Tata: ಟಾಟಾದ ಈ ಜನಪ್ರಿಯ ಕಾರಿಗೆ ರೂ.45,000 ರಿಯಾಯಿತಿ, 26 ಕಿ.ಮೀ ಮೈಲೇಜ್.. 6 ಲಕ್ಷ ಬೆಲೆ

ಟಾಟಾ ಮೋಟಾರ್ಸ್ (Tata Motors)ನ ಆಯ್ದ ಡೀಲರ್‌ಶಿಪ್‌ಗಳು, ಈ ವರ್ಷಾಂತ್ಯದಲ್ಲಿ ವಿವಿಧ ಕಾರುಗಳ ಮೇಲೆ ಭಾರೀ ರಿಯಾಯಿತಿಯನ್ನು ಘೋಷಣೆ ಮಾಡಿವೆ. ಇವು ನಗದು ರಿಯಾಯಿತಿ, ವಿನಿಮಯ ಬೋನಸ್ ಹಾಗೂ ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿದ್ದು, ಆಲ್ಟ್ರೋಜ್ ಹ್ಯಾಚ್‌ಬ್ಯಾಕ್‌ ಸಹ ದೊಡ್ಡ ಡಿಸ್ಕೌಂಟ್ ಆಫರ್ ಪಡೆದಿದೆ.

ಟಾಟಾ ಆಲ್ಟ್ರೋಜ್ (Tata Altroz) ಒಟ್ಟು ರೂ.45,000 ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಪೆಟ್ರೋಲ್ ಎಂಟಿ ರೂಪಾಂತರಗಳು ರೂ.30,000 ನಗದು ರಿಯಾಯಿತಿ (Cash discount), ರೂ.10,000 ವಿನಿಮಯ ಬೋನಸ್ (Exchange bonus) ಮತ್ತು ರೂ.5,000 ಕಾರ್ಪೊರೇಟ್ ರಿಯಾಯಿತಿ (Corporate discount)ಯನ್ನು ಒಳಗೊಂಡಿವೆ. ಡಿಸಿಎ ವೇರಿಯೆಂಟ್ಸ್ ರೂ.15,000 ಕ್ಯಾಶ್ ಡಿಸ್ಕೌಂಟ್, ರೂ.10,000 ಎಕ್ಸ್ಚೇಂಜ್ ಬೋನಸ್, ರೂ.5,000 ಕಾರ್ಪೊರೇಟ್ ರಿಯಾಯಿತಿಯನ್ನು ಹೊಂದಿವೆ.

Tata: ಟಾಟಾದ ಈ ಜನಪ್ರಿಯ ಕಾರಿಗೆ ರೂ.45,000 ರಿಯಾಯಿತಿ, 26 ಕಿ.ಮೀ ಮೈಲೇಜ್.. 6 ಲಕ್ಷ ಬೆಲೆ

ಈ ಆಲ್ಟ್ರೋಜ್ ಡೀಸೆಲ್ ರೂಪಾಂತರಗಳು ರೂ.25,000 ನಗದು ರಿಯಾಯಿತಿ, ರೂ.10,000 ವಿನಿಮಯ ಬೋನಸ್, ರೂ.5,000 ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಪಡೆದಿವೆ. ಸಿಎನ್‌ಜಿ ವೇರಿಯೆಂಟ್ಸ್ ರೂ.10,000 ನಗದು ರಿಯಾಯಿತಿ ಮತ್ತು ಎಕ್ಸ್ಚೇಂಜ್ ಬೋನಸ್, ರೂ.5,000 ಕಾರ್ಪೊರೇಟ್ ರಿಯಾಯಿತಿಯನ್ನು ಪಡೆದಿವೆ. ಈ ಡಿಸ್ಕೌಂಟ್ ಆಫರ್ ರಾಜ್ಯದಿಂದ ರಾಜ್ಯಕ್ಕೆ ಡೀಲರ್‌ಶಿಪ್‌, ಸ್ಟಾಕ್ ಲಭ್ಯತೆ ಆಧರಿಸಿ ಬೇರೆ - ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಟಾಟಾ ಆಲ್ಟ್ರೋಜ್ (Tata Altroz) ರೂ.6.60 ಲಕ್ಷದಿಂದ ರೂ.10.74 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಎಕ್ಸ್ಇ, ಎಕ್ಸ್ಎಂ, ಎಕ್ಸ್ಎಂ ಪ್ಲಸ್, ಎಕ್ಸ್‌ಟಿ ಸೇರಿದಂತೆ 6 ವಿವಿಧ ರೂಪಾಂತರಗಳು ಹಾಗೂ ಗ್ರಾಹಕರನ್ನು ಆಕರ್ಷಿಸುವ ಹಲವು ಬಣ್ಣಗಳ ಆಯ್ಕೆಯೊಂದಿಗೆ ಸಿಗುತ್ತದೆ.

Tata: ಟಾಟಾದ ಈ ಜನಪ್ರಿಯ ಕಾರಿಗೆ ರೂ.45,000 ರಿಯಾಯಿತಿ, 26 ಕಿ.ಮೀ ಮೈಲೇಜ್.. 6 ಲಕ್ಷ ಬೆಲೆ

ಈ ಟಾಟಾ ಆಲ್ಟ್ರೋಜ್ ಮೂರು ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 86 PS ಪವರ್, 113 Nm ಪೀಕ್ ಟಾರ್ಕ್, 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 110 PS ಪವರ್, 140 Nm ಪೀಕ್ ಟಾರ್ಕ್, 1.5-ಲೀಟರ್ ಡೀಸೆಲ್ ಎಂಜಿನ್ 90 PS ಪವರ್ ಮತ್ತು 200 Nm ಪೀಕ್ ಟಾರ್ಕ್ ಹೊರಹಾಕುತ್ತದೆ.

ಸಿಎನ್‌ಜಿ ಪವರ್ ಟ್ರೈನ್ ಹೊಂದಿರುವ ಕಾರು, 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ ಹೊಂದಿದ್ದು, 73.5 PS ಗರಿಷ್ಠ ಪವರ್ ಮತ್ತು 103 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಆಲ್ಟ್ರೋಜ್ ರೂಪಾಂತರಗಳಿಗೆ ಅನುಗುಣವಾಗಿ 5 - ಸ್ವೀಡ್ ಮ್ಯಾನುವಲ್, 6 - ಸ್ವೀಡ್ ಡುಯಲ್-ಕ್ಲಚ್ ಟ್ರಾನ್ಸ್ಮಿಷನ್ (ಡಿಸಿಟಿ) ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

Tata: ಟಾಟಾದ ಈ ಜನಪ್ರಿಯ ಕಾರಿಗೆ ರೂ.45,000 ರಿಯಾಯಿತಿ, 26 ಕಿ.ಮೀ ಮೈಲೇಜ್.. 6 ಲಕ್ಷ ಬೆಲೆ

ಮೈಲೇಜ್ ವಿಚಾರವಾಗಿ ಮಾತನಾಡುವುದಾದರೆ, ಪೆಟ್ರೋಲ್ ರೂಪಾಂತರ 18.50 kmpl - 19.33 kmpl, ಡೀಸೆಲ್ ವೇರಿಯೆಂಟ್ 23.64 kmpl ಮತ್ತು ಸಿಎನ್‌ಜಿ ರೂಪಾಂತರ 26.20 km/kg ಮೈಲೇಜ್ ನೀಡುತ್ತದೆ. ಈ ಕಾರು, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆಂಬಿಯೆಂಟ್ ಲೈಟಿಂಗ್, ಕ್ರೂಸ್ ಕಂಟ್ರೋಲ್ ಮತ್ತು ಸಿಂಗಲ್ ಪೇನ್ ಸನ್‌ರೂಫ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸುರಕ್ಷತೆಯ ದೃಷ್ಟಿಯಿಂದಲ್ಲೂ ಟಾಟಾ ಆಲ್ಟ್ರೋಜ್ ಅತ್ಯುತ್ತಮವಾಗಿದ್ದು, ಡುಯಲ್ ಫ್ರಂಟ್ ಏರ್‌ಬ್ಯಾಗ್‌, ISOFIX ಚೈಲ್ಡ್-ಸೀಟ್ ಆಂಕರ್‌, ಆಟೋ ಪಾರ್ಕ್ ಲಾಕ್, ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಹೊಂದಿದೆ. ಈ ಕಾರಿಗೆ ಹ್ಯುಂಡೈ ಐ20, ಮಾರುತಿ ಸುಜುಕಿ ಬಲೆನೊ ಮತ್ತು ಟೊಯೋಟಾ ಗ್ಲಾನ್ಜಾ ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಇನ್ನು, ಡಿಸೆಂಬರ್ ತಿಂಗಳು ಮುಗಿಯಲು ಕೆಲವೇ ದಿನಗಳಿಂದ ಬೇಗ-ಬೇಗ ಸಮೀಪದ ಡೀಲರ್‌ಶಿಪ್‌ಗೆ ತೆರಳಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, December 26, 2023, 17:27 [IST]
English summary
Tata altroz have rs 45000 discount december 26 km mileage 6 lakh price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+