CNG ವಿಭಾಗಕ್ಕೂ ಟಾಟಾ ಸೈ... ಪ್ರತಿಸ್ಪರ್ಧಿ ಬಲೆನೋಗಿಲ್ಲದ ಟಾಪ್ ಫೀಚರ್ಸ್ ಆಲ್ಟ್ರೋಜ್‌ನಲ್ಲಿ
ಭಾರತೀಯ ಆಟೋ ವಲಯವು ಎಲೆಕ್ಟ್ರಿಕ್ ಹಾಗೂ ಸಿಎನ್‌ಜಿ ಮಾದರಿಗಳ ಕೊಡುಗೆಯನ್ನು ಹೆಚ್ಚಿಸಿದೆ. ಟಾಟಾ ಮೋಟಾರ್ಸ್, ಮಾರುತಿ ಸುಜುಕಿ, ಹ್ಯುಂಡೈ ಬ್ರಾಂಡ್‌ಗಳು ಪೈಪೋಟಿಯೊಂದಿಗೆ ಮಾರುಕಟ್ಟೆಯಲ್ಲಿ ಮುನ್ನುಗ್ಗುತ್ತಿವೆ. ಇತ್ತೀಚೆಗೆ ಬಿಡುಗಡೆಯಾಗಿ ಸದ್ದು ಮಾಡುತ್ತಿರುವ ಟಾಟಾ ಆಲ್ಟ್ರೋಜ್ ತನ್ನ ನೇರ ಪ್ರತಿಸ್ಪರ್ಧಿಯಾದ ಮಾರುತಿ ಬಲೆನೊವನ್ನು ಹಿಂದಿಕ್ಕಲು ಹೊರಟಿದೆ.
ಆಟೋ ಮಾರುಕಟ್ಟೆಯಲ್ಲಿ ಎರಡೂ ಕಾರುಗಳು ಸಿಎನ್‌ಜಿ ವಿಭಾಗದಲ್ಲಿ ಉತ್ತಮ ಮಾದರಿಗಳಾಗಿದ್ದು, ಮಾರುತಿ ಮೊದಲಿನಿಂದಲೂ ತನ್ನ ಬಲೆನೊದೊಂದಿಗೆ ಮಾರುಕಟ್ಟೆಯಲ್ಲಿ ಟಾಪ್ ಮಾರಟವನ್ನು ಹೊಂದಿದೆ. ಆದರೆ ಇದೀಗ ಬಿಡುಗಡೆಯಾಗಿರುವ ಟಾಟಾ ಆಲ್ಟ್ರೋಜ್, ಮಾರುತಿ ಬಲೆನೋಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡುವ ಮೂಲಕ ಸ್ಪರ್ಧೆಯನ್ನು ತೀರ್ವಗೊಳಿಸಿದೆ. ಹಾಗಾದ್ರೆ ಟಾಟಾ ಆಲ್ಟ್ರೋಜ್ ಸಿಎನ್‌ಜಿನಲ್ಲಿ ಸಿಗುವ ಟಾಪ್ 5 ವೈಶಿಷ್ಟ್ಯಗಳು ಹಾಗೂ ಮಾರುತಿ ಸುಜುಕಿ ಬಲೆನೊ ಸಿಎನ್‌ಜಿನಲ್ಲಿ ಇಲ್ಲದ ವೈಶಿಷ್ಟ್ಯಗಳನ್ನು ಇಲ್ಲಿ ನೋಡೋಣ.

ಅವಳಿ CNG ಸಿಲಿಂಡರ್‌ಗಳು:
CNG ವಾಹನಗಳು ಇಂಧನ ಚಾಲಿತ ವಾಹನಗಳಿಗೆ ಹೋಲಿಸಿದರೆ ಹೆಚ್ಚು ಪರಿಸರ ಸ್ನೇಹಿಯಾದರೂ ಒಂದಷ್ಟು ನ್ಯೂನ್ಯತೆಗಳನ್ನು ಸಹ ಹೊಂದಿವೆ. ಅದರಲ್ಲಿ ಮೊದಲನೆಯದು ಬೂಟ್ ಸ್ಪೇಸ್ ಆಕ್ರಮಣವಾಗಿದೆ. ಮಾರುತಿ ಸುಜುಕಿ ಬಲೆನೊ ಸಿಎನ್‌ಜಿ ವಿಷಯದಲ್ಲೂ ಇದೇ ಆಗಿದೆ. ಆದರೆ ಟಾಟಾ ಒಂದು ಹೊಸ ಪರಿಹಾರದೊಂದಿಗೆ ಆಲ್ಟ್ರೋಜ್ ಸಿಎನ್‌ಜಿಯನ್ನು ಪರಿಚಯಿಸಿದೆ. ಬೂಟ್‌ನಲ್ಲಿ ಆಲ್ಟ್ರೋಜ್ CNG ಎರಡು ಟ್ಯಾಂಕ್‌ಗಳನ್ನು ನೀಡಿದೆ, ಜೊತೆಗೆ ಬಳಸಬಹುದಾದ ಲಗೇಜ್ ಪ್ರದೇಶವನ್ನು ಕೂಡ ನೀಡಿದೆ.
CNG ಮೋಡ್‌ನಲ್ಲಿ ನೇರ ಪ್ರಾರಂಭ:
ಕಾರನ್ನು ಚಾಲನೆಯಲ್ಲಿ ಇದ್ದಾಗ CNG ಬಳಸಿದರೆ ಅದನ್ನು ಪ್ರಾರಂಭಿಸಲು ಕಾರಿನಲ್ಲಿ ಖಂಡಿತ ಪೆಟ್ರೋಲ್ ಇರಬೇಕೆಂದು ತಯಾರಕರು ಹೇಳುತ್ತಾರೆ. ಆದರೆ ಟಾಟಾ ಮೋಟಾರ್ಸ್ ಆಲ್ಟ್ರೊಜ್ ಸಿಎನ್‌ಜಿಯನ್ನು ಸಿಂಗಲ್ ಅಡ್ವಾನ್ಸ್‌ಡ್ ಇಸಿಯುನೊಂದಿಗೆ ಸಜ್ಜುಗೊಳಿಸಿದೆ. ಇದು ಪೆಟ್ರೋಲ್ ಮತ್ತು ಸಿಎನ್‌ಜಿ ನಡುವೆ ಮನಬಂದಂತೆ ಬದಲಾಯಿಸುತ್ತದೆ. ಹಾಗೆಯೇ ಬಳಕೆದಾರರಿಗೆ ನೇರವಾಗಿ ಸಿಎನ್‌ಜಿ ಮೋಡ್‌ನಲ್ಲಿ ಪ್ರಾರಂಭಿಸಲು ಅವಕಾಶ ನೀಡುವುದರಿಂದ ಬಲೆನೋಗಿಂತ ಉತ್ತಮ ಎಂದು ಹೇಳಬಹುದು.

ಸನ್‌ರೂಫ್:
ಮಾರುತಿ ಸುಜುಕಿಯು ತನ್ನ ಬಲೆನೊ ಸಿಎನ್‌ಜಿ ಮಾದರಿಗೆ ಸನ್‌ರೂಫ್ ಅನ್ನು ನೀಡಿಲ್ಲ. ಆದರೆ ಟಾಟಾ ಮೋಟಾರ್ಸ್ ಒಂದು ಹೆಜ್ಜೆ ಮುಂದೆ ಹೋಗಿ ಧ್ವನಿ-ಸಕ್ರಿಯ ಸನ್‌ರೂಫ್ (Voice-activated sunroof) ಅನ್ನು ನೀಡಿದೆ. ಮಾರುತಿ ಸುಜುಕಿಯು ಕೂಡ ತನ್ನ ವಾಹನಗಳಲ್ಲಿ ಸನ್‌ರೂಫ್‌ಗಳನ್ನು ನೀಡಲು ಮುಂದಾಗಿದೆ. ಹೊಸ ಬ್ರೆಝಾದೊಂದಿಗೆ ಸನ್‌ರೂಫ್ ನೀಡುವುದನ್ನು ಆರಂಭಿಸಿದೆಯಾದರೂ ಟಾಟಾ ಬಹಳ ಹಿಂದಿನಿಂದಲೇ ಈ ಆಟದಲ್ಲಿ ಇರುವುದು ಎಲ್ಲರಿಗೂ ತಿಳಿದಿರುವ ವಿಷಯ.
ಕ್ರೂಸ್ ಕಂಟ್ರೋಲ್:
ಕ್ರೂಸ್ ಕಂಟ್ರೋಲ್ ವೈಶಿಷ್ಟ್ಯವು ಇತ್ತೀಚಿನ ವಾಹನಗಳಲ್ಲಿ ಪ್ರಮುಖ ಫೀಚರ್ ಆಗಿದೆ. ಇದು ಹೆದ್ದಾರಿಗಳಲ್ಲಿ ಸುದೀರ್ಘ ಪ್ರಯಾಣಕ್ಕೆ ತುಂಬಾ ಅವಶ್ಯಕ ವೈಶಿಷ್ಟ್ಯವೆಂದು ಹೇಳಬಹುದು. ಕಾರು ಸ್ಥಿರವಾದ ವೇಗವನ್ನು ಹೊಂದಿರುವಾಗ ನಿಮ್ಮ ಪಾದಕ್ಕೆ ವಿಶ್ರಾಂತಿ ಪಡೆಯಲು ಅನುಕೂಲವಾಗುತ್ತದೆ. ಕ್ರೂಸ್ ಕಂಟ್ರೋಲ್ ಆಯ್ಕೆಯು ಎರಡೂ ಕಾರುಗಳಲ್ಲಿ ಲಭ್ಯವಿದೆ. ಆದರೆ Altroz ಮತ್ತು Baleno ನಡುವೆ CNG ರೂಪಾಂತರವನ್ನು ಆಯ್ಕೆಮಾಡುವಾಗ, ಮೊದಲನೆಯದು ಅದನ್ನು ಪಡೆಯುತ್ತದೆ ಆದರೆ ಎರಡನೆಯದು, ಟಾಪ್-ಸ್ಪೆಕ್ ಪೆಟ್ರೋಲ್ ಆವೃತ್ತಿಯು ಮಾತ್ರ ಕ್ರೂಸ್ ಕಂಟ್ರೋಲ್ ಪಡೆಯುತ್ತದೆ.
ರೈನ್ ಸೆನ್ಸಿಂಗ್ ವೈಪರ್‌ಗಳು:
ಆಧುನಿಕ ಕಾರುಗಳಲ್ಲಿ ಸ್ವಯಂಚಾಲಿತ ವೈಪರ್‌ಗಳು ಗ್ರಾಹಕರನ್ನು ಸೆಳೆಯಲು ಪ್ರಮುಖ ವೈಶಿಷ್ಟ್ಯವಾಗಿ ನಿಲ್ಲುತ್ತದೆ. Tata Altroz CNG ಮಳೆ-ಸಂವೇದಿ ವೈಪರ್‌ಗಳನ್ನು ಪಡೆಯುತ್ತದೆ, ಇದು ಮಳೆಯನ್ನು ಗ್ರಹಿಸಿದಾಗ ಸ್ವಯಂಚಾಲಿತವಾಗಿ ವೈಪರ್‌ಗಳನ್ನು ಆನ್ ಮಾಡುತ್ತದೆ. ದುಃಖಕರ ವಿಷಯವೆಂದರೆ ಮಾರುತಿ ಸುಜುಕಿ ಬಲೆನೊ ಸಿಎನ್‌ಜಿಯಲ್ಲಿ ಈ ವೈಶಿಷ್ಟ್ಯವಿಲ್ಲ. ಈ ಟಾಪ್ 5 ವೈಶಿಷ್ಟ್ಯಗಳು ಟಾಟಾವನ್ನು ಸಿಎನ್‌ಜಿ ವಿಭಾಗದಲ್ಲಿ ಮಾರುತಿ ಬಲೆನೋವನ್ನು ಹಿಂದಿಕ್ಕುವಲ್ಲಿ ಸಹಕಾರಿಯಾಗುವ ನಿರೀಕ್ಷೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications