Second Hand Cars: ಸೆಕೆಂಡ್‌ ಹ್ಯಾಂಡ್ ಕಾರುಗಳಿಗೆ ಇಷ್ಟೋಂದು ಬೇಡಿಕೆಯೇ? ಶಾಕ್ ಆಗ್ತೀರಾ ವರದಿ ನೋಡಿದ್ರೆ!

ಭಾರತದಲ್ಲಿ ಹೊಸ ಕಾರುಗಳಿಗಿಂತ ಬಳಸಿದ ಸೆಕೆಂಡ್ ಹ್ಯಾಂಡ್ ಕಾರುಗಳು ಹೆಚ್ಚಾಗಿ ಬೇಡಿಕೆ ಪಡೆದುಕೊಳ್ಳುತ್ತಿವೆ. ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್‌ಗಳಾಗಿ ಹ್ಯುಂಡೈ, ಹೋಂಡಾ ಮತ್ತು ಮಾರುತಿ ಸುಜುಕಿ ಕಂಪನಿಗಳು ಗುರ್ತಿಸಿಕೊಂಡಿದ್ದು, ಈ ಬ್ರಾಂಡ್‌ಗಳ ಟಾಪ್ ಸೆಲ್ಲಿಂಗ್ ಕಾರುಗಳನ್ನು ಇದೀಗ ಬಹಿರಂಗಪಡಿಸಲಾಗಿದೆ.

ಹೊಸ ಕಾರುಗಳನ್ನು ಖರೀದಿಸಿ ಕೇವಲ ಐದು ತಿಂಗಳು ಬಳಸಿ ಮಾರಾಟ ಮಾಡಿದರೂ ಅವುಗಳ ಬೆಲೆ ಗಣನೀಯ ಇಳಿಕೆ ಕಾಣುತ್ತವೆ. ಹಾಗಾಗಿಯೇ ಹಲವರು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸಲು ಮುಂದಾಗುತ್ತಾರೆ. ಸದ್ಯ ಗ್ರಾಹಕರ ಬೇಡಿಕೆಯಂತೆ ಅತಿ ಹೆಚ್ಚು ಮಾರಾಟವಾಗಿರುವ ಕಾರುಗಳನ್ನು ಯೂಸ್ಡ್-ಕಾರ್ ರಿಟೈಲಿಂಗ್ ಪ್ಲಾಟ್ಫಾರ್ಮ್ ಆಗಿರುವ ಸ್ಪಿನ್ನಿ ವರದಿ ಮಾಡಿದೆ.

Is there such a demand for second hand cars

ಮಾರುತಿ ಸುಜುಕಿ ಬಲೆನೊ, ಹ್ಯುಂಡೈ ಕ್ರೆಟಾ, ರೆನಾಲ್ಟ್ ಕ್ವಿಡ್ ದೇಶದಲ್ಲಿ ಹೆಚ್ಚು ಮಾರಾಟವಾದ ಬಳಸಿದ ವಾಹನಗಳಾಗಿ ಹೊರಹೊಮ್ಮಿವೆ ಎಂದು ಯೂಸ್ಡ್ ಕಾರ್ ರಿಟೈಲಿಂಗ್ ಪ್ಲಾಟ್ಫಾರ್ಮ್ ಸ್ಪಿನ್ನಿ ವರದಿ ಮಾಡಿದೆ. ಮಾರುತಿ ಸಿಯಾಜ್ ಮತ್ತು ಎಲೈಟ್ ಐ 20 ಇತರ ಬೇಡಿಕೆ ಹೊಂದಿರುವ ಮಾದರಿಗಳು ಕೂಡ ಇದರಲ್ಲಿ ಸೇರಿವೆ ಎಂದು ತಿಳಿಸಿದೆ.

ದೇಶದಲ್ಲಿ ಈ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಅತಿ ಹೆಚ್ಚು ಬೇಡಿಕೆ ಇರುವುದು ಬೆಂಗಳೂರು, ದೆಹಲಿ-ಎನ್‌ಸಿಆರ್ ಮತ್ತು ಹೈದರಾಬಾದ್ ನಗರಗಳಲ್ಲಿ. ಇನ್ನೂ ದೇಶದ ಹಲವು ರಾಜ್ಯಗಳಲ್ಲಿ ಬಳಸಿದ ಕಾರುಗಳಿಗೆ ಮಾರುಕಟ್ಟೆ ಇದೆಯಾದರೂ, ಈ ನಗರಗಳು ಮಾತ್ರ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಗರಿಷ್ಠ ಬೇಡಿಕೆರುವ ಅಗ್ರ ಮಾರುಕಟ್ಟೆಗಳಾಗಿವೆ ಎಂದು ವರದಿ ಹೇಳಿದೆ.

Is there such a demand for second hand cars

ಗ್ರಾಹಕರು ಹೆಚ್ಚಾಗಿ ಹ್ಯಾಚ್‌ಬ್ಯಾಕ್‌ಗಳನ್ನು ಖರೀದಿಸುತ್ತಾರೆ ಎಂದು ವರದಿ ಹೇಳಿದೆ. ಆದರೆ ಇದರಲ್ಲೂ ಕಾಂಪಾಕ್ಟ್ ಆಟೋಮ್ಯಾಟಿಕ್ ಎಸ್‌ಯುವಿಗಳು ಮತ್ತು ಸೆಡಾನ್‌ಗಳಿಗೆ ಬೇಡಿಕೆ ತುಂಬಾ ಇದೆ ಎಂದು ತಿಳಿದುಬಂದಿದೆ. ಈ ಸೆಕೆಂಡ್‌ ಹ್ಯಾಂಡ್ ಕಾರು ಖರೀದಿಸುವವರಲ್ಲಿ ಈ ವರ್ಷ ಮಹಿಳೆಯರ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆ ಕಂಡಿದೆ ಎಂದು ಸ್ಪಿನ್ನಿಯ ವರದಿ ತಿಳಿಸಿದೆ.

ಸ್ಪಿನ್ನಿಯು ತನ್ನ ತ್ರೈಮಾಸಿಕ ವರದಿಯಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಈ ವರ್ಷದ ಜನವರಿಯಿಂದ ಮಾರ್ಚ್ ನಡುವಿನ ಒಟ್ಟು ಖರೀದಿದಾರರಲ್ಲಿ ಶೇ 36 ರಷ್ಟು ಮಹಿಳೆಯರಿದ್ದರೇ ಶೇ 67ರಷ್ಟು ಕಾರ್ಪೊರೇಟ್ ವೃತ್ತಿಪರರು ಬಳಸಿದ ಕಾರುಗಳನ್ನ ಖರೀದಿಸಿದ್ದಾರೆ ಎಂದು ಹೇಳಿದೆ. ಈ ಮೂಲಕ ಮುಂಬರುವ ತಿಂಗಳುಗಳಲ್ಲಿ ಮಹಿಳಾ ಖರೀದಿದಾರರ ಸಂಖ್ಯೆ ಕೂಡ ಹೆಚ್ಚಾಗುವ ನಿರಿಕ್ಷೆಯಿದೆ.

Is there such a demand for second hand cars

2023ರ ಮೊದಲ ತ್ರೈಮಾಸಿಕದ ವರದಿಯ ಪ್ರಕಾರ, ಮೊದಲ ಬಾರಿಗೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿದರು ಶೇ 65 ರಷ್ಟಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ವರ್ಷ ಶೇ 5 ರಷ್ಟು ಹೆಚ್ಚಾಗಿದ್ದಾರೆ. ಬಣ್ಣದ ವಿಷಯದಲ್ಲೂ ಉತ್ತರ ಭಾರತದಲ್ಲಿ ವೈಟ್ ಹಾಗೂ ಸಿಲ್ವರ್ ಅತ್ಯಂತ ಜನಪ್ರಿಯ ಆಯ್ಕೆಯಾಗಿರುವುದು ವಿಶೇಷ ಎಂದೇ ಹೇಳಬಹುದು.

ದೆಹಲಿ ಎನ್‌ಸಿಆರ್‌ನಲ್ಲಿ ಗ್ರಾಹಕರು ವೈಟ್, ಸಿಲ್ವರ್ ಮತ್ತು ಗ್ರೇ ಬಣ್ಣಗಳನ್ನು ಖರೀದಿಸಲು ಆದ್ಯತೆ ನೀಡಿದರೆ, ಬೆಂಗಳೂರು, ಮುಂಬೈ, ಕೋಲ್ಕತಾ ಮತ್ತು ಚೆನ್ನೈನ ಗ್ರಾಹಕರು ಬಿಳಿ ಮತ್ತು ಗ್ರೇ ಬಣ್ಣಗಳ ಜೊತೆಗೆ ಕೆಂಪು ಬಣ್ಣಗಳನ್ನು ಖರೀದಿಸಿರುವುದಾಗಿ ವರದಿ ತಿಳಿಸಿದೆ. ನವರಾತ್ರಿ ಮತ್ತು ಅಕ್ಷಯ ತೃತೀಯ, ಹೋಳಿ ಸಮಯದಲ್ಲಿ ಬಳಸಿದ ಕಾರುಗಳ ಬೇಡಿಕೆಯು ಹೆಚ್ಚಾಯಿತು ಎಂದು ಸ್ಪಿನ್ನಿ ತಿಳಿಸಿದೆ.

ಗ್ರಾಹಕರು ಆನ್‌ಲೈನ್‌ ಖರೀಗಳಿಗೆ ಹೆಚ್ಚು ಆದ್ಯತೆ ನೀಡಿದ್ದು, ಆನ್‌ಲೈನ್ ಖರೀದಿಗಳು ಒಟ್ಟು ಶೇ 71 ಆಗಿದ್ದರೇ, ಇದರಲ್ಲಿ ಒಟ್ಟು ಆರ್ಡರ್‌ಗಳಲ್ಲಿ ಶೇ 70 ರಷ್ಟನ್ನು ಹೋಮ್ ಡೆಲಿವರಿ ಮಾಡಲಾಗಿದೆ. ಆನ್‌ಲೈನ್ ಖರೀದಿಗಳು ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ ಶೇ 75, ದೆಹಲಿಯಲ್ಲಿ ಶೇ 68 ಮತ್ತು ಹೈದರಾಬಾದ್‌ನಲ್ಲಿ ಶೇ 63 ರಷ್ಟು ಆಗಿವೆ.

Article Published On: Friday, May 26, 2023, 12:05 [IST]
English summary
Second hand cars sales report india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+