ಸ್ಕಾರ್ಪಿಯೋ ಪಲ್ಟಿಯಾಗಿ ಯುವಕ ಸಾವು, ಆನಂದ್ ಮಹೀಂದ್ರಾ ವಿರುದ್ಧ ಎಫ್ಐಆರ್: ಕಂಪನಿ ವಿವರಣೆ
ಇತ್ತೀಚೆಗೆ, ಉತ್ತರ ಪ್ರದೇಶದಲ್ಲಿ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra) ಮತ್ತು ಇತರ 12 ಜನರ ವಿರುದ್ಧ ತಮ್ಮ ಕಂಪನಿಯು ಉತ್ಪಾದಿಸುವ ಕಾರುಗಳ ಸುರಕ್ಷತೆಯ ಕುರಿತು ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗಿದೆ. ಇದು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಕೋಲಾಹಲ ಮತ್ತು ಗೊಂದಲಕ್ಕೆ ಕಾರಣವಾಗಿದೆ.
ಇದರ ಬೆನ್ನಲ್ಲೇ ಹಲವು ವದಂತಿಗಳೂ ಕಾಳ್ಗಿಚ್ಚಿನಂತೆ ಹಬ್ಬತೊಡಗಿದವು. ಇದೀಗ, ಕಂಪನಿ ಮತ್ತು ಅದರ ಅಧ್ಯಕ್ಷರ ಬಗ್ಗೆ ಇರುವ ಅಪವಾದಗಳ ಬಗ್ಗೆ ಮಹೀಂದ್ರಾ ಮತ್ತು ಮಹೀಂದ್ರಾ (Mahindra) ಅಧಿಕೃತವಾಗಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ರಾಜೇಶ್ ಮಿಶ್ರಾ ನೀಡಿದ ದೂರಿನ ಆಧಾರದ ಮೇಲೆ ಆನಂದ್ ಮಹೀಂದ್ರಾ ಮತ್ತು ಇತರ 12 ಜನರ ವಿರುದ್ಧ ಕಾನ್ಪುರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ದೂರಿನ ಪ್ರಕಾರ, ವಾಹನದ ಸುರಕ್ಷತೆಯ ಬಗ್ಗೆ ಸುಳ್ಳು ಭರವಸೆ ತನ್ನ ಮಗನ ಸಾವಿಗೆ ಕಾರಣವಾಯಿತು ಎಂದು ರಾಜೇಶ್ ಮಿಶ್ರಾ ಆರೋಪಿಸಿದ್ದಾರೆ. ರಾಜೇಶ್ ಮಿಶ್ರಾ ಅವರು 2020ರ ಡಿಸೆಂಬರ್ ತಿಂಗಳಿನಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯನ್ನು ಖರೀದಿಸಿದರು. ಈ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯನ್ನು ರಾಜೇಶ್ ಮಿಶ್ರಾ ಅವರ ಮಗ ಡಾ.ಅಪೋರ್ವ್ ಮಿಶ್ರಾಗೆ ಗಿಫ್ಟ್ ಆಗಿ ನೀಡಿದ್ದರು.
ರಾಜೇಶ್ ಮಿಶ್ರಾ ಅವರು ಈ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿಯ ಭದ್ರತಾ ಅಂಶಗಳನ್ನು ಒಳಗೊಂಡ ಜಾಹೀರಾತುಗಳು ಮತ್ತು ಸೋಶಿಯಲ್ ಮೀಡಿಯಾಗಳನ್ನು ನೋಡಿ ಈ ಮಾದರಿಯನ್ನು ಆಯ್ಕೆ ಮಾಡಿಕೊಂಡಿದ್ದಾರ ಎಂದು ಹೇಳಲಾಗಿದೆ. ದುರದೃಷ್ಟವಶಾತ್ 2022ರ ಜನವರಿ 14 ರಂದು ಡಾ.ಅಪೋರ್ವ್ ಮಿಶ್ರಾ ಅವರು ತಮ್ಮ ಸ್ನೇಹಿತರೊಂದಿಗೆ ಲಕ್ನೋದಿಂದ ಕಾನ್ಪುರಕ್ಕೆ ಹಿಂದಿರುಗುತ್ತಿದ್ದಾಗ ಅಪಘಾತಕ್ಕೀಡಾಗಿದ್ದರು.
ದುರದೃಷ್ಟವಶಾತ್ 14 ಜನವರಿ 2022 ರಂದು, ಡಾ.ಅಪೋರ್ವ್ ಮಿಶ್ರಾ ಅವರು ತಮ್ಮ ಸ್ನೇಹಿತರೊಂದಿಗೆ ಲಕ್ನೋದಿಂದ ಕಾನ್ಪುರಕ್ಕೆ ಹಿಂದಿರುಗುತ್ತಿದ್ದಾಗ ಅಪಘಾತಕ್ಕೀಡಾಗಿದ್ದರು. ಅವರು ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೋ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ. ವರದಿಗಳ ಪ್ರಕಾರ, ದಟ್ಟವಾದ ಮಂಜಿನಿಂದಾಗಿ ಗೋಚರತೆ ಕಡಿಮೆಯಾದ ಕಾರಣ ಈ ಅಪಘಾತ ಸಂಭವಿಸಿದೆ. ಡಿವೈಡರ್‌ಗೆ ಡಿಕ್ಕಿ ಹೊಡೆದ ನಂತರ, ಮಹೀಂದ್ರಾ ಸ್ಕಾರ್ಪಿಯೋ ಹಲವು ಬಾರಿ ಪಲ್ಟಿ ಹೊಡೆದಿದೆ.
ಈ ಅಪಘಾತದಲ್ಲಿ ಡಾ. ಅಪೂರ್ವ್ ಮಿಶ್ರಾ ಅವರು ಸಾವನ್ನಪ್ಪಿದ್ದಾರೆ. ರಾಜೇಶ್ ಮಿಶ್ರಾ ನೀಡಿದ ದೂರಿನ ಪ್ರಕಾರ, ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯಲ್ಲಿದ್ದ ಎಲ್ಲಾ ಪ್ರಯಾಣಿಕರು ಸೀಟ್‌ಬೆಲ್ಟ್ ಧರಿಸಿದ್ದರು ಮತ್ತು ಏರ್‌ಬ್ಯಾಗ್‌ಗಳು ಓಪನ್ ಆಗಿರಲಿಲ್ಲ. ಏರ್‌ಬ್ಯಾಗ್‌ಗಳು ಓಪನ್ ಆಗದೆ ಇರುವುದು ಮಗನ ಸಾವಿಗೆ ಕಾರಣವಾಗಿದೆ ಎಂದು ದೂರಿದ್ದಾರೆ. ದೂರಿನ ಪ್ರಕಾರ, ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯಲ್ಲಿದ್ದ ಎಲ್ಲಾ ಪ್ರಯಾಣಿಕರು ಸೀಟ್‌ಬೆಲ್ಟ್ ಧರಿಸಿದ್ದರು ಆದರೆ ಅಪಘಾತವಾಗಿ ಕಾರು ಪಲ್ಟಿಯಾದರೂ ಏರ್‌ಬ್ಯಾಗ್‌ಗಳು ಓಪನ್ ಆಗಿಲ್ಲ.
ಇದು ತಮ್ಮ ಮಗನ ಸಾವಿಗೆ ಪ್ರಾಥಮಿಕ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಆರೋಪಗಳು ಮತ್ತು ದೂರಿಗೆ ಪ್ರತಿಕ್ರಿಯೆಯಾಗಿ, ಅಪಘಾತವಾದ ಮಹೀಂದ್ರಾ ಸ್ಕಾರ್ಪಿಯೋ S9 ರೂಪಾಂತರವು ಏರ್‌ಬ್ಯಾಗ್‌ಗಳನ್ನು ಹೊಂದಿದ್ದು, ಅದರಲ್ಲಿ ಯಾವುದೇ ಅಸಮರ್ಪಕ ಕಾರ್ಯವಿಲ್ಲ ಎಂದು ಮಹೀಂದ್ರಾ ಕಂಪನಿಯು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಪತ್ರಿಕಾ ಹೇಳಿಕೆಯು ಅಪಘಾತವು 'ರೋಲೋವರ್' (ಪಲ್ಟಿ) ಎಂದು ದೃಢಪಡಿಸಿದೆ ಮತ್ತು ಆ ಸಂದರ್ಭದಲ್ಲಿ, ಮುಂಭಾಗದ ಏರ್‌ಬ್ಯಾಗ್‌ಗಳು ಓಪನ್ ಆಗುವುದಿಲ್ಲ.
ಪತ್ರಿಕಾ ಹೇಳಿಕೆಯಲ್ಲಿ, ಕಂಪನಿಯು ಡಾ ಅಪೂರ್ವ್ ಮಿಶ್ರಾ ಅವರ ಕುಟುಂಬಕ್ಕೆ ತಮ್ಮ ಸಂತಾಪವನ್ನು ಹಂಚಿಕೊಂಡಿದೆ. ಹಿಂದಿನ ಹಲವು ಕಾರುಗಳಲ್ಲಿ ಮುಂಭಾಗದಲ್ಲಿ ಮಾತ್ರ ಏರ್‌ಬ್ಯಾಗ್‌ಗಳು ಹೊಂದಿರುತ್ತದೆ. ಇದರ ಸೆನ್ಸಾರ್ ಮುಂಭಾಗದಲ್ಲಿರುತ್ತದೆ. ಇದರಿಂದ ಮುಂಭಾಗದಲ್ಲಿ ಅಪಘಾತವಾದಗ ಸೆನ್ಸಾರ್ ಆಗಿ ಏರ್‌ಬ್ಯಾಗ್‌ಗಳು ಓಪನ್ ಆಗುತ್ತದೆ. ಇದು ಪಲ್ಟಿಯಾದ ಕಾರಣ ಏರ್‌ಬ್ಯಾಗ್‌ಗಳು ಓಪನ್ ಆಗಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications