ತಾಲಿಬಾನ್‌ರ ಮೊದಲ ಸೂಪರ್ ಕಾರ್ ಪ್ರದರ್ಶನ: ಪರಿಪೂರ್ಣವಲ್ಲ, ಆಗಲೇ ರೇಸ್‌ಗೆ ಕಳುಹಿಸಲು ಚಿಂತೆ!
ಇತ್ತೀಚೆಗೆ ನಡೆದ ಜಿನೀವಾ ಇಂಟರ್ನ್ಯಾಷನಲ್ ಆಟೋ ಶೋನಲ್ಲಿ ತಾಲಿಬಾನ್ ನಿರ್ಮಿತ ಸೂಪರ್ ಕಾರ್ ಸಿಮುರ್ಗ್ ಅನ್ನು ಪ್ರದರ್ಶಿಸಲಾಗಿದೆ. ಇದನ್ನು ಎಂಟಾಪ್ ಎಂಬ ಅಫ್ಘಾನ್ ಬ್ರಾಂಡ್‌ನ ಅಡಿ ನಿರ್ಮಿಸಲಾಗಿದ್ದು, ಸಿಇಒ, ಡಿಸೈನರ್ ಮತ್ತು ಮುಖ್ಯ ಎಂಜಿನಿಯರ್ ಮೊಹಮ್ಮದ್ ರೆಜಾ ಅಹ್ಮದಿ ಅವರು ಕಾರನ್ನು ಪ್ರದರ್ಶನದಲ್ಲಿ ಅನಾವರಣಗೊಳಿಸಿದರು.
ಪ್ರತಿ ವರ್ಷ ನಡೆಯುವ ಅತಿದೊಡ್ಡ ಆಟೋಮೋಟಿವ್ ಈವೆಂಟ್ ಇದಾಗಿದ್ದು, ಪ್ರಮುಖ ವಾಹನ ತಯಾರಕರು ತಮ್ಮ ಇತ್ತೀಚಿನ ಮತ್ತು ಶ್ರೇಷ್ಠ ವಾಹನಗಳನ್ನು ಇಲ್ಲಿ ಪ್ರದರ್ಶಿಸುತ್ತಾರೆ. ಇದನ್ನು ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಹೆಚ್ಚಾಗಿ ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಕತಾರ್‌ನ ದೋಹಾದಲ್ಲಿ ಆಯೋಜಿಸಲಾಗಿದೆ. ಇನ್ನೊಂದು ವಿಶೇಷತೆ ಎಂದರೆ ಇದೇ ಮೊದಲ ಬಾರಿಗೆ ಅಫ್ಘಾನ್ ತನ್ನ ವಿಶಿಷ್ಟವಾದ ಸೂಪರ್ ಕಾರನ್ನು ಇಲ್ಲಿ ಪ್ರದರ್ಶಿಸಿದೆ.

ಜಿನೀವಾ ಆಟೋ ಶೋನಲ್ಲಿ ಗ್ರ್ಯಾಂಡ್ ಡೆಬ್ಯೂ: 2023 ರ ಜಿನೀವಾ ಆಟೋ ಶೋನ ದೋಹಾ ಶಾಖೆಯಲ್ಲಿ, ಸಿಮುರ್ಗ್ ಬಗ್ಗೆ ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸಿಲ್ಲ. ವಿಶೇಷಣಗಳು, ಪವರ್, ಪರ್ಫಾಮೆನ್ಸ್ ಕುರಿತ ತಾಂತ್ರಿಕ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಸಿಇಒ ಪ್ರಕಾರ, ಎಂಟಾಪ್ ತಂಡವು ಈ ಹಿಂದೆ ಹೆಸರಿಸಲಾದ Mada9 ಅನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡುವ ಮೊದಲು ಸಿಮುರ್ಗ್ ಅನ್ನು ಐತಿಹಾಸಿಕ ಲೆ ಮ್ಯಾನ್ಸ್ ರೇಸ್‌ಗೆ ಕೊಂಡೊಯ್ಯಲು ಬಯಸುತ್ತಿದೆಯಂತೆ.
ಈ Mada9 ಯಾವುದು?: ಕಂಪನಿಯು ಮೊದಲ ಬಾರಿಗೆ 2023 ರ ಆರಂಭದಲ್ಲಿ ಮಡಾ 9 ಎಂಬ ಕಾರನ್ನು ಪರಿಚಯಿಸಿತ್ತು. ಇದು ಬ್ಯಾಟ್‌ಮೊಬೈಲ್ ತರಹದಲ್ಲಿ ಕೆಟ್ಟದಾಗಿ ಕಾಣುವ ಸೂಪರ್‌ಕಾರ್ ಆಗಿದ್ದು, ಇದರ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆದ ನಂತರ ಅತ್ಯಂತ ಜನಪ್ರಿಯವಾಯಿತು. Mada9 ಅನ್ನು ಮೊದಲ ಆಫ್ಘನ್ ನಿರ್ಮಿತ ಸೂಪರ್‌ಕಾರ್ ಎಂದು ಜಗತ್ತಿಗೆ ಪ್ರದರ್ಶಿಸಲಾಯಿತು.

ಇದರ ನಂತರ, ಕಂಪನಿಯ ಸಿಇಒ ಎರಡೇ ವಾರಗಳಲ್ಲಿ ಮಡಾ9 ಸಿದ್ಧವಾಗಲಿದೆ ಎಂದು ಘೋಷಿಸಿದ್ದರಾದರೂ, ಈ ವರೆಗೆ ಅದರ ಬಗ್ಗೆ ಯಾವುದೇ ಖಚಿತತೆಯನ್ನು ತಿಳಿಸಿಲ್ಲ. ಹಾಗಾಗಿ ವಾಹನದ ಜನಪ್ರಿಯತೆಯು ಸ್ವಲ್ಪಮಟ್ಟಿಗೆ ಕುಸಿಯಿತು. ಈ ಕಾರಿಗೆ 2004 ರ ಟೊಯೋಟಾ ಕೊರೊಲ್ಲಾ ಸೆಡಾನ್ ಎಂಜಿನ್ ಅನ್ನು ಬಳಸಿರುವುದನ್ನು ಬಿಟ್ಟರೆ ಇನ್ಯಾವುದೇ ನಿಖರವಾದ ವಿವರಗಳನ್ನು ತಿಳಿಸಿಲ್ಲ.
ಈಗ ಸಿಮುರ್ಗ್: ಸುಮಾರು 10 ತಿಂಗಳ ನಂತರ ಈಗ ಕತಾರ್‌ನಲ್ಲಿ ಕಾರು ತಯಾರಕರು ಜಗತ್ತಿಗೆ Mada9 ಗೆ ಒಂದೇ ರೀತಿಯ ಸೂಪರ್‌ಕಾರ್ ಅನ್ನು ತೋರಿಸಿದ್ದಾರೆ. ವಿಚಿತ್ರವೆಂದರೆ ಈ ಮಡಾ9 ಅನ್ನೇ ಸಿಮುರ್ಗ್ ಎಂಬ ಹೊಚ್ಚ ಹೊಸ ಹೆಸರಿನೊಂದಿಗೆ ಅನಾವರಣಗೊಳಿಸಿದ್ದಾರೆ ಎಂಬ ಮಾತುಗಳು ಇವೆ. ಎಂಟಾಪ್‌ನ ಮಾಲೀಕರು ಮತ್ತು ಸಿಇಒ ಅವರು ಅಫ್ಘಾನಿಸ್ತಾನದ ಕಲೆ ಮತ್ತು ವೀರರನ್ನು ಪ್ರಸ್ತುತಪಡಿಸುವ ವಾಹನವನ್ನು ರಚಿಸಲು ಬಯಸಿರುವುದಾಗಿ ಹೇಳಿದ್ದಾರೆ.

ಸದ್ಯ 2023 ರ ಜಿನೀವಾ ಇಂಟರ್ನ್ಯಾಷನಲ್ ಮೋಟಾರ್ ಶೋನಲ್ಲಿ ತೋರಿಸಲಾದ ವಾಹನವು ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ಬಾಹ್ಯ ಫಲಕದ ಅಂತರಗಳು ಅಸಮವಾಗಿವೆ, ಒಳಭಾಗವು ಅಪೂರ್ಣವಾಗಿದೆ. ಜೊತೆಗೆ ಪವರ್‌ಟ್ರೇನ್ ಅನ್ನು ಸಹ ಸೂಪರ್‌ಕಾರ್ ಗುಣಮಟ್ಟಕ್ಕೆ ಪೂರ್ಣಗೊಳಿಸಲಾಗಿಲ್ಲ. ಹಾಗಾಗಿ ಲೆ ಮ್ಯಾನ್ಸ್ ರೇಸ್‌ಗೆ ಅರ್ಹತೆ ಪಡೆಯಲು ಸಿಮುರ್ಗ್ ಅನ್ನು ಪರಿಪೂರ್ಣವಾಗಿ ನಿರ್ಮಿಸಲು ಕಂಪನಿಗೆ ಸುಮಾರು $43.2 ಮಿಲಿಯನ್ ಬೇಕಿದೆ ಎಂದು ವರದಿಯಾಗಿದೆ.
ಈಗ, ಸಿಮುರ್ಗ್‌ನ ಮುಂದಿನ ಅಭಿವೃದ್ಧಿಗಾಗಿ ಕಂಪನಿಯು ಇಷ್ಟು ಬೃಹತ್ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತದೆಯೇ ಎಂಬುದು ಸದ್ಯಕ್ಕೆ ತಿಳಿದಿಲ್ಲ. ಇದಕ್ಕಾಗಿ ನಿಧಿಯನ್ನು ಪಡೆಯಲು ಮುಂದಾದರೆ, ಸಾರ್ವಜನಿಕರಿಗೆ ಸಂಪೂರ್ಣ-ಪ್ರಮಾಣದ ಸೂಪರ್‌ಕಾರ್ ಅನ್ನು ಬಿಟ್ಟು, ಲೆ ಮ್ಯಾನ್ಸ್-ಯೋಗ್ಯ ರೇಸ್‌ಕಾರ್ ಅನ್ನು ರಚಿಸಲು ಕಂಪನಿ ಇನ್ನೂ ಎರಡು ಮೂರು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎನ್ನಲಾಗುತ್ತಿದೆ.


Click it and Unblock the Notifications