ದೇಶದ ಮಾರುಕಟ್ಟೆಯನ್ನೇ ಅಲ್ಲಾಡಿಸಿದ Tata ಎಲೆಕ್ಟ್ರಿಕ್ ಕಾರುಗಳು: ಪ್ರತಿಸ್ಪರ್ಧಿಗಳಿಗೆ ಚೆಕ್ ಮೆಟ್..!

ಭಾರತದಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಅದರಲ್ಲೂ ಈ ವಿಭಾಗದಲ್ಲಿ ಟಾಟಾ (Tata) ಕಾರುಗಳು ಮೊದಲ ಸ್ಥಾನದಲ್ಲಿ ಮುಂದುವರಿದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು, ಕಂಪನಿಯ ಎಲೆಕ್ಟ್ರಿಕ್ ಕಾರುಗಳನ್ನೇ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇದೀಗ, ಟಾಟಾ ಮೇ ತಿಂಗಳ ತನ್ನ ಎಲೆಕ್ಟ್ರಿಕ್ ಕಾರುಗಳ ಮಾರಾಟ ವರದಿ ಪ್ರಕಟಿಸಿದೆ.

ದೇಶೀಯ ಮಾರುಕಟ್ಟೆಯಲ್ಲಿ ಮೇ ತಿಂಗಳಲ್ಲಿಯೂ (2023) ಟಾಟಾ ಕಂಪನಿ ಎಲೆಕ್ಟ್ರಿಕ್ ಕಾರುಗಳ ಅಬ್ಬರ ಜೋರಾಗಿದೆ. ಕಳೆದ ವರ್ಷದ ಇದೇ ತಿಂಗಳಿಗೆ (3,505 ಯುನಿಟ್) ಹೋಲಿಸಿದರೆ, ಬರೋಬ್ಬರಿ 5,805 ಯುನಿಟ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿ, ಶೇಕಡ 66% ಪ್ರಗತಿ ಸಾಧಿಸಿದೆ. ಆದರೆ, ಏಪ್ರಿಲ್ ತಿಂಗಳಿಗೆ ಹೋಲಿಸಿದರೆ (6,516 ಯುನಿಟ್) ಕೊಂಚ ಹಿನ್ನೆಡೆ ಅನುಭವಿಸಿದೆ.

ದೇಶದ ಮಾರುಕಟ್ಟೆಯನ್ನೇ ಅಲ್ಲಾಡಿಸಿದ Tata ಎಲೆಕ್ಟ್ರಿಕ್ ಕಾರುಗಳು: ಪ್ರತಿಸ್ಪರ್ಧಿಗಳಿಗೆ ಚೆಕ್ ಮೆಟ್..!

ಟಾಟಾ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ ಈ ಮಟ್ಟಿನ ಯಶಸ್ಸು ಪಡೆಯಲು ಪ್ರಮುಖ ಕಾರಣ ಅದರ ಲೈನ್ಅಪ್. ಕಂಪನಿಯ ಟಿಯಾಗೊ ಇವಿ, ಟಿಗೂರ್ ಇವಿ ಹಾಗೂ ನೆಕ್ಸಾನ್ ಇವಿಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ದೇಶದ ಖ್ಯಾತ ಸೆಲೆಬ್ರಿಟಿಗಳು ಕೂಡ ನೆಕ್ಸಾನ್ ಇವಿಯನ್ನು ಖರೀದಿಸುತ್ತಿದ್ದಾರೆ. ಇತ್ತೀಚೆಗೆ ಎಂಟ್ರಿ ಲೆವೆಲ್ ಟಿಯಾಗೊ ಇವಿ ಬಿಡುಗಡೆಯಾಗಿ ನಾಲ್ಕು ತಿಂಗಳಲ್ಲಿಯೇ ಅದರ 10,000 ಯುನಿಟ್ ಸೇಲ್ ಮಾಡಿ, ಟಾಟಾ ಐತಿಹಾಸಿಕ ದಾಖಲೆ ನಿರ್ಮಿಸಿತ್ತು.

ಮೊದಲಿಗೆ ಕಂಪನಿಯ ಅಗ್ಗದ ಎಲೆಕ್ಟ್ರಿಕ್ ಕಾರೆಂದು ಖ್ಯಾತಿಗಳಿಸಿರುವ ಟಿಯಾಗೊ ಇವಿ ಬಗ್ಗೆ ತಿಳಿಯೋಣ. ಇದು, ರೂ.8.69 ಲಕ್ಷದಿಂದ ರೂ.11.99 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 19.2 kWh ಬ್ಯಾಟರಿ ಹೊಂದಿರುವ ಕಾರು ಫುಲ್ ಚಾರ್ಜಿನಲ್ಲಿ 250 km ಹಾಗೂ 24 kWh ಬ್ಯಾಟರಿ ಪಡೆದಿರುವ ಕಾರು, 315 km ರೇಂಜ್ ನೀಡಲಿದೆ.

ಈ ಕಾರಿನ ಬ್ಯಾಟರಿ, DC ಫಾಸ್ಟ್ ಚಾರ್ಜಿಂಗ್ ಬಳಕೆಯಲ್ಲಿ ಶೇಕಡ 10 ರಿಂದ 80% ಚಾರ್ಜ್ ಆಗಲು ಜಸ್ಟ್ 57 ನಿಮಿಷಬೇಕು. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಟಿಯಾಗೊ ಇವಿ ಹೊಂದಿದೆ. ಜೊತೆಗೆ ಸುರಕ್ಷತೆಯ ದೃಷ್ಟಿಯಿಂದ 2 ಫ್ರಂಟ್ ಏರ್ ಬ್ಯಾಗ್ ಪಡೆದಿದೆ. ಇದಕ್ಕೆ ಸಿಟ್ರಸ್ ಇಸಿ3 ಹಾಗೂ ಎಂಜಿ ಕಾಮೆಟ್ ಇವಿಗಳು ಪ್ರತಿಸ್ಪರ್ಧಿಯಾಗಿವೆ.

ಟಿಗೂರ್ ಇವಿ ರೂ.12.49 ಲಕ್ಷದಿಂದ ರೂ.13.75 ಲಕ್ಷ ಬೆಲೆಯಲ್ಲಿ ವಾಣಿಜ್ಯ ಉಪಯೋಗಕ್ಕೆ ಮಾತ್ರ ಖರೀದಿಗೆ ಲಭ್ಯವಿದೆ. ಇದು ಸಂಪೂರ್ಣ ಚಾರ್ಜಿನಲ್ಲಿ 315 ರೇಂಜ್ ನೀಡುತ್ತದೆ. ಟಾಟಾದ ಜನಪ್ರಿಯ ಎಸ್‌ಯುವಿಗಳಲ್ಲಿ ನೆಕ್ಸಾನ್ ಇವಿ ಪ್ರಮುಖವಾಗಿದ್ದು, ಕಂಪನಿಯು ಮ್ಯಾಕ್ಸ್ ಪ್ರೈಮ್ ಎಂಬ ಎರಡು ರೂಪಾಂತರಗಳಲ್ಲಿ ಮಾರಾಟ ಮಾಡುತ್ತಿದೆ. ಈ ಕಾರುಗಳು 14.49 ಲಕ್ಷ ರೂ. 17.19 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ.

ಇನ್ನು, ಟಾಟಾ ಕಂಪನಿ ಕಳೆದ ಮೇ ತಿಂಗಳಲ್ಲಿಯು ತನ್ನ ಒಟ್ಟಾರೆ ಕಾರು ಮಾರಾಟದಲ್ಲಿ ಒಳ್ಳೆಯ ಪ್ರಗತಿಯನ್ನು ಸಾಧಿಸಿದೆ. 45,880 ಯುನಿಟ್ ಕಾರುಗಳನ್ನು ಸೇಲ್ ಮಾಡಿ, ವರ್ಷದಿಂದ ವರ್ಷಕ್ಕೆ ಶೇಕಡ 5.9% ಬೆಳವಣಿಗೆ ಕಾಣುವ ಮೂಲಕ ಮೂರನೇ ಸ್ಥಾನದಲ್ಲಿದೆ. ಆದರೂ, ಎರಡನೇ ಸ್ಥಾನದಲ್ಲಿರುವ ಹುಂಡೈ ಕಂಪನಿಗೆ ಸರಿಯಾಗಿಯೇ ಫೈಟ್ ಕೊಟ್ಟಿದೆ. ಟಾಟಾದ ವೇಗವನ್ನು ನೋಡಿದರೆ ಕೆಲವೇ ದಿನಗಳಲ್ಲಿ ಎರಡನೇ ಸ್ಥಾನಕ್ಕೆ ಬಂದರೂ ಆಶ್ಚರ್ಯವಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.

Article Published On: Friday, June 2, 2023, 17:53 [IST]
English summary
Tata electric car sales in may details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+