ಐಷಾರಾಮಿ ಆಡಿಯಲ್ಲಿ ಟೀ ಮಾರಾಟ ಮಾಡುತ್ತಿರುವುದು ಇವರಾ! ಲೀಕ್ ಆಯ್ತು ಹೊಸ ಮಾಹಿತಿ...

ಉತ್ತರ ಭಾರತದಲ್ಲಿ ಚಾಯ್ ವಾಲಗಳು (ಟೀ ಮಾರುವವರು) ಫೆಮಸ್ ಆಗುತ್ತಿದ್ದಾರೆ. ತಮ್ಮ ಡಿಗ್ರಿಗಳನ್ನು ಹೇಳಿಕೊಂಡು ಟೀ ವ್ಯಾಪಾರ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಗುರ್ತಿಸಿಕೊಳ್ಳುತ್ತಿದ್ದಾರೆ. ಇದೀಗ ಹೊಸ ಆಡಿ ಚಾಯ್ ವಾಲ ಎಂಬ ಹೆಸರು ಸೋಷಿಯಲ್ ಸಖತ್ ಸದ್ದು ಮಾಡುತ್ತಿದೆ.

ಐಷಾರಾಮಿ ಆಡಿ ಕಾರಿನಲ್ಲಿ ಟೀ ಮಾರುವ ಈತನ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. ಕೆಲ ತಿಂಗಳ ಹಿಂದೆ, ಆಡಿ ಐಷಾರಾಮಿ ಸೆಡಾನ್‌ ಕಾರಿನ ಹಿಂಬದಿಯಲ್ಲಿ (ಬೂಟ್‌) ಟೀ ಮಾರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಅದೇ ವ್ಯಕ್ತಿಯ ಹೊಸ ವಿಡಿಯೋ ಇದೀಗ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಈ ವ್ಯಕ್ತಿಯ ಕುರಿತು ಹೆಚ್ಚಿನ ವಿವರಗಳು ಕೂಡ ಹೊರಬಂದಿವೆ.

selling tea

ಆತನ ಬಗ್ಗೆ ಹೇಳುವ ಮುನ್ನ ಈ ವಿದ್ಯಾವಂತ ಚಾಯ್ ವಾಲಗಳ ಬಗ್ಗೆ ತಿಳಿಯೋಣ. ಸಾಮಾನ್ಯವಾಗಿ ನಮ್ಮಲ್ಲಿ (ದಕ್ಷಿಣ ಭಾರತ) ಉತ್ತಮ ವಿಧ್ಯಾಭ್ಯಾಸವಿದ್ದವರು ಟೀ ಸ್ಟಾಲ್‌ಗಳಲ್ಲಿ ಟೀ ಕುಡಿಯುತ್ತಾರೆ ಹೊರತು, ಟೀ ಅಂಗಡಿಗಳನ್ನು ಇಡಲು ಹಿಂದೇಟು ಹಾಕುತ್ತಾರೆ. ನಿಜ ಹೇಳಬೇಕೆಂದರೆ ಒಬ್ಬ ಟೀ ಅಂಗಡಿಯವನು ಸಾಫ್ಟ್‌ವೇರ್ ಇಂಜಿನಿಯರ್‌ನಷ್ಟೇ ತಿಂಗಳ ಸಂಪಾದನೆ ಮಾಡುತ್ತಾನೆ.

ಎಲ್ಲಾ ಕಡೆ ಹೀಗೆ ಇರುತ್ತದೆ ಎಂದು ಹೇಳಲಾಗುವುದಿಲ್ಲ, ಆದ್ರೆ ಬಹುತೇಕ ಟೀ ಅಂಗಡಿ ಮಾಲೀಕರು ತಿಂಗಳಿಗೆ ಲಕ್ಷಾಂತರ ಹಣ ಸಂಪಾದನೆ ಮಾಡುತ್ತಿದ್ದಾರೆ. ಇದನ್ನು ಕೇವಲ ವ್ಯಾಪಾರವಾಗಿ ನೋಡಿದ್ರೆ ಸಂಪಾದನೆ ಮಾಡಲು ಬಯಸುವವರು ಯಾರು ಬೇಕಾದ್ರು ಮಾಡಬಹುದು. ಆದ್ರೆ ಇಲ್ಲಿ ಟೀ ವ್ಯಾಪಾರವೆಂದ್ರೆ ಸಣ್ಣತನವಾಗಿ ನೋಡುವವರೇ ಹೆಚ್ಚು. ಆದ್ರೆ ಉತ್ತರ ಭಾರತದಲ್ಲಿ ಇದನ್ನೇ ಬಳಸಿಕೊಂಡು ಹಣ ಗಳಿಸುತ್ತಿದ್ದಾರೆ.

selling tea

ಎಂಬಿಎ ಮತ್ತು ಬಿಟೆಕ್‌ನಂತಹ ಶೈಕ್ಷಣಿಕ ಪದವಿದರರು ಕೂಡ ಟೀ ಸ್ಟಾಲ್‌ಗಳನ್ನು ಪ್ರಾರಂಭಿಸಿರುವ ಕುರಿತು ಹಲವಾರು ಲೇಖನಗಳು ಮತ್ತು ವೀಡಿಯೊಗಳನ್ನು ನೋಡಿದ್ದೇವೆ. ಇವರಿಗೆ ಮಾಡುವ ಕೆಲಸವಷ್ಟೇ ಮುಖ್ಯ, ಬೇರೊಬ್ಬರ ಮಾತಿಗೆ ಬೆಲೆ ಕೊಡದೆ ತಮ್ಮ ವ್ಯಾಪಾರದಲ್ಲಿ ಹಣ ಗಳಿಸುವುದಷ್ಟೇ ಅವರಿಗೆ ಪ್ರಮುಖ ಗುರಿಯಾಗಿದೆ. ಅಲ್ಲದೇ ಸೋಷಿಯಲ್ ಮೀಡಿಯಾಗಳನ್ನು ಬಳಸಿಕೊಂಡು ಪಬ್ಲಿಸಿಟಿ ಗಳಿಸುತ್ತಾರೆ.

ಈಗ ಚಾಯ್ ವಾಲಗಳ ಕುರಿತು ನಿಮಗೊಂದು ಐಡಿಯಾ ಬಂದಿರಬಹುದು. ಮುಂದೆ "ಆಡಿ ಚಾಯ್ ವಾಲ" ಎಂದು ಕರೆಸಿಕೊಳ್ಳುತ್ತಿರುವ ವ್ಯಕ್ತಿಯ ಕುರಿತು ತಿಳಿಯೋಣ. ಮೂಲಗಳ ಪ್ರಕಾರ ಈ ವ್ಯಕ್ತಿಯ ಹೆಸರು ಮನ್ನು ಸಿಂಗ್. ತಮ್ಮ ವ್ಯಾಪಾರಕ್ಕಿಟ್ಟ ಹೆಸರು ODT ಅಥವಾ ಆನ್ ಡ್ರೈವ್ ಟೀ, "ಐಷಾರಾಮಿಯಾಗಿ ಯೋಚಿಸಿ, ಐಷಾರಾಮಿಯಾಗಿ ಕುಡಿಯಿರಿ" ಎಂಬ ಅಡಿಬರಹ ನೀಡಿದ್ದಾರೆ.

ಇವರ ಈ ಹೊಸ ಆಲೋಚನೆಯೊಂದಿಗಿನ ಟೀ ವ್ಯಾಪಾರವು ಸದ್ಯ ತುಂಬಾ ವೈರಲ್ ಆಗಿದೆ. ಒಮ್ಮೆ ಯೋಚಿಸಿ ಆತ ಆಡಿ ಕಾರನ್ನು ಹೊಂದಿದ್ದಾನೆ ಅಂದ್ರೆ, ಸಾಮಾನ್ಯವಾಗಿ ಬಡವನಾಗಿರುವುದಿಲ್ಲ. ಜೊತೆಗೆ ಅನಕ್ಷರಸ್ತನೂ ಆಗಿರುವುದಿಲ್ಲ. ಇದೆಲ್ಲಾ ಉತ್ತಮ ಮಾರುಕಟ್ಟೆ ತಂತ್ರವಾಗಿದೆ. ಸೋಷಿಯಲ್ ಮೀಡಿಯಾ ಅವರ ವ್ಯಾಪಾರ ಬೆಳವಣಿಗೆಗೆ ತುಂಬಾ ಪ್ರಯೋಜನಗಳನ್ನು ತಂದುಕೊಡುತ್ತದೆ ಎಂಬುದು ಅಕ್ಷರ ಸತ್ಯ.

ಅದರಂತೆ ಈಗ ಗ್ರಾಹಕರನ್ನು ಹೆಚ್ಚಿಸಿಕೊಂಡಿದ್ದಾನೆ ಮನ್ನು ಸಿಂಗ್. ತನ್ನ ಆಡಿ ಸೆಡಾನ್‌ನ ಹಿಂಭಾಗದಲ್ಲಿ ಟೀ ಮಾರಾಟ ಮಾಡುವುದಲ್ಲದೆ, ತನ್ನ ಗ್ರಾಹಕರಿಗೆ ಐಷಾರಾಮಿ ಕಾರಿನೊಳಗೆ ಕುಳಿತುಕೊಳ್ಳಲು ಅವಕಾಶ ಕೂಡ ನೀಡುತ್ತಿದ್ದಾನೆ. ಟೀ ಖರೀದಿಸುವ ಅನೇಕ ಜನರು ಐಷಾರಾಮಿ ಕಾರಿನ ಒಳಭಾಗವನ್ನು ನೋಡಿರುವುದಿಲ್ಲ. ತನ್ನ ಬಳಿಗೆ ಬರುವ ಗ್ರಾಹಕರಿಗೆ ವಿಶಿಷ್ಟ ಅನುಭವ ನೀಡುವುದರ ಜೊತೆ ಜೊತೆಗೆ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾನೆ.

Article Published On: Friday, June 2, 2023, 19:07 [IST]
English summary
Selling tea luxury audi car leaked new infrormation
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+