Tata: ಮೊದಲ ಬಾರಿಗೆ ಕಾಣಿಸಿಕೊಂಡಿತು ಬಹುನೀರಿಕ್ಷಿತ ಟಾಟಾ ಕರ್ವ್ವ್ ಕಾರು, ವಿಶೇಷತೆಗಳೇನು?
ಭಾರತದಲ್ಲಿ ಟಾಟಾ (Tata) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿದೆ. ಮುಂಬರುವ ವರ್ಷಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಹಲವು ಕಾರುಗಳನ್ನು ಬಿಡುಗಡೆಗೊಳಿಸಲು ಸಕಲ ಸಿದ್ಧತೆ ನಡೆಸಿದೆ. ಇದೇ ಮೊದಲ ಬಾರಿಗೆ ಟಾಟಾ ಕರ್ವ್ವ್ ಎಸ್‌ಯುವಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡು ಬಂದಿದೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಟಾಟಾ ಕರ್ವ್ವ್ ಕಾರಿನ ಸ್ಪೈ ಚಿತ್ರಗಳು ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಿದ್ದು, ಮೇಲ್ನೋಟಕ್ಕೆ ಅತ್ಯಾಕರ್ಷಕ ವಿನ್ಯಾಸವನ್ನು ಹೊಂದಿರುವಂತೆ ಭಾಸವಾಗುತ್ತಿದೆ. ಈ ಕಾರು, ನವೀನ ಮಾದರಿಯ ಬಾನೆಟ್, ಹೆಡ್‌ಲ್ಯಾಂಪ್ ಹಾಗೂ ಬಂಪರ್‌ನ್ನು ಪಡೆದಿರುವಂತೆ ಕಾಣುತ್ತಿದ್ದು, ಹೊಸ ಶೈಲಿಯ ಅಲಾಯ್ ವೀಲ್ಸ್ ಅನ್ನು ಒಳಗೊಂಡಿರಬಹುದು. ಸದ್ಯಕ್ಕೆ, ವಿನ್ಯಾಸ ಹಾಗೂ ವೈಶಿಷ್ಟ್ಯದ ಬಗ್ಗೆ ಕಂಪನಿ ಕಡೆಯಿಂದ ಅಧಿಕೃತ ಮಾಹಿತಿಯಿಲ್ಲ.

ಟಾಟಾ ಮೋಟಾರ್ಸ್, ಈ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಕರ್ವ್ವ್ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿತ್ತು. ಅಂದಿನಿಂದ ದೊಡ್ಡಮಟ್ಟದ ನೀರಿಕ್ಷೆ ಹುಟ್ಟುಹಾಕಿದೆ. ಕಂಪನಿಯು ಈ ಕಾರನ್ನು ಇಂಧನ ಹಾಗೂ ಎಲೆಕ್ಟ್ರಿಕ್ ಚಾಲಿತ ಪವರ್‌ಟ್ರೇನ್ ಆಯ್ಕೆಯಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದ್ದು, ಪ್ರಸ್ತುತ ಯಾವ ಕಾರನ್ನು ಪರೀಕ್ಷೆ ನಡೆಸಿದೆ ಎಂಬುದರ ಬಗ್ಗೆ ವಿವರಗಳು ಸಿಕ್ಕಿಲ್ಲ.
ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಟಾಟಾ ಕರ್ವ್ವ್ ಮುಂದಿನ ವರ್ಷವೇ ಎಲೆಕ್ಟ್ರಿಕ್ ಅವತಾರದಲ್ಲಿ ದೇಶೀಯ ಮಾರುಕಟ್ಟೆಗೆ ಬರಲಿದೆ. ಆ ಬಳಿಕ, 2025ರಲ್ಲಿ ಈ ಎಸ್‌ಯುವಿ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಲಾಂಚ್ ಆಗಲಿದೆ. ಈ ಕಾರು, ಕಂಪನಿಯ 'ಜನರೇಷನ್2 ಪ್ಲಾಟ್‌ಫಾರ್ಮ್' ಆಧರಿಸಿದೆ. ಮೂಲಗಳ ಪ್ರಕಾರ, ಕರ್ವ್ವ್ ಎಲೆಕ್ಟ್ರಿಕ್ ಕಾರು ಸಂಪೂರ್ಣ ಚಾರ್ಜಿನಲ್ಲಿ 500 km ರೇಂಜ್ ನೀಡಲಿದೆಯಂತೆ.

ಈ ಕಾರು, ರೂ.20 ಲಕ್ಷ ಬೆಲೆಯನ್ನು ಪಡೆದಿರಬಹುದು. ಪೆಟ್ರೋಲ್ ಚಾಲಿತ ಕರ್ವ್ವ್, ರೂ.10.50 ಲಕ್ಷ ಅಂದಾಜು ಬೆಲೆಯಲ್ಲಿ 1.2 ಲೀಟರ್ ಪೆಟ್ರೋಲ್/ 1.5 ಲೀಟರ್ ಟರ್ಬೊ ಪೆಟೋಲ್ ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯಬಹುದು. ಇಂಧನ ಹಾಗೂ ಎಲೆಕ್ಟ್ರಿಕ್ ಚಾಲಿತ ಕರ್ವ್ವ್ ಎಸ್‌ಯುವಿ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಆಕರ್ಷಕ ವಿನ್ಯಾಸ ಹೊಂದಿರಬಹುದು.
ಈಗಾಗಲೇ, ಕರ್ವ್ವ್ ಉತ್ಪಾದನೆಗೆ ಸಿದ್ದವಾಗಿದ್ದು, ಕಂಪನಿಯು ಈ ಕಾರಿಗೆ ಫ್ರೆಸ್ಟ್ (Frest) ಎಂಬ ಹೆಸರಿಡಬಹುದು ಎಂದು ಆಟೋಮೊಬೈಲ್ ತಜ್ಞರು ಅಂದಾಜಿಸಲಾಗಿದೆ. ಆದರೆ, ಈ ಕುರಿತಂತೆ ಖಚಿತವಾಗಿ ತಿಳಿದಿಲ್ಲ. 2022ರಲ್ಲಿಯೇ ಈ ಹೆಸರಿಗಾಗಿ ಟಾಟಾ ಮೋಟಾರ್ಸ್ ಅರ್ಜಿ ಸಲ್ಲಿಸಿತ್ತು. ತೀರಾ ಇತ್ತೀಚೆಗೆ ಅದಕ್ಕೆ ಸರ್ಕಾರವು ಅನುಮೋದನೆ ನೀಡಿತ್ತು.
ಬಹುನೀರಿಕ್ಷಿತ ಟಾಟಾ ಕರ್ವ್ವ್ ಕಾರಿಗೆ ಭಾರತದಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಪೋಕ್ಸ್‌ವ್ಯಾಗನ್ ಟೈಗುನ್ ಪ್ರತಿಸ್ಪರ್ಧಿಯಾಗಳಿವೆ ಎಂದು ಹೇಳಲಾಗಿದೆ. ಏನೇ ಆಗಲಿ.. ಈ ಕಾರು ದೇಶೀಯವಾಗಿ ಅನಾವರಣವಾದ ಮೇಲೆಯೇ ಅದರ ಎಲ್ಲ ವೈಶಿಷ್ಟ್ಯ, ವಿನ್ಯಾಸ ಹಾಗೂ ಕಾರ್ಯಕ್ಷಮತೆ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ. ಅಲ್ಲಿಯವರೆಗೆ ಕಾಯಬೇಕು ಅಷ್ಟೇ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Source: Team BHP


Click it and Unblock the Notifications