ್ರೋಟೋಕಾಲ್‌ಗೆ ಅನುಗುಣವಾಗಿ ಪರೀಕ್ಷಿಸಲಾಯಿತು, ಇದು ಹೆಚ್ಚು ಕಠಿಣವಾದ ಪರೀಕ್ಷಾ ಏಜೆನ್ಸಿಯಾಗಿದೆ. ಆಲ್ಟ್ರೊಜ್, ನೆಕ್ಸಾನ್ ಮತ್ತು ಪಂಚ್ ಮಾದರಿಗಳ ನಂತರ ಟಾಟಾದಿಂದ ಹ್ಯಾರಿಯರ್ ಮತ್ತು ಸಫಾರಿ ಈಗ 5-ಸ್ಟಾರ್ ರೇಟಿಂಗ್ ಗಳಿಸಿದ ವಾಹನಗಳಾಗಿ ಗುರ್ತಿಸಿಕೊಂಡಿವೆ.

safest-cars-unsafe-cars-safari-harrier-swift-wagonr

ಟಾಟಾ ಹ್ಯಾರಿಯರ್ ಮತ್ತು ಸಫಾರಿ ವಯಸ್ಕರ ರಕ್ಷಣೆಯಲ್ಲಿ 34 ಅಂಕಗಳಲ್ಲಿ 33.05 ಅಂಕಗಳನ್ನು ಗಳಿಸಿವೆ. ಪರೀಕ್ಷೆಯ ಸಮಯದಲ್ಲಿ, ಎರಡೂ ವಾಹನಗಳು ಚಾಲಕ ಮತ್ತು ಪ್ರಯಾಣಿಕರಿಗೆ ಅತ್ಯುತ್ತಮವಾದ ರಕ್ಷಣೆಯನ್ನು ಪ್ರದರ್ಶಿಸಿವೆ. ಮಕ್ಕಳ ರಕ್ಷಣೆ ಪರೀಕ್ಷೆಗಳಲ್ಲಿ 49 ರಲ್ಲಿ 45 ಅಂಕಗಳನ್ನು ಸಂಗ್ರಹಿಸಿವೆ. ಇನ್ನು ಟಾಟಾ ಇತರ ಕಾರುಗಳಾದ Tiago ಮತ್ತು Tigor 4-ಸ್ಟಾರ್ ರೇಟಿಂಗ್‌ಗಳನ್ನು ಹೊಂದಿವೆ.

ವರ್ಟಸ್ ಮತ್ತು ಸ್ಲಾವಿಯಾ: ಫೋಕ್ಸ್‌ವ್ಯಾಗನ್‌ ವರ್ಟಸ್ ಸ್ಕೋಡಾ ಸ್ಲಾವಿಯಾ ಇವರೆಡೂ ಸುರಕ್ಷತಾ ಪರೀಕ್ಷೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿವೆ. ವಯಸ್ಕರ ಸುರಕ್ಷತೆಯಲ್ಲಿ 34ರಲ್ಲಿ 29.71 ಪಾಯಿಂಟ್ ಮತ್ತು ಮಕ್ಕಳ ಸುರಕ್ಷತೆಯಲ್ಲಿ 49ರಲ್ಲಿ 42 ಪಾಯಿಂಟ್‌ಗಳನ್ನು ಗಳಿಸಿವೆ. ಸ್ಕೋಡಾ ಸ್ಲಾವಿಯಾ ಮತ್ತು ವೋಕ್ಸ್‌ವ್ಯಾಗನ್‌ ವರ್ಟಸ್ ಎರಡೂ ಒಂದೇ ಫ್ಲಾಟ್‌ಫಾರ್ಮ್ ಆಧಾರಿತ ಕಾರುಗಳಾಗಿವೆ.

safest-cars-unsafe-cars-safari-harrier-swift-wagonr

ಇನ್ನು ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್‌ ಟೈಗನ್ ಕೂಡಾ ಫೈವ್ ಸ್ಟಾರ್ ರೇಟಿಂಗ್ ಮೂಲಕ ಗಮನ ಸೆಳೆದಿವೆ. ಈ ಎಸ್‌ಯುವಿಗಳೂ ಒಂದೇ ಫ್ಲಾಟ್‌ಫಾರ್ಮ್ ಆಧರಿಸಿವೆ. ಹೀಗಾಗಿ ಸುರಕ್ಷತಾ ರೇಟಿಂಗ್ ಕೂಡಾ ಒಂದೇ ಆಗಿದೆ. ಈ ಎರಡು ಎಸ್‌ಯುವಿಗಳು ಅಡಲ್ಟ್‌ ಆಕ್ಯುಪೆನ್ಸಿ ಪ್ರೊಟೆಕ್ಷನ್‌ ಮತ್ತು ಚೈಲ್ಡ್‌ ಆಕ್ಯುಪೆನ್ಸ್ ಪ್ರೊಟೆಕ್ಷನ್‌ನಲ್ಲಿ 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ.

ಕಳಪೆ ಗುಣಮಟ್ಟದ ಕಾರುಗಳು
ಮಾರುತಿ ವ್ಯಾಗನ್‌ಆರ್: ಮಾರುತಿ ಸುಜುಕಿ ವ್ಯಾಗನ್‍ಆರ್ ಸುಮಾರು ಎರಡು ದಶಕಗಳಿಂದ ಮಾರಾಟದಲ್ಲಿದೆ. ಈಗ ಮೂರನೇ ತಲೆಮಾರಿನ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಈ ಮಾರುತಿ ವ್ಯಾಗನ್‍ಆರ್ ನಿರಾಸೆ ಗೊಳಿಸಿದೆ. ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ವಯಸ್ಕ ಪ್ರಯಾಣಿಕರ ವಿಭಾಗದಲ್ಲಿ ಸಿಂಗಲ್ ಸ್ಟಾರ್ ಮತ್ತು ಮಕ್ಕಳ ವಿಭಾಗದಲ್ಲಿ ಶೂನ್ಯ ಅಂಕವನ್ನು ಗಳಿಸಿದೆ.

safest-cars-unsafe-cars-safari-harrier-swift-wagonr

ಮಾರುತಿ ಇಗ್ನಿಸ್: ಗ್ಲೋಬಲ್ ಎನ್‌ಸಿಎಪಿ ಪರೀಕ್ಷಾ ಪ್ರೋಟೋಕಾಲ್‌ಗಳ ಅಡಿಯಲ್ಲಿ, ಮಾರುತಿ ಸುಜುಕಿ ಇಗ್ನಿಸ್ ಕಾರು ಒಟ್ಟಾರೆಯಾಗಿ 1-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ವಯಸ್ಕ ಪ್ರಯಾಣಿಕರ ರಕ್ಷಣೆ ಪರೀಕ್ಷೆಯಲ್ಲಿ ಗರಿಷ್ಠ 34 ಅಂಕಗಳಲ್ಲಿ 16.48 ಅಂಕಗಳನ್ನು ಗಳಿಸಿದೆ. ಇಗ್ನಿಸ್‌ನ ಬಾಡಿ ಶೆಲ್ ಅನ್ನು ಅಸ್ಥಿರ ಮತ್ತು ಹೆಚ್ಚಿನ ಹೊರೆಗಳನ್ನು ತಡೆದುಕೊಳ್ಳಲು ಅಸಮರ್ಥ ಎಂದು ರೇಟ್ ಮಾಡಲಾಗಿದೆ.

ಮಾರುತಿ ಎಸ್‌ಪ್ರೆಸ್ಸೋ: ಕೈಗೆಟುಕುವ ಬೆಲೆಯೊಂದಿಗೆ ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಎಸ್-ಪ್ರೆಸ್ಸೊ ಮಾದರಿಯು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಕೇವಲ 1-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ವಯಸ್ಕರ ರಕ್ಷಣೆಯಲ್ಲಿ ಗರಿಷ್ಠ 34 ಅಂಕಗಳಲ್ಲಿ 20.03 ಅಂಕಗಳನ್ನು ಗಳಿಸಿದೆ. ಮಕ್ಕಳ ರಕ್ಷಣೆಯಲ್ಲಿ ಸಂಭವನೀಯ 49 ರಲ್ಲಿ ಕೇವಲ 3.52 ಅಂಕಗಳನ್ನು ಪಡೆದಿದೆ.

safest-cars-unsafe-cars-safari-harrier-swift-wagonr

ಮಾರುತಿ ಸ್ವಿಫ್ಟ್: ಮಾರುತಿ ಸುಜುಕಿ ಸ್ವಿಫ್ಟ್ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ. ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 34 ರಲ್ಲಿ 19.19 ಅಂಕಗಳನ್ನು ಗಳಿಸಿದರೆ, ಮಕ್ಕಳ ರಕ್ಷಣೆಯಲ್ಲಿ 49 ರಲ್ಲಿ 16.68 ಅಂಕಗಳನ್ನು ಗಳಿಸಿ ನಿರಾಸೆಗೊಳಿಸಿದೆ.

More from DriveSpark

Article Published On: Saturday, November 11, 2023, 11:31 [IST]
English summary
Safest cars unsafe cars safari harrier swift wagonr
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+