ಟಾಟಾ ಎಂಟ್ರಿ ಲೆವೆಲ್ ಕಾರಿಗೆ ಈ ಮಟ್ಟದ ತಾಕತ್ತೇ...? ಪಿಕಪ್ ಟ್ರಕ್ ಪಲ್ಟಿ

ಟಾಟಾ ಕಾರುಗಳ ನಿರ್ಮಾಣ ಗುಣಮಟ್ಟವು ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದೆ. ಅಪಘಾತಗಳಲ್ಲಿ ಪ್ರಯಾಣಿಕರ ಜೀವ ಉಳಿಸಿರುವ ಹಲವು ಉದಾಹರಣೆಗಳು ಇವೆ. ಭೀಕರ ಅಪಘಾತಗಳಲ್ಲೂ ಪ್ರಯಾಣಿಕರು ಕೇವಲ ಗಾಯಗಳಿಂದ ಪಾರಾಗಿದ್ದಾರೆ. ಇದೀಗ ಮತ್ತೊಂದು ಅಪಘಾತದಲ್ಲಿ ಟಾಟಾ ಎಂಟ್ರಿ ಲೆವಲ್ ಕಾರು ಅದರ ಗುಣಮಟ್ಟವನ್ನು ಸಾಭೀತುಪಡಿಸಿದೆ.

ದಾವಣಗೆರೆ ಬಳಿ ನಡೆದ ಅಪಘಾತದಲ್ಲಿ ಟಾಟಾ ಟಿಯಾಗೊ ಹಾಗೂ ಮಾರುತಿ ಸುಜುಕಿ ಕ್ಯಾರಿ ಪಿಕ್ ಅಪ್ ಟ್ರಕ್ ನಡುವೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಎರಡೂ ವಾಹನಗಳ ಚಾಲಕರು ಯಾವುದೇ ಗಾಯಗಳಿಲ್ಲದೇ ಹೊರಬಂದಿದ್ದಾರೆ. ಟಾಟಾ ಟಿಯಾಗೋ ತೀವ್ರ ಹಾನಿಯಾಗಿದ್ದರೂ ಚಾಲಕ ಸೇಫ್ ಆಗಿ ಹೊರಬಂದಿರುವುದು ಕಾರು ಮಾಲೀಕ ಸೇರಿದಂತೆ ಹಲವರನ್ನು ಅಚ್ಚರಿಗೊಳಿಸಿದೆ.

Tata entry level car

ಈ ಅಪಘಾತದಲ್ಲಿ, ಟಿಯಾಗೊ ಮಾಲೀಕ ನಿಯಂತ್ರಣ ಕಳೆದುಕೊಂಡು ಮಾರುತಿ ಸುಜುಕಿ ಕ್ಯಾರಿ ಪಿಕ್ ಅಪ್ ಟ್ರಕ್‌ಗೆ ಡಿಕ್ಕಿ ಹೊಡೆದ ಕಾರಣ ಟ್ರಕ್ ಪಲ್ಟಿ ಹೊಡೆದಿದೆ ಎನ್ನಲಾಗಿದೆ. ಅಪಘಾತ ನಡೆದ ಸ್ಥಳದಲ್ಲಿ ಜನರು ಜಮಾಯಿಸಿ ಪಲ್ಟಿ ಹೊಡೆದ ಪಿಕಪ್ ಟ್ರಕ್ ಅನ್ನು ಯಥಾಸ್ಥಿತಿಗೆ ತಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಟಿಯಾಗೋ ಮುಂಭಾಗ ಹಾಗೂ ಮೇಲ್ಭಾಗಕ್ಕೆ ತೀವ್ರ ಹಾನಿಯಾಗಿದೆ.

ಕಾರಿನ ಮಾಲೀಕ ಶಿವಕುಮಾರ್ ತಮ್ಮ ಜೀವ ಉಳಿಸಿದ ಟಿಯಾಗೊ ಕಾರಿನ ನಿರ್ಮಾಣ ಗುಣಮಟ್ಟವನ್ನು ಶ್ಲಾಘಿಸಿದ್ದಾರೆ. ಅಪಘಾತದಲ್ಲಿ ಕಾರು ಗಮನಾರ್ಹವಾಗಿ ಹಾನಿಗೆ ಒಳಗಾಗಿದೆ. ಆದರೂ ಬಾಡಿ ಶೆಲ್ ಮಾತ್ರ ಹಾಗೇ ಇರುವುದನ್ನು ನೋಡಬಹುದು, ಬಹುಶಃ ಇದರಿಂದಾಗಿಯೇ ಕಾರು ಮಾಲೀಕ ಗಾಯಗಳಿಲ್ಲದೆ ಹೊರಬಂದಿರಬಹುದು ಎನ್ನಲಾಗಿದೆ. ಪಿಕ್ ಅಪ್ ಟ್ರಕ್ ಚಾಲಕ ಕೂಡ ಅಪಘಾತದಲ್ಲಿ ಸೇಫ್ ಆಗಿದ್ದಾನೆ.

ಸುರಕ್ಷತೆಯಲ್ಲಿ ಟಿಯಾಗೊಗೆ 4 ಸ್ಟಾರ್: ಟಾಟಾ ಟಿಯಾಗೊ ಈ ಹಿಂದೆ ಗ್ಲೋಬಲ್ ಎನ್‌ಸಿಎಪಿ ಪರೀಕ್ಷೆಯಲ್ಲಿ 4 ಸ್ಟಾರ್‌ಗಳನ್ನು ಗಳಿಸಿತ್ತು. ಇದರ ಬಾಡಿ ರಚನೆಗೆ ಸ್ಥಿರ ರೇಟಿಂಗ್ ನೀಡಲಾಗಿತ್ತು. ಹಾಗೆಯೇ ಹೆಚ್ಚುವರಿ ಲೋಡ್ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದು ತಿಳಿದುಬಂದಿತ್ತು. ಹಾಗಾಗಿ ಟಿಯಾಗೊದೊಂದಿಗಿನ ಹಲವಾರು ಅಪಘಾತಗಳಲ್ಲಿ ಪ್ರಯಾಣಿಕರು ಸೇಫ್ ಆಗಿ ಹೊರಬಂದಿದ್ದಾರೆ.

ಭಾರತದಲ್ಲಿ ಈಗ ಕಾರು ಸುರಕ್ಷತೆಯು ಅಗಾಧವಾಗಿ ಸುಧಾರಿಸಿದೆ. 4 ಮತ್ತು 5 ಸ್ಟಾರ್ ಕ್ರ್ಯಾಶ್ ಟೆಸ್ಟ್‌ ರೇಟಿಂಗ್‌ಗಳೊಂದಿಗೆ ಕೈಗೆಟುಕುವ ಬೆಲೆಗೆ ಕಾರುಗಳನ್ನು ನೀಡಲಾಗುತ್ತಿದೆ. ರೇಟಿಂಗ್ ಕಡಿಮೆ ಇರುವ ಕಾರುಗಳು ಇದಕ್ಕಿಂತಲೂ ಕಡಿಮೆಗೆ ಸಿಗುತ್ತವೆ. ಆದರೂ ಕೂಡ ನೀವು ಹೊಸ ಕಾರನ್ನು ಖರೀದಿಸುವಾಗ ನಿಮ್ಮ ಬಜೆಟ್ ನಲ್ಲಿ ಸಾಧ್ಯವಾದಷ್ಟು ಸುರಕ್ಷಿತ ಕಾರನ್ನು ಖರೀದಿಸುವುದು ಉತ್ತಮ.

ಭಾರತದಲ್ಲಿ ಮಾರಾಟವಾಗುವ ಟಾಟಾ ಟಿಯಾಗೊ ಮಾದರಿಯು ಪೆಟ್ರೋಲ್, ಪೆಟ್ರೋಲ್- ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಇಂಧನ ಚಾಲಿತ ಮಾದರಿಯ ಬೇಸ್ ಟ್ರಿಮ್ ಬೆಲೆಗಳು ರೂ. 5.6 ಲಕ್ಷದಿಂದ (ಎಕ್ಸ್‌ ಶೋರೂಂ) ಪ್ರಾರಂಭವಾಗುತ್ತವೆ. ಇದು ಟ್ವಿನ್ ಏರ್‌ಬ್ಯಾಗ್ ಮತ್ತು ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳಾಗಿ ಪಡೆಯುತ್ತದೆ.

ಇನ್ನು ಇದರ ಎಲೆಕ್ಟ್ರಿಕ್ ವರ್ಷನ್ ಆದ ಟಿಯಾಟೊ ಇವಿ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ. 8.49 ಲಕ್ಷ (ಎಕ್ಸ್‌ ಶೋರೂಂ) ಬೆಲೆಯಿದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಟ್ರಿಮ್‌ಗಳಂತೆ, ಟಿಯಾಗೊ ಇವಿಯ ಎಲ್ಲಾ ರೂಪಾಂತರಗಳು ಟ್ವಿನ್ ಏರ್‌ಬ್ಯಾಗ್‌ಗಳು ಮತ್ತು ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳಾಗಿ ಪಡೆಯುತ್ತವೆ.

Article Published On: Tuesday, May 23, 2023, 13:37 [IST]
English summary
Tata entry level car tiago pickup truck accedent
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+